April 26, 2017 ನವದೆಹಲಿ, ಏ.26- ಕೆಎಸ್ಆರ್ಟಿಸಿಯು MITRA ಅದೇಶದ ಪ್ರಥಮ ಜಾಣ ಸಾರಿಗೆ ವ್ಯವಸ್ಥೆ ಮೈಸೂರಿನಲ್ಲಿ ಅನುಷ್ಠಾನಗೊಳಿಸಿದ್ದು, ಈ ಉಪಕ್ರಮಕ್ಕೆ ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿ ಮತ್ತು ರೂ.ಒಂದು ಲಕ್ಷ ನಗದು ಲಭಿಸಿರುತ್ತದೆ. ಈ ಪ್ರಶಸ್ತಿಯನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೋ) ಭಾರತ ಸರ್ಕಾರರವರು ಸ್ಥಾಪಿಸಿದ್ದು, ಪ್ರತಿ ವರ್ಷ 10 ವರ್ಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.ಪ್ರಸಕ್ತ ವರ್ಷದಲ್ಲಿ ಆರು ಪ್ರಶಸ್ತಿಗಳನ್ನು ಮಾತ್ರ ನೀಡಲಾಗಿದೆ. KSRTC bagged prestigious National " HUDCO Best Practice Award -2017'' with cash Prize of Rs. One Lakh 6:23 AM - 26 Apr 2017 4 8 KSRTC @KSRTC_Journeys ವಿವರ : ನಗರ ಸಾರಿಗೆ -ಕರ್ನಾಟಕ, ಕೆಎಸ್ಆರ್ಟಿಸಿ, ನಗರಾಡಳಿತ – ಗುಜರಾತ್ ಮತ್ತು ಛತ್ತೀಸ್ಗಡ್, ಪರಿಸರ ನಿರ್ವಹಣೆ – ಕೇರಳ, ತ್ಯಾಜ್ಯ ನಿರ್ವಹಣೆ – ತಮಿಳುನಾಡುಗೆ ಲಭಿಸಿರುತ್ತದೆ. ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿಯನ್ನು ವಸತಿ, ಬಡತನ ನಿರ್ಮೂಲನೆ ಮತ್ತು ನಗರಾಭಿವೃದ್ಧಿ ಸಚಿವರು ವೆಂಕಯ್ಯ ನಾಯ್ಡು ನವದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್ನಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್ಆರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು.