ಆಗಸ್ಟ್ 11, 2021ರಂದು ನಡೆದ ನವೋದಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ : ಭಾಷಾ ವಿಭಾಗ : ವಾಕ್ಯ ಸಮುದಾಯ-2 ರ ಪ್ರಶ್ನೆಗಳು
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ(11/08/2021) ಕೇಳಿದ ಪ್ರಶ್ನೆಗಳು
ಭಾಷಾ ಪರೀಕ್ಷೆ: ವಾಕ್ಯ ಸಮುದಾಯ-2
ಈ ಕೆಳಗಿನ ವಾಕ್ಯ ಸಮುದಾಯವನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರದ ಪ್ರಶ್ನೆಗಳಿಗೆ ಉತ್ತರಿಸಿರಿ
ದೀಪಕ್ ಉತ್ಸಾಹಿತನಾಗಿದ್ದಾನೆ. ಇವನು ಈತನ ಚಿಕ್ಕಪ್ಪ ಹಾಗೂ ಚಿಕ್ಕಪ್ಪನ ಮಕ್ಕಳಾದ ಪ್ರೀತಾ ಮತ್ತು ರಿಯಾರ ಜೊತೆಗೆ ಭಾನುವಾರ ಪಿಕ್ನಿಕ್‌ಗೆ ತೆರಳುತ್ತಿದ್ದಾನೆ. ಇವನು ತನ್ನ ಬ್ಯಾಗ್ನಲ್ಲಿ ಈಜುವಿಕೆಯ ಸಾಧನಗಳ ಕಿಟ್ ತಿಂಡಿ-ತಿನಿಸು ಮತ್ತು ಆಟದ ಸಾಮಾನುಗಳನ್ನು ತುಂಬಿಕೊಂಡಿದ್ದಾನೆ. ಅವರು ಬೆಳಿಗ್ಗೆ 6:00 ಗಂಟೆಗೆ ಪ್ರಯಾಣ ಪ್ರಾರಂಭಿಸಿದರು. ಇದು ತುಂಬಾ ಸುದೀರ್ಘ ಪಯಣವಾಗಿತ್ತು ಮತ್ತು ಅವರು ಪಿಕ್ನಿಕ್ ಸ್ಥಳವನ್ನು ಬೆಳಿಗ್ಗೆ 9:00 ಗಂಟೆಗೆ ತಲುಪಿದರು. ಅದೊಂದು ಹಳ್ಳಿಯಲ್ಲಿನ ಫಾರ್ಮಹೌಸ್ ಆಗಿತ್ತು. ಅವರು ಭತ್ತ ಬೆಳೆದ ಪ್ರದೇಶವನ್ನು ನೋಡಲು ಹಳ್ಳಿಯ ಸುತ್ತಲೂ ನಡೆದಾಡಿದರು ಮತ್ತು ಅಕ್ಕಿಯನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದನ್ನು ಕಲಿತರು. ಅವರು ಮರಗಳನ್ನು ಹತ್ತಿ ಮಾವು ಮತ್ತು ಸೀಬೆಯ ಹಣ್ಣುಗಳನ್ನು ಕಿತ್ತರು. ಮಧ್ಯಾಹ್ನದಲ್ಲಿ ಅವರು ಮರದ ಕೆಳಗೆ ಕುಳಿತು ಊಟ ಮಾಡಿದರು. ಯಾವಾಗ ಚಿಕ್ಕಪ್ಪ 'ಇದು ಮನೆಗೆ ಹಿಂದಿರುಗುವ ಸಮಯ' ಎಂದು ಹೇಳಿದರೋ ಆಗ ಅವರು ಇನ್ನೂ ಬಹಳ ಹೊತ್ತು ಅಲ್ಲೇ ತಂಗಲು ಬಯಸಿದರು. ಏಕೆಂದರೆ ಅವರು ಆ ಹಳ್ಳಿಯನ್ನು ತುಂಬಾ ಇಷ್ಟಪಟ್ಟಿದ್ದರು.
ಸೂಚನೆಗಳು
1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.
2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 7.5 ನಿಮಿಷಗಳು.
3. ನೀವು ಆಯ್ಕೆ ಮಾಡಿದ ಉತ್ತರವು
ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ
ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.
5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ:5:
6. ರಸಪ್ರಶ್ನೆಯ ಕೊನೆಯಲ್ಲಿ ಕ್ವಿಜ್ ರಿಸಲ್ಟ್ ಪ್ರದರ್ಶಿತಗೊಳ್ಳುವುದು.
ಈಗ ಸ್ಟಾರ್ಟ್ ಕ್ವಿಜ್‌ನ್ನು ಕ್ಲಿಕ್ ಮಾಡಿ.
Comments
Post a Comment