ಆನ್‌ಲೈನ್ ವಾರ್ ರೂಮ್
ಆನ್‌ಲೈನ್ ವಾರ್ ರೂಮ್
Updated Mar 25, 2017, 05.01 PM IST
*ಅವಿನಾಶ್ ಬೈಪಾಡಿತ್ತಾಯ
ಇದೊಂದು ಮುಕ್ತ ಬಯಲಿನ ರಣಾಂಗಣ. ಇಲ್ಲಿ ಯಾರೋ ಬಂದು ಮೆಲ್ಲನೆ ತಟ್ಟಿ ನೋಡಿ, ಎದುರಾಳಿಯ ಸಾಮರ್ಥ್ಯ ಪರೀಕ್ಷಿಸಬಹುದು; ಜೋರಾಗಿಯೇ ಒದ್ದು ಎದಿರೇಟಿನ ರುಚಿ ನೋಡಬಹುದು; ವಾಸ್ತವ ಜಗತ್ತಿನಲ್ಲಿ ಹೇಳಲಾಗದ್ದನ್ನು, ಅದುಮಿಟ್ಟುಕೊಂಡಿದ್ದನ್ನು ಥತ್ ಎಂದು ಉಗಿದು ಬರಬಹುದು. ಯಾರದ್ದೋ ವೇದಿಕೆ, ಯಾರದ್ದೋ ಇಂಟರ್ನೆಟ್, ಯಾರದ್ದೋ ಸಮಯ... ಮತ್ಯಾರದ್ದೋ ವಾಲ್.... ಉಚಿತವಾಗಿ ಲಭ್ಯವಾಗುವ ವೇದಿಕೆಗಳಲ್ಲಿ ಭೀಷಣ ಭಾಷಣ ಮಾಡುವಂತೆ, ಮನಬಂದಂತೆ ಗೀಚುವುದು. ಇಲ್ಲಿ ಕಣ್ತಪ್ಪಿನಿಂದಾದ ಅಕ್ಷ ರದೋಷವೊಂದು ಆನ್‌ಲೈನ್ ಸಮಾಜವನ್ನೇ ಅಲುಗಾಡಿಸುವಷ್ಟು ಸದ್ದು ಮಾಡಬಹುದು; ವಿವೇಚನೆಯಿಲ್ಲದೆ ಮಾಡಿದ ಪೋಸ್ಟ್ ಒಂದೇ ಕ್ಷ ಣದಲ್ಲಿ ಸರಿಪಡಿಸಲಾಗದ ಹಾನಿ ಮಾಡಬಹುದು; ನಾವು ಸರಿಯಾಗಿಯೇ ಹೇಳಿದ್ದೇವೆ, ಆದರೆ ಬೇರೆಯವರು ಅದನ್ನು ಅಪಾರ್ಥಕ್ಕೆಡೆ ಮಾಡುವ ರೀತಿಯಲ್ಲಿ ನಿರೂಪಿಸಿರುತ್ತೇವೆ - ಇದು ಕ್ಷ ಮೆಗೂ ಅರ್ಹವಲ್ಲದೆ ಸೋಷಿಯಲ್ ವಾರ್‌ಗೆ ಹೇತುವಾಗುತ್ತದೆ. ಎರಡು ದೇಶಗಳ ನಡುವೆ ಯುದ್ಧ ನಡೆಯುವಷ್ಟರ ಮಟ್ಟಿಗೂ ಹೋದ ಉದಾಹರಣೆಗಳೂ ಇವೆ.
freegksms.blogspot.in
ಅತಿಯಾದರೆ ಅಮೃತವೂ ವಿಷ ಎನ್ನುತ್ತೇವೆ. ಇದು ತಂತ್ರಜ್ಞಾನಕ್ಕೂ ಅನ್ವಯ. ಇತಿ ಮಿತಿಗಳಿಲ್ಲದ ತಂತ್ರಜ್ಞಾನವು ಬದುಕನ್ನು ಎಷ್ಟು ಸುಲಭವಾಗಿಸಿದೆಯೋ, ಎಚ್ಚರ ತಪ್ಪಿದರೆ ಅಷ್ಟೇ ನರಕವಾಗಿಸುತ್ತದೆ ಎಂಬುದಕ್ಕೆ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಗ್ರೂಪುಗಳಲ್ಲಿ ಹಾದಿ ತಪ್ಪಿ ನಡೆಯುತ್ತಿರುವ ಚರ್ಚೆ-ಸಂವಾದ-ಅಕ್ಷ ರಯುದ್ಧಗಳೇ ಸಾಕ್ಷಿ.
ಆನ್‌ಲೈನ್ ಎಂಬ ಭ್ರಮಾಧಿಧೀನ ಸಮಾಜ
freegksms.blogspot.in
ಮಾನವನ ವಿಕಾಸವಾದ ಓದಿದವರಿಗೆಲ್ಲ ಗೊತ್ತಿದೆ, ನಾವಿಂದು ಮನುಷ್ಯ ಅನ್ನಿಸಿಕೊಳ್ಳಲು ನಮ್ಮ ಮಾನಸಿಕ ಮತ್ತು ದೈಹಿಕ ವಿಕಾಸ ಆಗಿದ್ದು ದಿಢೀರ್ ಆಗಿ ಅಲ್ಲ ಮತ್ತು ಅದು ಅಷ್ಟೇನೂ ಸುಲಭದ ಮಾತೂ ಆಗಿರಲಿಲ್ಲ ಅಂತ. ವಾಸ್ತವಿಕ ಸಮಾಜದ ಮಾನವೀಯತೆಯೇನೋ ಅಷ್ಟಿಷ್ಟು ಸ್ವನಿಯಂತ್ರಣಕ್ಕೊಳಪಟ್ಟು ನಾವೆಲ್ಲರೂ ಮನುಷ್ಯರು ಎಂದು ಕರೆಸಿಕೊಳ್ಳತೊಡಗಿದ್ದೇವೆ. ಆದರೆ ಈ ಆನ್‌ಲೈನ್ ಸಮಾಜವೆಂಬ ಭ್ರಮಾವಾಸ್ತವಿಕ ಜಗತ್ತಿನಲ್ಲಿ?
ಇಂಟರ್ನೆಟ್ ಕ್ರಾಂತಿ ಸ್ಫೋಟಗೊಂಡಂದಿನಿಂದ ಎಲ್ಲರ ಕೈಯಲ್ಲೂ ಒಂದೊಂದು ಮೊಬೈಲ್ ಅಥವಾ ಕಂಪ್ಯೂಟರ್. ಮನಸ್ಸಿಗೆ ಬಂದಿದ್ದು ಆನ್‌ಲೈನ್‌ಗೆ ಪೋಸ್ಟ್ ಆಗುತ್ತದೆ. ಮನಸ್ಸನ್ನೂ ಓದುವ ತಂತ್ರಜ್ಞಾನವೂ ಬರತೊಡಗಿದೆ. ಇಲ್ಲಿ ಫೇಕ್ ಖಾತೆಗಳಿರುತ್ತವೆ, ಮುಖವಾಡದ ಹಿಂದೆ ಅಡಗಿರುವ ಕ್ರೌರ್ಯವಿರುತ್ತದೆ, ನಿಜ ಜೀವನದಲ್ಲಿ ಕಳೆದುಕೊಂಡಿರುವುದನ್ನು ಆನ್‌ಲೈನ್ ಜೀವನದಲ್ಲಾದರೂ ಪಡೆಯಲು ಹಪಹಪಿಸುವ ಆತ್ಮಗಳಿರುತ್ತವೆ, ಸವಿಮಾತುಗಳ ಹಿಂದೆ ಲಾಲಸೆ ಅಡಗಿರುತ್ತದೆ, ಗೋಮುಖ ಹೊತ್ತ ವ್ಯಾಘ್ರಗಳೂ ಇರುತ್ತವೆ. ಎಲ್ಲವೂ ಗೊತ್ತಾದಾಗ ಹೊತ್ತಾಗಿರುತ್ತದೆ!
Comments
Post a Comment