Posts

Portugal's Jorge Sampaio and Namibian Helena Ndume were awarded the 1st UN Nelson Mandela Prize,

ಇಬ್ಬರಿಗೆ ನೆಲ್ಸನ್ ಮಂಡೇಲಾ ಪ್ರಶಸ್ತಿ ಪ್ರದಾನ ವಿಶ್ವಸಂಸ್ಥೆ (ಐಎಎನ್ಎಸ್): ವಿಶ್ವ ಸಂಸ್ಥೆಯ ಪ್ರತಿಷ್ಠಿತ ‘ನೆಲ್ಸನ್ ರೊಲಿಹ್ಲಾಹ್ಲ ಮಂಡೇಲಾ ಪ್ರಶಸ್ತಿ’ಗೆ ನಮೀಬಿಯಾ ದೇಶದ ನೇತ್ರ ತಜ್ಞೆ ಹೆಲೆನಾ ನುಡುಮೆ ಹಾಗೂ ಪೋರ್ಚ್ಗಲ್ನ ಜೋರ್ಗ್ ಸ್ಯಾಂಪಿಯೊ ಅವರು ಪಾತ್ರ ರಾಗಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರಿಗೆ ಪ್ರದಾನ ಮಾಡಲಾಯಿತು. ಮಾನವೀಯ ಸೇವೆಗಳಲ್ಲಿ ತೊಡಗಿ ಸಿಕೊಂಡವರಿಗೆ ನೆಲ್ಸನ್ ಮಂಡೇಲಾ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿ ನೀಡಲು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿತ್ತು. ನಿಡುಮೆ ಅವರು, ನಮೀಬಿಯಾ ಹಾಗೂ ವಿಶ್ವದ ಇತರೆಡೆಯ ಅಂಧರು ಹಾಗೂ ದೃಷ್ಟಿದೋಷ ತೊಂದರೆ ಅನುಭವಿಸುತ್ತಿರುವವರ ಸೇವೆಯಲ್ಲಿ ತೊಡಗಿಸಿಕೊಂಡಿದ್ ದಾರೆ. ಜೋರ್ಗ್ ಸ್ಯಾಂಪಿಯೊ ಅವರು, ಪೋರ್ಚುಗಲ್ನ ಮಾಜಿ ಅಧ್ಯಕ್ಷ. ಇವರು 1996ರಿಂದ 2006ರವರೆಗೆ ಪೋರ್ಚ್ ಗಲ್ನ ಅಧ್ಯಕ್ಷರಾಗಿದ್ದರು.

TET / BANK EXAM galalli barabahudad ODD MAN OUT Qsns

Image

FDA EXAM ge poorakavaguv Bahu Ayke prashnegalu..frm Vijay Next paper

Image

MCQs on Maths: Useful for all competitive exams.. frm Vijay Next paper

Image

Cut-Off Percentage of 1:2 verification list Group D posts in Karnataka Health Department

Image

Vijay Divas:celebrations to mark the 15th anniversary of India's victory in Kargil War,

Vijay Diwas celebrations kick-start in Drass today Drass: The elaborate celebrations to mark the 15th anniversary of India's victory in Kargil War, also called as Vijay Diwas, commenced here from today when senior officers and ex- servicemen will remember those who put down their lives while defending the country. Though the celebrations began on July 20, the main functions will be held over the next two days beginning today. In the evening, a pipe band and brass band display will be held which will be followed by a beating retreat ceremony. Then the army will hold a memorial service at the Kargil War Memorial where prayers by religious leaders will also be held. They will be followed by lighting of lamps. The wreath laying ceremony for the martyred will be held on Sunday which will be followed by an interaction with Veer Naris. Last evening, the army organised a dare devil show which enthralled the audience who had turned up in...

ಜುಲೈ 26 ವಿಶ್ವ ಕಾಂಡ್ಲ(walking trees) ದಿನಾಚರಣೆ

Image
- ನಡೆದಾಡುವ ಮರಗಳು(ವಾಕಿಂಗ್ ಟ್ರೀಸ್) ಎಂದರೆ ಅದು ಕಾಂಡ್ಲಾ ಅಂತಲೇ ಅರ್ಥ. ಇವು ಭೂಮಿಯ ಮೇಲಿನ ಶ್ರೇಷ್ಠ ಪರಿಸರ ಉತ್ಪಾದಕ ಸಸ್ಯ ಸಂಪತ್ತು. ಸುನಾಮಿಗಳ ಹೊಡೆತಕ್ಕೂ ಜಗ್ಗದ ಬಿಗಿ ಹಿಡಿತದ ಕಾಂಡ್ಲಾಗಳು ಮನುಷ್ಯನೂ ಸೇರಿದಂತೆ ಜಗತ್ತಿನ ಬಹುಪಾಲು ಜೀವ ಸಂಕುಲಗಳ ದಿನಚರಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಆಸರೆಯಾಗಿ ನೆಲೆ ನಿಂತಿದೆ. ಉತೆ³ೆÅàಕ್ಷೆ ಎನಿಸುವಷ್ಟು ಮಟ್ಟದಲ್ಲಿ ವಿಶೇಷತೆಗಳು ಕಾಂಡ್ಲಾದಲ್ಲಿದೆ. ಒಮ್ಮೆ ಬೇರೂರಿತೆಂದರೆ ಮತ್ತೆಂದೂ ನಾಶವಿಲ್ಲದ ಇಂಥ ಕಾಂಡ್ಲಾದ ಬಗ್ಗೆ ಒಂದಿಷ್ಟು ಪ್ರಮುಖ ಮಾಹಿತಿ ಇಲ್ಲಿದೆ. ಕಾಂಡ್ಲ ಕಾಡುಗಳು ಕಾಂಡ್ಲಗಳು ಕರಾವಳಿ ಪ್ರದೇಶದ ಲವಣ ಮಿಶ್ರಿತ ಜೌಗು ಮಣ್ಣಿನಲ್ಲಿ ಬೆಳೆಯುವ ಸಾಮರ್ಥ್ಯವಿರುವ ವಿಶೇಷ ರೀತಿಯ ಸಸ್ಯಗಳಾಗಿದೆ. ನದಿ ಸಂಗಮದ ಅಳಿವೆ ಪ್ರದೇಶಗಳು, ಹಿನ್ನೀರ ಪ್ರದೇಶಗಳು ಮೊದಲಾದ ಕಡೆಗಳಲ್ಲಿ ಕಾಂಡ್ಲಾ ಸಸ್ಯಗಳು ಬೆಳೆಯುತ್ತವೆ. ಬೆಳೆಯುವ ಹಂತದಲ್ಲೇ ಒಂದಕ್ಕೊಂದು ಸರಣಿಯಂತೆ ಒತ್ತೂತ್ತಾಗಿ ಬೆಳೆಯುವ ಕಾಂಡ್ಲ ಸಸ್ಯಗಳು ಕೆಲ ಸಮಯದಲ್ಲೇ ದಟ್ಟ ಕಾಂಡ್ಲ ಕಾಡುಗಳಾಗಿ ರೂಪುಗೊಂಡು ನಿರಂತರ ಹಬ್ಬುತ್ತದೆ. ಆದ್ದರಿಂದ ಇವುಗಳನ್ನು ನಡೆದಾಡುವ ಮರಗಳು ಎನ್ನುತ್ತಾರೆ. ನಮ್ಮ ದೇಶದ ಕರಾವಳಿಯಲ್ಲಿ ಸುಮಾರು 4700 ಚ ಕಿ.ಮೀ ಕಾಂಡ್ಲ ಕಾಡುಗಳಿವೆ. ಇವುಗಳಲ್ಲಿ ಶೇ. 60 ರಷ್ಟು ಪೂರ್ವ ಕರಾವಳಿ, ಶೇ. 25 ರಷ್ಟು ಪಶ್ಚಿಮ ...

ಡೈಮಂಡ್ ಲೀಗ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಸ್ವರ್ಣ ಪದಕ ಗೆದ್ದ ಬೋಲ್ಟ್

Image
ಲಂಡನ್: ಆರು ಬಾರಿ ಒಲಿಂಪಿಕ್ ಚಾಂಪಿಯನ್ ಎನಿಸಿಕೊಂಡಿರುವ ಉಸೇನ್ ಬೋಲ್ಟ್ ಮತ್ತೆ ಫಾಮರ್್​ಗೆ ಮರಳಿಸಿದ್ದಾರೆ. ಲಂಡನ್ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಸ್ವರ್ಣ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೋಲ್ಟ್ 2012ರಲ್ಲಿ ನಡೆದ ಒಲಿಂಪಿಕ್ಸ್​ ನಲ್ಲಿ ಇದೇ ಟ್ರ್ಯಾಕ್ ಮೇಲೆ ಮೂರು ಸ್ವರ್ಣ ಪದಕ ಗೆದ್ದುಕೊಂಡಿದ್ದರು. 100 ಮೀಟರ್ ದೂರವನ್ನು ಕೇವಲ 9.87 ಸೆಕೆಂಡ್​ಗಳಲ್ಲಿ ತಲುಪಿ ಅಚ್ಚರಿ ಮೂಡಿಸಿದ್ದರು. ಈಗಲೂ ಇದೇ ಸಮಯದಲ್ಲಿ 100 ಮೀಟರ್ ಗುರಿ ತಲುಪಿ ಸ್ವರ್ಣ ಸಂಪಾದಿಸಿದ್ದಾರೆ.ಸ ನಂತರ ಪ್ರತಿಕ್ರಿಯಿಸಿರುವ ಬೋಲ್ಟ್, ಹೀಟ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಆದರೆ ಫೈನಲ್​ನಲ್ಲಿ ನಿರೀಕ್ಷೆಂತೆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅದು ಬೇಸರವನ್ನುಂಟು ಮಾಡಿತು ಎಂದಿದ್ದಾರೆ. 9.9 ಸೆಕೆಂಡ್​ಗಳಲ್ಲಿ ಗುರಿ ತಲುಪಿದ ಅಮೆರಿಕದ ಮೈಕೆಲ್ ರೋಜರ್ಸ್ ಬೆಳ್ಳಿ, ಇನ್ನೊಬ್ಬ ಜಮೈಕಾ ಅಥ್ಲೀಟ್ ಕೆಮರ್ ಬೈಲಿ ಕಂಚು ಸಂಪಾದಿಸಿದ್ದಾರೆ. ಇನ್ನು ಬ್ರಿಟನ್​ನ ಜನಪ್ರಿಯ ಅಥ್ಲೀಟ್ ಮೊ ಫರ್ಹ ಡೋಪ್ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಸ್ಪರ್ಧಾ ಕಣಕ್ಕೆ ಧುಮುಕಿ 3000 ಮೀಟರ್ ಓಟದಲ್ಲಿ ಬಂಗಾರ ಪದಕ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ...

NEXT YEAR ONWARDS RTE SEATS ONLY FOR BPL CARDHOLDERS - KIMMANE RATNAKAR

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ ಸೀಟು ಬೆಂಗಳೂರು,ಜು.25-ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೇ ಯುಕೆಜಿ ಶಿಕ್ಷಣ ಆರಂಭಿಸುವ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಕೊಡಿಸುವ ಮಹತ್ವದ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲು ಆದಾಯ ಪ್ರಮಾಣಪತ್ರವನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಇದು ಬಹಳಷ್ಟು ದುರುಪಯೋಗವಾಗುತ್ತಿದೆ. 10 ಲಕ್ಷ ಆದಾಯ ಇರುವವರು ಸುಲಭವಾಗಿ 35 ಸಾವಿರ ರೂ.ಆದಾಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ ಆರ್ಹರಿಗೆ ಅವಕಾಶಗಳು ಸಿಗುತ್ತಿಲ್ಲ. ನಾವು ಎಲ್ಲಾ ಸೀಟುಗಳನ್ನು ಭರ್ತಿ ಮಾಡುವುದಕ್ಕಿಂತಲೂ ಎಷ್ಟು ಮಂದಿ ಅರ್ಹರಿಗೆ ಸೀಟು ಕೊಡಿಸಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಜತೆಗೆ ಸರ್ಕಾರವೇ ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಉಂಟಾಗಿದೆ. ಹೀಗಾಗಿ ನಿಯಮಾವಳಿಗಳನ್ನು ಬದ...

Mandya ZP CEO Rohini Sindhuri launches M-Aasthi android app to issue land records and to put and end to delay in providing land records to rural areas. M aasthi is an Android-based mobile application in the district.

ಎಂ- ಆಸ್ತಿ ಅಪ್ ಮೂಲಕ ಇ ಖಾತಾ ಪಡೆಯಿರಿ: ರೋಹಿಣಿ Posted by: Mahesh | Fri, Jul 24, 2015, 17:24 [IST] ಮಂಡ್ಯ, ಜುಲೈ 24: ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ಗ್ರಾಮೀಣ ಭಾಗದಲ್ಲಿ ಆಸ್ತಿ ಪತ್ರ ಪಡೆಯಲು ಈಗ ಸುಲಭ ಹಾಗೂ ಸರಳ ವಿಧಾನವನ್ನು ಪರಿಚಯಿಸಿದ್ದಾರೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ. ಎಂ ಆಸ್ತಿ ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ ಸದ್ಯಕ್ಕೆ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಲಭ್ಯವಿದ್ದು, ಸುಲಭವಾಗಿ ಆಸ್ತಿ ಪಾಸ್ತಿ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದುಕೊಳ್ಳಬಹುದಾಗಿದೆ ಎಂದು ರೋಹಿಣಿ ಹೇಳಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಅಪ್ಲಿಕೇಷನ್ ಇದಾಗಿದೆ. ಈ ಎಂ -ಆಸ್ತಿ ಅಪ್ಲಿಕೇಷನ್ ಬಳಸಿಕೊಂಡು ಸುಲಭವಾಗಿ ಇ ಖಾತಾವನ್ನು ಪಡೆದುಕೊಳ್ಳಬಹುದು ಎಂದು ರೋಹಿಣಿ ವಿವರಿಸಿದರು. ಮಂಡ್ಯ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಹೊಸ ಯಶಸ್ಸು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಸಿಇಒ ರೋಹಿಣಿ ಅವರು ಮಾನ್ಯತೆ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಎಂ-ಆಸ್ತಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ.