ಶೀಘ್ರದಲ್ಲೇ ವಾಟ್ಸಪ್’ನಲ್ಲಿ ಮೆಸೇಜ್ ‘ಅನ್ ಸೆಂಡ್’ ಆಯ್ಕೆ? By Suvarna Web Desk | 03:51 PM Tuesday, 02 May 2017
ಹೊಸ ಆವೃತ್ತಿಯಲ್ಲಿ ಪದಗಳನ್ನು ಬೋಲ್ಡ್, ಇಟಾಲಿಕ್ ಹಾಗೂ ಸ್ಟ್ರೈಕ್ ಮಾಡುವುದನ್ನು ಕೂಡಾ ಸರಳಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹಾಲಿ ವ್ಯವಸ್ಥೆಯಲ್ಲಿ ಬಳಕೆದಾರರು ಅದಕ್ಕಾಗಿ ಕೆಲವು ಕಮಾಂಡ್'ಗಳನ್ನು ನೆನಪಿನಲ್ಲಿಡಬೇಕಾಗಿದೆ.
ಬಳಕೆದಾರರು ತಾವು ಕಳುಹಿಸಿರುವ ಸಂದೇಶವನ್ನು 'ಅನ್ಸೆಂಡ್' (ಹಿಂಪಡೆಯುವಿಕೆ) ಮಾಡುವಂತಾಗಲು ವಾಟ್ಸಪ್ ಪ್ರಯೋಗಳನ್ನು ನಡೆಸುತ್ತಿದೆ. ಈ ಪ್ರಯೋಗವು ಯಶಸ್ವಿಯಾದಲ್ಲಿ, ಬಳಕೆದಾರರು ತಾವು ಕಳುಹಿಸಿರುವ ಮೆಸೇಜನ್ನು 5 ನಿಮಿಷದ ಅವಧಿಯೊಳಗೆ ವಾಪಾಸು ಪಡೆಯಬಹುದಾಗಿದೆ.
ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಹೊರಬಿದ್ದಿಲ್ಲದಿದ್ದರು, ಮೆಸೇಜ್ ಅನ್ಸೆಂಡ್ ಮಾಡುವ ಕುರಿತು ಪ್ರಯತ್ನಗಳು ನಡೆಯುತ್ತಿವೆ ಎಂದು ವೀ ಬೀಟಾ ಇನ್ಫೋ ವರದಿ ಮಾಡಿದೆ. ಶೀಘ್ರದಲ್ಲೇ ಅನ್ಸೆಂಡ್ ಮಾಡುವ ಆಯ್ಕೆ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊಸ ಆವೃತ್ತಿಯಲ್ಲಿ ಪದಗಳನ್ನು ಬೋಲ್ಡ್, ಇಟಾಲಿಕ್ ಹಾಗೂ ಸ್ಟ್ರೈಕ್ ಮಾಡುವುದನ್ನು ಕೂಡಾ ಸರಳಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹಾಲಿ ವ್ಯವಸ್ಥೆಯಲ್ಲಿ ಬಳಕೆದಾರರು ಅದಕ್ಕಾಗಿ ಕೆಲವು ಕಮಾಂಡ್'ಗಳನ್ನು ನೆನಪಿನಲ್ಲಿಡಬೇಕಾಗಿದೆ.
ಹೊಸ ಆವೃತ್ತಿಯಲ್ಲಿ ಬಳಕೆದಾರರು ತಾವಿರುವ ಸ್ಥಳವನ್ನು ಲೈವ್ ಬ್ರಾಡ್'ಕಾಸ್ಟ್ ಕೂಡಾ ಮಾಡಬಹುದಾಗಿದೆ ಎಂದು ವರದಿಯಾಗಿದೆ.
ಈ ಎಲ್ಲಾ ಪ್ರಯೋಗಗಳು ಯಶಸ್ವಿಯಾದಲ್ಲಿ ಮುಂದಿನ ಅಪ್'ಡೇಟ್'ಗಳಲ್ಲಿ ಬಳಕೆದಾರರಿಗೆ ಲಭ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ
Comments
Post a Comment