Posts

ಪೇಸ್ಗೆ 700ನೇ ಜಯದ ಮಾಲೆ, ಫೆಡರರ್ 100ನೇ ಜತೆಗಾರ?

Published: 29 May 2015 11:13 AM IST ಲಿಯಾಂಡರ್ ಪೇಸ್ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈಗ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಲ್ಲದೆ ಮತ್ತೊಂದು ಸಾಧನೆಯತ್ತ ಗಮನ ಹರಿಸಿದ್ದಾರೆ. ಸುದೀರ್ಘ 25 ವರ್ಷಗಳ ವೃತ್ತಿ ಜೀವನದಲ್ಲಿ ಪೇಸ್ 700ನೇ ಜಯ ಸಂಪಾದಿಸಿದ್ದಾರೆ. ಈವರೆಗೆ 99 ಜತೆಗಾರರೊಂದಿಗೆ ಆಡಿರುವ ಪೇಸ್ಗೆ 100ನೇ ಜತೆಗಾರ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ. ಬುಧವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾದ ಮೊದಲ ಸುತ್ತಿನ ಪಂದ್ಯದಲ್ಲಿ ಪೇಸ್ ತಮ್ಮ 99ನೇ ಜತೆಗಾರ ಡೇನಿಯಲ್ ನೆಸ್ಟರ್ ಜತೆಗೆ, ಗೆಲವು ದಾಖಲಿಸಿದ್ದು ಅವರ ಡಬಲ್ಸ್ ವೃತ್ತಿಜೀವನದ 700ನೇ ಗೆಲುವಾಗಿತ್ತು. ಇದೀಗ 100ನೇ ಜತೆಗಾರ ಯಾರಾಗುವರು ಎಂಬ ಚರ್ಚೆ ಆರಂಭವಾಗಿದೆ. ಇದೇ ವೇಳೆ, ಪೇಸ್ ಅವರು ರೋಜರ್ ಫೆಡರರ್ 100ನೇ ಜತೆಗಾರನಾಗಲಿದ್ದಾರೆ ಎಂಬ ಗಾಳಿಸುದ್ದಿಯಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೇಸ್, ಸದ್ಯಕ್ಕೆ ಡೇನಿಯಲ್ ಜತೆಗಾರ. ಇನ್ನಷ್ಟು ದಿನಗಳ ಕಾಲ ಅವರ ಜತೆಯಲ್ಲಿರುವ ಎಂದಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. 100 ಹಾಗೂ 101ನೇ ಸಂಖ್ಯೆ ವಿಶೇಷವಾಗಿರುವುದರಿಂದ ಸೂಕ್ತ ಜೊತೆಗಾರ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಪೇಸ್ ತಿಳಿಸಿದ್ದಾರೆ. Posted by: Vishwanath S | Source: Online Desk

9999- ನಂ.1 ಫ್ಯಾನ್ಸಿ ನಂಬರ್ ಆಗಿ ಘೋಷಣೆ:-RTO

Image
Posted by: Mahesh | Thu, May 28, 2015, 13:40 [IST] ಬೆಂಗಳೂರು, ಮೇ.28: ವಾಹನಗಳಿಗೆ ಫ್ಯಾನ್ಸಿ ನಂಬರ್ ಪಡೆದುಕೊಳ್ಳುವ ಹುಚ್ಚು ಹಲವು ವಾಹನ ಮಾಲೀಕರಿಗಿರುತ್ತದೆ. ಅದರೆ, ಫ್ಯಾನ್ಸಿ ನಂಬರ್ ಬೇಕೆಂದರೆ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಬೇಕು. ಈ ರೀತಿ ಬಿಡ್ಡಿಂಗ್ ನಡೆದು '9999' ಸಂಖ್ಯೆಗೆ ಅತಿ ಹೆಚ್ಚಿನ ಬಿಡ್ಡಿಂಗ್, ಬೇಡಿಕೆ ಬಂದಿದೆ ಎಂದು ಆರ್ ಟಿಒ ಪ್ರಕಟಿಸಿದೆ. ಸುಮಾರು 22 ಜನ ಬಿಡ್ಡರ್ ಗಳು ಸುಮಾರು 50ಕ್ಕೂ ಅಧಿಕ ಫ್ಯಾನ್ಸಿ ನಂಬರ್ ಗಳ ಮೇಲೆ ಬಿಡ್ ಮಾಡಿದ್ದರು. ಡಲ್ ಹೊಡೆಯುತ್ತಿದ್ದ ಬಿಡ್ ಪ್ರಕ್ರಿಯೆಗೆ ಸಕತ್ ಕಿಕ್ ಸಿಕ್ಕಿದ್ದು ಮಾತ್ರ 9999 ಎಂಬ ಸಂಖ್ಯೆ ಬಿಡ್ಡಿಂಗ್ ಗೆ ಬಂದಾಗ ಮಾತ್ರ. ಬಿಡ್ಡಿಂಗ್ ಕೊನೆಗೆ 1.30 ಲಕ್ಷರು ಪ್ಲಸ್ 75,000 ರು (ಕನಿಷ್ಠ ಬಿಡ್ ಮೊತ್ತ) ನೀಡಿ ತಮ್ಮ ವಾಹನಕ್ಕೆ ನೋಂದಣಿ ಸಂಖ್ಯೆ ( '9999' ಸಂಖ್ಯೆ ಪಡೆದುಕೊಂಡಿದ್ದಾರೆ. ಐಷಾರಾಮಿ ಎಸ್ ಯುವಿ ವಾಹನಕ್ಕೆ ಈ ಸಂಖ್ಯೆಯನ್ನು ಇಡುವುದಾಗಿ ಸಂಖ್ಯೆ ಗೆದ್ದ ನಟರಾಜ್ ನಗರಹಳ್ಳಿ ಹೇಳಿದ್ದಾರೆ. ಇಂದಿರಾನಗರ ಪ್ರಾದೇಶಿಕ ವಾಹನ ನೋಂದಣಿ ಕಚೇರಿಯಲ್ಲಿ ಅತಿ ಹೆಚ್ಚು ಬೆಲೆ ಮಾರಾಟವಾದ ಸಂಖ್ಯೆ (KA 03 9999) ಒಟ್ಟಾರೆ 11 ಫ್ಯಾನ್ಸಿ ಸಂಖ್ಯೆಗಳು 1.80 ಲಕ್ಷ ರು ಮೌಲ್ಯಕ್ಕೆ ಮಾರಾಟವಾಗಿದೆ. ಕನಿಷ್ಠ ಬಿಡ್ಡಿಂಗ್ ಬೆಲೆ 75,000 ರು ಪಾವತಿಸಿ ಬಿಡ್ಡಿಂಗ್ ಕೂಗುವ ಅವಕಾಶ ನ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ): ಕಿರು ಮಾಹಿತಿ

Published: 27 May 2015 03:52 PM IST | Updated: 27 May 2015 03:52 PM ISTಮುಂದಿನ ವರ್ಷ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ ಹೊಸ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಏಪ್ರಿಲ್ 1, 2016ಕ್ಕೆ ಜಾರಿಗೆ ಬರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದನ್ನು ಸಂಸತ್ತಿನಿಂದ ಒಪ್ಪಿಗೆ ಪಡೆದು ಜಾರಿಗೆ ತರಲು  ಬೇಕಾದ ಎಲ್ಲಾ ವಿಧಾನಗಳನ್ನು ಅಳವಡಿಸಲಾಗಿದೆ ಮತ್ತು ಅರ್ಧದಷ್ಟು ರಾಜ್ಯಗಳು ಈಗಾಗಲೇ ಒಪ್ಪಿಕೊಂಡಿವೆ ಎಂದು ಅವರು  ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಹತ್ವದ ಸರಕು ಮತ್ತು ಸೇವಾ ತೆರಿಗೆ ವಿಧಾನವನ್ನು ನೀವು ಬಹಳಷ್ಟು ಸಾರಿ ಕೇಳಿರಬಹುದು. ಹಾಗಂದರೆ ಏನು? ಅದು ನಮ್ಮ ನಿತ್ಯ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನೋಡೋಣ. ಜಿಎಸ್ ಟಿ ಎಂದರೇನು?: ಉತ್ಪಾದನೆ,ಮಾರಾಟ,ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿರುತ್ತದೆ. ಈ ತೆರಿಗೆ ವಿಧಾನ ಈಗಾಗಲೇ ವಿಶ್ವದ 150 ದೇಶಗಳಲ್ಲಿ

BJP leader and Rajasthan's Pali MP PP Chaudhary has been selected for the Sansad Ratna 2015 Awards for his performance in the house till the end of the budget session.

ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿಗೆ 2015ರ "ಸಂಸದ ರತ್ನ" ಪ್ರಶಸ್ತಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಪಿಪಿ ಚೌದರಿ Published: 27 May 2015 03:46 PM IST | Updated: 27 May 2015 03:47 PM IST ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ ಚೆನ್ನೈ: ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಗೆಯಾಗಿರುವ ರಾಜಸ್ತಾನದ ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ ಅವರಿಗೆ 2015ರ "ಸಂಸದ ರತ್ನ" ಪ್ರಶಸ್ತಿ ಒಲಿದುಬಂದಿದೆ. ಬಿಜೆಪಿ ಸದಸ್ಯ ಪಿಪಿ ಚೌಧರಿ ಅವರು ಸಂಸತ್ತಿನ ಮುಂಗಡಪತ್ರದ ಅಧಿವೇಶನದ ಕೊನೆಯವರೆಗೆ ಸದನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 2015ರ "ಸಂಸದ ರತ್ನ" ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. 16ನೇ ಲೋಕಸಭೆಯಲ್ಲಿ ಮುಂಗಡಪತ್ರ ಕಲಾಪದ ಅಂತ್ಯದವರೆಗೆ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ್ದಕ್ಕಾಗಿ dtt ರತ್ನ-2015" ಪ್ರಶಸ್ತಿಗೆ ಪಾತ್ರರಾಗಿರುವ ನಾಲ್ವರು ಸrಂಸದರಲ್ಲಿ ಚೌಧರಿ ಕೂಡ ಒಬ್ಬರಾಗಿದ್ದಾರೆ' ಎಂದು ಪ್ರೈಮ್​ಪಾಯಿಂಟ್ ಪೌಂಡೇಷನ್​ನ ಅಧ್ಯಕ್ಷ ಕೆ. ಶ್ರೀನಿವಾಸನ್ ಬುಧವಾರ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸರ್ಕಾರೇತರ ಸಂಘಟನೆಯಾಗಿರುವ ಪ್ರೈಮ್​ಪಾಯಿಂಟ್ ಫೌಂಡೇಷನ್ ಸಂಸ್ಥೆಯು ಸಂಸತ್ತಿನ ಚರ್ಚೆಗಳಲ್

CET 2015: VERIFICATION ON 3rd JUNE , SEAT MATRIX ON 13th JUNE

ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿಯಲ್ಲೂ ಬದಲಾವಣೆ ವಿಕ ಸುದ್ದಿಲೋಕ | May 28, 2015, 04.08AM IST ಜೂನ್ 3ರಿಂದ ದಾಖಲಾತಿ ಪರಿಶೀಲನೆ ಆರಂಭ, 13ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಬೆಂಗಳೂರು: ಜೂನ್ 1ಕ್ಕೆ ಸಿಇಟಿ ಫಲಿತಾಂಶ ಮುಂದೂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತರೆ ಕೌನ್ಸೆಲಿಂಗ್ ಪ್ರಕ್ರಿಯೆಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಿದೆ. ಜೂನ್ 3ರಂದು ವಿಶೇಷಚೇತನ ಅಭ್ಯರ್ಥಿಗಳ ವೈದ್ಯ ಪರೀಕ್ಷೆ, ಎನ್ಸಿಸಿ ಅಭ್ಯರ್ಥಿಗಳ ಹಾಗೂ ಕ್ರೀಡಾ ಕೋಟಾ ದಾಖಲಾತಿ ಪರಿಶೀಲನೆ ಜೂನ್ 4ರಂದು ಬೆಳಗ್ಗೆ 11 ಗಂಟೆ ನಂತರ ಪ್ರಾಧಿಕಾರದ ಕಚೇರಿ ಆವರಣದಲ್ಲಿ ನಡೆಯಲಿದೆ. ಹೊರನಾಡು/ ಗಡಿನಾಡು, ಜಮ್ಮು ಮತ್ತು ಕಾಶ್ಮೀರದ ವಲಸಗರು, ಸೈನಿಕರು/ಮಾಜಿ ಸೈನಿಕರ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್, ಕೇಂದ್ರ ಸಶಸ್ತ್ರ ಪೊಲೀಸ್ ದಳ/ ದಳದ ಮಾಜಿ ಸಿಬ್ಬಂದಿ, ಎನ್ಸಿಸಿ (ಪ್ರಿಫರೆನ್ಸ್-80) ಮತ್ತು ಕ್ರೀಡೆ (ಪ್ರಿಫರೆನ್ಸ್-5) ಅಭ್ಯರ್ಥಿಗಳು ಬೆಂಗಳೂರು ಕೇಂದ್ರದಲ್ಲಿಯೇ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು. ಉಳಿದವರು ಈಗಾಗಲೇ ಪ್ರಕಟಿಸಿರುವ 13 ಸಹಾಯ ಕೇಂದ್ರಗಳಲ್ಲಿ ಜೂನ್ 5ರಿಂದ 20ರವರೆಗೆ ನಡೆಯುವ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲ ಸುತ್ತಿನ ಆಪ್ಷನ್ ಎಂಟ್ರಿ ವೇಳಾಪಟ್ಟಿ: ಜೂನ್ 1

ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ

Written by: ಬಿ.ಎಂ. ಲವಕುಮಾರ್, ಮೈಸೂರು | Wed, May 27, 2015, 14:56 [IST] ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಸುಮಾರು ಅರ್ಧ ಸಹಸ್ರಮಾನಕ್ಕೂ ಹೆಚ್ಚು ಕಾಲ ಕರ್ನಾಟಕವನ್ನು, ಸಂಸ್ಕೃತಿಯನ್ನು, ಶ್ರೀಮಂತಿಕೆಯನ್ನು ಮೆರೆದಾಡಿಸಿದ ಹೆಗ್ಗಳಿಕೆ ಮೈಸೂರು ಅರಸರದು. ಈ ಅವಧಿಯಲ್ಲಿ ಯಾವ್ಯಾರ ರಾಜರು ಮೈಸೂರು ಪ್ರಾಂತ್ಯವನ್ನು ಆಳಿ ಮೆರೆದಾಡಿದರು ಎಂಬುದರತ್ತ ಒಂದು ನೋಟ ಇಲ್ಲಿದೆ. ಶ್ರೀಕಂಠದತ್ತ ಒಡೆಯರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತುಂಬುತ್ತಿದ್ದು, ಮೈಸೂರಿನ ಭವ್ಯ ಪರಂಪರೆ ಮುಂದುವರಿಯುತ್ತಿದೆ. ಮೈಸೂರು ಮಹಾರಾಜರ ಭವ್ಯ ಇತಿಹಾಸದ ಪುಟಗಳನ್ನು ಇಲ್ಲಿ ಓದಿರಿ - ಸಂಪಾದಕ. *** ಮೈಸೂರು ರಾಜರ ಆಡಳಿತಾವಧಿ ಚರಿತ್ರೆ ಪ್ರಕಾರ 1399ರಿಂದ ಆರಂಭವಾಗುತ್ತದೆ. ಯದುರಾಯರನ್ನು ಯದುವಂಶದ ಸ್ಥಾಪಕರೆಂದು ಹೇಳಲಾಗುತ್ತದೆ. ಯದುರಾಯ ಮತ್ತು ಕೃಷ್ಣರಾಯರು ಉತ್ತರದ ದ್ವಾರಕಾಪಟ್ಟಣದ ರಾಜದೇವನ ಮಕ್ಕಳಾಗಿದ್ದು, ಇವರು ಪುರಾಣ ಪ್ರಸಿದ್ಧ ಯಾದವಗಿರಿ(ಮೇಲುಕೋಟೆ)ಗೆ ತಮ್ಮ ಮನೆ ದೇವರಾದ ಚೆಲುವನಾರಾಯಣ ಸ್ವಾಮಿಯ ದರ್ಶನ ಮಾಡಲು ಆಗಮಿಸುತ್ತಾರೆ. ದರ್ಶನ ಮುಗಿಸಿಕೊಂಡು ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ. ಈ ಸಂದರ್ಭ ಮೈಸೂರಿನಲ್ಲಿ ಪಾಳೆಗಾರರಾಗಿದ್ದ ಚಾಮರಾಜ ಎಂಬುವರು ಆಡಳಿತ ನಡೆಸಿ ತೀರಿಕೊಂಡಿದ್ದರು. ಇವರಿಗೆ ಹೆಂಡತಿ ಹಾ

👆2015-16 ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಕೈಕೊಳ್ಳಬೇಕಾದ ಸಿದ್ದತೆ ಹಾಗೂ ನಿರ್ವಹಿಸಬೇಕಾದ ದಾಖಲೆಗಳು.

Image
👆2015-16 ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಕೈಕೊಳ್ಳಬೇಕಾದ  ಸಿದ್ದತೆ ಹಾಗೂ ನಿರ್ವಹಿಸಬೇಕಾದ ದಾಖಲೆಗಳು.