Posts

ಮನೆ ಕೆಲಸಗಾರರಿಗಿನ್ನು 9,000 ರೂ. ಮಾಸಿಕ ವೇತನ ಕಡ್ಡಾಯ!

ಹೊಸದಿಲ್ಲಿ: ಮನೆ ಕೆಲಸ ಮಾಡುವವರಿಗೆ ಅಚ್ಛೇ ದಿನ್ ಆಗಮಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಸಂಪೂರ್ಣ ಸಮಯ ಕಾರ್ಯನಿರ್ವಹಿಸುವ ಮನೆಗೆಲಸದವರಿಗೆ ಇನ್ನು ಮುಂದೆ ಕನಿಷ್ಠ 9,000 ರೂ. ಮಾಸಿಕ ವೇತನ ನೀಡುವುದು ಕಡ್ಡಾಯ. ಅಷ್ಟೇ ಅಲ್ಲ ವರ್ಷದಲ್ಲಿ 15 ದಿನಗಳ ವೇತನ ಸಹಿತ ರಜೆಯಲ್ಲದೇ, ಹೆರಿಗೆ ರಜೆಯನ್ನೂ ನೀಡುವುದನ್ನೂ ಸರಕಾರ ಕಡ್ಡಾಯಗೊಳಿಸುತ್ತಿದೆ. ಗೃಹೀಯ ನೌಕರರ ಹಿತಾರಕ್ಷಣೆಗಾಗಿ ಎನ್ಡಿಎ ಸರಕಾರ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೊಳಿಸುತ್ತಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಸಾಮಾಜಿಕ ಭದ್ರತಾ ವಿಮೆ, ಲೈಂಗಿಕ ಕಿರುಕುಳದ ವಿರುದ್ಧ ಕಠಿಣ ಕ್ರಮಗಳು ಹಾಗೂ ಜೀತದಾಳು ಪದ್ಧತಿಗೆ ಫುಲ್ ಸ್ಟಾಪ್ ಇಡಲು ಪಣ ತೊಟ್ಟಿದೆ. ಇದರಿಂದ ವಯಸ್ಕರಾದಂತೆ ಹಾಗೂ ಇತರೆ ಕಾರಣಗಳಿಂದ ಅವಕು ಕೆಲಸ ಕಳೆದುಕೊಳ್ಳುವ ಭೀತಿ ಇರುವುದಿಲ್ಲ. ಈ ನೀತಿಯಡಿಯಲ್ಲಿ ಸಾಮಾಜಿಕ ಭದ್ರತಾ ವಿಮೆಗೆ ಉದ್ಯೋಗದಾತರು ಕಡ್ಡಾಯವಾಗಿ ತಮ್ಮ ಕೊಡುಗೆಯನ್ನು ನೀಡಬೇಕಾಗುತ್ತದೆ. ನೌಕರರು ಹೆಚ್ಚಿನ ಶಿಕ್ಷಣ ಪಡೆಯಲು, ಸುರಕ್ಷಿತ ಕಾರ್ಯ ಸ್ಥಳ ಹೊಂದಲು ಹಾಗೂ ಅವರ ಕುಂದು ಕೊರತೆಗಳನ್ನೂ ನೀಗಿಸಿಕೊಳ್ಳಬಹುದು. ಅಲ್ಲದೇ ಈ ನೀತಿಯಡಿಯಲ್ಲಿ ಉದ್ಯೋಗಿಗಳು ಹಾಗೂ ಉದ್ಯೋಗದಾತರು ತಮ್ಮದೇ ಆದ ಗುಂಪುಗಳನ್ನು ರಚಿಸಿಕೊಂಡು, ತಮ್ಮಿಚ್ಛೆಯಂತೆ ಕರಾರು ಮಾಡಿಕೊಳ್ಳುವ ಅವಕಾಶವೂ ಇದೆ. ಈ ಒಪ್ಪಂದಕ್ಕೆ ಕಾನೂನು ಪಾವಿ...

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ ಫೈನಲ್ :ಸೈನಾ ನೆಹ್ವಾಲ್ ಗೆ ಬೆಳ್ಳಿ ಪದಕ:

Image
ಜಕಾರ್ತ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ ಫೈನಲ್ ತಲುಪಿ ಇತಿಹಾಸ ನಿರ್ವಿುಸಿದ್ದ ಭಾರತದ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್​ನಲ್ಲಿ ಅವರು ಸ್ಪೇನ್​ನ ಕೆರೋಲಿನಾ ಮರಿನಾ ವಿರುದ್ಧ 16-21, 19-21ರಿಂದ ಸೋಲೊಪ್ಪಿಕ ೊಂಡು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ ಷಿಪ್​ನಲ್ಲಿ ಭಾರತದ ಆಟಗಾರರೊಬ್ಬರು ಬೆಳ್ಳಿ ಪದಕ ಗೆದ್ದಿದ್ದು ಇದೇ ಮೊದಲು. ಆದ್ದರಿಂದ ಇದು ಅವರ ಐತಿಹಾಸಿಕ ಸಾಧನೆ ಎನಿಸಿಕೊಂಡಿದೆ.

ಕರ್ನಾಟಕದ ಪ್ರಮುಖ ನೀರಾವರಿ ಯೋಜನಗೆಳು : (The Major Irrigation Projects in Karnataka)

*Karnataka Economics *ಕರ್ನಾಟಕದ ಆರ್ಥಿಕತೆ. —ಭಾರತದಲ್ಲಿ ನೀರಾವರಿ ಯೋಜನೆಗಳು ಇರುವಂತೆ ಕರ್ನಾಟಕದಲ್ಲಿಯು ಕೆಲವು ನೀರಾವರಿ ಯೋಜನೆಗಳನ್ನು ಕಾಣಬಹುದು. ಈ ಕೆಳಕಂಡಂತೆ ಅವುಗಳನ್ನು ಕಾಣಬಹುದು. ●.ಕೃಷ್ಣರಾಜ ಸಾಗರ :••———•• ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು ೧.೯೫ ಲಕ್ಷ ಹೆಕ್ಟೆರ್ ಭೂಮಿಗೆ ನೀರು ಒದಗಿಸಿದೆ. ●.ಕೃಷ್ಣಾ ಮೇಲ್ದಂಡೆ ಯೋಜನೆ :••———•• ಈ ಜಲಾಶಯವನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ನಿರ್ಮಿಸಿದೆ. ಬರಗಾಲ ಪೀಡಿತ ಬಿಜಾಪುರ ಮತ್ತು ಗುಲ್ಬರ್ಗಾ ರಾಯಚೂರು ಜಿಲ್ಲೆಗಳ ೬.೧೭ ಲಕ್ಷ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಿದೆ. ●.ಮಲಪ್ರಭಾ ಯೋಜನೆ :••———•• ಮಲಪ್ರಭಾ ಯೋಜನೆಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ೨,೨೦,೦೨೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಇದೆ. ●.ಭದ್ರಾ ಜಲಾಶಯ :••———•• ಈ ಜಲಾಶಯಗಳನ್ನು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಂಗಳೂರು ಮತ್ತು ಬಳ್ಳಾರಿ ಜಿಲ್ಲೆಗಳ ೧,೦೫,೫೭೦ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸಲಾಗುತ್ತಿದೆ. ●.ತುಂಗಾಭದ್ರ ಜಲ...

ಟ್ವಿಟರ್‌ ಖಾತೆ ತೆರೆದ ವಿಶ್ವದ ಮೊದಲ ಸ್ಮಾರಕ ತಾಜ್‌ ಮಹಲ್‌

ಟ್ವಿಟರ್‌ ಖಾತೆ ತೆರೆದ ವಿಶ್ವದ ಮೊದಲ ಸ್ಮಾರಕ ತಾಜ್‌ ಮಹಲ್‌.(Freegksms) ಲಖನೌ/ಆಗ್ರಾ (ಪಿಟಿಐ): ನಿಷ್ಕಲ್ಮಷ ಪ್ರೀತಿ, ಪ್ರೇಮದ ಸಂಕೇತದಂತಿರುವ 17ನೇ ಶತಮಾನದ ಐತಿಹಾಸಿಕ  ಸ್ಮಾರಕ ತಾಜ್‌ ಮಹಲ್‌ ಹೆಸರಲ್ಲಿ  ಇದೇ ಮೊದಲ ಬಾರಿಗೆ ಶನಿವಾರ ಟ್ವಿಟರ್‌ ಖಾತೆ ತೆರೆಯಲಾಗಿದೆ.  ಇದರೊಂದಿಗೆ ಟ್ವಿಟರ್‌ ಪ್ರವೇಶಿಸಿದ ವಿಶ್ವದ ಮೊದಲ ಸ್ಮಾರಕ ಎಂಬ ಹೆಗ್ಗಳಿಕೆಗೆ ತಾಜ್ ಪಾತ್ರವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶನಿವಾರ ತಾಜ್ ಟ್ವಿಟರ್‌ ಖಾತೆಯನ್ನು (@Taj Mahal) ಬಿಡುಗಡೆ ಮಾಡಿದರು.  ಟ್ವಿಟರ್‌ ಖಾತೆ ಬಿಡುಗಡೆಯಾದ ತಾಸಿನಲ್ಲಿಯೇ ತಾಜ್ ಖಾತೆಯನ್ನು 2000 ಮಂದಿ ಹಿಂಬಾಲಿಸಿದ್ದಾರೆ. ತಮ್ಮ ಪತ್ನಿ, ಪುತ್ರನೊಂದಿಗೆ ತಾಜ್ ಮಹಲ್‌ನಲ್ಲಿ ತೆಗೆಸಿಕೊಂಡಿದ್ದ ಹಳೆಯ ಚಿತ್ರವನ್ನು ಅಖಿಲೇಶ್  #MyTajMemory ಪ್ರಕಟಿಸಿದರು. ಇದರ ಬೆನ್ನಲ್ಲೇ ಅನೇಕರು ತಮ್ಮ ತಾಜ್‌ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದರು

Kerala becomes India's first 'complete digital state' ದೇಶದ ಮೊದಲ ಡಿಜಿಟಲ್ ರಾಜ್ಯವಾಗಿ ಹೊರಹೊಮ್ಮಿದ ಕೇರಳ

: ತಿರುವನಂತಪುರ: ಮೊಬೈಲ್ ಕ್ಷೇತ್ರ, ಇ-ಸಾಕ್ಷರತೆ, ಡಿಜಿಟಲ್ ಬ್ಯಾಂಕಿಂಗ್ನಲ್ಲಿ ಪ್ರಗತಿ ಹಾಗೂ ಪಂಚಾಯಿತ್ ಮಟ್ಟದಲ್ಲಿ ಸಂಪೂರ್ಣ ಬ್ರಾಡ್ಬ್ಯಾಂಡ್ ಸಂಪರ್ಕ ಸಾಧಿಸುವುದರೊಂದಿಗೆ, ಕೇರಳ ದೇಶದ ಮೊದಲ ಡಿಜಿಟಲ್ ರಾಜ್ಯವಾಗಿ ಹೊರಹೊಮ್ಮಿದೆ. ಆ ಮೂಲಕ ಪ್ರಧಾನಿ ಮೋದಿಯ ಕನಸಿನ ಕೂಸಾದ 'ಡಿಜಿಟಲ್ ಇಂಡಿಯಾ' ಕಲ್ಪನೆಗೆ ಇತರೆ ರಾಜ್ಯಗಳಿಗೂ ಈ ದಕ್ಷಿಣ ಭಾರತೀಯ ರಾಜ್ಯ ಮಾದರಿಯಾಗಿದೆ. ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಒಮನ್ ಚಾಂಡಿ, ರಾಜ್ಯ ಸಂಪೂರ್ಣ ಡಿಜಿಟಲ್ ಆಗಿರುವುದಾಗಿ ಘೋಷಿಸಿದರು. ಅಲ್ಲದೇ, ಮಾಜಿ ರಾಷ್ಟ್ರಪತಿ ದಿ.ಎಪಿಜೆ ಅಬ್ದುಲ್ ಕಲಾಂ ಸ್ಮರಣೆಯಲ್ಲಿ ಯುವಕರಿಗೆ ಅನುಕೂಲವಾಗುವಂಥ ಅನೇಕ ಯೋಜನೆಗಳನ್ನು ಪ್ರಕಟಿಸಿದರು. 'ಇ-ಜಿಲ್ಲಾ ಯೋಜನೆಗಳ ಜಾರಿ, ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಸಂಖ್ಯೆ ಸಂಪರ್ಕಿಸುವ ಕಾರ್ಯಗಳು ಡಿಜಿಟಲ್ ಕೇರಳಕ್ಕೆ ಸಹಕರಿಸಿದವು,' ಎಂದರು. 'ಡಿಜಿಟಲ್ ಕೇರಳದ ಅತ್ಯುತ್ತಮ ಬಳಕೆಗಾಗಿ ಸ್ಥಳೀಯ ಆಡಳಿತಗಳಲ್ಲಿ ಸರಕಾರ ವೈ-ಫೈ ಹಾಟ್ಸ್ಪಾಟ್ಗಳನ್ನು ಸ್ಥಾಪಿಸಲಿದ್ದು, ಪೂರ್ಣ ಮೊಬೈಲ್ ಆಡಳಿತವನ್ನು ಜಾರಿಗೊಳಿಸುತ್ತದೆ,' ಎಂದು ಹೇಳಿದರು.

ಟ್ವಿಟರ್ ಖಾತೆ ತೆರೆದ ವಿಶ್ವದ ಮೊದಲ ಸ್ಮಾರಕ ತಾಜ್ ಮಹಲ್*

Image
"-ಲಖನೌ/ಆಗ್ರಾ (ಪಿಟಿಐ): ನಿಷ್ಕಲ್ಮಷ ಪ್ರೀತಿ, ಪ್ರೇಮದ ಸಂಕೇತದಂತಿರುವ 17ನೇ ಶತಮಾನದ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಹೆಸರಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಟ್ವಿಟರ್ ಖಾತೆ ತೆರೆಯಲಾಗಿದೆ. ಇದರೊಂದಿಗೆ ಟ್ವಿಟರ್ ಪ್ರವೇಶಿಸಿದ ವಿಶ್ವದ ಮೊದಲ ಸ್ಮಾರಕ ಎಂಬ ಹೆಗ್ಗಳಿಕೆಗೆ ತಾಜ್ ಪಾತ್ರವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶನಿವಾರ ತಾಜ್ ಟ್ವಿಟರ್ ಖಾತೆಯನ್ನು (@Taj Mahal) ಬಿಡುಗಡೆ ಮಾಡಿದರು. ಟ್ವಿಟರ್ ಖಾತೆ ಬಿಡುಗಡೆಯಾದ ತಾಸಿನಲ್ಲಿಯೇ ತಾಜ್ ಖಾತೆಯನ್ನು 2000 ಮಂದಿ ಹಿಂಬಾಲಿಸಿದ್ದಾರೆ. ತಮ್ಮ ಪತ್ನಿ, ಪುತ್ರನೊಂದಿಗೆ ತಾಜ್ ಮಹಲ್ನಲ್ಲಿ ತೆಗೆಸಿಕೊಂಡಿದ್ದ ಹಳೆಯ ಚಿತ್ರವನ್ನು ಅಖಿಲೇಶ್ #MyTajMemory ಪ್ರಕಟಿಸಿದರು. ಇದರ ಬೆನ್ನಲ್ಲೇ ಅನೇಕರು ತಮ್ಮ ತಾಜ್ ಚಿತ್ರಗಳನ್ನು ಟ್ವಿಟರ್ನಲ್ಲಿ ಪ್ರಕಟಿಸಿದರು.

1942ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ ಈಸೂರು

: ಬೆಂಗಳೂರು:ಹೌದು ಕರ್ನಾಟಕ ಮಾತ್ರವಲ್ಲ, ದೇಶಕ್ಕೆ ಹೆಮ್ಮೆ ತರುವ ವಿಷಯ. ಯಾಕೆಂದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಊರು ಶಿಕಾರಿಪುರ ತಾಲೂಕಿನ ಈಸೂರು ಎಂಬ ಪುಟ್ಟ ಗ್ರಾಮ. 1942ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಮೂಲಕ ಇಡೀ ರಾಷ್ಟ್ರದ ಗಮನಸೆಳೆದ ಕೀರ್ತಿ ಈಸೂರು ಗ್ರಾಮದ್ದು. ಏಸೂರು ಕೊಟ್ಟರೂ ಈಸೂರು ಕೊಡೆವು ಎಂಬ ವ್ಯಾಖ್ಯೆ ಸ್ವಾತಂತ್ರ್ಯ ಚಳವಳಿ ಸಂದರ್ಭ ಮನೆಮಾತಾಗಿತ್ತು. ಇಂದು ಆಗಸ್ಟ್ 15 69ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರ ಬೋಸ್ ರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಘೋಷಣೆಯಿಂದ ಸ್ಫೂರ್ತಿ ಪಡೆದ ಊರು ಈಸೂರು. ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳವಳಿ ಘೋಷಣೆಯಿಂದ ಸ್ಫೂರ್ತಿಗೊಂಡ ಈಸೂರು ಜನರು 1942 ಸೆಪ್ಟೆಂಬರ್ 27ರಂದು ಈಸೂರಿನ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಬಾವುಟ ಹಾರಿಸಿದ್ದರು. ಇದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಈ ಘಟನೆಯಿಂದಾಗಿ ಈಸೂರು ಇತಿಹಾಸದಲ್ಲೇ ದೊಡ್ಡ ಹೆಸರು ಪಡೆಯಿತು. ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಪ್ರಥಮ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ತಮ್ಮದೇ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸ್ವಾತಂತ್ರ್ಯ ಘೋಷಿಸಿಕೊಂಡ ಭಾರತದ ಮೊದಲ ಗ್ರಾಮ ಈಸೂರು. ಈ ಪುಟ್ಟ ಗ್ರಾಮದ ಜನರ ಸ್ವಾಭಿಮಾನ ಬ್ರಿಟಿಷರನ್ನು ತಲ್ಲಣಗೊಳಿಸಿತ್ತು. ಕೊನೆಗೆ ಇಡೀ ಗ್ರಾಮ ಬ್ರಿಟಿಷರ ಕೋಪದ ಅಗ್ನಿಗೆ ಆಹುತಿಯಾಯ...