Teacher Tranfer guidelines 29/12/18.pdf'

https://drive.google.com/file/d/1S02_LP7gusLzx70th9MJbd5wJEVnLOvA/view?usp=drivesdk
http://164.100.133.126/transfer/Transferapplication/Amain17.aspx




ಶಿಕ್ಷಕರ ವರ್ಗಾವಣೆ-2017

           --:  ಮಾರ್ಗದರ್ಶಿ :--
     @@ಸಾಮಾನ್ಯ ಸೂಚನೆಗಳು @@
• ಕೋರಿಕೆಯ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು  ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ  ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ  ಸಂಖ್ಯೆಯ   ಜೊತೆಯಲ್ಲಿ ಅರ್ಜಿ ಸ0ಖ್ಯೆಯನ್ನು ಬಳಸುವುದು.

• ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು  ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ  ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ ಸಂಖ್ಯೆಯ  ಜೊತೆಯಲ್ಲಿ ಅರ್ಜಿ ಸ0ಖ್ಯೆಯನ್ನು ಬಳಸುವುದು.

• ವರ್ಗಾವಣೆಗೆ  ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಪಡೆಯಲು  ಕ್ಲಿಕ್ ಮಾಡಿ ಅರ್ಜಿ ಸಂಖ್ಯೆ ಹಾಗೂ ಕೆ.ಜಿ.ಐ.ಡಿ ಸಂಖ್ಯೆ ದಾಖಲಿಸಿ ಪಡೆಯಬಹುದಾಗಿದೆ.

• ತಂತ್ರಾಂಶದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಲ್ಲಿ  ಕ್ಲಿಕ್ ಮಾಡಿ ಸಂಬಂದಿಸಿದ ಅಧಿಕಾರಿಯವರನ್ನು ಸಂಪರ್ಕಿಸಬಹುದು.

ಕೋರಿಕೆ / ಪರಸ್ಪರ ವರ್ಗಾವಣೆಯ ಅರ್ಜಿಯನ್ನು ಭರ್ತಿಮಾಡುವಾಗ ಗಮನಿಸಬೇಕಾದ ಅಂಶಗಳು

ಕೆ.ಜಿ.ಐ.ಡಿ ಪ್ರಥಮ ಪಾಲಿಸಿ ಸಂಖ್ಯೆ : ಕಡ್ಡಾಯವಾಗಿ ಕೆ.ಜಿ.ಐ.ಡಿ ಪ್ರಥಮ ವಿಮಾ ಪಾಲಿಸಿ ಸಂಖ್ಯೆಯನ್ನು ನಮೂದಿಸುವುದು. ಹಾಗೂ ಕೆ.ಜಿ.ಐ.ಡಿ ಪಾಲಿಸಿ ಅವಧಿ ಪೂರ್ಣಗೊಂಡಿದ್ದಲ್ಲಿ ಹಿಂದಿನ ಪ್ರಥಮ ಪಾಲಿಸಿ ಸಂಖ್ಯೆಯನ್ನು ನಮೂದಿಸುವುದು. .

ಅರ್ಜಿ ಸಂಖ್ಯೆ : ಕಂಪ್ಯೂಟರ್ ಜನರೇಟೆಡ್ ಸಂಖ್ಯೆ ಆಗಿದ್ದು ಮುಂದಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ ಸಂಖ್ಯೆಯ ಜೊತೆಯಲ್ಲಿ ಇದನ್ನು ಬಳಸುವುದು.

ಅಭ್ಯರ್ಥಿಯ ಹೆಸರು :  ಸೇವಾ ಪುಸ್ತಕದಲ್ಲಿರುವ ಹಾಗೆ ನಮೂದಿಸುವುದು .

ಹುದ್ದೆ : ಅಭ್ಯರ್ಥಿಯು ಸಂಬಂದಿಸಿದ ಹುದ್ದೆಯನ್ನು ಆಯ್ಕೆ ಮಾಡುವುದು.

ವಿಷಯ : ನೇಮಕಗೊಂಡ ವಿಷಯವನ್ನು ನಮೂದಿಸುವುದು.

ಶಾಲಾ / ಕಛೇರಿಯ ಗ್ರೂಪ್ (Category)
ಪ್ರಾಥಮಿಕ ಶಾಲಾ ಶಿಕ್ಷಕರು – ‘ಪ್ರಾಥಮಿಕ’ ಎಂದು , ಪ್ರೌಢ ಶಾಲಾ ಶಿಕ್ಷಕರು,-“ ಪ್ರೌಢ ” ಎಂದು,  ಟಿ.ಜಿ.ಟಿ ಶಿಕ್ಷಕರು ಟಿ.ಜಿ.ಟಿ ಎಂದು  ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕ / ಗ್ರೂಪ್ ಬಿ ರವರು – ‘ಗ್ರೂಪ್ ಬಿ’ ಎಂದು ನಮೂದಿಸುವುದು.

ಲಿಂಗ : ಪುರುಷ/ಸ್ತ್ರೀ ಎಂದು ನಮೂದಿಸುವುದು.

ವಿವಾಹಿತರೇ : ಹೌದು/ಇಲ್ಲ ಎಂದು ನಮೂದಿಸುವುದು.

ಮೊಬೈಲ್ ಸಂಖ್ಯೆ : ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು.

ಹುಟ್ಟಿದ ದಿನಾಂಕ: ಸೇವಾ ಪುಸ್ತಕದಲ್ಲಿರುವಂತೆ ನಮೂದಿಸುವುದು.

ಸೇವೆಗೆ ಸೇರಿದ ದಿನಾಂಕ : ಸೇವಾ ಪುಸ್ತಕದಲ್ಲಿದ್ದಂತೆ ನಮೂದಿಸುವುದು.

ಖಾಯಂ ಪೂರ್ವ ಸೇವಾವಧಿ ಘೋಷಣೆಯಾದ ದಿನಾಂಕ : ಸೇವಾ ಪುಸ್ತಕದಲ್ಲಿದ್ದಂತೆ ನಮೂದಿಸುವುದು.

ಹಾಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆ/ ಕಾಲೇಜು/ ಕಚೇರಿಯ ಪೂರ್ಣ ವಿಳಾಸವನ್ನು ನೀಡುವಾಗ ಈ ಕೆಳಕಂಡಂತೆ ನೀಡುವುದು.

ಜಿಲ್ಲೆ/ಕಛೇರಿಯ ಹೆಸರು : ಪಟ್ಟಿಯಿಂದ ಆಯ್ಕೆ ಮಾಡುವುದು .

ತಾಲ್ಲೂಕು/ಕಛೇರಿಯ ಹೆಸರು : ಪಟ್ಟಿಯಿಂದ ಆಯ್ಕೆ ಮಾಡುವುದು .

ಶಾಲೆ/ ಕಛೇರಿಯ ಹೆಸರು : ಪಟ್ಟಿಯಿಂದ ಆಯ್ಕೆ ಮಾಡುವುದು .

ವಿಶೇಷ ಸೂಚನೆ : ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರು/ಟಿ.ಜಿ.ಟಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಸ್ಥಳವನ್ನು ನಮೂದಿಸುವಾಗ ಜಿಲ್ಲೆ ಹಾಗೂ ತಾಲ್ಲೂಕುಗಳನ್ನು ಸಂಬಂದಿಸಿದ ಪಟ್ಟಿಯಿಂದ ಕಡ್ಡಾಯವಾಗಿ ಆಯ್ಕೆ ಮಾಡುವುದು. ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸ್ಥಳಗಳ ವಲಯವಾರು ವಿವರಗಳನ್ನು ಈಗಾಗಲೇ ತಂತ್ರಾಂಶದಲ್ಲಿ ಅಳವಡಿಸಲಾಗಿರುತ್ತದೆ. ಪ್ರೌಢ ಶಾಲಾ ಮುಖ್ಯ ಶಿಕ್ಷಕರು / ಗ್ರೂಪ್ ಬಿ ವೃಂದ ಅಧಿಕಾರಿಗಳು ಜಿಲ್ಲೆ / ಕಛೇರಿ ಪಟ್ಟಿಯಿಂದ ಆಯ್ಕೆ ಮಾಡುವುದರ ಮೂಲಕ ಕಾರ್ಯ ನಿರ್ವಹಿಸುತ್ತಿರುವ ವಿಳಾಸವನ್ನು ಆಯ್ಕೆ ಮಾಡುವುದು.

ಶಿಸ್ತು ಪ್ರಕರಣ ಇದೆಯೇ? : ಹೌದು / ಇಲ್ಲ ಎಂದು ನಮೂದಿಸುವುದು.

ಹೆಚ್ಚುವರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೇ ? ಹೌದು / ಇಲ್ಲ (ಪ್ರಾಥಮಿಕ / ಪ್ರೌಢ ಶಿಕ್ಷಕರಿಗೆ ಮಾತ್ರ) .

ವರ್ಗಾವಣೆ ಬಯಸುವ ಘಟಕ:

ಪ್ರಾಥಮಿಕ  ಶಾಲಾ  ಶಿಕ್ಷಕರು
1.  9-08-2001  ರ ಒಳಗೆ ಸೇವೆಗೆ  ಸೇರಿದ್ದು , ಕಾರ್ಯಾ ನಿರ್ವಹಿಸುತ್ತಿರುವ ಜಿಲ್ಲೆಯ ಒಳಗೆ ವರ್ಗಾವಣೆ ಬಯಸಿದ್ದಲ್ಲಿ ಘಟಕದೊಳಗೆ /  Within Unit ಎಂದು ನಮೂದಿಸುವುದು ಹಾಗೂ   

       9-08-2001   ನಂತರ  ಸೇವೆಗೆ   ಸೇರಿದ್ದು , ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ  ಒಳಗೆ ವರ್ಗಾವಣೆ ಬಯಸಿದ್ದಲ್ಲಿ ಘಟಕದೊಳಗೆ / Within Unit  ಎಂದು ನಮೂದಿಸುವುದು.

2. 9-08-2001  ರ ನಂತರ ಸೇವೆಗೆ   ಸೇರಿದ್ದು ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಹೊರಗೆ (ಘಟಕದ ಹೊರಗೆ) ವರ್ಗಾವಣೆಗೆ ಬಯಸಿದ್ದಲ್ಲಿ ಘಟದ ಹೊರಗೆ/Out of Unit ಎ0ದು ನಮೂದಿಸುವುದು /

       9-08-2001   ಒಳಗೆ ಸೇವೆಗೆ   ಸೇರಿದ್ದು , ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ   ಹೊರಗೆ (ಘಟಕದ ಹೊರಗೆ) ವರ್ಗಾವಣೆ ಬಯಸಿದ್ದಲ್ಲಿ ಘಟಕದ ಹೊರಗೆ/ Out of Unit  ಎಂದು ನಮೂದಿಸುವುದು.

        ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಸಂದರ್ಭಕ್ಕೆ ಮಾತ್ರ ಅನ್ವಯವಾಗುವಂತೆ, ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಸಂಬಂಧಪಟ್ಟಂತೆ, ‘ಜ್ಯೇಷ್ಠತಾ ಘಟಕ’ ಎಂದರೆ ಆಯಾ ಜಿಲ್ಲೆ ಎಂಬುದಾಗಿ ಪರಿಗಣಿಸತಕ್ಕದ್ದು.

3. ಅಂತರ ಘಟಕ  /Out of Unit  ವರ್ಗಾವಣೆ ಬಯಸುವ    ಶಿಕ್ಷಕರು/ಅಧಿಕಾರಿಗಳು ಯಾವ ವಿಭಾಗದಲ್ಲಿ ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗಬೇಕೆಂಬ ಬಗ್ಗೆ ವಿಭಾಗವನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು



 ಪ್ರೌಢ ಶಾಲಾ  ಶಿಕ್ಷಕರು

1.  24-06-2003  ರ ಒಳಗೆ ಸೇವೆಗೆ  ಸೇರಿದ್ದು , ಕಾರ್ಯಾ ನಿರ್ವಹಿಸುತ್ತಿರುವ ವಿಭಾಗದ ಒಳಗೆ ವರ್ಗಾವಣೆ ಬಯಸಿದ್ದಲ್ಲಿ ಘಟಕದೊಳಗೆ /  Within Unit ಎಂದು  ನಮೂದಿಸುವುದು   ಹಾಗೂ       24-06-2003   ನಂತರ  ಸೇವೆಗೆ   ಸೇರಿದ್ದು , ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಒಳಗೆ ವರ್ಗಾವಣೆ ಬಯಸಿದ್ದಲ್ಲಿ ಘಟಕದೊಳಗೆ / Within Unit  ಎಂದು ನಮೂದಿಸುವುದು.

2. 24-06-2003  ರ ನಂತರ ಸೇವೆಗೆ   ಸೇರಿದ್ದು ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಹೊರಗೆ   ವರ್ಗಾವಣೆಗೆ ಬಯಸಿದ್ದಲ್ಲಿ ಘಟದ ಹೊರಗೆ /Out of Unit   ಎಂದು ನಮೂದಿಸುವುದು.

3.  24-06-2003  ರ ಒಳಗೆ ಸೇವೆಗೆ ಸೇರಿದ್ದು ಕಾರ್ಯ ನಿರ್ವಹಿಸುತ್ತಿರುವ ವಿಭಾಗದ ಹೊರಗೆ  ವರ್ಗಾವಣೆ ಬಯಸಿದ್ದಲ್ಲಿ ಘಟದ ಹೊರಗೆ ಎಂದು ನಮೂದಿಸುವುದು.

   ಅಂತರ ಘಟಕ/Out of Unit ವರ್ಗಾವಣೆ ಬಯಸುವ ಶಿಕ್ಷಕರು/ಅಧಿಕಾರಿಗಳು ಯಾವ ವಿಭಾಗದಲ್ಲಿ ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗಬೇಕೆಂಬ ಬಗ್ಗೆ ವಿಭಾಗವನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು .


ವರ್ಗಾವಣೆ ಬಯಸಿದ ಆಧ್ಯತೆ : ಶಿಕ್ಷಕರು ವರ್ಗಾವಣೆ ಬಯಸುವ ಆದ್ಯತೆಯನ್ನು ಪಟ್ಟಿಯಿಂದ ಆಯ್ಕೆ ಮಾಡುವುದು. ಆದ್ಯತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ/ಟಿ.ಜಿ.ಟಿ ಶಿಕ್ಷಕರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ಪರಿಶೀಲನೆಯ ಸಂದರ್ಭದಲ್ಲಿ ನೀಡುವುದು. ಪ್ರೌಢ ಶಾಲಾ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ದೈಹಿಕ ಶಿಕ್ಷಕ ಪರಿವೀಕ್ಷರು ವೃತ್ತಿ ಶಿಕ್ಷಣ ಪರಿವೀಕ್ಷಕ ವೃಂದಕ್ಕೆ ಸಂಬಂಧಿಸಿದಂತೆ ಆದ್ಯತೆಯ ಮೂಲ ದಾಖಲೆಗಳನ್ನು ಸಂಬಂಧಿಸಿದ ಉಪನಿರ್ದೇಶಕರಿಗೆ ಅರ್ಜಿ ಪರಿಶೀಲನೆಯ ಸಂದರ್ಭದಲ್ಲಿ ನೀಡುವುದು.

ಸೇವಾ ವಿವರ :

ಶಿಕ್ಷಕರು ಸೇವಾ ವಿವರವನ್ನು ನಮೂದಿಸುವಾಗ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವೃಂದದಲ್ಲಿ  ಮತ್ತು ಈ ವೃಂದಗಳಲ್ಲಿ ಎಲ್ಲಾ ಸ್ಥಳಗಳಲ್ಲಿ ಸಲ್ಲಿಸಿದ ಸೇವೆಯ ವಿವರವನ್ನು ಶಾಲಾವಾರು / ಕಛೇರಿವಾರು ಅನುಕ್ರಮವಾಗಿ ಸೇವಾ ವಹಿಯಲ್ಲಿದ್ದಂತೆ ನಮೂದಿಸುವುದು. ಶಾಲೆಗಳನ್ನು ಸರ್ಕಾರದ ಆದೇಶ ದಿನಾಂಕ: 14.11.2007 ರಂತೆ ಎ,ಬಿ, ಮತ್ತು ಸಿ ವಲಯಗಳಾಗಿ ವರ್ಗೀಕರಿಸಿದ್ದು, ಈ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ನಲ್ಲಿ ಅಳವಡಿಸಲಾಗಿದೆ. ಹಾಗೂ ಉಪನಿರ್ದೇಶಕರು (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಮಾಹಿತಿಯನ್ನು ಪಡೆದು ಶಾಲೆಯು ಯಾವ ವಲಯಕ್ಕೆ ಸೇರುತ್ತದೆ ಎಂಬ ಮಾಹಿತಿಯನ್ನು ನಿಖರವಾಗಿ ಭರ್ತಿಮಾಡುವುದು.

ಪೂರ್ಣಗೊಂಡ ವರ್ಷಗಳು : ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವೃಂದದಲ್ಲಿ  ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದ ಅವಧಿಯನ್ನು ಪೂರ್ಣಗೊಂಡ ವರ್ಷಗಳಲ್ಲಿ ಪರಿಗಣಿಸಲಾಗುವುದು. ಶಿಕ್ಷಕರು/ಅಧಿಕಾರಿಗಳು ಪ್ರಸುತ್ತ ಕಾರ್ಯನಿರ್ವಹಿಸುತ್ತಿರುವ ವೃಂದದಲ್ಲಿ ಬೇರೆ ಬೇರೆ ಸ್ಧಳಗಳಲ್ಲಿ ಕಾರ್ಯ ನಿರ್ವಹಿಸಿದ ಅವಧಿಯನ್ನು /ವಿವರವನ್ನು ಮಾತ್ರ ಭರ್ತಿ ಮಾಡತಕ್ಕದ್ದು.

ಪ್ರಸ್ತುತ ಸಾಲಿನಲ್ಲಿ ದಿನಾಂಕ: 02.07.2016 ಹಾಗೂ ಸಂಬಂಧಪಟ್ಟ ಆದೇಶಗಳಿಗನುಗುಣವಾಗಿ ಹೆಚ್ಚುವರಿ(ಪ್ರಾಥಮಿಕ)ಎಂದು ಗುರುತಿಸಿರುವ ಶಿಕ್ಷಕರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಾತ್ರ, ಯಾವ ಶಾಲೆಯಿಂದ ಹೆಚ್ಚುವರಿ ಎಂದು ಗುರುತಿಸಲ್ಪಟ್ಟಿರುವರೋ ಆ ಶಾಲೆಗೆ ಸೇರ್ಪಡೆಗೊಂಡ ದಿನಾಂಕದಿಂದ ಸೇವೆಯನ್ನು ಪರಿಗಣಿಸತಕ್ಕದ್ದು.

ಪೂರ್ಣಗೊಂಡ ವರ್ಷಗಳಿಗೆ ಪಡೆದ ಅಂಕಗಳು : ವಲಯವಾರು ಸಲ್ಲಿಸಿದ ಸೇವೆಯ ಆಧಾರದ ಮೇಲೆ ಹಾಗೂ ಪೂರ್ಣಗೊಂಡ ವರ್ಷಗಳಗೆ ಅನುಗುಣವಾಗಿ ಕೃಪಾಂಕಗಳನ್ನು ನೀಡಲಾಗುವುದು.

ವರ್ಗಾವಣಾ ಅರ್ಜಿ ಪ್ರತಿ ಪಡೆಯುವುದು: ವರ್ಗಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಆನ್ ಲೈನ್ ತಂತ್ರಾಂಶದಲ್ಲಿ   ಭರ್ತಿ ಮಾಡಿದ ನಂತರ ತಂತ್ರಾಂಶ ನೀಡಿರುವ ಅರ್ಜಿ ಸಂಖ್ಯೆ ಜೊತೆಯಲ್ಲಿ   ಕೆ.ಜಿ.ಐ.ಡಿ ಸಂಖ್ಯೆ ಯನ್ನು ಬಳಸಿ ಅರ್ಜಿ ಪ್ರತಿಯನ್ನು ಪಡೆಯಬಹುದಾಗಿದೆ.

ಆನ್ ಲೈನ್  ತಂತ್ರಾಂಶದಲ್ಲಿ        ಮಾಡದ ಅರ್ಜಿಗಳ      ಗಳನ್ನು   ಪರಿಶೀಲನಾ ಸಂಧರ್ಭದಲ್ಲಿ ಪರಿಗಣಿಸಲಾಗುವುದಿಲ್ಲ.ವರ್ಗಾವಣೆಗೆ ಸಂಬಂಧಿಸಿದಂತೆ ಬದಲಾವಣೆಗಳ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೈಬ್‌ಸೈಟ್‌ ಮೂಲಕ ಪಡೆಯಬಹುದಾಗಿದೆ.


Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK