ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ: ಫ್ರಾನ್ಸ್‌ ರಿಪೋರ್ಟ್‌


ಟೈಮ್ಸ್ ಆಫ್ ಇಂಡಿಯಾ | Updated Jul 16, 2017, 02.46PM IST
ಚೆನ್ನೈ: ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಫ್ರಾನ್ಸ್‌ನ ಸೀಕ್ರೆಟ್ ರಿಪೋರ್ಟ್‌ವೊಂದು ಹೇಳಿದೆ.

ಭಾರತ ಸರಕಾರ 1956ರಲ್ಲಿ ರಚಿಸಿದ್ದ ಶಾ ನವಾಜ್‌ ಸಮಿತಿ ಮತ್ತು 1970 ರಲ್ಲಿ ರಚಿಸಿದ್ದ ಖೋಸ್ಲಾ ಸಮಿತಿಗಳು ನೇತಾಜಿ ಅವರು ಜಪಾನ್‌ ಆಕ್ರಮಿತ ತೈಪಿಯಲ್ಲಿ 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ 1999 ರಲ್ಲಿ ರಚನೆಯಾದ ಮುಖರ್ಜಿ ಸಮಿತಿ ಮಾತ್ರ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಹೇಳಿದೆ. ಆದರೆ ಸಂಶೋಧಕರು, ಇತಿಹಾಸಕಾರರು ಈ ಬಗ್ಗೆ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ.
ಪ್ಯಾರಿಸ್‌ನ ಇತಿಹಾಸ ತಜ್ಞ ಜೆಬಿಪಿ ಮೊರೆ ಅವರು ಫ್ರಾನ್ಸ್‌ನ ನ್ಯಾಷನಲ್‌ ಆರ್ಕೈವ್ಸ್‌ಗೆ ನೀಡಿರುವ ಸೀಕ್ರೆಟ್‌ ಸರ್ವಿಸ್‌ ರಿಪೋರ್ಟ್‌ನಲ್ಲಿ 1945ರ ಆಗಸ್ಟ್‌ನಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ. 1947ರ ಡಿಸೆಂಬರ್‌ವರೆಗೂ ಬದುಕಿದ್ದರು ಎಂದು ಹೇಳಿದ್ದಾರೆ.

1947ರ ಡಿಸೆಂಬರ್‌ ಬಳಿಕ ನೇತಾಜಿ ಬೋಸ್‌ ಎಲ್ಲಿದ್ದಾರೆಂಬುದು ಗೊತ್ತಿಲ್ಲ. 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಿಂದ ಅವರು ಜೀವಂತವಾಗಿ ಪಾರಾಗಿ ಇಂಡೋನೇಷ್ಯಾ ತೊರೆದಿದ್ದರು ಎಂದೂ ಮೊರೆ ಸೀಕ್ರೆಟ್‌ ರಿಪೋರ್ಟ್‌ನಲ್ಲಿ ಹೇಳಿದ್ದಾರೆ.

Netaji didn't die in air crash: How did Subhas Chandra Bose die? To find the answer, the Indian government had appointed three commissions

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023