ಮಂಗಳೂರು-ಬೆಂಗಳೂರು ರೈಲಿಗೆ ‘ಗೊಮ್ಮಟೇಶ್ವರ ಎಕ್ಸ್ ಪ್ರೆಸ್’ ಎಂದು ನಾಮಕರಣ

 March 26, 2017 Gommateshwara ExpressSuresh Prabhu

ಬೆಂಗಳೂರು, ಮಾ.26-ಮಂಗಳೂರು-ಬೆಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲಾಯಿತು. ಮಂಗಳೂರು-ಬೆಂಗಳೂರು ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಇಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಂಡು ಮಾತನಾಡಿ, 21 ವರ್ಷಗಳಿಂದ ಈ ರೈಲನ್ನು ಈ ಮಾರ್ಗವಾಗಿ ತರಲು ಪ್ರಯತ್ನಪಟ್ಟಿದ್ದೆ. ಈಗ ಯಶಸ್ವಿಯಾಗಿದೆ. ಈ ರೈಲಿಗೆ ಹೇಮಾವತಿ, ಹಾಸನಾಂಬೆ ಅಥವಾ ಗೊಮ್ಮಟೇಶ್ವರ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.
freegksms.blogspot.in

ಈ ಕೂಡಲೇ ವೇದಿಕೆಯಲ್ಲಿದ್ದ ಕೇಂದ್ರ ರೈಲ್ವೆ ಸಚಿವರು ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲು ಒಪ್ಪಿಗೆ ಸೂಚಿಸಿದರು.  ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು-ಮಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡುವುದು ಸೂಕ್ತ. ಯಶವಂತಪುರ-ಹಾಸನ ರೈಲಿಗೆ ಹೇಮಾವತಿ ಹೆಸರಿಡಬೇಕೆಂಬ ಬೇಡಿಕೆ ಇದೆ. ಅದನ್ನು ನಂತರ ನಿರ್ಧರಿಸೋಣ ಎಂದು ಸ್ಪಷ್ಟನೆ ನೀಡಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು