ಕೆ.ಎ.ಎಸ್ -೨೦೧೭: ಮಾಹಿತಿ:


ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ
ಯಾವುದೇ ವಿಷಯದಲ್ಲಿ ಈಗಾಗಲೇ ಪದವಿ ಪಡೆದಿರುವವರು, ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ­ವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿ­ಗಳಿಗೆ 5 ಬಾರಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರು ಎಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು.

ವಯೋಮಿತಿ: 

ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 40 ವರ್ಷ 

ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಮುಖ್ಯವಾಗಿ ಕೆ.ಎ.ಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಅವುಗಳೆಂದರೆ

1. ಪೂರ್ವಭಾವಿ ಪರೀಕ್ಷೆ, 
2. ಮುಖ್ಯ ಪರೀಕ್ಷೆ     
3. ಸಂದರ್ಶನ.

ಪೂರ್ವಭಾವಿ ಪರೀಕ್ಷೆ

ಇದು ಎರಡು ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರು­ತ್ತದೆ. ಮೊದಲನೆಯದು 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ.

 ಎರಡನೆಯದು  ಕೂಡ 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ (CSAT).

ಪ್ರತಿಯೊಂದು ಪತ್ರಿಕೆಗೂ ತಲಾ ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ಇರುತ್ತದೆ.

 ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ/ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ನಾಲ್ಕು 
ಉತ್ತರಗಳ ಪೈಕಿ ಸರಿಯಾದ ಉತ್ತರವನ್ನು ಗುರುತಿಸಬೇಕಾಗುತ್ತದೆ. 2014 ರಿಂದ ಪೂರ್ವಭಾವಿ ಪರೀಕ್ಷೆ ಯಲ್ಲಿ ನಕಾರಾತ್ಮಕ ಅಂಕಗಳನ್ನು
ನಿಗದಿ ಪಡಿಸಲಾಗಿದೆ.

ಪತ್ರಿಕೆ 1: ಸಾಮಾನ್ಯ ಅಧ್ಯಯನ
ಇದು ಸಾಮಾನ್ಯ ವಿಜ್ಞಾನ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಪ್ರಚಲಿತ ವಿದ್ಯಮಾನಗಳು, ಭಾರತದ ಚರಿತ್ರೆ,
ಭೂಗೋಳ, ಸಂವಿಧಾನ, ಆರ್ಥಿಕತೆ, ಭಾರತದ ರಾಷ್ಟ್ರೀಯ ಚಳವಳಿ, ಮನೋಸಾಮರ್ಥ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ. ಅಭ್ಯರ್ಥಿಗಳು ಯಾವುದಾದರೂ ಒಂದು ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ.

ಪತ್ರಿಕೆ 2: ಸಾಮಾನ್ಯ ಅಧ್ಯಯನ (CSAT)

ರಾಜ್ಯದ ಪ್ರಚಲಿತ ವಿದ್ಯಮಾನಗಳು,

ಸಾಮಾನ್ಯ ವಿಜ್ಞಾನ & ತಂತ್ರ ಜ್ಞಾನ,

ಮಾನಸಿಕ  ಮಾನಸಿಕ ಸಾಮರ್ಥ್ಯ ಪರೀಕ್ಷೆ ( S S L C Level )

ಈ ಪೂರ್ವಭಾವಿ ಪರೀಕ್ಷೆಯ ನಂತರ 1:20ರ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಆಗ ಮತ್ತೊಮ್ಮೆ
ಅರ್ಜಿ ಸಲ್ಲಿಸಬೇಕು. ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸು­ವಾಗ ಪದವಿಯ ಅಂಕಪಟ್ಟಿಗಳನ್ನು ಹೊಂದಿರಬೇಕಾಗಿರು­ತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಒಂದು ವೇಳೆ ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ಉತ್ತೀರ್ಣರಾಗಲು ವಿಫಲ­ರಾದರೆ ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು, ಅನರ್ಹರಾಗುತ್ತಾರೆ.

ಮುಖ್ಯ ಪರೀಕ್ಷೆ:

ಇದರಲ್ಲಿ ಒಟ್ಟು ಎಂಟು ಪ್ರಶ್ನೆ ಪತ್ರಿಕೆಗಳು ಇರುತ್ತವೆ.
ಪತ್ರಿಕೆ 1- ಕನ್ನಡ  & ಪ್ರಬಂಧ (100 ಅಂಕ)

ಪತ್ರಿಕೆ 2- ಇಂಗ್ಲಿಷ್ (100 ಅಂಕ)

ಪತ್ರಿಕೆ  3, 4,  5, & 6: ಸಾಮಾನ್ಯ ಅಧ್ಯಯನ, ತಲಾ 250 ಅಂಕಗಳು

ಪತ್ರಿಕೆ 7,8: ಒಂದು ಐಚ್ಛಿಕ ವಿಷಯದಲ್ಲಿ ಎರಡು ಪತ್ರಿಕೆಗಳು (ತಲಾ 250 ಅಂಕಗಳು)

  ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೇ 35ರಷ್ಟು ಅಂಕಗಳನ್ನು ಗಳಿಸಲೇಬೇಕು. ಒಂದು ವೇಳೆ ನಿಗದಿತ ಅಂಕಗಳನ್ನು ಗಳಿಸದಿದ್ದರೆ ಉಳಿದ ಪತ್ರಿಕೆಗಳ ಮೌಲ್ಯಮಾಪನ ಮಾಡುವುದಿಲ್ಲ. ಆದರೆ ಈ ಅಂಕಗಳನ್ನು ಅಭ್ಯರ್ಥಿಗಳ ಶ್ರೇಯಾಂಕ ನಿಗದಿಗೆ ಪರಿಗಣಿಸುವುದಿಲ್ಲ.

ಇಲ್ಲಿಯೂ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಇರುತ್ತದೆ.ವಿವರಣಾತ್ಮಕ ರೂಪದ ಪ್ರಶ್ನೆಗಳು ಇರುತ್ತವೆ.

 ಕನ್ನಡ, ಇಂಗ್ಲಿಷ್ ಎಸ್ಸೆಸ್ಸೆಲ್ಸಿ ಮಟ್ಟದ್ದಾಗಿರುತ್ತದೆ. ಮುಖ್ಯ ಪರೀಕ್ಷೆಯ ಪಠ್ಯಕ್ರಮ ಪದವಿ ಮಟ್ಟದ್ದಾಗಿರುತ್ತದೆ.

ಸಂದರ್ಶನ: 

ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಒಟ್ಟು ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಇಲ್ಲಿ ಅಭ್ಯರ್ಥಿಯ ನಾಯಕತ್ವ ಗುಣ, ಮಾನಸಿಕ ಸಮತೋಲನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇತ್ಯಾದಿಗಳನ್ನು ಅಳೆಯ­ಲಾ­ಗುತ್ತದೆ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು