ತಮಿಳುನಾಡು ಮುಡಿಗೆ ದೇವ್'ಧರ್ ಟ್ರೋಫಿ


05:55 PM Wednesday, 29 March 2017
  
ಭರ್ಜರಿ ಶತಕ ಸಿಡಿಸಿದ ದಿನೇಶ್ ಕಾರ್ತೀಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ವಿಶಾಖಪಟ್ಟಣಂ(ಮಾ.29): ದಿನೇಶ್ ಕಾರ್ತಿಕ್ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ತಮಿಳುನಾಡು ದೇವ್'ಧರ್ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪ್ರಶಸ್ತಿ ಸುತ್ತಿನಲ್ಲಿ ಇಂಡಿಯಾ ಬಿ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಶತಕ(126) ಮತ್ತು ಜಗದೀಶನ್(55) ಅರ್ಧಶತಕದ ನೆರವಿನಿಂದ 303 ರನ್ ಕಲೆಹಾಕಿತು. ಇಂಡಿಯಾ ಬಿ ಪರ ದವಳ್ ಕುಲಕರ್ಣಿ 5 ವಿಕೆಟ್ ಪಡೆದು ಮಿಂಚಿದರು.
freegksms.blogspot.in
ಬೃಹತ್ ಗುರಿ ಬೆನ್ನತ್ತಿದ ಇಂಡಿಯಾ ಬಿ ತಂಡ 261 ರನ್'ಗಳಿಗೆ ಸರ್ವಪತನವಾಗುವುದರೊಂದಿಗೆ ಪಾರ್ಥೀವ್ ಪಟೇಲ್ ಪಡೆ 41 ರನ್'ಗಳ ಅಂತರದಲ್ಲಿ ಸೋಲುಂಡಿತು. ತಮಿಳುನಾಡು ಪರ ಶಿಸ್ತುಬದ್ಧ ದಾಳಿ ನಡೆಸಿದ ಸ್ಪಿನ್ ಬೌಲರ್'ಗಳು ಇಂಡಿಯಾ ಬಿ ತಂಡದ ಬ್ಯಾಟ್ಸ್'ಮನ್'ಗಳನ್ನು ಮೈದಾನದಲ್ಲಿ ಭದ್ರವಾಗಿ ನೆಲೆಯೂರಲು ಅವಕಾಶವನ್ನೇ ಮಾಡಿಕೊಡಲಿಲ್ಲ.
ಭರ್ಜರಿ ಶತಕ ಸಿಡಿಸಿದ ದಿನೇಶ್ ಕಾರ್ತೀಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಈ ಜಯದೊಂದಿಗೆ ತಮಿಳುನಾಡು ತಂಡ ಎರಡನೇ ಬಾರಿಗೆ ದೇವ್'ಧರ್ ಟ್ರೋಫಿ ಜಯಿಸಿದಂತಾಗಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು