ವೆಬ್​ ಪೇಜ್​ಗಳನ್ನ ನಿಮ್ಮಿಷ್ಟ ಭಾಷೆಯಲ್ಲೇ ಓದಿ


Updated:August 29, 2018, 5:40 PM IST

ಗೂಗಲ್​ ತನ್ನ ಗೂಗಲ್​ ಫಾರ್​ ಇಂಡಿಯಾ ಸಮ್ಮೇಳನಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳ ಕುರಿತು ಈಗಾಗಲೇ ಬಿಚ್ಚಿಟ್ಟಿದೆ, ಇದಕ್ಕೆ ಪೂರಕ ಎಂಬಂತೆ 'ಗೂಗಲ್​ ಗೊ' ಆ್ಯಪ್​ ಮೂಲಕ ಕನಿಷ್ಠ ಇಂಟರ್​ನೆಟ್​ ವೇಗದಲ್ಲಿ 28 ಭಾಷೆಗಳ ವೆಬ್​ ಪೇಜ್​ಗಳನ್ನು ಓದುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಮಂಗಳವಾರ ನಡೆದ ಗೂಗಲ್​ ವಾರ್ಷಿಕ ಸಮ್ಮೇಳನದಲ್ಲಿ ಗೂಗಲಗ ತೇಜ್​ ಬದಲು ಗೂಗಲ್​ ಪೇ, ಗೋಗಲ್​ ಅಸಿಸ್ಟೆಂಟ್​ನಂತಹ ಸಾಕಷ್ಟು ಬದಲಾವಣೆಯನ್ನು ಗೂಗಲ್​ ಘೋಷಿಸಿತ್ತು, ಇದೀಗ ವೆಬ್​ ಪೇಜ್​ಗಳನ್ನು ಅದೇ ಭಾಷೆಯಲ್ಲಿ ಓದುವ ನೂತನ ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನವನ್ನು ಅಳವಡಿಸಲು ಗೂಗಲ್​ ಮುಂದಾಗಿದೆ. ಇದರ ಮೊದಲ ಹಂತವಾಗಿ ಗೂಗಲ್​ ಗೋ ಮೂಲಕ 28 ಭಾಷೆಗಳ ವೆಬ್​ ಪೇಜ್​ಗಳನ್ನು ಓದು ವಿಶೇಷ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಗೂಗಲ್​ ಗೋ ಸೇವೆಯನ್ನು 2ಜಿ ಇಂಟರ್​ನೆಟ್​ ವೇಗದಲ್ಲಿ ಕಾರ್ಯ ನಿರ್ವಹಿಸುವ ರೀತಿ ಅಭಿವೃದ್ಧಿ ಪಡಿಸಲಾಗಿದ್ದು, ವೆಬ್​ ಪೇಜ್​ಗಳಲ್ಲಿ ಇರುವ ಮಾಹಿತಿ ಮಾತ್ರಾ ಹೆಕ್ಕಿ ಓದುತ್ತದೆ. ಒಂದು ವೇಳೆ ಈ ಪೇಜ್​ನಲ್ಲಿ ಜಾಹೀರಾತುಗಳಿದ್ದರೆ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಮುಂದಿನ ಹಂತದಲ್ಲಿ ತನ್ನ ಎಲ್ಲಾ ಯೋಜನೆಗಳಿಗೆ ಧ್ವನಿ ಸಂದೇಶವನ್ನು ಅಳವಡಿಸುವ ಯೋಜನೆಯನ್ನು ಗೂಗಲ್​ ಹಾಕಿಕೊಂಡಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು