Posts

ಮದರ್ ತೆರೆಸಾಗೆ ಸಂತ ಪದವಿ : ಪಶ್ಚಿಮಬಂಗಾಳ ಸಿಎಂ ಮಮತಾ ಸ್ವಾಗತ

ಕೋಲ್ಕತಾ, ಡಿ.೧೯-ಮಹಾನ್ ಮಾನವತಾವಾದಿ, ದೀನ ದಲಿತರ ಸೇವಕಿಯಾಗಿ ಜೀವ ಸವೆಸಿದ ಮದರ್ ತೆರೆಸಾ ಅವರನ್ನು ಸಂತ ಪದವಿಗೆ ಏರಿಸುವ ವ್ಯಾಟಿಕನ್ ಪೋಪ್ ಅವರ ನಿರ್ಧಾರವನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾರ್ಧಿಕವಾಗಿ ಸ್ವಾಗತಿಸಿದ್ದಾರೆ. ಮನುಕುಲದ ಒಳಿತಿಗಾಗಿ ಬದುಕಿದ ಮದರ್ ತೆರೆಸಾ ಅವರಿಗೆ ೨೦೧೬ರಲ್ಲಿ ಸಂತ ಪದವಿ ದೊರೆಯುತ್ತಿರುವುದು ನಮಗೆ ಅತ್ಯಂತ ಹರ್ಷ ತಂದಿದೆ ಎಂದು ಮಮತಾ ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ. ಸಧ್ಯದಲ್ಲೇ ಮದರ್ ತೆರೆಸಾ ಅವರಿಗೆ ಮರಣೋತ್ತರ ಸಂತ ಪದವಿ ನೀಡಿ ಗೌರವಿಸಲಾಗುವುದು.

ಜನವರಿಯಿಂದ ಜಾರಿಯಾಗಲಿದೆ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ:*

ಬೆಂಗಳೂರು, ಡಿ.18-ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ, ಅನುದಾನಿತ ಸಂಸ್ಥೆಗಳ ನೌಕರರಿಗೆ 2016ನೆ ವರ್ಷದ ಗಳಿಕೆ ರಜೆಯನ್ನು ಅದ್ಯರ್ಪಿಸಿ (ಹಿಂ ದಿರುಗಿಸಿ), ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಜನವರಿ 1 ರಿಂದ ಜಾರಿಗೆ ಬರಲಿದೆ. 2016ನೇ ವರ್ಷದಲ್ಲಿ ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅದ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಸರ್ಕಾರಿ ಅಧಿಕಾರಿ ಮತ್ತು ನೌಕರರು ಒಂದು ತಿಂಗಳು ಮುಂಚೆ ನೋಟಿಸ್ ನೀಡಿ ಈ ಸೌಲಭ್ಯ ಪಡೆಯಬೇಕಿದೆ. ಡಿ ಗ್ರೂಪ್ ನೌಕರರು 2016ನೆ ಕ್ಯಾಲೆಂಡರ್ ವರ್ಷದ ಯಾವುದೇ ತಿಂಗಳಿನಲ್ಲಿ ಸ್ವಇಚ್ಛೆಯಂತೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದು. ಎ, ಬಿ ಮತ್ತು ಸಿ ಗುಂಪಿನ ನೌಕರರು ಏಪ್ರಿಲ್ನಿಂದ ಡಿಸೆಂಬರ್ ನಡುವಿನ ಯಾವುದೇ ತಿಂಗಳಿನಲ್ಲಿ ರಜೆ ನಗದೀಕರಣ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಷರತ್ತುಗಳು ಏನೇ ಇದ್ದರೂ ಜನವರಿಯಿಂದ ಮಾರ್ಚ್ ನಡುವೆ ವಯೋನಿವೃತ್ತಿ ಹೊಂದುವ ಎಲ್ಲಾ ಅರ್ಹ ಅಧಿಕಾರಿ ಮತ್ತು ನೌಕರರು ನಿವೃತ್ತಿಯಾಗುವ ತಿಂಗಳಲ್ಲಿ ನಗದೀಕರಣ ಪ್ರಯೋಜನ ಪಡೆಯುವ ಅವಕಾಶವಿದೆ. ನಾಗರಿಕ ಸೇವಾ ನಿಯಮಗಳ ಅನ್ವಯ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗಲಿವೆ. ಈ ಆದೇಶವು ಈಗಾಗಲೇ ಇಂಥ ಸೌಲಭ್ಯ ವಿಸ್ತರಣೆಯಾಗಿರುವ ಸರ್ಕ...

ಮಕ್ಕಳಿಗೆ ಶೂ ಬದಲು ಪಾದರಕ್ಷೆ

Image

ಕ.ರಾ.ರ.ಸಾ.ನಿ. ದಲ್ಲಿ ಚಾಲಕ ಕಂ ನಿರ್ವಾಹಕ ದರ್ಜೆ-೩ ಹುದ್ದೆಗಳನ್ನು ನೇಮಕಾತಿ :ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ದಿ. 28/12/2015 ರಿಂದ

Image

ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ ‘ದಲಿತರ ದಿನ’

ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ 'ದಲಿತರ ದಿನ' 18 Dec, 2015 ಪ್ರಜಾವಾಣಿ ವಾರ್ತೆ ಬೆಂಗಳೂರು: ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಇನ್ನು ಮುಂದೆ ಪ್ರತಿ ತಿಂಗಳ 2ನೇ ಭಾನುವಾರ 'ದಲಿತರ ದಿನ' ಆಚರಣೆ ಯಾಗಲಿದೆ! ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರ ವಿರುದ್ಧ ನಡೆಯುವ ದೌರ್ಜನ್ಯಗಳ ಕುರಿತು ದಾಖಲಾಗುವ ದೂರುಗಳಿಗೆ ಪೊಲೀಸರು ಸಮರ್ಪಕ ವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪಗಳು ಕೇಳಿಬಂದಿದ್ದವು. ಈ ಕಾರಣಕ್ಕೆ 'ದಲಿತರ ದಿನ' ಆಚರಣೆ ನಿಯಮ ಜಾರಿಗೆ ತರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯವಸ್ಥೆಯನ್ನು ಮೊದಲೇ ಜಾರಿಗೆ ತರಲಾಗಿತ್ತು. ಆದರೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಈ ನಿಯಮವನ್ನು ಕಡ್ಡಾಯಗೊಳಿಸಿ ರಾಜ್ಯ ಪೊಲೀಸ್ ಇಲಾಖೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಿದೆ. 'ತಿಂಗಳ ಪ್ರತಿ 2ನೇ ಭಾನುವಾರ ಠಾಣಾ ಮಟ್ಟದಲ್ಲಿ ಸಭೆ ನಡೆಸಬೇಕು. ಸ್ಥಳೀಯ ದಲಿತ ಮುಖಂಡರನ್ನು ಸಭೆಗೆ ಆಹ್ವಾನಿಸಿ, ಕುಂದು- ಕೊರತೆ ಆಲಿಸ ಬೇಕು. ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ತತ್ಕ್ಷಣವೇ ವಿಚಾರಣೆ ಪ್ರಾರಂಭಿ ಸಬೇಕು. ಇಲಾಖಾ ಮಟ್ಟದಲ್ಲೇ ಬಗೆಹ ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು' ಎಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕ ಓಂಪ್ರಕಾಶ್ ಹೊರಡಿಸಿರುವ ಸುತ್ತೋಲ...

ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ:*

Image
Dec 17, 2015, 12:21 PM IST ಹೊಸದಿಲ್ಲಿ: ಭಾರತದ ಗಣರಾಜ್ಯೋತ್ಸವದ ದಿನದಂದು ಮುಖ್ಯ ಅತಿಥಿಯನ್ನು ಆಹ್ವಾನಿಸುವ ಸಂಪ್ರದಾಯವನ್ನು ಅನುಸರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯ 2016ರ ಜನವರಿ 26ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರನ್ನು ಆಹ್ವಾನಿಸಿದೆ. ಹೊಲಾಂಡೆ ಅವರು ಭಾರತದ ಸರಕಾರದ ಈ ಆಹ್ವಾನವನ್ನು ಸ್ವೀಕರಿಸಿದ್ದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾರತೀಯ ಸೇನೆಯಿಂದ ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ. "ಹೊಲಾಂಡೆ ಅವರ ಭೇಟಿಯಿಂದ ಭಾರತ ಮತ್ತು ಫ್ರಾನ್ಸ್ ನಡುವಿನ ಪ್ರಬಲ ವ್ಯೂಹಾತ್ಮಕ ಭಾಗೀದಾರಿಕೆ ಮತ್ತು ಉಭಯ ದೇಶಗಳ ನಡುವಿನ ವಿಶೇಷ ರೀತಿಯ ಸಂಬಂಧಗಳು ಇನ್ನಷ್ಟು ಸದೃಢವಾಗುವುದೆಂಬ ವಿಶ್ವಾಸ ನಮಗಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯವು ಟ್ವೀಟ್ ಮಾಡಿದೆ. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಒಬಾಮಾ ಜತೆಗೆ ಅವರ ಪತ್ನಿ ಮಿಶೆಲ್ ಒಬಾಮಾ ಕೂಡ ಬಂದಿದ್ದರು.

ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆ:-

Image
ಬೆಂಗಳೂರು: ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, 1 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಪುರಸ್ಕಾರ ಒಳಗೊಂಡಿದೆ. 'ಅಕ್ಷಯ ಕಾವ್ಯ' ತಿರುಮಲೇಶ್ ಅವರ ಮಹತ್ವಾಕಾಂಕ್ಷೆಯ ಕೃತಿಯಾಗಿದ್ದು, ಇದು 'ಆಧುನಿಕ ಮಹಾಕಾವ್ಯ'ದ ವಿಸ್ತಾರವನ್ನು ಒಳಗೊಂಡಿದೆ. ಲೋಕದ ಅನುಭವಗಳನ್ನು ಗಂಡು ಹೆಣ್ಣಿನ ರೂಪಕಗಳ ಮೂಲಕ ಗ್ರಹಿಸುವ ಪ್ರಯತ್ನ ಹಾಗೂ ಬೇರೆ ಬೇರೆ ಲಯಗಳು ಬಳಕೆಯಾಗಿರುವ ವಿಶಿಷ್ಟ ಕಾವ್ಯಪ್ರಯೋಗ ಇದಾಗಿದೆ.