Posts

ಸದ್ದಿಲ್ಲದೆ ಮೈಸೂರಲ್ಲಿ ಹೊಸ ನೋಟುಗಳ ಮುದ್ರಣ

ಬೆಂಗಳೂರು, ನ. ೧೨- ಮೈಸೂರಿನಲ್ಲಿರುವ ನೋಟುಗಳ ಮುದ್ರಣಾಲಯದಿಂದ ಕಳೆದ ಆರು ತಿಂಗಳುಗಳಿಂದ ಹೊಸ ನಮೂನೆಯ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ನವದೆಹಲಿಯಲ್ಲಿರುವ ಆರ್‌‌ಬಿಐನ ಕೇಂದ್ರ ಕಚೇರಿಗೆ ರವಾನಿಸುವ ಕೆಲಸ ಸದ್ದಿಲ್ಲದೆ ಸಾಗಿದೆ. ಮೈಸೂರಿನ ಮಂಡ‌ಕಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಹೂಡಿರುವ ಬಂಡವಾಳ ನಿರರ್ಥಕವಾಗಿಲ್ಲ. ಈ ನಿಲ್ದಾಣದ ಮೂಲಕ ನೋಟುಗಳ ಸಾಗಾಣಿಕೆಯಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರು ಕಳೆದ ಮಂಗಳವಾರ ಕೈಗೊಂಡಂತಹ 500 ಮತ್ತು 1000 ನೋಟುಗಳ ಚಲಾವಣೆ ರದ್ದು ಮಾಡುವಂತಹ ಘೋಷಣೆಯಾಗುವ ಮುನ್ನವೇ 2000 ರೂ. ಮುಖಬೆಲೆಯ ನೋಟುಗಳ ಮುದ್ರಣ ಮೈಸೂರಿನಲ್ಲಿ ನಿರಂತರವಾಗಿ ಸಾಗಿದೆ. ನೋಟುಗಳ ಮುದ್ರಣ ಹಾಗೂ ಸಾಗಾಣಿಕೆ ವೆಚ್ಚವನ್ನು ಕಳೆದ ಆರು ತಿಂಗಳಿನಿಂದ ಅತ್ಯಂತ ಗೌಪ್ಯವಾಗಿಡಲಾಗಿತ್ತು. ಖಾಸಗಿ ವಿಮಾನದ ಮೂಲಕ ನೋಟುಗಳನ್ನು ಸಾಗಿಸಲಾಗಿದೆ. ನೋಟುಗಳ ಕಂತೆಯನ್ನು ಸಾಗಿಸಲು ಅಧಿಕಾರಿಗಳ ವಿಶೇಷ ತಂ‌ಡವೊಂದನ್ನು ನೇಮಕ ಮಾಡಲಾಗಿತ್ತು. ಮೈಸೂರಿನಿಂದ ಸಾಗಾಣೆ ಮಾಡಿದ ನೋಟುಗಳನ್ನು ದೇಶದ ಇತರೆ ನಗರಗಳಲ್ಲಿರುವ ವಿವಿಧ ಆರ್‌ಬಿಐ ಶಾಖೆಗಳಿಗೆ ತಲುಪಿಸಲಾಗಿತ್ತು. 500 ಮತ್ತು 1000 ರೂ. ನೋಟುಗಳ ರದ್ದು ಮಾಡುವ ಮುನ್ನ ಹೊಸ ನೋಟುಗಳ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಒಮ್ಮೆಲೆ ಹೊಸ ನೋಟುಗಳ ಲಭ್ಯತೆ ಇರುವಂತೆ ಮಾಡಿಕೊಳ್ಳುವ ಉದ್ದೇಶದಿಂದ ಆರ್‌ಬಿಐ ಶಾಖೆಗಳು ಪೂರ್ವ ಸಿದ್ಧತೆ ಮಾಡಿಕೊಂಡಿದ್ದವು. ಮೈಸ

*ಕೆಪಿಎಸ್ಸಿ: 2017ರ ವಾರ್ಷಿಕ (ತಾತ್ಕಾಲಿಕ) ವೇಳಾಪಟ್ಟಿ ಪ್ರಕಟ:

*ಕರ್ನಾಟಕ ಲೋಕ ಸೇವಾ ಆಯೋಗವು ಇದೇ ಮೊದಲ ಬಾರಿಗೆ ಸರಕಾರಿ ನೇಮಕಾತಿಗಾಗಿ ತಾನು ಮುಂದಿನ ವರ್ಷ ನೆಡೆಸಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ವೇಳಾಪಟ್ಟಿಯನ್ನು ಪ್ರಕಟಿಸಿದೆ.* ಇದರಿಂದ ರಾಜ್ಯ ಸರಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ) ಮುಂದಿನ ವರ್ಷ ನಡೆಸುವ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತಾ ಬಂದಿವೆ. ಆದರೆ ಕೆಪಿಎಸ್ಸಿ, ಯಾವ ನೇಮಕಾತಿಗಾಗಿ ಯಾವಾಗ ಅಧಿಸೂಚನೆ ಹೊರಡಿಸುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಾವಾಗ ನಡೆಸುತ್ತದೆ ಎಂಬುದು ಅಭ್ಯರ್ಥಿಗಳಿಗೆ ಸ್ಪಷ್ಟವೇ ಆಗುತ್ತಿರಲಿಲ್ಲ. ಇದರಿಂದಾಗಿ ಅಭ್ಯರ್ಥಿಗಳು ಕೆಪಿಎಸ್ಸಿಯು ಹೊರಡಿಸುವ ಪ್ರಕಟಣೆಗಾಗಿ ಕಾಯುತ್ತಾ ಕೂರುವಂತಾಗಿತ್ತು. ಇದೀಗ ಈ ತೊಂದರೆ ತಪ್ಪಿದೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಸೂಕ್ತ ಪರೀಕ್ಷೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸಾಧ್ಯವಾಗಲಿದೆ. *2017ರ ವೇಳಾಪಟ್ಟಿಯಲ್ಲಿ ಗೆಜೆಟೆಟ್ ಪ್ರೊಬೆಷನರಿ ಹುದ್ದೆಗಳಿಗೆ ಏಪ್ರಿಲ್ನಲ್ಲಿ ಪೂರ್ವಭಾವಿ, ಆಗಸ್ಟ್ನಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗುವುದು.* *2018ರ ಫೆಬ್ರವರಿಯಲ್ಲಿ ಸಂದರ್ಶನ ನಡೆಸಲಾಗುವುದು ಎಂದು ಪ್ರಕಟಿಸಲಾಗಿದೆ. ಈ ರೀತಿ ವೇಳಾಪಟ್ಟಿ ಪ್ರಕಟಿಸುವಂತೆ ಆಡಳಿತ ಸುಧಾರಣೆ ಮತ್ತು

*:ರಾಷ್ಟ್ರೀಯ ಶಿಕ್ಷಣ ದಿನ:* ೧೧-೧೧-೨೦೧೬

ಅಬುಲ್ ಕಲಾಂ ಆಜಾದ್ ರ ಜನ್ಮದಿನವನ್ನು ರಾಷ್ಟ್ರಾದ್ಯಂತ  ಇಂದು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತಿದೆ. -: *ಮೌಲಾನಾ ಅಬುಲ್ ಕಲಾಂ ಆಝಾದ್ :*- ಯುವಕ ಆಝಾದ್‌ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್‌ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿನಿ ನಾಯ್ಡು ಹೇಳಿದ್ದರು. ಆಝಾದ್‌ರ ಕುಟುಂಬ ಭಾರತೀಯ ಮೂಲದ್ದೇ ಆದರೂ ತಂದೆ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಮದುವೆಯಾದ್ದರಿಂದ ಆಝಾದ್‌ರ ಹುಟ್ಟು ಅಲ್ಲೇ ಆಯಿತು. ಭಾರತೀಯ ಖೈರುದ್ದೀನ್ ಹಾಗೂ ಅರೇಬಿಯನ್ ಮಹಿಳೆ ಆಲಿಯಾರ ಪುತ್ರನಾಗಿ ೧೮೮೮ರ ನವೆಂಬರ್ ಮೋಹಿದ್ದೀನ್ ಅಹ್ಮದ್ ಮುಂದೆ ಧಾರ್ಮಿಕ ವಿದ್ವತ್ತಿನಿಂದಾಗಿ 'ಮೌಲಾನಾ' ಎಂಬುದಾಗಿ ಬಹುಭಾಷೆಗಳ ಪರಿಣಿತಿಯಿಂದಾಗಿ 'ಅಬುಲ್ ಕಲಾಂ' (ಭಾಷೆಗಳ ಪಿತ) ಎಂಬುದಾಗಿ ತೀವ್ರ ಸ್ವಾತಂತ್ರ್ಯ ವಾಂಛೆಯಿಂದ 'ಆಝಾದ್' ಎಂಬುದು ಸೇರಿಕೊಂಡು 'ಮೌಲಾನಾ ಅಬುಲ್ ಕಲಾಂ ಆಝಾದ್' ಎಂದು ಖ್ಯಾತಿವೆತ್ತರು.         ಆಝಾದ್‌ಗೆ ಹತ್ತು ವರ್ಷವಾದಾಗಲೇ ಕುಟುಂಬ ಕಲ್ಕತ್ತೆಗೆ ಬಂತು. ಚಿಕ್ಕಂದಿನಿಂದಲೇ ಧಾರ್ಮಿಕ ಜ್ಞಾನವನ್ನು ಪಡೆದರು. ಅರಬ್ಬೀ, ಉರ್ದು, ಪರ್ಷಿಯನ್, ಇಂಗ್ಲೀಷ್ ಭಾಷೆಗಳನ್ನು ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಕರಗತ ಮಾಡಿಕೊಂಡು ಬಹುಶ್ರುತರಾಗಿದ್ದರು. ಅದ್ಭುತ ಪ್ರತಿಭೆಯಾಗಿ ಬೆಳೆದ ಅವರು ಬರೀ ೧೬ನೇ ವಯಸ್ಸಿನಲ್ಲೇ ಪ್ರಚಂಡ ವಾಗ್ಮಿಯೂ, ಪ್ರಸಿದ್ಧ ಬರಹಗ

*ಕೆಪಿಎಸ್ ಸಿ 489 ವಾರ್ಡನ್, ಗ್ರಂಥಪಾಲಕ ಹುದ್ದೆಗಳಿಗೆ ಅಜಿ೯ ಆಹ್ವಾನ:

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಹಾಯಕ ಗ್ರಂಥಪಾಲಕ, ವಾರ್ಡನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 21, ನವೆಂಬರ್ 2016. ಹುದ್ದೆ ಹೆಸರು: ಸಹಾಯಕ ಗ್ರಂಥಪಾಲಕ(Librarian), ವಾರ್ಡನ್ ವಿದ್ಯಾರ್ಹತೆ: ಪಿಯುಸಿ, ಡಿಪ್ಲೋಮಾ, ಪದವಿ, ಎಸ್ಸೆಸೆಲ್ಸಿ ಅರ್ಜಿ ಸಲ್ಲಿಸಲು ಕೊನೆದಿನಾಂಕ: 21, ನವೆಂಬರ್ 2016. ಒಟ್ಟು ಹುದ್ದೆಗಳು : 489 ಸಹಾಯಕ ಲೈಬ್ರೆರಿಯನ್ : 11 ಹುದ್ದೆಗಳು ವಯೋಮಿತಿ: 18 ರಿಂದ 45 ವರ್ಷ ಸಂಬಳ ನಿರೀಕ್ಷೆ: 16.000 ದಿಂದ 29,600/- ರು ಪ್ರತಿ ತಿಂಗಳಿಗೆ ವಿದ್ಯಾರ್ಹತೆ: ಪಿಯುಸಿ ಜತೆಗೆ ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್, ಮಾನ್ಯತೆ ಪಡೆದ ತಾಂತ್ರಿಕ ವಿದ್ಯಾಲಯದಿಂದ ಡಿಪ್ಲೋಮಾ ಪಡೆದಿರಬೇಕು. ವಾರ್ಡನ್: 443 ಹುದ್ದೆಗಳು ವಯೋಮಿತಿ: 18 ರಿಂದ 35 ವರ್ಷ ಸಂಬಳ ನಿರೀಕ್ಷೆ: 14,550 ರಿಂದ 26,700 ರು ಪ್ರತಿ ತಿಂಗಳಿಗೆ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ನಂತರ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕು. ಅರ್ಜಿ ಶುಲ್ಕ: 2ಎ, 2ಬಿ, 3ಎ, 3ಬಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300 ರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂ

ಎಚ್ಚರಿಕೆ ವಹಿಸಿ 10, 20 ರೂ. ಸ್ಟಾಕ್ ಮಾಡಬೇಡಿ. ಏಕೆಂದರೆ ?

ವಾರ್ತಾ ಭಾರತಿ : 10 Nov, 2016 ನವದೆಹಲಿ,ನ.10 : ಬ್ಯಾಂಕುಗಳು ಇಂದಿನಿಂದ ರದ್ದುಗೊಂಡಿರುವ 500 ಹಾಗೂ 1000 ರೂ. ಬದಲಿಗೆ ಬೇರೆ ನೋಟುಗಳನ್ನು ಒದಗಿಸುತ್ತಿದ್ದರೂ 10 ಹಾಗೂ 20 ರೂ ನೋಟುಗಳನ್ನು ಸದ್ಯದಲ್ಲಿಯೇ ಸರಕಾರ ಬದಲಾಯಿಸಲಿದೆಯೆಂದು ಹೇಳಲಾಗುತ್ತಿದೆ. ತರುವಾಯ ದೇಶದೆಲ್ಲೆಡೆ ಬ್ಯಾಂಕುಗಳ ಮುಂದೆ ದೊಡ್ಡ ಕ್ಯೂಕಾಣಿಸುತ್ತಿದೆ.ಸರಕಾರದ ಈ ಕ್ರಮ ಭವಿಷ್ಯದಲ್ಲಿ ದೇಶಕ್ಕೆಬಹಳಷ್ಟು ಉಪಯೋಗವಾಗಲಿದೆಯೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 500 ಹಾಗೂ 1000 ದ ಹೊಸ ನೋಟುಗಳ ಹೊರತಾಗಿಇನ್ನೂ ಹೊಸ ನೋಟುಗಳ ಹೊಸ ವಿನ್ಯಾಸ ಹಾಗೂ ಫೀಚರ್ ಗಳೊಂದಿಗೆ ಹೊರಬರಲಿದೆಯೆಂದುಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಂಠ ದಾಸ್ ಹೇಳಿದ್ದಾರೆ. ಹೊಸ ವಿನ್ಯಾಸದ ನೋಟುಗಳನ್ನು ಯಾವಾಗ ಹೊರತರಲಾಗುವುದೆಂದು ಅವರು ಹೇಳದೇ ಇದ್ದರೂ1000 ರೂ ನೋಟುಗಳನ್ನೂ ಹೊಸ ವಿನ್ಯಾಸದಲ್ಲಿ ತರಲಾಗುವುದು ಎಂದು ಹೇಳಿದ್ದಾರೆ. ಇಂದು ಹೊಸದಿಲ್ಲಿಯಲ್ಲಿ ನಡೆದ ಆರ್ಥಿಕ ಸಂಪಾದಕರ ಸಮ್ಮೇಳನದಲ್ಲಿ ಹೆಚ್ಚಿನ ಪ್ರಶ್ನೆಗಳು 500 ಹಾಗೂ 1000 ನೋಟುಗಳ ರದ್ದತಿಯ ಬಗ್ಗೆಯೇ ಆಗಿದ್ದವು. ಮಂಗಳವಾರ ತೆಗೆದುಕೊಳ್ಳಲಾದ ಕ್ರಮಕ್ಕೆ ಬಹಳ ಹಿಂದಿನಿಂದಲೇ ತಯಾರಿ ನಡೆದಿತ್ತು ಎಂದೂ ದಾಸ್ ವಿವರಿಸಿದ್ದಾರೆ. ನೋಟುಗಳ ವಿನ್ಯಾಸದಲ್ಲಿ ಆರ್ ಬಿ ಐ ನ ಎರಡು ಮೂರು ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು ಎಂಊ ಅವರು ಮಾಹಿತ

*ಅಮೇರಿಕಾದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆ, ಸೋಲುಂಡ ಹಿಲರಿ:~*

*ಶತಕೋಟ್ಯಾಧಿಪತಿಗೆ ಒಲಿದ ಶ್ವೇತಭವನ* *ಹಿಲರಿ ಕ್ಲಿಂಟನ್ ಕನಸು ನುಚ್ಚುನೂರು* *8 ವರ್ಷಗಳ ಡೆಮಾಕ್ರೆಟಿಕ್ ಆಡಳಿತ ಅಂತ್ಯ* *ಮ್ಯಾಜಿಕ್ ನಂಬರ್ ಸೃಷ್ಟಿಸಿದ ಟ್ರಂಪ್ ಕಾರ್ಡ್ ವಾಷಿಂಗ್ಟನ್,ನ.9-ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಹಣಾಹಣಿ ನಡುವೆ ರಿಪಬ್ಲಿಕನ್ ಪಕ್ಷದ ವಿವಾದಾತ್ಮಕ ಅಭ್ಯರ್ಥಿ ಹಾಗೂ ಶತಕೋಟ್ಯಾಧಿಪತಿ ಉದ್ಯಮಿ ಡೋನಾಲ್ಡ್ ಟ್ರಂಪ್ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದ್ದು, 45ನೇ ಅಮೆರಿಕ ಅಧ್ಯಕ್ಷರಾಗಿ ಹೊರಹೊಮ್ಮಿ ಶ್ವೇತಭವನದ ಗದ್ದುಗೆ ಏರಲಿದ್ದಾರೆ. ಗೆಲುವಿನ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿದ್ದ ಡೆಮೊಕ್ರಟಿಕ್ ಪಕ್ಷದ ಪ್ರತಿ ಸ್ಪರ್ಧಿ ಹಿಲರಿ ಕ್ಲಿಂಟನ್‍ಗೆ ಈ ಅಚ್ಚರಿ ಫಲಿತಾಂಶ ಭಾರೀ ಮುಖಭಂಗ ಉಂಟು ಮಾಡಿದೆ. 240 ವರ್ಷಗಳ ಅಮೆರಿಕ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ಇದೇ ಮೊದಲ ಬಾರಿ ಮಹಿಳೆಯರಿಗೆ ಒಲಿಯಲಿದೆ ಎಂಬ ರಾಜಕೀಯ ಪರಿಣಿತರ ಮತ್ತು ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಬುಡಮೇಲಾಗಿದೆ. ಇದರೊಂದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದ ಡೆಮೊಕ್ರಟಿಕ್ ಪಕ್ಷದ ಎಂಟು ವರ್ಷಗಳ ಆಡಳಿತ ಅಂತ್ಯಗೊಂಡಿದೆ. ಇದೇ ವೇಳೆ ಭಾರತೀಯ ಮೂಲದ ಅಮೆರಿಕ್ಕನರಾದ ಕಮಲ ಹ್ಯಾರೀಸ್ ಮತ್ತು ರಾಜಕೃಷ್ಣಮೂರ್ತಿ ಸೆನೆಟ್‍ಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಮತ ಎಣಿಕೆ ಆರಂಭದಿ

*500, 1000 ರೂ. ನೋಟುಗಳ ಮುದ್ರಣ ಬಂದ್.!!*

Image
*ಕಪ್ಪು ಹಣ ಮತ್ತು ಭಯೋತ್ಪಾದನೆ ಕಡಿವಾಣ ಹಾಕುವ ದೃಷ್ಟಿಯಿಂದ ಇಂದು (8-11-2016) ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನ ಮಧ್ಯರಾತ್ರಿಯಿಂದಲೇ ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.* ನವದೆಹಲಿ(ನ.08): ಕಪ್ಪು ಹಣ ಮತ್ತು ಭಯೋತ್ಪಾದನೆ ಕಡಿವಾಣ ಹಾಕುವ ದೃಷ್ಟಿಯಿಂದ ಇಂದು ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನ ಮಧ್ಯರಾತ್ರಿಯಿಂದಲೇ ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. - 500, 1000 ರೂ. ನೋಟುಗಳ ಮುದ್ರಣ ಬಂದ್ - ಇಂದು ಮಧ್ಯರಾತ್ರಿಯಿಂದಲೇ ನೋಟು ಬಂದ್ - ನೋಟುಗಳನ್ನು ವಾಪಸ್ ನೀಡಲು 50 ದಿನ ಗಡುವು - 50 ದಿನಗಳ ಒಳಗಾಗಿ ನೋಟುಗಳನ್ನು ಬ್ಯಾಂಕ್​ಗೆ ನೀಡಿ - ಕಪ್ಪು ಹಣದ ವಹಿವಾಟು ತಡೆಯಲು ಕೇಂದ್ರದ ಹೆಜ್ಜೆ - ಕಪ್ಪು ಹಣದ ವಿರುದ್ಧ ಕೇಂದ್ರದ ಕೊನೆಯ ಅಸ್ತ್ರ - ಬ್ಯಾಂಕ್, ಪೋಸ್ಟ್ ಆಫೀಸ್​ನಲ್ಲಿ ನೋಟು ಬದಲಿಸಿಕೊಳ್ಳಿ - ಖೋಟಾ ನೋಟುಗಳ ವಹಿವಾಟು ಉಗ್ರರಿಗೆ ಲಾಭವಾಗುತ್ತಿದೆ - ಗುರುತಿನ ಪತ್ರ ನೀಡಿ, ನೋಟುಗಳನ್ನು ವಾಪಸ್ ಮಾಡಿ - ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ತೋರಿಸಿ ಬದಲಿಸಿಕೊಳ್ಳಿ - ಮತದಾರರ ಗುರುತಿನ ಪತ್ರ