Posts

Image
ತಿಂಗಳ ತಿರುಳು :ಸಪ್ಟಂಬರ 2014

ರಿಚರ್ಡ್ ಅಟೆನ್ ಬರೋ

Image

ಜನಧನ ಯೋಜನೆ ಎಂದರೇನು?

ಬೆಂಗಳೂರು, ಆ.29 : ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ನೀಡುವ ಮಹತ್ವಾಕಾಂಕ್ಷೆಯ 'ಜನಧನ' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನಿರ್ದಿಷ್ಟ ಸಮಯದೊಳಗೆ ಯೋಜನೆ ಗುರಿ ಮುಟ್ಟಲು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕಿಂಗ್ ಘಟಕಗಳು ಕೈಜೋಡಿಸಲು ಒಪ್ಪಿಗೆ ಸೂಚಿಸಿವೆ. 'ಮೇರಾ ಕಥಾ- ಭಾಗ್ಯ ವಿಧಾತಾ' ಎಂಬ ಘೋಷಣೆಯಡಿ ಆರಂಭವಾಗಿರುವ ಯೋಜನೆ ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಎಲ್ಲ ರೀತಿಯ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಜನಧನ ಯೋಜನೆ ಎಂದರೇನು? * ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದೇ ಯೋಜನೆಯ ಮುಖ್ಯ ಮತ್ತು ಮೊದಲ ಗುರಿ. ಬ್ಯಾಂಕ್ ಖಾತೆಯಿಂದ ಹಿಡಿದು, ವಿಮೆ ಮತ್ತು ಕ್ರೆಡಿಟ್ ಕಾರ್ಡ್ ಕಲ್ಪಿಸುವುದು ಯೋಜನೆಯ ಉದ್ದೇಶ. * ಬ್ಯಾಂಕಿಂಗ್ ಕ್ಷೇತ್ರದ ಯಾವುದೇ ಜಂಜಾಟಗಳಿಲ್ಲದೇ 1 ಲಕ್ಷ ರೂ. ವರೆಗಿನ ವಿಮೆ ಎಲ್ಲರಿಗೂ ಲಭ್ಯವಾಗುತ್ತದೆ. ರುಪೆ ಕಾರ್ಡ್ ಹೆಸರಿನ ಈ ಸೌಲಭ್ಯ ಕೋಟ್ಯಂತರ ಜನರಿಗೆ ಅನುಕೂಲಕಾರಿಯಾಗಲಿದೆ. * ಬಡ ವರ್ಗದ ಜನರಿಗೆ ಸರ್ಕಾರದ ವಿವಿಧ ಹಣಕಾಸು ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. * ಯೋಜನೆ ನಗರ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದು ಎಲ್ಲರಿಗೂ ಡೊಮೆಸ್ಟಿಕ್ ಡೆಬಿಟ್ ಕಾರ್ಡ್ (ರುಪೆ ಕಾರ್ಡ್) ನೀಡಲಾಗುವುದು. * ನರೇದ್ರ ಮೋದಿ ಕಲ್...
Image

Happy News - Degree Colleges Recruitment Rules Karnataka Education Department Services (Collegiate Education Department) (Recruitment) (Special) Rules, 2014

Image
" ಗಾಂಧಿ " ಚಿತ್ರ ನಿರ್ದೇಶಕ ಅಟೆನ್ ಬರೋ ನಿಧನ

ಕರ್ನಾಟಕ ರಾಜ್ಯ. ಚಲನಚಿತ್ರ. ಪ್ರಶಸ್ತಿ ೨೦೧೨,

ಡಾ.ರಾಜ್ ಕುಮಾರ್ ಪ್ರಶಸ್ತಿ - ಶ್ರೀ ಎಂ. ಭಕ್ತವತ್ಸಲ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ - ಶ್ರೀ ಚಿ. ದತ್ತರಾಜ್ ಡಾ. ವಿಷ್ಣುವರ್ಧನ ಪ್ರಶಸ್ತಿ: ಶ್ರೀ ರಾಜೇಶ್ ಪ್ರಥಮ ಅತ್ಯುತ್ತಮ ಚಿತ್ರ: ತಲ್ಲಣ ದ್ವಿತೀಯ ಅತ್ಯುತ್ತಮ ಚಿತ್ರ: ಭಾರತ್ ಸ್ಟೋರ್ಸ್ ತೃತೀಯ ಅತ್ಯುತ್ತಮ ಚಿತ್ರ: ಎದೆಗಾರಿಕೆ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕಾರಣಿಕ ಶಿಶು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತ್ತಮ ಮಕ್ಕಳ ಚಿತ್ರ: ಲಿಟ್ಲ್ ಮಾಸ್ಟರ್ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ: ಅಲೆಮಾರಿ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಕೊಂಚಾವರಂ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಶ್ರೀ ದರ್ಶನ್ ಅತ್ಯುತ್ತಮ ನಟಿ: ಶ್ರೀಮತಿ ನಿರ್ಮಲ ಚೆನ್ನಪ್ಪ ಅತ್ಯುತ್ತಮ ಪೋಷಕ ನಟ: ಶ್ರೀ ಕರಿಸುಬ್ಬು ಅತ್ಯುತ್ತಮ ಪೋಷಕ ನಟಿ: ಶ್ರೀಮತಿ ಅರುಣಾ ಬಾಲರಾಜ್ ಅತ್ಯುತ್ತಮ ಕಥೆ ಬರಹಗಾರ: ಡಾ. ಬರಗೂರು ರಾಮಚಂದ್ರಪ್ಪ ಅತ್ಯುತ್ತಮ ಚಿತ್ರಕಥೆ ಬರಹಗಾರ: ಶ್ರೀ ಕೆ.ವೈ. ನಾರಾಯಣಸ್ವಾಮಿ ಅತ್ಯುತ್ತಮ ಸಂಭಾಷಣೆಕಾರ: ಶ್ರೀ ಎಂ.ಎಸ್. ರಮೇಶ್ ಅತ್ಯುತ್ತಮ ಛಾಯಾಗ್ರಾಹಕ: ಶ್ರೀ ರಾಕೇಶ್ ಅತ್ಯುತ್ತಮ ಸಂಗೀತ ನಿರ್ದೇಶಕ: ಶ್ರೀ ಅರ್ಜುನ್ ಜನ್ಯ ಅತ್ಯುತ್ತಮ ಸಂಕಲನಕಾರ: ಶ್ರೀ ಪಿ.ಅರ್. ಸೌಂದರರಾಜ್ ಅತ್ಯುತ್ತಮ ಬಾಲ ನಟ: ಮಾಸ್ಟರ್ ವಿ. ಅನಿಲ್ ಕುಮಾರ್ ಅತ್ಯುತ್ತಮ ಬಾಲ ನಟಿ...
Image
ಪನಾಮಾ ಕಾಲುವೆಗೆ ನೂರು ವರ್ಷ

೧೨ವರ್ಷಕ್ಕೊಮ್ಮೆ ಹೂ ಬಿಟ್ಟು ನಶಿಸುವ ಹಾರ್ಲೆ(ಪಶ್ಚಿಮ ಘಟ್ಟದಲ್ಲಿ ನೀಲಿ ರಂಗೋಲಿ)

Image
ಮಲೆನಾಡಿನ ವಿಶೇಷತೆಗಳು ಹಲವು. ಇಲ್ಲಿನ ಗಿರಿ ತೊರೆ ಹಳ್ಳ ಕೊಳ್ಳಗಳನ್ನೊಳ ಗೊಂಡ ಪ್ರಕತಿ, ಮಳೆಗಾಲದಲ್ಲಿ ಮೈದಳೆಯುವ ಜಲಪಾತಗಳು...ಹೀಗೆ ಪಟ್ಟಿ ದೊಡ್ಡದಿದೆ. ಇಂತಹ ವಾತಾವರಣದ ನಡುವೆ ಭೂಮಿಯ ಒಡಲಿನಿಂದ ಸಸ್ಯವಾಗಿ ಬೆಳೆದು 12 ವರ್ಷಗಳಿಗೆ ಒಮ್ಮೆ ಹೂ ಬಿಟ್ಟು ಮುಂದಿನ ಪೀಳಿಗೆಗೆ ಬೀಜೋತ್ಪತ್ತಿ ಮಾಡಿ ತನ್ನ ಜೀವಿತ ಅವಧಿಯನ್ನು ಪೂರ್ಣಗೊಳಿಸಿಕೊಳ್ಳುವ ಹಾರ್ಲೆ ಎಂಬ ಗಿಡ ವಿಶೇಷವಾದುದು. ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಘಟ್ಟ ಪ್ರದೇಶಗಳಾದ ದೇವರಮನೆ, ಬೈರಾಪುರ, ಮೂಲರ ಹಳ್ಳಿ, ಗುತ್ತಿಹಳ್ಳಿ, ಕೋಗಿಲೆ, ಮರಗುಂದ ಮುಂತಾದ ಗಿರಿಶಿಖರಗಳಲ್ಲಿ ಈ ವರ್ಷ ಪ್ರಕೃತಿನಿರ್ಮಿತ ಹಾರ್ಲೆಯ ಹೂದೋಟ ನಿರ್ಮಾಣಗೊಂಡಿದೆ. ಪ್ರಕೃತಿಯ ಈ ಸೂಜಿಗ ಸ್ಥಳೀಯರು, ಪರಿಸರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿವೆ. ಹಾರ್ಲೆ ಗಿಡ ಹಲವು ವೈಶಿಷ್ಠಗಳನ್ನು ಹೊಂದಿದೆ. ಬಿದಿರಿನದ್ದು 60 ವರ್ಷಗಳ ಜೀವಿತಾವಧಿಯಾದರೆ ಇದರದ್ದು 12 ವರ್ಷಗಳು. ಅತೀ ಹೆಚ್ಚು ಮಳೆ ಬೀಳುವ ಬೆಟ್ಟಗುಡ್ಡಗಳಲ್ಲಿ ಹುಟ್ಟುವ ಈ ಗಿಡ 12 ವರ್ಷಗಳಿಗೊಮ್ಮೆ ಹೂ ಬಿಟ್ಟು ಇಡೀ ಬೆಟ್ಟವನ್ನೇ ಸುಂದರ ಉದ್ಯಾನವನವನ್ನಾಗಿಸುತ್ತದೆ. ಇದನ್ನು ನೋಡಲೆಂದೇ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದೆ. ಈ ವರ್ಷವೂ ಹಾರ್ಲೆ ಹೂವಿನ ಉದ್ಯಾನ ವೀಕ್ಷಿಸಲು ಸಾವಿರಾರು ಮಂದಿ ಪರಿಸರ ಪ್ರಿಯರು ಆಗಮಿಸುತ್ತಿದ್ದಾರೆ.

ಅನಂತಮೂರ್ತಿ ಜೀವನಚಿತ್ರ

Updated: 22 Aug 2014 09:23:57 PM IST  ಜನನ​: ಡಿಸೆಂಬರ್ 21, 1932 ಮೇಳಿಗೆ ಗ್ರಾಮ, ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ವಿದ್ಯಾಭ್ಯಾಸ * ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿ.ಎಚ್.ಡಿ. (ಬರ್ಮಿಂಗ್ ಹ್ಯಾಮ್ ವಿ.ವಿ. ಯುನೈಟೆಡ್ ಕಿಂಗ್ ಡಂ), 1966 * ಇಂಗ್ಲಿಷ್ ಎಂ.ಎ., ಮೈಸೂರು ವಿಶ್ವವಿದ್ಯಾಲಯ, 1956 * ಬಿ.ಎ. ಆನರ್ಸ್, ಮಹಾರಾಜ ಕಾಲೇಜು, ಮೈಸೂರು ವೃತ್ತಿ ಅನುಭವಗಳು * ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗ, 2001 * ಸಂದರ್ಶಕ ಪ್ರಾಧ್ಯಾಪಕ, ಕಾರ್ನೆಲ್ ವಿವಿ, 2000 * ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, 2000 * ಸನಿವಾಸ ಲೇಖಕ (ರೈಟರ್ ಇನ್ ರೆಸಿಡೆನ್ಸ್), ಟೆಕ್ಸಾಸ್ ವಿವಿ, ಆಸ್ಟಿನ್, 1995 * ಅಧ್ಯಕ್ಷರು, ಇಂಡಿಯನ್ ಅಕಾಡೆಮಿ (ದೆಹಲಿ) 1993-98 * ಅಧ್ಯಕ್ಷರು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (ದೆಹಲಿ) 1992-93 * ಸಂದರ್ಶಕ ಪ್ರಾಧ್ಯಾಪಕ, ಜವಾಹರಲಾಲ್ ನೆಹರು ವಿವಿ, ದೆಹಲಿ, 1993 * ಪ್ರೊಫೆಸರ್, ಇಂಗ್ಲಿಷ್ ವಿಭಾಗ, ಮೈಸೂರು ವಿವಿ, 1980-92 * ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, 1992 * ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ 1987-91 * ಫುಲ್ ಬ್ರೈಟ್ ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿವಿ, 1986-87 * ಸಂದರ್ಶಕ ಲೇಖಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ...