ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ

Published: 04 May 2017 08:29 PM IST

www.freegksms.blogspot.in

ನವದೆಹಲಿ: 2017-18ನೇ ಸಾಲಿನ ಆದಾಯ ತೆರಿಗೆ ಮರುಪಾವತಿಗೆ ಎಲ್ಲಾ ವರ್ಗಗಳಲ್ಲಿ  ಇ-ಫೈಲಿಂಗ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ಇಂದು ಸಕ್ರಿಯಗೊಳಿಸಿದೆ.

ತೆರಿಗೆ ಇಲಾಖೆಯ ಇ-ಪೋರ್ಟಲ್ http://incometaxindiaefiling.gov.in ನಲ್ಲಿ ತೆರಿಗೆ ಪಾವತಿಸಲು ಹೊಸ ಐಟಿಆರ್ ಗಳು ಸಿಗುತ್ತವೆ.ಇಲಾಖೆಯ ವೆಬ್ ಸೈಟ್ ನಲ್ಲಿ ಇ-ಫೈಲಿಂಗ್ ಗೆ ಎಲ್ಲಾ ಐಟಿಆರ್ ಗಳು ಲಭ್ಯವಿರುತ್ತವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆರಿಗೆ ಪಾವತಿದಾರರು ಇ-ಫೈಲಿಂಗ್ ಮಾಡುವ ಮುನ್ನ ಕಳೆದ ವರ್ಷ ಸಲ್ಲಿಸಿದ ಐಟಿಆರ್ ನ ಪ್ರತಿ, ಬ್ಯಾಂಕ್ ಹೇಳಿಕೆಗಳು, ಟಿಡಿಎಸ್ ಮತ್ತು ಉಳಿತಾಯ ಸರ್ಟಿಫಿಕೇಟ್ ಗಳು, ಫಾರ್ಮ್ 60 ಮತ್ತು ಇತರ ಬಡ್ಡಿ ಪಾವತಿಸಿದ ಸಂಬಂಧಪಟ್ಟ ದಾಖಲೆಗಳನ್ನು ಯನ್ನು  ಸಿದ್ಧವಾಗಿಟ್ಟುಕೊಳ್ಳಬೇಕು.

ಆಧಾರ್ ಸಂಖ್ಯೆ ಮೂಲಕ ಐಟಿಆರ್ ನ ಇ-ಪರಿಶೀಲನೆ ಮಾಡಿಕೊಳ್ಳಬಹುದು. ಈ ವರ್ಷ ಆಧಾರ್ ಸಂಖ್ಯೆ ಮೂಲಕ ಈಗಾಗಲೇ 2,59,831 ಐಟಿಆರ್ ಗಳನ್ನು ಇ-ಪರಿಶೀಲನೆಗೊಳಪಡಿಸಲಾಗಿದೆ. 

ಸರ್ಕಾರ ಹಣಕಾಸು ಕಾಯ್ದೆ 2017ರ ಪ್ರಕಾರ, ತೆರಿಗೆ ಪಾವತಿದಾರರು  ಐಟಿಆರ್ ಗಳ ಸಲ್ಲಿಕೆಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಿದೆ. ಜುಲೈ 1ರಿಂದ ಪ್ಯಾನ್ ಸಂಖ್ಯೆಗೆ ಅರ್ಜಿ ಸಲ್ಲಿಸಲು ಕೂಡ ಆಧಾರ್ ಸಂಖ್ಯೆ ಕಡ್ಡಾಯವಾಗಿ ಬೇಕಾಗಿದೆ.ಐಟಿಆರ್ ನ್ನು ಜುಲೈ 31ರವರೆಗೆ ಸಲ್ಲಿಸಬಹುದು.

Comments

Post a Comment

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024