Posts

ಇಸ್ರೋ ವಿಶ್ವದಾಖಲೆ : ಒಂದೇ ರಾಕೆಟ್‌ನಿಂದ 104 ಉಪಗ್ರಹಗಳು ಕಕ್ಷೆಗೆ.*

* ಶ್ರೀಹರಿಕೋಟಾ, ಫೆ. ೧೫- ಒಂದೇ ರಾಕೆಟಿನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶಗಳ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. * ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ. * ಇದುವರೆವಿಗೆ ಯಾವುದೇ ದೇಶ ಮಾಡದ ಸಾಧನೆಯನ್ನು ಮಾಡಿ ತೋರಿಸಿದ ಇಸ್ರೋ. * ಬೆಳಿಗ್ಗೆ 9.28ಕ್ಕೆ 104 ಉಪಗ್ರಹಗಳನ್ನು ಹೊತ್ತು ಸಾಗಿದ ಪಿ.ಎಸ್.ಎಲ್.ವಿ- .ಸಿ 37 ನಿಗಧಿತ ಅವಧಿಯಲ್ಲಿ ಗುರಿಸಾಧಿಸಿತು. * ಒಟ್ಟು 104 ಉಪಗ್ರಹಗಳ ತೂಕ 1350 ಕೆ.ಜಿ. * ಭಾರತದ 730 ಕೆ.ಜಿ. ತೂಕದ ಕಾರ್ಟೋನಾಸಾಟ್, ತಲಾ 19 ಕೆ.ಜಿ.ತೂಕದ 103 ಉಪಗ್ರಹಗಳು. * ಅಮೇರಿಕಾದ `ನಾಸಾ`ಗೆ ಹೋಲಿಸಿದರೆ ಅತಿ ಕಡಿಮೆ ಖರ್ಚಿನಲ್ಲಿ ಇಸ್ರೋದ ಉಪಗ್ರಹಗಳ ಉಡಾವಣೆ. * ಹೀಗಾಗಿಯೇ, ಅಮೆರಿಕಾ ಸೇರಿದಂತೆ ವಿದೇಶಗಳಿಂದ ಇಸ್ರೋ ಆಶ್ರಯ ಕೋರಿಕೆ. ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದುವರೆವಿಗೆ ಯಾವುದೇ ದೇಶ ನೂರು ಉಪಗ್ರಹಗಳನ್ನು ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಉದಾಹರಣೆ ಇಲ್ಲ.PSGadyal teacher Vijayapur ಇಂದು ಬೆಳಿಗ್ಗೆ ನಿಗದಿತ ಸಮಯ 9.20ಕ್ಕೆ ಸರಿಯಾಗಿ 104 ಉಪಗ್ರಹಗಳನ್ನು ಹೊತ್ತು ಪಿ.ಎಸ್.ಎಲ್.ವಿ.- ಸಿ. 37 ರಾಕೆಟ್ ಗುರಿಯತ್ತ ಚಿಮ್ಮಿತು. ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣ

ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ಪಡೆಯಬಹುದು. Written by: Siddu | Monday, February 13, 2017, 10:05 [IST] ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಆ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ನಿಮ್ಮದಾಗಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಹೊಸ ಗೃಹ ಯೋಜನಾ ನೀತಿಯನ್ನು ಘೋಷಿಸಿದ್ದಾರೆ ನೋಡಿ...  1. 2022ರಲ್ಲಿ ಎಲ್ಲರಿಗೂ ಮನೆ ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು.

ಮೆಗಾ ವಿಶ್ವದಾಖಲೆಗೆ ಇಸ್ರೋ ಸಜ್ಜು, ಫೆ.15ರಂದು ಒಂದೇ ಬಾರಿಗೆ 104 ಉಪಗ್ರಹ ಉಡಾವಣೆ

Image
 February 12, 2017  , 104 satellites ಬೆಂಗಳೂರು, ಫೆ.12-  ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಹಲವು ಮಹತ್ವದ ಸಾಧನೆಗಳ ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇದೀಗ ಮೆಗಾ ವಿಶ್ವದಾಖಲೆಗೆ ಸಜ್ಜಾಗಿದೆ.   ಇಸ್ರೋ ಶೀಘ್ರವೇ ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹವನ್ನು ತಲುಪಲು ಹಾಗೂ ಕೆಂಪುಗ್ರಹವಾದ ಮಂಗಳನ ಅಂಗಳಕ್ಕೆ ಮರುಪ್ರವೇಶಿಸಲು ಸಿದ್ಧತೆ ನಡೆಸಿದೆ. ಈ ಎರಡೂ ಗ್ರಹಗಳ ಮೇಲೆ ನೂತನ ಅನ್ವೇಷಣೆ ಕೈಗೊಳ್ಳುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.  ಭೂಮಿಗೆ ತೀರಾ ಹತ್ತಿರದಲ್ಲಿರುವ ಶುಕ್ರ ಮತ್ತು ಮಂಗಳನ ಅಂಗಳಕ್ಕೆ ಗಗನನೌಕೆಗಳನ್ನು ರವಾನಿಸಿ ಆ ಮೂಲಕ ಹೆಚ್ಚಿನ ಸಂಶೋಧನೆ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿದೆ. ಹೊಸ ನಮೂನೆ ವಿದ್ಯುನ್ಮಾನ ಸಂಶೋಧನಾ ದಾಖಲೆ ಪತ್ರಗಳ ನೂರಾರು ಪುಟಗಳಲ್ಲಿ ಈ ಗ್ರಹಗಳ ಬಗ್ಗೆ ಅಡಕವಾಗಿರುವ ಮಹತ್ವದ ಮಾಹಿತಿಗಳನ್ನು ಪ್ರಾಯೋಗಿಕವಾಗಿ ಬಹಿರಂಗಗೊಳಿಸುವ ನಿಟ್ಟಿನಲ್ಲಿ ಇದು ಪ್ರಪ್ರಥಮ ಅನ್ವೇಷಣೆಯಾಗಿದೆ.   ಈ ಎರಡು ಗ್ರಹಗಳ ಅನ್ವೇಷಣೆಯನ್ನು ಏಕಕಾಲದಲ್ಲೇ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಇದಕ್ಕಾಗಿ ಸೌರಮಂಡಲದಲ್ಲಿ ಸುಸಜ್ಜಿತ 104 ಉಪಗ್ರಹಗಳನ್ನು ಇಳಿಸಲು ತಯಾರಿ ನಡೆದಿದೆ. ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಇಷ್ಟು ಸಂಖ್ಯೆ ಉಪಗ್ರಹಗಳನ್ನು ವ್ಯೂಮ ವಲಯಕ್ಕೆ ರವಾನಿಸುತ್ತಿರುವುದು ಇದೇ ಮೊದಲು. ಅಮೆರಿಕ, ರಷ್ಯಾ ಸೇರ

ನಾಸಾ ಬಾಹ್ಯಾಕಾಶ ಯಾತ್ರೆ ಮಾಡಲಿರುವ 3ನೇ ಭಾರತೀಯ ಮಹಿಳೆ ಶಾವ್ನಾ ಪಾಂಡ್ಯ

Image
 February 10, 2017 ಮುಂಬೈ. ಫೆ.10  : ಭಾರತೀಯ ಮೂಲದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ನಂತರ ಈಗ ಮುಂಬೈ ಮೂಲದ ಡಾ. ಶಾವ್ನಾ ಪಾಂಡ್ಯ ಅಮೇರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯ ಬಾಹ್ಯಾಕಾಶ ಯಾತ್ರೆ ಭಾರತದ 3 ನೇ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ.  ಮುಂಬೈ ಮೂಲದ ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಡಾ. ಶಾವ್ನಾ ಪಾಂಡ್ಯ(32) 2018 ರಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದ್ದಾರೆ. ಕೆನಡಾದ ಅಲ್ ಬೆರ್ಟಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ. ಶಾವ್ನಾ ಪಾಂಡ್ಯ ಬಹುಮುಖ ಪ್ರತಿಭೆ. ಗಾಯಕಿ, ಬಾಕ್ಸರ್ ಕೂಡ ಆಗಿರುವ ಅವರಿಗೆ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಇದೆ. ಬಾಹ್ಯಾಕಾಶ ಯಾತ್ರೆಗೆ ವಿಶ್ವಾದ್ಯಂತ ಸುಮಾರು 3200 ಮಂದಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಿದ್ದರಂತೆ. ಆದರೆ ಈ ಪೈಕಿ ಆಯ್ಕೆಯಾಗಿದ್ದು ಮಾತ್ರ ಇಬ್ಬರು. ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ ಪಾಂಡ್ಯಾ ಕೂಡ ಒಬ್ಬರು.

ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ

ನವದೆಹಲಿ, ಫೆಬ್ರವರಿ 10: ಸರ್ಕಾರಿ ನೌಕಕರಿಗೆ ಬಡ್ತಿ ವಿಚಾರದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ನೌಕರರಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕ ಸರ್ಕಾರವು ಅನುಸರಿಸುತ್ತಿರುವ ಮೀಸಲಾತಿಯನ್ನು ಕೈಬಿಡಬೇಕೆಂದು ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಬಡ್ತಿ ವಿಚಾರವಾಗಿ ಎಸ್ಸಿ, ಎಸ್ಟಿ ನೌಕರರನ್ನು ವಿಶೇಷವಾಗಿ ಪರಿಗಣಿಸುವ (ಕಾನ್ಸೆಕ್ವೆನ್ಷಿಯಲ್ ಸೀನಿಯಾರಿಟಿ) ವಿಧಾನದಿಂದಾಗಿ, ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ನೌಕರಸ್ಥರು ಅನೇಕ ವರ್ಷಗಳಿಂದ ತಮಗೆ ಸಿಗಬೇಕಾದ ಬಡ್ತಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಾ ಕುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಬಡ್ತಿ ವಿಚಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಲಾಗುವ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿ, ಇನ್ನು ಮೂರು ತಿಂಗಳಲ್ಲಿ ಜೇಷ್ಠತೆಯನ್ನು ಪರಿಗಣಿಸದೇ ಎಸ್ಸಿ, ಎಸ್ಟಿ ನೌಕರರಿಗೆ ನೀಡಲಾಗಿರುವ ಎಲ್ಲಾ ಬಡ್ತಿ ಆದೇಶಗಳನ್ನು ಹಿಂಪಡೆಯುವಂತೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಅದರ ಜತೆಯಲ್ಲೇ ಬಹುದಿನಗಳಿಂದ ಬಡ್ತಿಯ ನಿರೀಕ್ಷೆಯಲ್ಲಿರುವ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರಿಗೆ ಸಿಗಬೇಕಿರುವ ಬಡ್ತಿಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಈಗಾಗಲೇ ಎಸ್ಸಿ, ಎಸ್ಟಿ ಕೋಟಾದಡಿಯಲ್ಲಿ ವೇಗವಾಗಿ ಬಡ್ತಿ ಹೊಂದಿ ನಿವೃತ್ತರಾದವರಿಗೆ ಹಾಗೂ ಪಿಂಚಣಿ ಮತ್ತಿತರ ಸೌಲಭ್ಯ ಪಡೆಯುತ್ತಿರುವವರಿಗೆ ಈ ಆದೇಶ ಅನ್ವಯವಾಗದು ಎಂದೂ ಸ

ದಿನಾಂಕ: 05.02.2017 ರಂದು ನಡೆದ, KPSC - ಪ್ರಥಮ ದರ್ಜೆ ಸಹಾಯಕರು (FDA) ಪರೀಕ್ಷೆಯ ಕೀ ಉತ್ತರಗಳು"

#ಸಾಮಾನ್ಯ_ಜ್ಞಾನ_ಕೀ_ಉತ್ತರಗಳು: (A) http://kpsc.kar.nic.in/GENERAL%20%20KNOWLEDGE%20-%20167A.pdf (B) http://kpsc.kar.nic.in/GENERAL%20%20KNOWLEDGE%20-%20167B.pdf (C) http://kpsc.kar.nic.in/GENERAL%20%20KNOWLEDGE%20-%20167C.pdf (D) http://kpsc.kar.nic.in/GENERAL%20%20KNOWLEDGE%20-%20167D.pdf ಜನರಲ್_ಕನ್ನಡ_ಕೀ_ಉತ್ತರಗಳು: (A) http://kpsc.kar.nic.in/GENERAL%20KANNADA%20-%20168A.pdf (B) http://kpsc.kar.nic.in/GENERAL%20KANNADA%20-%20168B.pdf (C) http://kpsc.kar.nic.in/GENERAL%20KANNADA%20-%20168C.pdf (D) http://kpsc.kar.nic.in/GENERAL%20KANNADA%20-%20168D.pdf ಜನರಲ್_ಇಂಗ್ಲೀಷ್_ಕೀ_ಉತ್ತರಗಳು: (A) http://kpsc.kar.nic.in/GENERAL%20%20ENGLISH%20-%20169A.pdf (B) http://kpsc.kar.nic.in/GENERAL%20%20ENGLISH%20-%20169B.pdf (C) http://kpsc.kar.nic.in/GENERAL%20%20ENGLISH%20-%20169C.pdf (D) http://kpsc.kar.nic.in/GENERAL%20%20ENGLISH%20-%20169D.pdf ಆಕ್ಷೇಪಣಾ_ಅರ್ಜಿ: http://kpsc.kar.nic.in/Key%20answer%20objection%20format%20of%20FDA%20-%2005-02-2017.pdf -

OFFICIAL PROVISIONAL KEY ANSWERS OF PDO EXAM(Held on 28/01/2017) PAPER -1, PAPER-2

Image