ಸ್ವೀಡನ್ ರಾಷ್ಟ್ರವೀಗ, ವಿಶ್ವದ ಮೊದಲ 'ನಗದುಮುಕ್ತ ರಾಷ್ಟ್ರ'ವಾಗಿ ಹೊರಹೊಮ್ಮುವ ಹಾದಿಯಲ್ಲಿ ಮುನ್ನಡೆಯುತ್ತಿದೆ:
ಸ್ವೀಡನ್ ನಗದು ಬಳಕೆಮುಕ್ತ ಏಜೆನ್ಸೀಸ್ | Oct 18, 2015, 04.00 AM IST MAP_OF_SWEDEN A A A ಲಂಡನ್: ಮಾಹಿತಿ ತಂತ್ರಜ್ಞಾನದ ವ್ಯಾಪಕ ಬಳಕೆ ಮತ್ತು ನಗದು ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿರುವ ಸ್ವೀಡನ್ ರಾಷ್ಟ್ರವೀಗ, ವಿಶ್ವದ ಮೊದಲ 'ನಗದುಮುಕ್ತ ರಾಷ್ಟ್ರ'ವಾಗಿ ಹೊರಹೊಮ್ಮುವ ಹಾದಿಯಲ್ಲಿ ಮುನ್ನಡೆದಿದೆ. ಹೊಸ ಅಧ್ಯಯನವೊಂದರ ಪ್ರಕಾರ, ಮೊಬೈಲ್ ಪಾವತಿ ವ್ಯವಸ್ಥೆಗೆ ವ್ಯಾಪಕವಾಗುತ್ತಿರುವ ಹಾಗೂ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ, ಸ್ವೀಡನ್ ರಾಷ್ಟ್ರದಲ್ಲಿ ನಗದು ಬಳಕೆ ತ್ವರಿತ ಗತಿಯಲ್ಲಿ ಕಡಿಮೆಯಾಗುತ್ತಿದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಹಲವು ರೀತಿಯ ಪಾವತಿಗಳಿಗೆ ನಗದು ಬಳಕೆ ಅತಿಮುಖ್ಯವಾದ ಪಾತ್ರ ವಹಿಸುತ್ತಿದೆ. ಆದರೆ ಸ್ವೀಡನ್ ಇದಕ್ಕೆ ಹೊರತಾಗಿ ನಗದು ಬಳಕೆಯನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುತ್ತಾರೆ ಸ್ಟಾಕ್ಹೋಮ್ನ ಕೆಟಿಎಚ್ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕ ನಿಕ್ಲಸ್ ಅರ್ವಿದ್ಸನ್. ನಗದು ಬಳಕೆ ತೀರಾ ಕಡಿಮೆ ಇದೆ. ಜತೆಗೆ, ಅದು ದಿನೇದಿನೆ ನಿರ್ಣಾಯಕ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂದು ಅರ್ವಿದ್ಸನ್ ತಿಳಿಸಿದ್ದಾರೆ. ಸ್ವೀಡನ್ ಜನರು ಸಣ್ಣ ಮೊತ್ತದ ಖರೀದಿಗೂ ದೈನಂದಿನ ಪ್ಲಾಸ್ಟಿಕ್ ಕಾರ್ಡ್ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಸ್ವೀಡನ್ ...