*ಬೇಸಿಗೆ ಸಂಭ್ರಮ-2017ರ ಕಿರು ಪರಿಚಯ*
💐 *SUMMER-CAMP 2017*💐
*(01).* ಡೈಸ್ ಮಾಹಿತಿ ಆಧರಿಸಿ 150ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿ ಅನುಷ್ಠಾನ.
*(02).* ಸನ್-2017-18ನೆಯ ಸಾಲಿಗೆ 6ನೆಯ & 7ನೆಯ ವರ್ಗಕ್ಕೆ ಅರ್ಹರಿರುವ ಮಕ್ಕಳು ಮಾತ್ರ ಅರ್ಹರು.
*(03).* ಇದು ನಿರಂತರವಾಗಿ ಐದು ವಾರಗಳವರೆಗೆ ನಡೆಯುವ ಕಾರ್ಯಕ್ರಮ.
*(04).* ಈ ಐದು ವಾರಕ್ಕೆ ಮಕ್ಕಳಿಗೆ ಬೋಧಿಸಬೇಕಾದ ಪಠ್ಯಕ್ರಮವು *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುತ್ತದೆ. ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು.
ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದಲ್ಲಿ ಉಸ್ತುವಾರಿ ಶಿಕ್ಷಕರು ಬೋಧಿಸಲು ಬಳಸುವ ಐದು ವಾರದ ಪಠ್ಯಕ್ರಮದ ಕಿರು ಪರಿಚಯ ಈ ಕೆಳಗಿನಂತಿರುತ್ತದೆ...
*ಮೊದಲ ವಾರ*
-ಕುಟುಂಬ
*ಎರಡನೆಯ ವಾರ*
-ನೀರು
*ಮೂರನೆಯ ವಾರ*
-ಆಹಾರ
*ನಾಲ್ಕನೆಯ ವಾರ*
-ಆರೋಗ್ಯ & ನೈರ್ಮಲ್ಯ
*ಐದನೆಯ ವಾರ*
-ಪರಿಸರ.
ಈ ಮೇಲಿನ ಐದು ವಾರದ ಪಠ್ಯಕ್ರಮದಲ್ಲಿ ಆಯಾ ವಾರಕ್ಕೆ ನಿಗದಿಪಡಿಸಿದ ವಿಷಯ ವಸ್ತುಗಳನ್ನು ವಾರದ ಆರು ದಿನಗಳಂದು ಪ್ರತಿದಿನ ಈ ಕೆಳಗೆ ನಮೂದಿಸಿದ ಐದು ಹಂತದ ಚಟುವಟಿಕೆಗಳಂತೆ ಬೋಧಿಸುವುದು...
*ಮೊದಲನೆಯ ಅವಧಿಯ ಚಟುವಟಿಕೆ*
-ಓದು-ಬರಹ
*ಎರಡನೆಯ ಅವಧಿಯ ಚಟುವಟಿಕೆ*
-ನಿತ್ಯಜೀವನಕ್ಕೆ ಸಂಬಂಧೀಕರಿಸುವುದು
*ಮೂರನೆಯ ಅವಧಿಯ ಚಟುವಟಿಕೆ*
-ಬಾ ಸಮಸ್ಯೆ ಬಿಡಿಸು
*ನಾಲ್ಕನೆಯ ಅವಧಿಯ ಚಟುವಟಿಕೆ*
-ಮಾಡಿಕಲಿ(ಪ್ರಯೋಗ)
*ಐದನೆಯ ಅವಧಿಯ ಚಟುವಟಿಕೆ*
-ಅಭ್ಯಾಸ ಚಟುವಟಿಕೆ
ಹೀಗೆ ವಾರದ ಐದು ದಿನಗಳವರೆಗೆ ಕಲಿಕಾ-ಬೋಧನಾ ಕಾರ್ಯ ಸಾಗುವುದು ಆದರೇ ಪ್ರತಿ ವಾರದ *ಆರನೆಯ ದಿನ*ವನ್ನು *ಕಲಿಕಾ ಮುಕ್ತ ದಿನ*ವಾಗಿ ಕಲಿಕಾ-ಬೋಧನಾ ಪ್ರಕ್ರಿಯೆಯಲ್ಲಿ ತೋಡಗಿಸುವುದು.
* ವಾರದ ಐದು ದಿನ *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುವ ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು. ಆದರೆ ಆರನೇ ದಿನವು *ಕಲಿಕಾ ಮುಕ್ತ ದಿನ*ವಾಗಿ ಕೆಲಸ ಮಾಡುತ್ತದೆ.
👉🏻 *ಕಲಿಕಾ ಮುಕ್ತ ದಿನ :-* ಅಂದರೆ ಮಕ್ಕಳಲ್ಲಿ ಹುದುಗಿರುವ ಸೃಜನಶೀಲ ಸಾಮರ್ಥ್ಯಗಳಾದ...
*-ಹಾಡು*
*-ಆಟ*
*-ಕಥೆ ಹೇಳುವುದು*
*-ಭಾಷಣ*
*-ನೃತ್ಯ ಪ್ರದರ್ಶನ*
*-ಚಿತ್ರಕಲೆ*
*-ನಾಟಕ* ಇತ್ಯಾದಿ... ಇತ್ಯಾದಿ ಈ ಕಲಿಕಾ ಮುಕ್ತ ದಿನದಂದು ಆಯಾ ವಾರಕ್ಕೆ ನಿಗದಪಡಿಸಿದ ಪಠ್ಯಕ್ರಮದ ವಿಷಯದಡಿಯಲ್ಲಿ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳನ್ನು ಮಾಡಿಸುವುದು.
*(05).* ಬೋಧನೆ & ಕಲಿಕೆಗೆ ಅನುಕೂಲವಾಗಲು *ಕಲಿಕೋಪಕರಣ*ಗಳನ್ನು ಸರಬರಾಜು ಸಹ ಮಾಡಲಾಗುವುದು.
*(06).* ಮಕ್ಕಳ ಸಂಖ್ಯೆಗಳಿಗನುಗುಣವಾಗಿ ಉಸ್ತುವಾರಿ ಶಿಕ್ಷಕರ & ಬಿಸಿಯೂಟ ಸಿಬ್ಬಂದಿಯವರ ನೇಮಕ ಮಾಡಿಕೊಳ್ಳುವ ಜವಾಬ್ದಾರಿ ಶಾಲಾ ಮುಖ್ಯಗುರುಗಳದ್ದು.
*(07).* ನೇಮಕಗೊಂಡ ಶಾಲಾ ಅಡುಗೆ ಸಿಬ್ಬಂದಿಯವರಿಗೆ ಮುಂಗಡ ಅಡುಗೆ ಸಂಭಾವನೆ ಜಮೆ.
*(08).* ಬೇಸಿಗೆ ಸಂಭ್ರಮ-2017ರ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಸರಕಾರಿ ನಿಯಮಾನುಸಾರ *EL* ವ್ಯವಸ್ಥೆಯೂ ಇರುತ್ತದೆ.
*(09).* ಈ ಶಿಬಿರವು ಪ್ರತಿದಿನ ಮುಂಜಾನೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು.
*(10).* ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮವು ಸರಕಾರಿ ರಜಾ ದಿನಗಳಂದು ರಜೆ ಇರುತ್ತದೆ.
*(11).* ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮವು ಆಯ್ಕೆಯಾದ ಎಲ್ಲಾ ಶಾಲೆಗಳಲ್ಲಿ *17.04.2017ರಂದು ಪ್ರಾರಂಭ*ವಾಗಬೇಕು.
*(12).* ಮುಂಬರುವ (04.04.2017ರ) ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಮಾಡಿ, ಈ ಕಾರ್ಯಕ್ರಮದ ಕುರಿತಾಗಿ ಅರಿವು ಮೂಡಿಸುವುದು & ಯಶಸ್ಸು ಮಾಡುವುದು.
*(13).* ಸದರಿ ಯೋಜನೆಯಲ್ಲಿ ನಿಗದಿತ ಮಾಹಿತಿಗಳ ಸರಬರಾಜಿಗಾಗಿ ಒಂದು ವಿಶೇಷ *ಮೋಬೈಲ್ ಆಪ್* ಬಿಡುಗಡೆ, ಇದರ ಮಾಲಕವೇ ಮುಖ್ಯಗುರುಗಳು ಆಹಾರ-ಧಾನ್ಯಗಳ ಬೇಡಿಕೆ ಕಳಿಸಬಹುದು & ವಿವಿಧ ಹಂತದ ಮೇಲಾಧಿಕಾರಿಗಳು ಸಹ ಸಂದರ್ಶನ ವರದಿಯನ್ನು ಕೂಡ ಕಳಿಸಬಹುದು.
Comments
Post a Comment