ಬೆಚ್ಚಿ ಬೀಳಿಸಿದ BSNL ಆಫರ್..249 ರೂಪಾಯಿಗೆ 300GB ಡೇಟಾ, ಉಚಿತ ಕರೆ!!


BSNL ಬಿಡುಗಡೆ ಮಾಡಿರುವ ಅನ್‌ಲಿಮಿಟೆಡ್ 249 ಆಫರ್ ಯಾರು ಊಹಿಸಲು ಸಾಧ್ಯವಾದ ರೀತಿಯಲ್ಲಿದೆ.!!
Written By: Bhaskar | Mon, Apr 10, 2017, 15:51 [IST]
ಜಿಯೋ ವಿರುದ್ದ ಸೆಡ್ಡು ಹೊಡೆಯಲು, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಊಹಿಸಲು ಸಾಧ್ಯವಾಗದ ಆಫರ್ ಒಂದನ್ನು ಬಿಡುಗಡೆ ಮಾಡಿದೆ. BSNL ಅನ್‌ಲಿಮಿಟೆಡ್ 249 ಎಂಬ ನೂತನ ಆಫರ್ ಒಂದನ್ನು ಬಿಡುಗಡೆ ಮಾಡಿದ್ದು, ಈ ನೂತನ ಆಫರ್ ಟೆಲಿಕಾಂ ಅನ್ನು ಬೆಚ್ಚಿ ಬೀಳಿಸದೆ.!!ಹೌದು, BSNL ಬಿಡುಗಡೆ ಮಾಡಿರುವ ಅನ್‌ಲಿಮಿಟೆಡ್ 249 ಆಫರ್ ಯಾರು ಊಹಿಸಲು ಸಾಧ್ಯವಾದ ರೀತಿಯಲ್ಲಿದೆ. ಕೇವಲ 249 ರೂಪಾಯಿಗೆ ಹೈ ಸ್ಪೀಡ್ ಹೊಂದಿರುವ 300 ಜಿಬಿ ಇಂಟರ್‌ನೆಟ್ ಡೇಟಾ ಮತ್ತು ಅನಿಯಮಿತ ಉಚಿತ ಕರೆ ಮಾಡುವ ಸೌಲಭ್ಯವನ್ನು BSNL ನೀಡಿದೆ.!!ಜಿಯೋ ಗ್ರಾಹಕರಿಗೆ ಮಣಿದ ಮೋದಿ..ಮತ್ತೆ ಉಚಿತವಾಗಲಿದೆ ಜಿಯೋ ಸೇವೆ?!!ಹಾಗಾದರೆ, BSNL ಬಿಡುಗಡೆ ಮಾಡಿರುವ ಅನ್‌ಲಿಮಿಟೆಡ್ 249 ಆಫರ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ. ಎಷ್ಟು ಸ್ಪೀಡ್‌ನಲ್ಲಿ BSNL ಡೇಟಾ ಗ್ರಾಹಕರಿಗೆ ದೊರಕಲಿದೆ. ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

BSNL ಅನ್‌ಲಿಮಿಟೆಡ್ 249 ಆಫರ್!!
ಅನ್‌ಲಿಮಿಟೆಡ್ 249 ಆಫರ್‌ನಲ್ಲಿ BSNL ಪ್ರತಿ ತಿಂಗಳು 300 ಜಿಬಿ ಡೇಟಾ ನೀಡುತ್ತಿದೆ. ಇನ್ನು ಈ ಪ್ಲಾನ್ ಅನ್ವಯ ಒಂದು ದಿನಕ್ಕೆ 10 ಜಿಬಿ ಡೇಟಾವನ್ನು ಬಳಸಬಹದಾಗಿದ್ದು, ಜೊತೆಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಅನಿಯಮಿತ ಉಚಿತ ಕರೆ ಮಾಡುವ ಸೌಲಭ್ಯವೂ ಸಿಗಲಿದೆ.!!
  

ಎಷ್ಟು ವೇಗದ ಇಂಟರ್‌ನೆಟ್?
BSNL ಹೈ ಸ್ಪೀಡ್ 300 ಜಿಬಿ ಡೇಟಾ ನೀಡಿದ್ದು, 2Mbps ವೇಗದಲ್ಲಿ ಇಂಟರ್‌ನೆಟ್‌ ಕಾರ್ಯನಿರ್ವಹಿಸಲಿದೆ. ಅಂದರೆ, ಕೆಲವೇ ನಿಮಿಷಗಳಲ್ಲಿ ಒಂದು ಸಿನಿಮಾವನ್ನು ಡೌನ್‌ಲೋಡ್ ಮಾಡಬಹುದಾಗಿದೆ.!! ಒಂದು ದಿನಕ್ಕೆ 10 ಜಿಬಿ ಡೇಟಾ ಮುಗಿದ ನಂತರ 1Mbpsಗೆ ಸ್ಪೀಡ್ ಇಳಿಯಲಿದೆ.

  

ಡೇಟಾ ಬಳಕೆಗೆ ಲಿಮಿಟ್ ಇಲ್ಲ.!!
ದಿನವೊಂದರಲ್ಲಿ 10ಜಿಬಿ BSNL ಡೇಟಾ ಬಳಸಲು ನಿಮ್ಮಿಂದ ಸಾಧ್ಯವಾಗಿಲ್ಲವೆಂದಾದರೆ ಉಳಿದ ಡೇಟಾ ನೀವು ಮರುದಿನ ಬಳಸಬಹುದು. ಒಂದು ದಿನ ನೀವು ಕೇವಲ 1 ಜಿಬಿ ಬಳಸಿದರೆ ಮರುದಿನ ನೀವು ಉಪಯೋಗಿಸಬಹುದಾದ ಡೇಟಾ 10+9 ಜಿಬಿ ಆಗುತ್ತದೆ.!!
  

ಕರ್ನಾಟಕಕ್ಕೆ ಈ ಆಫರ್ ಇದೆಯಾ?
ಹೌದು, BSNLನ ಅನ್‌ಲಿಮಿಟೆಡ್ 249 ಆಫರ್ ಕರ್ನಾಟಕಕ್ಕೆ ಲಭ್ಯವಿದೆ. ಜಮ್ಮು ಕಾಶ್ಮೀರ ಹಾಗೂ ಅಂಡಮಾನ್ ನಿಕೋಬಾರ್ ಪ್ರದೇಶವನದನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೂ ಲಭ್ಯವಿದ್ದು, ಒಂದು ತಿಂಗಳ ಸೆಕ್ಯುರಿಟಿ ಡೆಪಾಸಿಟ್ ಮಾಡಿ ಈ ಪ್ಲಾನ್ ಆರಿಸಿಕೊಳ್ಳಬಹುದಾಗಿದೆ. ಕೃಪೆ: NDTV

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು