January 28, 2017 ಚೆನ್ನೈ.ಜ 28 : ಕೀಟಗಳದ್ದೇ ಒಂದು ಪ್ರಪಂಚ. ಅವುಗಳದ್ದು ಒಂದು ವಿಸ್ಮಯ ಲೋಕ. ಈ ಕೀಟ ಜಗತ್ತನ್ನು ಸಾರ್ವಜನಿಕರಿಗೆ ತೆರೆದಿಡುವ ಪ್ರಥಮ ಪ್ರಯತ್ನವೊಂದು ಭಾರತದಲ್ಲಿ ನಡೆದಿದೆ. ಹೌದು ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ದೇಶದ ಮೊಟ್ಟಮೊದಲ ಕೀಟ ಸಂಗ್ರಹಾಲಯ ಶೀಘ್ರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ನಿರ್ಮಾಣಗೊಳ್ಳುತ್ತಿರುವ ಈ ಮ್ಯೂಸಿಯಂ ವಿದ್ಯಾರ್ಥಿಗಳು, ಕೀಟ ಶಾಸ್ತ್ರಜ್ಞರು, ಕೀಟಗಳ ಅಧ್ಯಯನವನ್ನು ಹವಾಸ್ಯವನ್ನಾಗಿಕೊಂಡ ಮಂದಿ ಹಾಗೂ ಕೃಷಿಕರಿಗೆ ತುಂಬಾ ಪ್ರಯೋಜನವಾಗಲಿದೆ. ಪರಿಸರ ಮತ್ತು ಜೀವ ವೈವಿಧ್ಯತೆಯ ವ್ಯವಸ್ಥೆಯಿಂದ ಸಂಗ್ರಹಿಸಲಾದ 1,00,000ಕ್ಕೂ ಅಕ ಕೀಟಗಳ ಮಾದರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಈ ಮ್ಯೂಸಿಯಂನಲ್ಲಿ ಜೀರುಂಡೆಗಳು ಮತ್ತು ದೊಡ್ಡ ಗಾತ್ರದ ಗುಂಪಿಗೆ ಸೇರಿದ 29 ಕೀಟಗಳ ನಮೂನೆಗಳು ಇವೆ. ಕೀಟಗಳ ಮಾದರಿಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪ್ರಾದೇಶಿಕ ಕೀಟಗಳು, ನೀರಿನಲ್ಲಿ ವಾಸಿಸುವ ಕೀಟಗಳು ಹಾಗೂ ಗಿಡಗಳನ್ನು ಆಶ್ರಯಸುವ ಕೀಟಗಳು. ಈ ಮೂರು ವಿಭಾಗಗಳ ಕ್ರಿಮಿ-ಕೀಟಗಳ ಜಗತ್ತನ್ನು ಇಲ್ಲಿ ನೋಡಬಹುದು. ಮ್ಯೂಸಿಯಂ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕೀಟ ಸಂರಕ್ಷಣೆ ಮತ್ತು ಅಧ್ಯಯನಗಳ ಕೇಂದ್ರದ ಉಸ್ತುವಾರಿ ನಿರ್ದೇಶಕ ಡಾ.ಕೆ.ರಾಮರಾಜು ತಿಳಿಸಿದ್ದಾರೆ. ...