Posts
ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ನ.೧೦ರಿಂದ ಆರಂಭ
- Get link
- X
- Other Apps
ನವದೆಹಲಿ, ಅ.30- ದೇಶದ ಮೊಟ್ಟಮೊದಲ ಹಾಗೂ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ರೈಲು ಮುಂಬರುವ ನ.10ರಿಂದ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ. ದೆಹಲಿ-ಆಗ್ರ ನಡುವೆ ಸಂಚರಿಸಲಿರುವ ಈ ಹೈಸ್ಪೀಡ್ ರೈಲು ಪ್ರತಿ ಗಂಟೆ 160 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ನ.10ರಿಂದ ಪ್ರಾಯೋಗಿಕ ಸಂಚಾರ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಪೂರ್‍ತಲ ರೈಲ್ವೆ ಕೋಚ್ ಪ್ಯಾಕ್ಟರಿಯಲ್ಲಿ ಒಟ್ಟು 14 ಬೋಗಿಗಳ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ಪ್ರಾರಂಭವಾಗಿದ್ದು, ಶರಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಿರುವ ಬೋಗಿಗಳಿಗಿಂತಲೂ ಅತ್ಯಾಧುನಿಕ ಕೋಚ್ ಅಳವಡಿಸಲಾಗಿದೆ. ಒಂದು ಬೋಗಿಯ ವೆಚ್ಚ ಸುಮಾರು 2.25ಕೋಟಿಯಿಂದ 2.50ಕೋಟಿ ರೂ. ವೆಚ್ಚ ತಗುಲಲಿದೆ. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ಒದಗಿಸುವುದು, ಸ್ವಯಂ ಪ್ರೇರಿತವಾಗಿ ಬಾಗಿಲು ತೆಗೆಯುವುದು ಮತ್ತು ಹಾಕುವುದು, ಬೆಂಕಿ ಅನಾಹುತದಿಂದ ತಡೆಗಟ್ಟುವುದು ಸೇರಿದಂತೆ ಮತ್ತಿತರ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದು ರೈಲ್ವೆ ಕೋಚ್ ಪ್ಯಾಕ್ಟರಿಯ ಜನರಲ್ ಮ್ಯಾನೇಜರ್ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಶತಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಲಾಗಿರುವ ಬೋಗಿಗಳನ್ನೇ ಮೊದಲು ಅಳವಡಿಕೆ ಮಾಡಲಾಗುವುದು. ರೈಲು ಸಂಚರಿಸುವ ಮಾರ್ಗಗಳ ಮಣ್ಣಿಗೆ ಅನುಗ...
ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ -ಪಂಕಜಗೆ
- Get link
- X
- Other Apps
ಪಂಕಜ್ ಅಡ್ವಾಣಿಗೆ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಲಂಡನ್, ಅ.30-ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತದ ಅಗ್ರಮಾನ್ಯ ಬಿಲಿಯಡ್ರ್ಸ್ ಆಟಗಾರ ಪಂಕಜ್ ಅಡ್ವಾಣಿ ವಿಶ್ವ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ರಾತ್ರಿ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ (ಟೈಮ್ ಫಾರ್ಮೆಟ್)ಇಂಗ್ಲೆಂಡ್‍ನ ರಾಬರ್ಟ್ ಹಾಲ್ ವಿರುದ್ಧ 1,928-893 ಪಾಯಿಂಟ್‍ಗಳ ಅಂತರದಿಂದ ಪರಾಭವಗೊಳಿಸಿ ಪಂಕಜ್ ಅಡ್ವಾಣಿ ಅದ್ಭುತ ಸಾಧನೆ ಮಾಡಿದ್ದಾರೆ. ಪಂಕಜ್ ಅಡ್ವಾಣಿ ಅವರಿಗೆ ಇದು 12ನೇ ಚಾಂಪಿಯನ್ ಶಿಪ್ ಪಟ್ಟವಾಗಿದ್ದು, ಕಳೆದ 2005, 2008 ಮತ್ತು ಪ್ರಸ್ತುತ 2014ರ ಈ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಮತ್ತೊಂದು ಹೊಸ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ್ದ ಅಡ್ವಾಣಿ ಯಾವ ಹಂತದಲ್ಲೂ ವಿಚಲಿತರಾಗದೆ ಅಂತಿಮವಾಗಿ ಭಾರೀ ಅಂತರದಲ್ಲಿ ಗೆಲ್ಲುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಗ್ರ್ಯಾಂಡ್ ಡಬಲ್ ಸ್ಪರ್ಧೆಯಲ್ಲಿ ಇಂತಹ ಸಾಧನೆ ಮಾಡಿದ್ದೆ. ಆದರೆ ವಿದೇಶಿ ನೆಲದಲ್ಲಿ ಈ ಜಯ ನನಗೆ ಹೊಸ ಸ್ಫೂರ್ತಿ ಹಾಗೂ ಖುಷಿ ಕೊಟ್ಟಿದೆ ಎಂದು ಅಡ್ವಾಣಿ ಹೇಳಿದ್ದಾರೆ. ನನಗಾಗುತ್ತಿರುವ ಆನಂದವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಯಾಸ ಮತ್ತು ಕಠಿಣ ಶ್ರಮದಿಂದ ಇಂದು ವರ್ಷದ ಕೊನೆ...
KSOU B.ED ENTERANCE KEY ANSWER (OFFICIAL )2014 SERIES-A
- Get link
- X
- Other Apps
List of 12 cities :renamed by their kannada pronunciation
- Get link
- X
- Other Apps
The Centre approved the Karnataka government’s proposal to rename Belgaum as Belagavi on Friday. Along with it, eleven other cities have also undergone a name change. Bangalore - Bengaluru, Mangalore -Mangaluru, Bellary-Ballary, Bijapur-Vijaypura/Vijapura, Chikamagalur-Chikkamagalurru, Gulbarga-Kalaburagi, Mysore-Mysuru, Hospet-Hosapete, Shimoga - Shivamogga, Hubli-Hubballi and Tumkur-Tumakuru
ಮಾಮ್ ಸಾಧನೆ..
- Get link
- X
- Other Apps
ಒಂದು ತಿಂಗಳಲ್ಲಿ "ಮಾಮ್' ಸಾಧನೆ ಏನು? ಇಸ್ರೋ ವಿಜ್ಞಾನಿಗಳು ಎದುರಿಸಿದ ಸವಾಲುಗಳು ಮಂಗಳ ಶೋಧಕ ಕಳಿಸಿ ಸಾಧಿಸಿದ್ದೇನು? ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳಿಸಿದ್ದ ಮಂಗಳ ಶೋಧಕ ಉಪಗ್ರಹ (ಮಾರ್ ಆರ್ಬಿಟರ್ ಮಿಷನ್) ಮಂಗಳನ ಅಂಗಳಕ್ಕಿಳಿದು ಒಂದು ತಿಂಗಳು ಸಂದಿದೆ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲೇ ಇದೊಂದು ಅಪೂರ್ವ ಸಾಧನೆಯಾಗಿದ್ದು, ಜಗತ್ತಿನ ಮೊದಲ ಸಾಲಿನ ರಾಷ್ಟ್ರಗಳಲ್ಲಿ ಭಾರತವನ್ನೂ ತಂದು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳ ಶೋಧಕ ನೌಕೆ ಒಂದು ತಿಂಗಳು ಏನು ಮಾಡಿದೆ? ಇಷ್ಟರಲ್ಲಿ ವಿಜ್ಞಾನಿಗಳು ಎದುರಿಸಿದ ಪ್ರಮುಖ ಸವಾಲುಗಳು ಯಾವುದು? ಇತ್ಯಾದಿಗಳ ಕುರಿತ ಮಾಹಿತಿಗಳು ಇಲ್ಲಿವೆ... ಮಂಗಳನ ಅಂಗಳಕ್ಕೆ 2013 ನ.5ರಂದು ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಉಡಾವಣೆಗೊಂಡ ಮಂಗಳಶೋಧಕ ನೌಕೆ 2014 ಸೆ.24ರಂದು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ. ಅಲ್ಲಿವರೆಗೆ ಒಟ್ಟು 78 ಕೋಟಿ ಕಿ.ಮೀ.ಗಳನ್ನು ಮಂಗಳ ಶೋಧಕ ಕ್ರಮಿಸಿದ್ದು, ಆಳ ಬಾಹ್ಯಾಕಾಶ ಸಂವಹನದಲ್ಲಿ ಭಾರತದ ಸಾಧನೆಯನ್ನು ಜಗತ್ತಿಗೆ ತಿಳಿಸಿದಂತಾಗಿದೆ. ನ.24ಕ್ಕೆ ಉಪಗ್ರಹ ಕಕ್ಷೆ ಮಂಗಳನ ಅಂಗಳಕ್ಕೆ ತಲುಪಿ ಒಂದು ತಿಂಗಳಾಗಿದ್ದು, ಉಡಾವಣೆಯಾದಲ್ಲಿಂದ ಇದುವರೆಗೆ ನಾಲ್ಕು ವರ್ಣ ಚಿತ್ರಗಳನ್ನು ಕಳಿಸಿದೆ. ಇದರೊಂದಿಗೆ ಶೋಧಕದಲ್ಲಿ ವಿವಿಧ ಸಲಕರಣೆಗಳಿದ್ದು, ಅವುಗಳ ಮೂಲಕ ಮಂಗಳನಲ್ಲಿ ಏನಿ...