ಏಷ್ಯನ್ ಬಾಕ್ಸಿಂಗ್: ಬೆಳ್ಳಿ ಗೆದ್ದ ಶಿವ ಥಾಪ,ಸುಮಿತ್ ಸಾಂಗ್ವಾನ್
ತಾಷ್ಕೆಂಟ್(ಮೇ.06): ದೇಶದ ಅನುಭವಿ ಬಾಕ್ಸರ್ ಶಿವ ಥಾಪ(60 ಕೆಜಿ) ಸತತ ಮೂರು ಬಾರಿ ಏಷ್ಯಾ ಚಾಂಪಿಯನ್'ಶಿಪ್'ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ಅನ್ನುವ ದಾಖಲೆ ಬರೆದಿದ್ದಾರೆ.
ಇಲ್ಲಿ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದ ತಾಪ, ಅಂತಿಮ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಸೋಲೊಪ್ಪಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇನ್ನು ಇದೇ ವೇಳೆ 91 ಕೆಜಿ ವಿಭಾಗದಲ್ಲಿ ಸುಮಿತ್ ಸಾಂಗ್ವಾನ್ ಕೂಡ ಫೈನಲ್'ನಲ್ಲಿ ಮುಗ್ಗರಿಸಿ ರಜತ ಪದಕಕ್ಕೆ ಕೊರಳೊಡ್ಡಿದರು.
ಅಬ್ದುರಹಿಮೊವ್ ತಲೆಗೆ ಡಿಚ್ಚಿ ಹೊಡೆದ ಕಾರಣ ಶಿವ ಥಾಪ ಬಲಗಣ್ಣಿನ ಮೇಲೆ ಗಾಯವಾಯಿತು. ಈ ಕಾರಣ ರೆಫ್ರಿ ಆಟವನ್ನು ಸ್ಥಗಿತಗೊಳಿಸಿದರು.
ಮತ್ತೊಂದೆಡೆ ಸುಮಿತ್ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬಾಕ್ಸರ್ ಖಜಕಸ್ತಾನದ ವಸ್ಸಿಲಿ ಲೆವಿಟ್ ವಿರುದ್ಧ ಸುಲಭವಾಗಿ ಶರಣಾದರು.
ಥಾಪ, ಸುಮಿತ್ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್'ನಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Comments
Post a Comment