*ಎಸ್.ಎಸ್.ಸಿ:(STAFF SELECTION COMMISSION) 3259 ಪೋಸ್ಟಲ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ*

Friday, 24 Nov,

*ನ್ಯೂಸ್ ಡೆಸ್ಕ್:* ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಕೆಳದರ್ಜೆ ಸಹಾಯಕರು, ಅಂಚೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.

*ವಿವರ ಹೀಗಿದೆ:*

1. ಹುದ್ದೆ: ಕೆಳದರ್ಜೆ ಸಹಾಯಕರು/ಜೂನಿಯರ್ ಅಸಿಸ್ಟೆಂಟ್ ಒಟ್ಟು ಹುದ್ದೆಗಳ ಸಂಖ್ಯೆ: 898
2. ಹುದ್ದೆ: ಪೋಸ್ಟಲ್ / ಸಾರ್ಟಿಂಗ್ ಅಸಿಸ್ಟೆಂಟ್ ಒಟ್ಟು ಹುದ್ದೆಗಳ ಸಂಖ್ಯೆ: 2359
3. ಡಾಟಾ ಎಂಟ್ರಿ ಆಪರೇಟರ್ ಒಟ್ಟು ಹುದ್ದೆಗಳ ಸಂಖ್ಯೆ: 02

*ವಿದ್ಯಾರ್ಹತೆ*:
ಕ್ರಮಸಂಖ್ಯೆ 1 ಮತ್ತು 2ರ ಹುದ್ದೆಗಳಿಗೆ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕ್ರಮಸಂಖ್ಯೆ 3ರ ಹುದ್ದೆಗಳಿಗೆ ದ್ವಿತೀಯ ಪಿಯುಸಿ (ಸೈನ್ಸ್ ವಿಷಯದಲ್ಲಿ) ಯಲ್ಲಿ ತೇರ್ಗಡೆಯಾಗಿರಬೇಕು.

*ವಿದ್ಯಾರ್ಹತೆ:* 01.08.2018ರಂತೆ 18-27 ವರ್ಷ ವಯೋಮಿತಿಯಲ್ಲಿರಬೇಕು ಅಂದರೆ ಅಭ್ಯರ್ಥಿ 02.08.1991 ರಿಂದ 01.08.2000ರ ನಡುವೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಆರ್ಹರು. ಇದೇ ವೇಳೇ ಎಸ್ಸಿ/ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗುವುದು.
ವೇತನಶ್ರೇಣಿ: ರೂ. 5200-20,200/-
ಹುದ್ದೆಗೆ ಆಯ್ಕೆ ಮಾಡುವ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು 04.03.2018 ರಿಂದ 28.03.2018ರವರೆಗೆ ನಡೆಸಲಾಗುವುದು. ಇದು ಒಟ್ಟು 200 ಅಂಕಗಳ ಪರೀಕ್ಷೆಯಾಗಿದ್ದು ಋಣಾತ್ಮಕ ಮೌಲ್ಯಮಾಪನ ಒಳಗೊಂಡಿರುತ್ತದೆ.
ಪರೀಕ್ಷಾ ಕೇಂದ್ರಗಳು ಹೀಗಿವೆ: ಬೆಂಗಳೂರು, ಧಾರವಾಡ, ಗುಲ್ಬರ್ಗಾ, ಮಂಗಳೂರು, ಮೈಸೂರು
ಅರ್ಜಿ ಶುಲ್ಕ: ರೂ.100 (ಎಸ್ಸಿ/ಎಸ್ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ನಿಗದಿತ ಮೊತ್ತದ ಶುಲ್ಕವನ್ನು ಎಸ್.ಬಿ.ಐ ನೆಟ್ ಬ್ಯಾಂಕಿಂಗ್/ಎಸ್.ಬಿ.ಐ ಚಲನ್ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳ ಮೂಲಕ ಆನ್ ಲೈನ್ ಮಾರ್ಗದಲ್ಲಿ ಪಾವತಿಸಬಹುದು.
ಅರ್ಜಿ ಸಲ್ಲಿಕೆ: ಆನ್ ಲೈನ್ ಮಾರ್ಗವಾಗಿ ಮಾತ್ರ 18.11.2017 ರಿಂದ 18.12.2018ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ*: 18.12.2017 ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

http://ssconline.nic.in/

Click here to apply

http://164.100.129.99/chsl2017/

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK