Posts

ವಿಶ್ವ ಪರಿಸರ ದಿನದ ಹುಟ್ಟು*... 05 Jun 2016

* ನಮ್ಮ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಹಾಗೂ ಆ ಬಗ್ಗೆ ವಿಶ್ವಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1974ರ ಜೂನ್ 5ರಂದು 'ವಿಶ್ವ ಪರಿಸರ ದಿನ'ವನ್ನು ಆರಂಭಿಸಿತು. ಅಲ್ಲಿಂದ ಮುಂದೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರತಿವರ್ಷವೂ ಈ ದಿನವನ್ನು ಆಚರಿಸಲಾಗುತ್ತಿದೆ. ಪರಿಸರದ ಕುರಿತು ಜನಜಾಗೃತಿ ಮೂಡಿಸಲು ಈ ದಿನವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಈ ದಿನವನ್ನು ಒಂದು ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. *ಈ ವಷ೯ದ ಧ್ಯೇಯ ವಾಕ್ಯ "ವನ್ಯ ಜೀವಿಗಳ ಕಾನೂನುಬಾಹಿರ ಮ‌ಾರಾಟದ ವಿರುಧ್ದ ಹೋರಾಟ*" ಈ ಧ್ಯೇಯವು ಪರಿಸರಕ್ಕೆ ಸಂಬಂಧಿಸಿ ಕಾಳಜಿ ವಹಿಸಬೇಕಾದ ಯಾವುದೋ ಒಂದು ವಿಚಾರವನ್ನು ಒಳಗೊಂಡಿರುತ್ತದೆ. ಈ ಧ್ಯೇಯಕ್ಕೆ ಅನುಗುಣವಾಗಿ ಆ ವರ್ಷದ ಪರಿಸರ ದಿನದ ಲಾಂಛನವನ್ನೂ ರೂಪಿಸಲಾಗುತ್ತದೆ. ಪ್ರತಿವರ್ಷವೂ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ದಿನದ ಅಧಿಕೃತ ಆಚರಣೆ ನಡೆಯುತ್ತದೆ. ಆ ವರ್ಷದ ಧ್ಯೇಯಕ್ಕೆ ಅನುಗುಣವಾಗಿ ಹೆಚ್ಚಿನ ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರವನ್ನು ಆರಿಸಿಕೊಂಡು ಅಲ್ಲಿನ ತೊಂದರೆ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಈ ವರ್ಷ ಅಂಗೋಲಾದಲ್ಲಿ ವಿಶ್ವ ಪರಿಸರ ದಿನ ಆಯೋಜನೆಗೊಂಡಿದೆ.

ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ನಿಧನ

Image
ಫೂನಿಕ್ಸ್, ಶನಿವಾರ, 4 ಜೂನ್ 2016 (11:47 IST) ಬಹಳ ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಅಮೆರಿಕಾದ ಫೂನಿಕ್ಸ್ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲಿ ಕುಟುಂಬದ ವಕ್ತಾರರು ಕೂಡ ಅವರ ನಿಧನ ವಾರ್ತೆಯನ್ನು ದೃಢಪಡಿಸಿದ್ದಾರೆ. 32 ವರ್ಷಗಳ ದೀರ್ಘ ಕಾಲದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ವಕ್ತಾರ ಬೊಂಬ್ ಗುನ್ನೆಲ್ ಪ್ರಕಟಣೆ ಹೊರಹಾಕಿದ್ದಾರೆ. ಹೆವಿವೇಟ್ ಬಾಕ್ಸಿಂಗ್ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಅವರು ತಾವಾಡಿದ್ದ 61 ಪಂದ್ಯಗಳಲ್ಲಿ 56 ರಲ್ಲಿ ಜಯ ಪಡೆದು ಬಾಕ್ಸಿಂಗ್ ದಂತಕಥೆ ಎನಿಸಿಕೊಂಡಿದ್ದಾರೆ. ಟ್ರೆವರ್ ಬೆರ್ಬಿಕ್ ಎಂಬುವರ ವಿರುದ್ದ 1981 ರಲ್ಲಿ ಸೋಲುಂಡ ಬಳಿಕ ಬಾಕ್ಸಿಂಗ್​ಗೆ ವಿದಾಯ ಹೇಳಿದ್ದ ಅವರು ಮೂರು ವರ್ಷದ ಬಳಿಕ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು. ನ್ಯೂಯಾರ್ಕ್ನಲ್ಲಿ (1971ರ ಮಾರ್ಚ್) ಜೋ ಫ್ರೇಜರ್ ಮತ್ತು ಅಲಿ ನಡುವೆ ನಡೆದ ಕದನ 'ಫೈಟ್ ಆಫ್ ದಿ ಸೆಂಚುರಿ' ಎಂದೇ ಪ್ರಸಿದ್ಧಿ ಪಡೆದಿದೆ.

"ಖಾಸಗಿ ಶಾಲೆಗಳು ನೀಡುವ 'ವರ್ಗಾವಣೆ ಪ್ರಮಾಣಪತ್ರ' ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ಸಹಿ ಅಗತ್ಯವಿಲ್ಲ"

Image

SDC SELECTION List of 1:2 candidates eligible for document verification for the post of Second Division Assistant/Jr.Assistant (Residual Parent Cadre)

http://kpsc.kar.nic.in/ELGLIST%20SDA.HTM

ಬಡತನ ಮತ್ತು ಅಂಗವಿಕಲತೆ ನಡುವೆ ಶ್ರೀಮಂತ ಸಾಧನೆ(SSLC\PUC)

Image

ಕಣಜ » » ಕನ್ನಡ ಶಾಲಾ ಪಠ್ಯ ಪುಸ್ತಕಗಳು

* 1ರಿಂದ 10ನೇ ತರಗತಿ ವರೆಗಿನ ಪಠ್ಯ ಲಭ್ಯ * ಪಠ್ಯ ಪುಸ್ತಕ ವಿತರಣೆ ವಿಳಂಬ ಆದರೂ ಪಾಠಕ್ಕಿಲ್ಲ ತೊಂದರೆ * ವೆಬ್ಸೈಟ್ನಿಂದ ಪಠ್ಯ ಡೌನ್ಲೋಡ್ ಮಾಡಿಕೊಳ್ಳಬಹುದು * ಪ್ರೊಜೆಕ್ಟರ್ ಬಳಸಿ ಶಿಕ್ಷಕರು ಪಾಠ ಮಾಡಲು ಅವಕಾಶ ಬಿ.ಎಸ್.ಜಯಪ್ರಕಾಶ್ ನಾರಾಯಣ ಬೆಂಗಳೂರು ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಪುಸ್ತಕ ಬಂದಿಲ್ಲ ಎಂಬ ಗೊಣಗಾಟ ಇನ್ನು ಮಕ್ಕಳಿಗಿಲ್ಲ. ಯಾಕೆಂದರೆ ಶಾಲೆಗಳ ಅರಂಭದಿಂದಲೇ 1 ರಿಂದ 10 ನೇ ತರಗತಿವರೆಗಿನ ಪಠ್ಯ ಪುಸ್ತಕಗಳ 'ಕಣಜ' ಕಂಪ್ಯೂಟರ್ ಪರದೆ ಮೇಲೆಯೇ ಮೂಡಲಿದೆ. ಹೌದು!. ಟೆಂಡರ್, ಮುದ್ರಣ ವಿಳಂಬ ಮುಂತಾದ ಸಬೂಬುಗಳಿಂದ ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಸರಕಾರ ಪೂರೈಸುವ ಪಠ್ಯ ಪುಸ್ತಕಗಳನ್ನು ಇಲಾಖೆ ನಡೆಸುತ್ತಿರುವ ಮಾಹಿತಿ ಕೋಶ 'ಕಣಜ'ದಲ್ಲಿ (ಘ್ಕಿಡಿಡಿಡಿ.ka್ಞa್ಜa.್ಚಟಞ) ಸೇರಿಸಲಿದೆ. ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕ ಹಂತದಲ್ಲಿದ್ದ ಈ ಯೋಜನೆ ಮೇ 26ರಿಂದ (ಗುರುವಾರ) ವಿಧ್ಯುಕ್ತವಾಗಿ 'ಕಣಜ'ವನ್ನು ಸೇರಲಿದ್ದು, ಶಾಲೆ ಪುನಾರಂಭವಾಗುತ್ತಿದ್ದಂತೆ, ಸರಕಾರಿ ಶಾಲೆ ಶಿಕ್ಷಕರು ಕುಂಟು ನೆಪ ಹೇಳದೆ ಕಣಜದಿಂದ ಪಠ್ಯ ಡೌನ್ ಲೋಡ್ ಮಾಡಿಕೊಂಡು ಪಾಠ ಆರಂಭಿಸಬಹುದು.ಸರಕಾರವು ಬಹಳ ಹಿಂದಿನಿಂದಲೂ ತನ್ನ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾ

ಬಾಳೆ ಹಣ್ಣು ಮಾರುವಾತನ ಮಗಳು ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್

Image
Navigat  Suvarna News: ಕಡುಬಡತನದಲ್ಲಿ ಹುಟ್ಟಿ ಬೆಳೆದ ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ 585 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಟ್ಯೂಷನ್'ಗೆ ಹೋಗಿ ಅತಿ ಹೆಚ್ಚು ಅಂಕ ಪಡೆಯುವುದು ದೊಡ್ಡ ಸಾಧನೆಯೇನಲ್ಲ. ಆದರೆ ತನ್ನ ಸ್ವಂತ ಪರಿಶ್ರಮದಿಂದಲೇ ಓದಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಅನಿತಾ ಬಸಪ್ಪ ಸಾಧನೆ ಎಂಥವರಲ್ಲೂ ಸ್ಪೂರ್ತಿ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು ತನ್ನ ತಾಯಿಯ ದಿನನಿತ್ಯದ ಕೆಲಸಗಳಿಗೆ ನೆರವಾಗುತ್ತಿದ್ದ ಅನಿತಾ ಇಂದು ಎಲ್ಲರು ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ಈ ಕುರಿತಂತೆ ಸುವರ್ಣ ನ್ಯೂಸ್-ಕನ್ನಡ ಪ್ರಭದೊಂದಿಗೆ ತನ್ನ ಸಂತೊಷವನ್ನು ಹಂಚಿಕೊಂಡಿದ್ದಾಳೆ. ನಾನು   ಇಡೀ   ರಾಜ್ಯಕ್ಕೆ   ಕಲಾ   ವಿಭಾಗದಲ್ಲಿ   ಟಾಪರ್ ಆಗಿರುವ   ವಿಷಯ   ತಿಳಿದು   ಖುಷಿ   ಆಗ್ತಾ   ಇದೆ .  ಹೆಚ್ಚು ಅಂಕ   ಬರುತ್ತೆ   ಎಂದು   ಅಂದುಕೊಂಡಿದ್ದೆ   ಆದರೆ ರಾಜ್ಯಕ್ಕೆ   ಮೊದಲು   ಬರುತ್ತೇನೆಂದು   ನಿರೀಕ್ಷಿಸಿರಲಿಲ್ಲ . ನನ್ನ   ಅಣ್ಣ   ನನಗೆ   ತುಂಬಾ   ಓದೋಕೆ   ತುಂಬಾ   ಹೆಲ್ಪ್ ಮಾಡ್ತಾ   ಇದ್ದ .  ಕೆಎಎಸ್   ಪರೀಕ್ಷೆ   ಪಾಸ್   ಮಾಡಿ ತಹಶೀಲ್ದಾರ್   ಆಗಬೇಕೆಂದಿದ್ದೇನೆ   ಎಂದು   ಅನಿತಾ ಬಸಪ್ಪ   ತನ್ನ   ಮುಂದಿನ   ಗುರಿಯನ್ನು   ನಮ್ಮೊಂದಿಗೆ ಹಂಚಿಕೊಂಡಿದ್ದಾಳೆ . ದಿನನಿತ್ಯ   ಗುರುಗಳು   ಮಾಡಿದ   ಪಾಠವನ್ನು ಮನೆಯಲ