Updated:August 29, 2018, 5:40 PM IST ಗೂಗಲ್ ತನ್ನ ಗೂಗಲ್ ಫಾರ್ ಇಂಡಿಯಾ ಸಮ್ಮೇಳನಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳ ಕುರಿತು ಈಗಾಗಲೇ ಬಿಚ್ಚಿಟ್ಟಿದೆ, ಇದಕ್ಕೆ ಪೂರಕ ಎಂಬಂತೆ 'ಗೂಗಲ್ ಗೊ' ಆ್ಯಪ್ ಮೂಲಕ ಕನಿಷ್ಠ ಇಂಟರ್ನೆಟ್ ವೇಗದಲ್ಲಿ 28 ಭಾಷೆಗಳ ವೆಬ್ ಪೇಜ್ಗಳನ್ನು ಓದುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಮಂಗಳವಾರ ನಡೆದ ಗೂಗಲ್ ವಾರ್ಷಿಕ ಸಮ್ಮೇಳನದಲ್ಲಿ ಗೂಗಲಗ ತೇಜ್ ಬದಲು ಗೂಗಲ್ ಪೇ, ಗೋಗಲ್ ಅಸಿಸ್ಟೆಂಟ್ನಂತಹ ಸಾಕಷ್ಟು ಬದಲಾವಣೆಯನ್ನು ಗೂಗಲ್ ಘೋಷಿಸಿತ್ತು, ಇದೀಗ ವೆಬ್ ಪೇಜ್ಗಳನ್ನು ಅದೇ ಭಾಷೆಯಲ್ಲಿ ಓದುವ ನೂತನ ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನವನ್ನು ಅಳವಡಿಸಲು ಗೂಗಲ್ ಮುಂದಾಗಿದೆ. ಇದರ ಮೊದಲ ಹಂತವಾಗಿ ಗೂಗಲ್ ಗೋ ಮೂಲಕ 28 ಭಾಷೆಗಳ ವೆಬ್ ಪೇಜ್ಗಳನ್ನು ಓದು ವಿಶೇಷ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಗೂಗಲ್ ಗೋ ಸೇವೆಯನ್ನು 2ಜಿ ಇಂಟರ್ನೆಟ್ ವೇಗದಲ್ಲಿ ಕಾರ್ಯ ನಿರ್ವಹಿಸುವ ರೀತಿ ಅಭಿವೃದ್ಧಿ ಪಡಿಸಲಾಗಿದ್ದು, ವೆಬ್ ಪೇಜ್ಗಳಲ್ಲಿ ಇರುವ ಮಾಹಿತಿ ಮಾತ್ರಾ ಹೆಕ್ಕಿ ಓದುತ್ತದೆ. ಒಂದು ವೇಳೆ ಈ ಪೇಜ್ನಲ್ಲಿ ಜಾಹೀರಾತುಗಳಿದ್ದರೆ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಮುಂದಿನ ಹಂತದಲ್ಲಿ ತನ್ನ ಎಲ್ಲಾ ಯೋಜನೆಗಳಿಗೆ ಧ್ವನಿ ಸಂದೇಶವನ್ನು ಅಳವಡಿಸುವ ಯೋಜನೆಯನ್ನು ಗೂಗಲ್ ಹಾಕಿಕೊಂಡಿದೆ.