Posts

ಪದ್ಮ ಪ್ರಶಸ್ತಿ ಕರ್ನಾಟಕದವರು:

ಪದ್ಮ ಪ್ರಶಸ್ತಿ ಕರ್ನಾಟಕದವರು 26 Jan, 2016       ಶ್ರೀ ಶ್ರೀ ರವಿಶಂಕರ ಗುರೂಜಿ (ಅಧ್ಯಾತ್ಮ) ತಮಿಳುನಾಡು ಮೂಲದ ಶ್ರೀ ಶ್ರೀ ರವಿಶಂಕರ ಗುರೂಜಿ ಬೆಂಗಳೂರಿನಲ್ಲಿ 1981ರಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ಮೂಲಕ ಜಗತ್ತಿನಾದ್ಯಂತ ಯೋಗ ಹಾಗೂ ಅಧ್ಯಾತ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದಾರೆ. ಒತ್ತಡಮುಕ್ತ, ಹಿಂಸೆಮುಕ್ತ ಸಮಾಜ ನಿರ್ಮಾಣದ ಕನಸು ಹೊಂದಿರುವ ಅವರು, ಶಾಂತಿ ಸ್ಥಾಪನೆಗಾಗಿಯೂ ಶ್ರಮಿಸುತ್ತಿದ್ದಾರೆ. ದೇಶ–ವಿದೇಶಗಳ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಗುರೂಜಿ ಹೊಂದಿದ್ದಾರೆ. 155 ದೇಶಗಳಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಕಾರ್ಯಕ್ರಮ ನಡೆಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಲು ಅಂತರರಾಷ್ಟ್ರೀಯ ದತ್ತಿ ಸಂಸ್ಥೆಯೊಂದನ್ನೂ ಸ್ಥಾಪಿಸಿದ್ದಾರೆ. ಇದರ ಕೇಂದ್ರ ಸ್ಥಾನ ಜಿನಿವಾದಲ್ಲಿದೆ. ವಾಸುದೇವ ಕಳಕುಂಟೆ ಅತ್ರೆ (ವಿಜ್ಞಾನ ಮತ್ತು ತಂತ್ರಜ್ಞಾನ) ದೇಶದ ಪ್ರಖ್ಯಾತ ವಿಜ್ಞಾನಿಯಾಗಿರುವ ಅತ್ರೆಯವರು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಅಧ್ಯಕ್ಷರು. ಅವರು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. 1939ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಯುವಿಸಿಇಯಲ್ಲಿ ಬಿ.ಇ (ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌) ಪದವಿ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸ್ನಾತಕೋ

ಸೈನಾಗೆ ಪದ್ಮಶ್ರೀ ಪ್ರಶಸ್ತಿ:-

Image
ನವದೆಹಲಿ, ಜ. ೨೫- ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸುವ ಪದ್ಮಶ್ರೀ ಪ್ರಶಸ್ತಿಗೆ ಕ್ರೀಡಾಪಟು ಸೈನಾ ನೆಹ್ವಾಲ್, ಚಲನಚಿತ್ರ ನಟ ಅನುಪಮ್ ಖೇರ್ ಸೇರಿದಂತೆ ಹಲವಾರು ಮಂದಿಗೆ ಪ್ರಶಸ್ತಿ ನೀಡಲಾಗಿದೆ. ಹಿರಿಯ ಪತ್ರಕರ್ತ ವಿನೋದ್ ರಾಯ್‌ಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಿತ್ರನಟ ಮನೋಜ್ ಕುಮಾರ್, ಹಿನ್ನಲೆ ಗಾಯಕ ಉದಿತ್ ನಾರಾಯಣ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಿಂಧು ಮುಡಿಗೆ ಮಲೇಷ್ಯಾ ಬ್ಯಾಡ್ಮಿಂಟನ್ ಗರಿ:*

Image
ಪೆನಾಂಗ್/ಮಲೇಷ್ಯಾ (ಪಿಟಿಐ): 2013ರಲ್ಲಿ ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ್ದ ಭಾರತದ ಪಿ.ವಿ ಸಿಂಧು ಈಗ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಈ ಮೂಲಕ 2016ರ ಋತುವನ್ನು ಭರ್ಜರಿಯಾಗಿಯೇ ಆರಂಭಿದ್ದಾರೆ. ಭಾನುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು 21– 15, 21–9ರ ನೇರ ಗೇಮ್ಗಳಿಂದ ಸ್ಕಾಟ್ಲೆಂಡ್ನ ಕ್ರಿಸ್ಟಿ ಗಿಲ್ಮೌರ್ ಅವರನ್ನು ಮಣಿಸಿದರು. ಇದು ಸಿಂಧು ಅವರ ವೃತ್ತಿ ಜೀವನದ ಐದನೇ ಹಾಗೂ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯಾಗಿದೆ.

👉👉Counselling Time table of Belagavi Dist Teachers Recruitment: ಆಯ್ಕೆಯಾದ ಪ್ರಾಥಮಿಕ ಶಾ.ಶಿಕ್ಷಕರ ಕೌನ್ಸಿಲಿಂಗ ವೇಳಾಪಟ್ಟಿ (ಬೆಳಗಾವಿ ಜಿಲ್ಲೆ)

Image

ವಿಮಾನ ದುರಂತದಲ್ಲೇ ನೇತಾಜಿ ಸಾವು :-

Image
ನವದೆಹಲಿ (ಪಿಟಿಐ): ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಕಣ್ಮರೆಗೆ ಸಂಬಂಧಪಟ್ಟ 100 ರಹಸ್ಯ ದಾಖಲೆಗಳ ಡಿಜಿಟಿಲ್ ರೂಪವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ. 1945ರ ಅಗಸ್ಟ್ 18ರಂದು ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದು 1995ರಲ್ಲಿ ಕೇಂದ್ರ ಸಚಿವ ಸಂಪುಟದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಇದರಲ್ಲಿ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಈ ಕಡತಗಳನ್ನು ದೆಹಲಿಯ ರಾಷ್ಟ್ರೀಯ ಪತ್ರಾಗಾರದಲ್ಲಿ ಇನ್ನು ಸಾರ್ವಜನಿಕರೂ ನೋಡಬಹುದಾಗಿದೆ. 1995ರ ಫೆ.6ರಂದು ಗೃಹ ಕಾರ್ಯದರ್ಶಿ ಕೆ. ಪದ್ಮನಾಭಯ್ಯ ಅವರು ಸಹಿ ಮಾಡಿದ ಸಂಪುಟದ ಟಿಪ್ಪಣಿಯಲ್ಲಿ, 'ವಿಮಾನ ಅಪಘಾತದಲ್ಲಿ ಸುಭಾಷ್ ಚಂದ್ರ ಬೋಸ್ ಮೃತಪಟ್ಟಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದೆ' ಎಂದು ಉಲ್ಲೇಖಿಸಲಾಗಿದೆ. ಜಪಾನ್ನಿಂದ ಭಾರತಕ್ಕೆ ನೇತಾಜಿ ಅವರ ಅಸ್ಥಿಯನ್ನು ತರುವ ಬಗ್ಗೆ ಕೇಂದ್ರದ ನಿಲುವು ತಿಳಿಸಲು ಈ ಟಿಪ್ಪಣಿ ತಯಾರಿಸಲಾಗಿತ್ತು. 1991ರಲ್ಲಿ ಅಧಿಕಾರದಲ್ಲಿದ್ದ ಚಂದ್ರಶೇಖರ್ ಅವರ ಸರ್ಕಾರ ಸಹ ವಿಮಾನ ಅಪಘಾತದಲ್ಲೇ ನೇತಾಜಿ ಮೃತಪಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು ಎನ್ನುವುದು ಕಡತಗಳ ಮೂಲಕ ಬಹಿರಂಗಗೊಂಡಿದೆ. ಬೋಸ್ ಅವರ ಸಾವಿನ ಕುರಿತು ತನಿಖೆ ನಡೆಸಲು ಮತ್ತೊಂದು ತನಿಖಾ ಆಯೋಗ ರಚಿಸ
Image
👉👉Counselling Time table of Bagalkot dist teachers recruitment :-

ಆಯ್ಕೆಯಾದ ಅರ್ಹ ಶಿಕ್ಷಕ ಅಭ್ಯರ್ಥಿಗಳಿಗೆ ಜ. 25, 27, 28ರಂದು ಕೌನ್ಸೆಲಿಂಗ್ @DDPI OFFICE : ನೀಡಬೇಕಾದ ದಾಖಲೆಗಳು ೧)ಅಭ್ಯರ್ಥಿಗಳ ವಿರುದ್ಧ ಕಾಯಂ ವಾಸ ಸ್ಥಳದ ವ್ಯಾಪ್ತಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ಪ್ರಮಾಣ ಪತ್ರ ೨)5 ಭಾವಚಿತ್ರ, ೩)ಎಲ್ಲ ಮೂಲ ದಾಖಲೆಗಳು ಹಾಗೂ ೪)ಮೂಲ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿ

Image
9,511 ಶಾಲಾ ಶಿಕ್ಷಕರ ಆಯ್ಕೆ: ಅಂತಿಮ ಪಟ್ಟಿ ಪ್ರಕಟ ವಿಕ ಸುದ್ದಿಲೋಕ | Jan 23, 2016, 04.00 Am -ಅರ್ಹ ಅಭ್ಯರ್ಥಿಗಳಿಗೆ ಜ. 25, 27, 28ರಂದು ಕೌನ್ಸೆಲಿಂಗ್- ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಸರಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಆಯ್ಕೆಗೆ ಅರ್ಹತೆ ಪಡೆದಿರುವ 9,511 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಶುಕ್ರವಾರ ಅಂತರ್ಜಾಲದಲ್ಲಿ ಪ್ರಕಟಿಸಿದೆ. 1ರಿಂದ 5ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆಯ 2,511 ಹಾಗೂ 6ರಿಂದ 8ನೇ ತರಗತಿವರೆಗಿನ ಹಿರಿಯ ಪ್ರಾಥಮಿಕ ಶಾಲೆಗಳ 7,000 ಹುದ್ದೆಗಳೂ ಸೇರಿದಂತೆ ಒಟ್ಟು 9,511 ಹುದ್ದೆಗಳ ಆಯ್ಕೆಗೆ ಈ ನೇಮಕ ನಡೆಯಲಿದೆ. ಅರ್ಹರಿಗೆ ಡಿಡಿಪಿಐಗಳ ಕಚೇರಿಯಲ್ಲಿ ಜ. 25, 27 ಮತ್ತು 28ರಂದು ಕೌನ್ಸೆಲಿಂಗ್ ನಡೆಯಲಿದೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪಟ್ಟಿಯನ್ನು ಜಿಲ್ಲಾವಾರು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ತಾತ್ಕಾಲಿಕ ಕೌನ್ಸೆಲಿಂಗ್ನ ದಿನಾಂಕ ಹಾಗೂ ಸ್ಥಳ ತಿಳಿಸುವಂತೆ ಆಯಾ ಡಿಡಿಪಿಐಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಕೌನ್ಸೆಲಿಂಗ್, ರೋಸ್ಟರ್/ ಮೆರಿಟ್ ಆಧರಿತ ಪಟ್ಟಿ ಹಾಗೂ ಖಾಲಿ ಹುದ್ದೆಗಳ ವಿವರವನ್ನು ಆಯಾ ಜಿಲ್ಲೆಯ ಉಪನಿರ್ದೇಶಕರ(ಆಡಳಿತ) ಕಚೇರಿಯ ನಾಮಫಲಕದಲ್ಲಿ 25ರಂದು ಬೆಳಗ್ಗೆ 8 ಗಂಟೆಯೊಳಗೆ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ ಎಂದು ಆ