ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?..ಗೂಗಲ್ ಹೇಳಿದೆ ಈಗಲಾದರೂ ಕೇಳಿ!!

ಸುರಕ್ಷತೆ ಬಗ್ಗೆ ಯಾರೇ ಹೇಳಿದರೂ ಕೇಳಿಸಿಕೊಳ್ಳದೆ, ನಂತರ ಎಲ್ಲವನ್ನು ಕಳೆದುಕೊಂಡಾಗ ಕಷ್ಟ ಅನುಭವಿಸುತ್ತಾರೆ!!

Written By: Bhaskar

| Wed, May 10, 2017, 11:40 [IST]

   

ಹೋಗುವ ದಾರಿ ಯಲ್ಲಿ ಅಡ್ಡ ಕಲ್ಲು ಮುಳ್ಳುಗಳು ಸಿಕ್ಕುವಂತೆ ಆನ್‌ಲೈನ್ ಯುಗದಲ್ಲಿ ಸೈಬರ್ ಕ್ರಿಮಿನಲ್‌ಗಳು ನಮಗೆ ಎದುರು ನಿಂತಿದ್ದಾರೆ.!! ಆದರೆ, ನಾವು ಈ ಆನ್‌ಲೈನ್ ಬಳಕೆಯ ಜೊತೆ ಹೆಜ್ಜೆ ಸಾಗಿಸಲೇಬೇಕು.!! ಹಾಗಾಗಿ, ಎದುರು ಬರುವ ಅಡೆತಡೆಗಳನ್ನು ಸುರಕ್ಷಿತವಾಗಿ ಮೆಟ್ಟಿನಿಲ್ಲಬೇಕು!!

ಈ ಮಾತನ್ನು ಹೇಳುತ್ತಿರುವ ಉದ್ದೇಶ ಇಷ್ಟೆ.! ಆನ್‌ಲೈನ್‌ನಲ್ಲಿ ಬಹಳಷ್ಟು ಜನರು ಮೋಸಹೋಗುತ್ತಿದ್ದಾರೆ. ಬ್ಯಾಂಕಿಂಗ್ ದಾಖಲೆಗಳು, ಪರ್ಸನಲ್ ಮಾಹಿತಿಗಳು ಎಲ್ಲವೂ ಸೈಬರ್ ವಂಚಕರ ಪಾಲಾಗುತ್ತಿದೆ. ಇದರಿಂದ ಅವರು ಮುಗ್ದ ಜನರನ್ನು ಮೋಸಮಾಡುತ್ತಿದ್ದಾರೆ.!! ಸುರಕ್ಷತೆ ಬಗ್ಗೆ ಯಾರೇ ಹೇಳಿದರೂ ಕೇಳಿಸಿಕೊಳ್ಳದೆ ಎಲ್ಲವನ್ನು ಕಳೆದುಕೊಂಡಾಗ ಕಷ್ಟ ಅನುಭವಿಸುತ್ತಾರೆ!!

ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್ ಸೆಕ್ಯುರಿಟಿ ಬಗ್ಗೆ ಜಾಗ್ರತೆ ವಹಿಸಿ.!! ಆನ್‌ಲೈನ್ ಪ್ರಪಂಚದಲ್ಲಿನ ಮೋಸದ ಬಗ್ಗೆ ತಿಳಿದುಕೊಳ್ಳೀ.!! ಹಾಗಾಗಿ, ಇನ್ನು ಆಂಡ್ರಾಯ್ಡ್ ಫೋನ್ ಬಗ್ಗೆ ಜಾಗ್ರತೆ ವಹಿಸುವುದು ಹೇಗೆ ಎಂದು ಗೂಗಲ್ ಪಟ್ಟಿ ಮಾಡಿರುವ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಗೂಗಲ್ ಹೇಳುತ್ತಿದೆ.! ಹೌದು, ಸುಲಭವಾಗಿ ನೆನಪಿನಲ್ಲಿರಲಿ ಎನ್ನೋ ಕಾರಣಕ್ಕೆ ಬಹಳ ಸುಲಭವಾದ ಪಾಸ್‌ವರ್ಡ್‌ನ್ನು ಬಳಸುವವರೇ ಹೆಚ್ಚಿದ್ದು, ಸೈಬರ್ ಕ್ರಿಮಿನಲ್‌ಗಳಿಗೆ ಇದನ್ನು ಕ್ರಾಕ್ ಮಾಡಲು ಕ್ಷಣ ಮಾತ್ರದಲ್ಲಿ ಸಾಧ್ಯವಾಗುತ್ತದೆ.!! 111111, 22222222, 33333333, 44444444, 55555555, 66666666, 77777777, 0987654321, 987654321 ಇಂತಹ ಪಾಸ್‌ವರ್ಡ್‌ ಬಳಸಬೇಡಿ.

ಗೂಗಲ್ ಆಪ್‌ಸ್ಟೋರ್‌ನಲ್ಲಿರುವ ಆಪ್‌ಗಳ ಬಗ್ಗೆ ಎಚ್ಚರವಿರಲಿ. ಏಕೆಂದರೆ ಆಪ್‌ಸ್ಟೋರ್‌ನಲ್ಲಿರುವ ಶೇಕಡ 3 ಪರ್ಸೆಂಟ್ ಆಪ್‌ಗಳು ನಂಬಿಕೆಗೆ ಅರ್ಹವಾಗಿಲ್ಲ.!ಆದರೆ, ಗೂಗಲ್ ಮಾತ್ರ ಇಂತಹ ಆಪ್‌ಗಳನ್ನು ಕಂಡುಹಿಡಿದು ನಿಷೇಧಿಸಲು ಸಾಧ್ಯವಿಲ್ಲ.!! ಹಾಗಾಗಿ, ನೀವೆ ಎಚ್ಚರಿಕೆಯಿಂದರಬೇಕು.!!

ಯಾವುದೋ ಗೊತ್ತಿಲ್ಲದ ಇ-ಮೇಲ್ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮನ್ನು ಸೈಬರ್ ಕ್ರಿಮಿನಲ್‌ಗಳು ಸಂಪರ್ಕಿಸಲು ಸಾಧ್ಯ.!! ಇದರಿಂದ ನಿಮ್ಮ ಮಾಹಿತಿ ಅವರ ಪಾಲಾಗುವುದು ಕ್ಷಣಮಾತ್ರದಲ್ಲಿ ಸಾಧ್ಯ.!! ಹಾಗಾಗಿ, ತಿಳಿಯದ ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ ಎಂದು ಗೂಗಲ್ ಹೇಳಿದೆ.!!

ಜನರೆ ಮುಗಿಬಿದ್ದು ಭೇಟಿ ನೀಡುತ್ತುರವ ವೆಬ್‌ಸೈಟ್‌ಗಳೆಂದರೆ ಅವು ಪಾರ್ನ್‌ಸೈಟ್.! ಹಾಗಾಗಿ, ಪಾರ್ನ್‌ಸೈಟ್ ಇದನ್ನು ಎನ್‌ಕ್ಯಾಶ ಮಾಡಿಕೊಂಡು ಜನರಿಗೆ ಮೋಸಗೊಳಿಸುವ ಸಾಧ್ಯತೆ ಹೆಚ್ಚು. ಕೆಲವೊಂದು ಪಾರ್ನ್‌ಸೈಟ್‌ಳನ್ನು ಬಿಟ್ಟರೆ, ಉಳಿದ ಬಹುತೇಕ ಪಾರ್ನ್‌ಸೈಟ್‌ಗಳು ಮೋಸದ ಜಾಲದಲ್ಲಿ ತೊಡಗಿವೆ ಹುಷಾರು.!! ಹಾಗಾಗಿ, ಈ ಮಾಹಿತಿ ಶೇರ್ ಮಾಡಿ ಬೇರೆಯವರ ಸುರಕ್ಷತೆಗೆ ನೀವು ಕಾರಣರಾಗಿರಿ.!!

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು