ಗ್ರಾಮೀಣ ಕೃಪಾಂಕ ರಹಿತರ ಅರ್ಜಿ

ಗ್ರಾಮೀಣ ಕೃಪಾಂಕ ರಹಿತರ ಅರ್ಜಿ
ಇಂದ
...... ಇಲ್ಲಿ ನಿಮ್ಮ ಹೆಸರು ಬರೆಯಿರಿ
...... ಇಲ್ಲಿ ನಿಮ್ಮ ಶಾಲಾ ಹೆಸರು ಮತ್ತು ವಿಳಾಸ ಬರೆಯಿರಿ
...... ನಿಮ್ಮ ಕೆಜೆ ಐಡಿ ಸಂಖ್ಯೆ ಬರೆಯಿರಿ
ಗೆ
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
... ಕಾರ್ಯಾಲಯ ಇರುವ ಸ್ಥಳದ ಹೆಸರು ಬರೆಯಿರಿ...
     ಮಾನ್ಯರೇ.
        ವಿಷಯ: ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಆದೇಶವನ್ನು ಅನುಷ್ಟಾನಗೊಳಿಸಲು ಕೋರಿ ಮನವಿ.
        ಉಲ್ಲೇಖ 1) ಕೆ ಎ ಟಿ ಅರ್ಜಿ ಸಂಖ್ಯೆ 2724-2777/2012 ಪ್ರಕರಣದಲ್ಲಿ ಕೆ ಎ ಟಿ ನೀಡಿರುವ ಆದೇಶ
         ದಿನಾಂಕ:21/11/2012
        2) ಸರಕಾರಿ ಆದೇಶ ಸಂಖ್ಯೆ ಇ ಡಿ 78 ಪಿ ಎಮ್ ಡಬ್ಲ್ಯು 2025 ದಿನಾಂಕ: 11/07/2025
         3)ಆಯುಕ್ತರ ಕಛೇರಿ ಆದೇಶ ಸಂಖ್ಯೆ ಸಿ 3(1) ಪ್ರಾ ಕೆ ಎ ಟಿ 08/12-13 ಭಾಗ(1)
         ದಿನಾಂಕ:11/07/2025
     ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಳಗೆ ಸಹಿ ಮಾಡಿರುವ ನಾನು..... ಅರ್ಜಿದಾರರ ಹೆಸರು ಬರೆಯಿರಿ ಸುಪ್ರೀಂ ಕೋರ್ಟ್ ಆದೇಶದನ್ವಯ ದಿನಾಂಕ:..ಸೇವೆಗೆ ಸೇರಿದ ದಿನಾಂಕ ಬರೆಯಿರಿರಿಂದ ನೇಮಕ ಹೊಂದಿ ಸೇವೆ ಸಲ್ಲಿಸುತ್ತಿದ್ದು, ನಾನು ಶಿಕ್ಷಕ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದ ವರ್ಷಗಳು 1997-98 ಮತ್ತು 1998-99 ರಿಂದ ನಮಗೆ ಸೇವಾ ಹಿರಿತನ ಹಾಗೂ ವೇತನ ಪರಿಷ್ಕರಣೆಗಾಗಿ ಕೆ ಎ ಟಿ ಯಲ್ಲಿ ಮನವಿ ಮಾಡಿದ್ದೆವು. ಘನ ನ್ಯಾಯಾಲಯವು ನಮ್ಮ ಕೋರಿಕೆಯನ್ನು ಪರಿಗಣಿಸಿ ಆದೇಶ ನೀಡಿದ್ದು, ತದನಂತರ ನಾವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮರು ಮನವಿ ಸಲ್ಲಿಸಿದ್ದರೂ, ಘನ ನ್ಯಾಯಾಲಯವು ಕೆ ಎ ಟಿ ಆದೇಶವನ್ನೇ ಎತ್ತಿ ಹಿಡಿದಿದೆ. ಉಲ್ಲೇಖ (೨) ರಲ್ಲಿ ಸರಕಾರಿ ಆದೇಶದನ್ವಯ ಸೇವಾ ಸೌಲಭ್ಯ ಕಲ್ಪಿಸಲು ಆದೇಶ ನೀಡಲಾಗಿದ್ದು, ಇದನ್ನೇ ಉಲ್ಲೇಖ (೩) ರಲ್ಲಿ ಆಯುಕ್ತರ ಸಹ ಆದೇಶ ಹೊರಡಿಸಲಾಗಿದೆ. ಆದರೆ, ನಾವು ಇನ್ನೂ ಸೇವಾ ಹಿರಿತನ, ವೇತನ ಪರಿಷ್ಕರಣೆ ಪಡೆಯಲಾಗಿಲ್ಲ. ಆದ್ದರಿಂದ ನ್ಯಾಯಾಲಯದ ಆದೇಶದನ್ವಯ ಸೇವಾ ಹಿರಿತನ ಹಾಗೂ ವೇತನ ಪರಿಷ್ಕರಣೆ ಮಾಡಿ ನೀಡಬೇಕೆಂದು ಈ ಮೂಲಕ ಕೋರುತ್ತೇನೆ. ಇದರಿಂದ ಉಂಟಾಗುವ ವ್ಯತ್ಯಾಸದ ಹಣವನ್ನು ಕೂಡ ಪಾವತಿಸಬೇಕೆಂದು ವಿನಂತಿ.
ವಂದನೆಗಳೊಂದಿಗೆ,

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ 2025-26