ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

Written By: Srinidhi

| Sat, Apr 15, 2017, 10:09 [IST]

ಇಂದಿನ ದಿನದಲ್ಲಿ ಪಾಸ್‌ಪೋರ್ಟ್ ವಿದೇಶಕ್ಕೆ ಹೋಗುವುದಕ್ಕಿಂತ ಹೆಚ್ಚಾಗಿ ಗುರುತಿನ ಚೀಟಿಯಾಗಿ, ಆಡ್ರಸ್‌ ಪ್ರೂಫ್‌ಗಾಗಿ ಬಳಸಲಾಗುತ್ತಿದೆ. ಈ ಹಿಂದೆ ವಿದೇಶಿ ಪ್ರಯಾಣ ಮಾಡುವವರು ಮಾತ್ರ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಅವಶ್ಯಕತೆ ಇತ್ತು. ಆದರೆ ಇಂದು ಆ ಪರಿಸ್ಥಿತಿಯೂ ಬದಲಾಗಿದ್ದು, ಪ್ರತಿಯೊಬ್ಬರು ಗುರುತೀನ ಚೀಟಿಗಾದರು ಪಾಸ್‌ಪೋರ್ಟ್ ಹೊಂದುವುದು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಆನ್‌ಲೈನಿನಲ್ಲಿ ಯಾವುದೇ ಹೆಚ್ಚಿನ ಶುಲ್ಕವನ್ನು ನೀಡಿದೆ ಉಚಿತವಾಗಿ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ.



ಆನ್ ಲೈನ್ ನಲ್ಲಿ ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವುದು ಸೇರಿದಂತೆ ಪಾಸ್‌ಫೋರ್ಟ್ ಸಂದರ್ಶನಕ್ಕೆ ನೋಂದಣಿ ಮಾಡಿಕೊಳ್ಳಲು ಮಾಡಿಬೇಕಾದ್ದೇನು, ಪಾಸ್‌ಪೋರ್ಟ್ ಶುಲ್ಕ ಪಾವತಿ ಆಯ್ಕೆಗಳೇನು, ಅದರ ಹಂತಗಳು ಮತ್ತು ಅದನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ನಾವು ತಿಳಿಸಿಕೊಡಲಿದ್ದೇವೆ.

ಅರ್ಜಿ ಹಾಕುವುದೆಲ್ಲಿ..?

ಪಾರ್‌ಪೋರ್ಟ್ ಮಾಡಿಸಬೇಕಾದವರು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್ ತಾಣ 'ಪಾಸ್‌ಪೋರ್ಟ್‌ಇಂಡಿಯಾ' ದಲ್ಲಿ ಪಾಸ್ ಪೋರ್ಟ್‌ಗೆ ಅರ್ಜಿ ಹಾಕಬಹುದಾಗಿದೆ. (http://www.passportindia.gov.in)

ಅರ್ಜಿ ಹಾಕುವುದು ಹೇಗೆ..?

ನಿಮ್ಮ ಪಾಸ್ ಪೋರ್ಟ್ ಪಡೆಯಲು http://www.passportindia.gov.in ವೆಬ್ ತಾಣಕ್ಕೆ ಭೇಟಿ ಕೊಟ್ಟು, ಅಲ್ಲಿ ಮೊದಲು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನಂತರ ಹೊಸ ಲಾಗ್ ಇನ್ ಐಡಿ ಹಾಗೂ ಪಾಸ್ ವರ್ಡ್ ಮೂಲಕ ಲಾಗಿನ್ ಆಗಿ ಹೊಸ ಪಾಸ್ ಪೋರ್ಟ್ ಗೆ ಅಥವಾ ಮರು ನವೀಕರಣಕ್ಕಾಗಿ ಕ್ಲಿಕ್ ಮಾಡಬಹುದಾಗಿದೆ.

ರಿಜಿಸ್ಟರ್ ಆಗುವುದು ಹೇಗೆ..?

http://www.passportindia.gov.in ವೆಬ್ ತಾಣ ಓಪನ್ ಮಾಡಿದ ನಂತರ ಎಡ ಭಾಗದಲ್ಲಿ ಕಾಣಿಸುವ 'ನ್ಯೂ ಯೂಸರ್..? ರಿಜಿಸ್ಟರಿಷನ್ ನೌ' ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನೋಂದಣಿ ಅರ್ಜಿಯೂ ತೆರೆದುಕೊಳ್ಳಲಿದೆ. ನಂತರ ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬ ಬೇಕಾಗಿದೆ.

ವೈಯಕ್ತಿಕ ವಿವರ ತುಂಬುವುದು ಹೇಗೆ..?

'ನ್ಯೂ ಯೂಸರ್..? ರಿಜಿಸ್ಟರಿಷನ್ ನೌ' ಆಯ್ಕೆಯ ಮೇಲೆ ಕ್ಲಿಕ್ ಮಾಡ ನಂತರದ ಪುಟದಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿರಿ.

ಅಲ್ಲಿ ನಿಮ್ಮ ಪಾಸ್ ಪೋರ್ಟ್ ಕಚೇರಿನಿಮ್ಮ ಪೂರ್ಣ ಹೆಸರು (ಮೊದಲ ಹೆಸರು+ ಕೊನೆ ಹೆಸರು)ಉಪನಾಮ (ಸರ್ ನೇಮ್)ಹುಟ್ಟಿದ ದಿನಾಂಕ, ತಿಂಗಳು, ವರ್ಷನಿಮ್ಮ ಇಮೇಲ್ ಐಡಿ (ನಿಮ್ಮ ಇಮೇಲ್ ಐಡಿಗೆ ಲಾಗಿನ್ ವಿವರ ಕಳಿಸಲಾಗುತ್ತದೆ. ನಿಮ್ಮ ಇಮೇಲ್ ಗೆ ಬಂದಿರುವ ಲಾಗಿನ್ ವಿವರಗಳನ್ನು ಪಡೆದುಕೊಂಡು ಪುನಃ ಇದೇ ಪುಟಕ್ಕೆ ಹಿಂತಿರುಗಿ)ನಂತರ ಲಭ್ಯವಿರುವ ಲಾಂಗಿನ್ ಐಡಿ ಪಡೆದುಕೊಳ್ಳಿನಂತರ ಪಾಸ್‌ವರ್ಡ್ ಹಾಕಿರಿಹಿಂಟ್ ಪ್ರಶ್ನೆ ಮತ್ತು ಉತ್ತರ ತುಂಬಿರಿನಂತರ ಅಲ್ಲಿ ನೀಡಿರುವ captcha ಹಾಕಿ ನೋಂದಣಿ ಮಾಡಿಕೊಳ್ಳಿ.

ನೋಂದಣಿಯಾದ ನಂತರ ಮಾಡುವುದೇನು?

ವೈಯಕ್ತಿಕ ಮಾಹಿತಿಯನ್ನು ನೀಡಿದ ನಂತರದಲ್ಲಿ ನಿಮ್ಮ ನೋಂದಣಿಯಾಗಿರುತ್ತದೆ. ಆ ನಂತರ ಮತ್ತೆ ಮುಖಪುಟಕ್ಕೆ ಹಿಂತಿರುಗಿ ನಿಮ್ಮ ಪಾಸ್‌ವರ್ಡ್ ಮತ್ತು ಲಾಂಗಿನ್ ಐಡಿಯನ್ನು ನೀಡಿ, ಲಾಗ್ ಇನ್ ಆಗಿರಿ.

ನಂತರ ಅಲ್ಲಿ ಇರುವ 'ಆಪ್ಲೇ ಫಾರ್ ಫ್ರೆಶ್ ಪಾಸ್‌ಪೋರ್ಟ್/ರೀ ಇಷ್ಯೂ ಆಫ್ ಪಾಸ್‌ಪೋರ್ಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ನಂತರ ಅಲ್ಲಿ ಕೇಳುವ ವಿವರಗಳನ್ನು ಭರ್ತಿ ಮಾಡಿರಿ. ಅಲ್ಲಿ ನಿಮ್ಮ ವಿವರಗಳನ್ನು ತುಂಬಿದ ನಂತರದಲ್ಲಿ 'ಪೇ ಅಂಡ್ ಶ್ಯೂಡ್ಯುಲ್ಡ್ ಅಪಾಯಿಂಟ್ ಮೆಂಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ನಂತರ ನಿಮ್ಮ ಬಿಡುವಿನ ಸಮಯವನ್ನು ನೋಡಿಕೊಂಡು ಪಾಸ್‌ಪೋರ್ಟ್ ಸಂದರ್ಶನಕ್ಕೆ ಸಮಯವನ್ನ ನಿಗಧಿ ಮಾಡಿಕೊಳ್ಳಿರಿ.

ಆನ್‌ಲೈನಿನಲ್ಲಿ ಶುಲ್ಕ ಪಾವತಿ ಮಾಡಿ, ಹೇಗೆ..?

ಪಾಸ್‌ಪೋರ್ಟ್ ಸಂದರ್ಶನಕ್ಕೆ ಸಮಯವನ್ನು ನಿಗಧಿ ಮಾಡಿಕೊಂಡ ನಂತರ ನೀವು ಪಾಸ್‌ಪೋರ್ಟ್ ಶುಲ್ಕವನ್ನು ಭರ್ತಿ ಮಾಡಬೇಕಾಗಿದೆ. ಇದನ್ನು ಆನ್‌ಲೈನಿನಲ್ಲಿ ಮಾಡಬಹುದಾಗಿದೆ.

ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಮೂಲಕ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಇಲ್ಲವೇ ಬ್ಯಾಂಕ್ ಚಲನ್ ಮೂಲಕ ಹಣವನ್ನು ಪಾವತಿ ಮಾಡುವ ಅವಕಾಶ ಮಾಡಿಕೊಡಲಾಗಿದೆ.

ಹಣವನ್ನು ಈ ಮೂಲಕ ಪಾವತಿ ಮಾಡಿದ ನಂತರ ಅಪ್ಲಿಕೇಶನ್ ಪ್ರಿಂಟ್ ಮಾಡಿಕೊಳ್ಳುವ ಸಲುವಾಗಿ 'ಪ್ರಿಂಟ್ ಅಪ್ಲಿಕೇಶನ್ ರೆಸಿಪ್ಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

ನಂತರ ಸಂದರ್ಶನಕ್ಕೆ ಹಾಜರಾಗಿ:

ಪಾಸ್‌ಪೋರ್ಟ್ ಶುಲ್ಕವನ್ನು ಭರ್ತಿ ಮಾಡಿ, 'ಪ್ರಿಂಡ್ ಅಪ್ಲಿಕೇಶನ್ ರೆಸಿಪ್ಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡ ಮೇಲೆ ಅರ್ಜಿಯ ಗುರುತು ಸಂಖ್ಯೆ/ಸಂದರ್ಶನ ಸಂಖ್ಯೆಯೂ ದೊರೆಯಲಿದ್ದು, ನಂತರ ನೀವು ನಿಗಧಿಪಡಿಸಿಕೊಂಡ ಸಮಯದಂದು, ನೀವು ಆಯ್ಕೆ ಮಾಡಿಕೊಂಡ ಪಾಸ್‌ಪೋರ್ಟ್ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಿ. ಅಲ್ಲಿ ನಿಮ್ಮ ಮೂಲ ದಾಖಲಾತಿಗಳನ್ನು ಹಾಜರುಪಡಿಸಿರಿ ಮತ್ತು ನಡೆಯುವ ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿ ನೀವು ಬಯಸಿದ ಪಾಸ್‌ಪೋರ್ಟ್ ನಿಮ್ಮದಾಗಿಸಿಕೊಳ್ಳಿ.

ದಳ್ಳಾಳಿಗಳ ಸಹಾಯವೇ ಬೇಕಾಗಿಲ್ಲ:

ನೀವು ಪಾಸ್‌ಪೋರ್ಟ್ ಮಾಡಿಸಲು ಯಾವುದೇ ದಳ್ಳಾಳಿಗಳ ಸಹಾಯ ಬೇಕಾಗಿಲ್ಲ. ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಸಿ, ನಿಮ್ಮ ಸಂದರ್ಶನದ ಸಮಯ ನಿಗಧಿ ಮಾಡಿಕೊಳ್ಳಿ, ಸರಕಾರ ಪಾಸ್‌ಪೋರ್ಟ್ ನೀಡಲು ನಿಗಧಿ ಮಾಡಿರುವ ಹಣವನ್ನಷ್ಟೆ ಪಾವತಿ ಮಾಡಿರಿ. ಆನಂತರ ನಿಮ್ಮ ಪಾಸ್‌ಪೋರ್ಟ್ ಅನ್ನು ಅಂಚೆ ಮೂಲಕ ಪಡೆದುಕೊಳ್ಳಿ. ಇದು ಸರಳ ವಿಧಾನ ಇದಕ್ಕಾಗಿ ದಳ್ಳಾಳಿಗಳ ಸಹಾಯವೇ ನಿಮಗೆ ಬೇಕಾಗಿಲ್ಲ:

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು