Posts

Showing posts from August, 2018

ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ

Image
Updated:August 29, 2018, 5:40 PM IST ಗೂಗಲ್​ ತನ್ನ ಗೂಗಲ್​ ಫಾರ್​ ಇಂಡಿಯಾ ಸಮ್ಮೇಳನಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳ ಕುರಿತು ಈಗಾಗಲೇ ಬಿಚ್ಚಿಟ್ಟಿದೆ, ಇದಕ್ಕೆ ಪೂರಕ ಎಂಬಂತೆ 'ಗೂಗಲ್​ ಗೊ' ಆ್ಯಪ್​ ಮೂಲಕ ಕನಿಷ್ಠ ಇಂಟರ್​ನೆಟ್​ ವೇಗದಲ್ಲಿ 28 ಭಾಷೆಗಳ ವೆಬ್​ ಪೇಜ್​ಗಳನ್ನು ಓದುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಮಂಗಳವಾರ ನಡೆದ ಗೂಗಲ್​ ವಾರ್ಷಿಕ ಸಮ್ಮೇಳನದಲ್ಲಿ ಗೂಗಲಗ ತೇಜ್​ ಬದಲು ಗೂಗಲ್​ ಪೇ, ಗೋಗಲ್​ ಅಸಿಸ್ಟೆಂಟ್​ನಂತಹ ಸಾಕಷ್ಟು ಬದಲಾವಣೆಯನ್ನು ಗೂಗಲ್​ ಘೋಷಿಸಿತ್ತು, ಇದೀಗ ವೆಬ್​ ಪೇಜ್​ಗಳನ್ನು ಅದೇ ಭಾಷೆಯಲ್ಲಿ ಓದುವ ನೂತನ ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನವನ್ನು ಅಳವಡಿಸಲು ಗೂಗಲ್​ ಮುಂದಾಗಿದೆ. ಇದರ ಮೊದಲ ಹಂತವಾಗಿ ಗೂಗಲ್​ ಗೋ ಮೂಲಕ 28 ಭಾಷೆಗಳ ವೆಬ್​ ಪೇಜ್​ಗಳನ್ನು ಓದು ವಿಶೇಷ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಗೂಗಲ್​ ಗೋ ಸೇವೆಯನ್ನು 2ಜಿ ಇಂಟರ್​ನೆಟ್​ ವೇಗದಲ್ಲಿ ಕಾರ್ಯ ನಿರ್ವಹಿಸುವ ರೀತಿ ಅಭಿವೃದ್ಧಿ ಪಡಿಸಲಾಗಿದ್ದು, ವೆಬ್​ ಪೇಜ್​ಗಳಲ್ಲಿ ಇರುವ ಮಾಹಿತಿ ಮಾತ್ರಾ ಹೆಕ್ಕಿ ಓದುತ್ತದೆ. ಒಂದು ವೇಳೆ ಈ ಪೇಜ್​ನಲ್ಲಿ ಜಾಹೀರಾತುಗಳಿದ್ದರೆ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಮುಂದಿನ ಹಂತದಲ್ಲಿ ತನ್ನ ಎಲ್ಲಾ ಯೋಜನೆಗಳಿಗೆ ಧ್ವನಿ ಸಂದೇಶವನ್ನು ಅಳವಡಿಸುವ ಯೋಜನೆಯನ್ನು ಗೂಗಲ್​ ಹಾಕಿಕೊಂಡಿದೆ.

*ಬರಹಗಾರ್ತಿ & ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿಯಿಂದ ಈ ಬಾರಿ ದಸರಾ ಉದ್ಘಾಟನೆ*

Tuesday, 28 Aug, *ಬೆಂಗಳೂರು[ಆ.28]: ಈ ಬಾರಿಯ ನಾಡ ಹಬ್ಬ ದಸರಾವನ್ನು ಖ್ಯಾತ ಬರಹಗಾರ್ತಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಉದ್ಘಾಟಿಸಲಿದ್ದಾರೆ.* *ಅಕ್ಟೋಬರ್ 19 ರಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 409ನೇ ನಾಡ ಹಬ್ಬ ನಡೆಯಲಿದ್ದು ಲೇಖಕಿ ಸುಧಾ ಮೂರ್ತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.* *10 ದಿನಗಳ ಕಾಲ ವೈಭವಯುತವಾಗಿ ನಡೆಯುವ ನಾಡ ಹಬ್ಬಕ್ಕೆ ದೇಶ ವಿದೇಶದಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಸುಧಾ ಮೂರ್ತಿ ಅವರು ಡಾಲರ್ ಸೊಸೆ, ಮಹಾಶ್ವೇತಾ,ಅತಿರಿಕ್ತೆ ಸೇರಿದಂತೆ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಒಟ್ಟು 12 ಕೃತಿಗಳನ್ನು ರಚಿಸಿದ್ದಾರೆ.* *ಇವರು ಪತಿ ಇನ್ಫೋಸಿಸ್ ಸಂಸ್ಥೆಯ ಸಹ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ದೇಶದ ಪ್ರಖ್ಯಾತ ಐಟಿ ಉದ್ಯಮಿ.*

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಹುಡುಗನ ಮಿಂಚು; ಮಿಲ್ಕಾ ಸಿಂಗ್ ಬಳಿಕ ನೀರಜ್ ಐತಿಹಾಸಿಕ ದಾಖಲೆ:-

Image
news18 Updated:August 28, 2018, 3:20 PM IST ನ್ಯೂಸ್ 18 ಕನ್ನಡ ಏಷ್ಯನ್ ಗೇಮ್ಸ್​ನ ಉದ್ಘಾಟನೆಯಲ್ಲಿ ಭಾರತದ ಧ್ವಜದಾರಿಯಾಗಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಕೋಟ್ಯಾಂತರ ಭಾರತೀಯರ ನಿರೀಕ್ಷೆಯನ್ನು ಹುಸಿಗೊಳಸದೆ ಜಕಾರ್ತದಲ್ಲಿ ಐತಿಹಾಸಿಕ ಸ್ವರ್ಣ ಪದಕ ಗೆದ್ದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಹಿಂದೆಂದೂ ಯಾವೊಬ್ಬ ಭಾರತೀಯ ಕ್ರೀಡಾಪಟು ಮಾಡದ ಸಾಧನೆಯನ್ನ 22 ವರ್ಷದ ನೀರಜ್ ಚೋಪ್ರಾ ಮಾಡಿ ತೋರಿಸಿದ್ದಾರೆ. ಪುರುಷರ ಜಾವೆಲಿನ್ ತ್ರೋ ಸ್ಪರ್ಧೆಯ ಫೈನಲ್​ನಲ್ಲಿ ತನ್ನ ಬಾಹುಬಲ ಪ್ರದರ್ಶಿಸಿದ ನೀರಜ್ ಅವರು ಮೊದಲ ಸುತ್ತಿನಲ್ಲೇ 83.46 ಮೀಟರ್ ದೂರ ಎಸೆದು ಮೊದಲಿಗರಾಗಿ ಗುರುತಿಸಿಕೊಂಡಿದ್ದರು. ಆದರೆ 2ನೇ ಎಸೆತದಲ್ಲಿ ಫೌಲ್ ಮಾಡಿದ ಪರಿಣಾಮ ಮೂರನೇ ಪ್ರಯತ್ನದಲ್ಲಿ ಎದುರಾಳಿಗೆ ಬೆವಳಿಸುವಂತೆ ಪ್ರದರ್ಶನ ತೋರಿದರು. ತನ್ನ ಶಕ್ತಿಯನ್ನೆಲ್ಲಾ ಒಟ್ಟಾಗಿ ಜಾವೆಲಿನ್ ತ್ರೋ ಮಾಡಿದ ನೀರಜ್ , 88.06 ಮೀಟರ್ ದೂರಕ್ಕೆ ಎಸೆಯುವ ಮೂಲಕ ತನ್ನ ಹಿಂದಿದ್ದ ದಾಖಲೆಗಳನ್ನೆಲ್ಲಾ ಮುರಿದು ಚಿನ್ನಕ್ಕೆ ಗುರಿಯಿಟ್ಟರು. ನೀರಜ್​​ಗೆ ಸ್ಪರ್ಧೆಯೊಡ್ಡಿದ್ದ ಯಾವೊಬ್ಬ ಆಟಗಾರನೂ ಅವರ ಹತ್ತಿರವೂ ಸಮೀಪಿಸಲಿಲ್ಲ. 6 ಪ್ರಯತ್ನದಲ್ಲಿ ನೀರಜ್ ಎಲ್ಲರಿಗಿಂತ ಮುಂದಿದ್ದರು. ಈ ಮೂಲಕ ನೀರಜ್ ಕಾಮನ್​ವೆಲ್ತ್​​ ಗೇಮ್ಸ್ ಬಳಿಕ ಏಷ್ಯನ್ ಗೇಮ್ಸ್​​ನಲ್ಲೂ ಚಿನ್ನದ ಪದಕ ಗೆದ್ದ ಮೊದಲ ಭಾರತೀ...

: ಚೋಪ್ರಾ ರಾಷ್ಟ್ರೀಯ ದಾಖಲೆ; ಭಾರತಕ್ಕೆ 8ನೇ ಚಿನ್ನ

> > ನೀರಜ್ ಚೋಪ್ರಾ > > - ನ್ಯೂಸ್18 ಕನ್ನಡ > > ಬೆಂಗಳೂರು(ಆ. 27): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇಂದು ಸೋಮವಾರ ಎಂಟನೇ ಚಿನ್ನ ಸಿಕ್ಕಿದೆ. ಭರ್ಜಿ ಎಸೆತದಲ್ಲಿ (ಜಾವೆಲಿನ್ ಥ್ರೋ) ನೀರಜ್ ಚೋಪ್ರಾ ಅಗ್ರಸ್ಥಾನ ಪಡೆದಿದ್ದಾರೆ. 88.03 ದೂರ ಭರ್ಜಿ ಎಸೆದ ನೀರಜ್ ಚೋಪ್ರಾ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಈ ಮೂಲಕ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಚೋಪ್ರಾ ಉಳಿಸಿಕೊಂಡರು. ಏಷ್ಯನ್ ಗೇಮ್ಸ್ ಜಾವೆಲಿನ್ ಥ್ರೋನಲ್ಲಿ ಭಾರತ ಕೊನೆಯ ಬಾರಿ ಚಿನ್ನ ಗಳಿಸಿದ್ದು 1982ರಲ್ಲಿ. ಅಂದರೆ, 36 ವರ್ಷಗಳ ನಂತರ ನೀರಜ್ ಚೋಪ್ರಾ ಅವರ ಮೂಲಕ ಭಾರತಕ್ಕೆ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಲಭಿಸಿದೆ. > > ನೀರಜ್ ಚೋಪ್ರಾ ತಮ್ಮ ಮೂರನೇ ಪ್ರಯತ್ನದಲ್ಲಿ 88.03 ಮೀಟರ್ ದೂರಕ್ಕೆ ಭರ್ಜಿ ಎಸೆದರು. ಅವರ ಇತರ ಐದು ಪ್ರಯತ್ನಗಳು ಈ ಮಟ್ಟಕ್ಕೆ ಬರಲಿಲ್ಲ. ಆದರೆ, ಅವರ ಮೂರನೇ ಯತ್ನದ ಎಸೆತವು ಚಿನ್ನ ದಕ್ಕಿಸಿಕೊಳ್ಳಲು ಯಶಸ್ವಿಯಾಯಿತು. > > ನೀರಜ್ ಚೋಪ್ರಾ ಅವರು ಶಿರಸಿ ಮೂಲದ ಜಾವೆಲಿನ್ ಪಟು ಕಾಶಿನಾಥ್ ನಾಯ್ಕ್ ಅವರ ಗರಡಿಯಲ್ಲಿ ಅಭ್ಯಾಸ ಮಾಡಿದವರಾಗಿದ್ದಾರೆ. ಚೋಪ್ರಾ ಸದ್ಯ ದೇಶದ ನಂಬರ್ ಒನ್ ಜಾವೆಲಿನ್ ಥ್ರೋ ಪಟುವಾಗಿದ್ಧಾರೆ. ಇವರಿಂದ ಚಿನ್ನದ ಪದಕದ ನಿರೀಕ್ಷೆಯು ಕ್ರೀಡಾಕೂಟದ ಮುನ್ನವೇ ಇತ್ತು. ಆದರೆ, ಕಳೆದ ವರ...