ಲೋಕಸಭೆಯಲ್ಲಿ ಜಿಎಸ್'ಟಿಗೆ ಅಂಗೀಕಾರ
By Suvarna Web Desk | 10:17 AM ಸಂಪುಟದಲ್ಲಿ ಅನುಮೋದನೆ ದೊರೆತ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ 2017ಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಜಿಎಸ್ ಟಿ ಜಾರಿಯ (ಜುಲೈ 1 ರಿಂದ) ಒಳಗಾಗಿ ಈ ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ.
ನವದೆಹಲಿ (ಮಾ.29): ಕೊನೆಗೂ ಮಹತ್ವಕಾಂಕ್ಷೆಯ ಜಿಎಸ್'ಟಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. 'ಒಂದು ದೇಶ, ಒಂದು ತೆರಿಗೆ' ಸಂಬಂಧ ಮಹತ್ವ ಹೆಜ್ಜೆ ಇಟ್ಟಿದ್ದು, ಏಕಕಾಲದಲ್ಲಿ 4 ಮಸೂದೆಗಳು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಮತದಾನದ ಮೂಲಕ ಜಿಎಸ್ಟಿ ಮಸೂದೆ ಅಂಗೀಕಾರವಾಗಿದ್ದು ಜುಲೈ 1ರಿಂದಲೇ ದೇಶಾದ್ಯಂತ ಏಕರೂಪ ತೆರಿಗೆ ಜಾರಿಯಾಗುವ ಸಾಧ್ಯತೆಯಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಜಿಎಸ್'ಟಿ ಕುರಿತ 4 ತಿದ್ದುಪಡಿ ಮಸೂದೆಗಳನ್ನು ಮಂಡಿಸಿದರು. ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ 2017ಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಜಿಎಸ್ ಟಿ ಜಾರಿಯ (ಜುಲೈ 1 ರಿಂದ) ಒಳಗಾಗಿ ಈ ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ.
ಪ್ರಮುಖ ಅಂಶಗಳು:
ಮಸೂದೆ ಜಾರಿ ಬಳಿಕ ಕೇಂದ್ರ, ರಾಜ್ಯಗಳು ಹೇರುವ ವಿವಿಧ ಪ್ರತ್ಯೇಕ ತೆರಿಗೆ ರದ್ದು
ಪಾರದರ್ಶಕ, ಭ್ರಷ್ಟಾಚಾರ ರಹಿತ, ಊಹಿಸಬಹುದಾದ ತೆರಿಗೆ ವ್ಯವಸ್ಥೆ ಜಾರಿಗೆ
ತೆರಿಗೆ ಜಾಲ ವಿಸ್ತರಣೆ, ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ, ಸರಳೀಕೃತ ವ್ಯವಸ್ಥೆ
ಮೊದಲ ಹಂತದಲ್ಲಿ ತೆರಿಗೆ ವ್ಯವಸ್ಥೆ ಬದಲಿಗೆ ಗಮ್ಯ ಸ್ಥಾನದಲ್ಲಿ ತೆರಿಗೆ ವ್ಯವಸ್ಥೆ ಜಾರಿ
ಕೇಂದ್ರ, ರಾಜ್ಯಗಳ ಮಧ್ಯೆ ಉದ್ಬವಿಸಬಹುದಾದ ತೆರಿಗೆ ವಿವಾದ ಇತ್ಯರ್ಥಕ್ಕೆ ವ್ಯಾಜ್ಯ ಮಂಡಳಿ ರಚನೆ
ಏನು ಲಾಭ?
ಎಲ್ಲ ಸರಕು, ಸೇವೆಗಳಿಗೆ ಒಂದೇ ಒಂದು ತೆರಿಗೆ ಅನ್ವಯ
ವ್ಯಾಟ್, ಸೇಲ್ಸ್, ಎಕ್ಸೈಸ್, ಕಸ್ಟಮ್ಸ್, ಸೇವಾ ತೆರಿಗೆ, ಮನರಂಜನಾ ತೆರಿಗೆ ಇರುವುದಿಲ್ಲ
ಪ್ರತ್ಯಕ್ಷ, ಪರೋಕ್ಷ ಇರುವ ಎಲ್ಲ ಪ್ರತ್ಯೇಕ ತೆರಿಗೆಗಳೂ ರದ್ದಾಗುತ್ತವೆ
ಉದ್ಯಮಗಳ ತೆರಿಗೆ ಪಾವತಿ ಸರಳೀಕೃತವಾಗಿ, ತೆರಿಗೆ ಬದ್ಧತೆ ಹೆಚ್ಚಳ
ಸ್ವಯಂ ಪ್ರೇರಿತ ತೆರಿಗೆ ಪಾವತಿಗೆ ಉತ್ತೇಜನ ಸಿಗುವ ನಿರೀಕ್ಷೆ
ದೇಶಾದ್ಯಂತ ಒಂದೇ ರೀತಿಯ ತೆರಿಗೆ ಪದ್ಧತಿ ಜಾರಿಗೆ ಬರುವುದು
Comments
Post a Comment