Posts

ಆದಿಲ್‌ಗೆ ಸಿಂಗಲ್ಸ್‌ ಗರಿ

ಆದಿಲ್‌ಗೆ ಸಿಂಗಲ್ಸ್‌ ಗರಿ ಬೆಂಗಳೂರು: ಕರ್ನಾಟಕದ ಆದಿಲ್‌ ಕಲ್ಯಾಣಪುರ ಹೈದರಾಬಾದ್‌ನಲ್ಲಿ ನಡೆದ 16 ವರ್ಷದ ಒಳಗಿನವರ ಎಐಟಿಎ ರಾಷ್ಟ್ರೀಯ ಸರಣಿ ಜೂನಿಯರ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಫೈನಲ್‌ ಹೋರಾಟದಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಆದಿಲ್‌ 7–5, 6–2ರ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕ ಹೊಂದಿದ್ದ ಆಂಧ್ರಪ್ರದೇಶದ ಶಿವದೀಪ್‌ ಕೋಸರಾಜು ಅವರನ್ನು ಸೋಲಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಆಡಿದ ಆದಿಲ್‌ ಮೊದಲ ಸೆಟ್‌ನಲ್ಲಿ 4–5ರ ಹಿನ್ನಡೆ ಅನುಭವಿಸಿದ್ದರು.  ಬಳಿಕ ಚೇತರಿಕೆಯ ಆಟ ಆಡಿದ ಅವರು 10 ಮತ್ತು 12ನೇ ಗೇಮ್‌ಗಳಲ್ಲಿ ಜಯ ಸಾಧಿಸಿ ಸೆಟ್‌ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಮತ್ತಷ್ಟು ವಿಶ್ವಾಸದಿಂದ ಆಡಿದ ರಾಜ್ಯದ ಆಟಗಾರ ಎದುರಾಳಿಯನ್ನು ಸುಲಭವಾಗಿ ಮಣಿಸಿ ಸಂಭ್ರಮಿಸಿದರು. ಈ ಋತುವಿನಲ್ಲಿ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗ ಸೇರಿದಂತೆ ಆದಿಲ್‌ ಗೆದ್ದ ಎಂಟನೇ ಪ್ರಶಸ್ತಿ ಇದಾಗಿದೆ.

ಜಾತಿ ಸಮೀಕ್ಷೆ: ಮತ್ತೊಂದು ಅವಕಾಶ

ಜಾತಿ ಸಮೀಕ್ಷೆ: ಮತ್ತೊಂದು ಅವಕಾಶ ಬೆಂಗಳೂರು: ಜಾತಿ ಸಮೀಕ್ಷೆ ಶುಕ್ರವಾರಕ್ಕೆ ಕೊನೆಗೊಂಡಿದ್ದರೂ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನೀಡಲು ರಾಜ್ಯದ ಜನರಿಗೆ ಇನ್ನೊಂದು ಅವಕಾಶ ನೀಡಲು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತೀರ್ಮಾನಿಸಿದೆ. ಯಾವುದೇ ಕುಟುಂಬ ಕಾರಣಾಂತರಗಳಿಂದ ಸಮೀಕ್ಷೆಯಿಂದ ಹೊರಗುಳಿದಿದ್ದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಕುಟುಂಬದ ಮುಖ್ಯಸ್ಥರು ಮೇ 18ರಿಂದ ಮೇ 27ರವರೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಆಯೋಗವು  ತಿಳಿಸಿದೆ. ಬಿಬಿಎಂಪಿಯಲ್ಲಿ ಇವರನ್ನು ಸಂಪರ್ಕಿಸಿ * ಅಜಿತ್ ಕುಮಾರ್ ಹೆಗಡೆ, ಜಂಟಿ ಆಯುಕ್ತ, ಬಿಬಿಎಂಪಿ ಪೂರ್ವವಲಯ, ಮೇಯೋ ಹಾಲ್, ದೂರವಾಣಿ: 94495 59122, 080 - 2297 5801 * ಲಕ್ಷ್ಮೀನರಸಯ್ಯ, ಜಂಟಿ ಆಯುಕ್ತ, ಬಿಬಿಎಂಪಿ ಪಶ್ಚಿಮ ವಲಯ, ಸಂಪಿಗೆ ರಸ್ತೆ, ಮಲ್ಲೇಶ್ವರ, ದೂ: 94806 85411, 080 - 2297 5648 * ಎ.ಬಿ. ಹೇಮಚಂದ್ರ, ಜಂಟಿ ಆಯುಕ್ತ, ದಕ್ಷಿಣ ವಲಯ, ಕಮರ್ಷಿಯಲ್ ಕಾಂಪ್ಲೆಕ್ಸ್‌, 2ನೇ ಬ್ಲಾಕ್‌, ಜಯನಗರ, ದೂ: 94806 83777, 080 - 2297 5701 * ವಿ. ದೊಡ್ಡಪ್ಪ, ಹೆಚ್ಚುವರಿ ಆಯುಕ್ತ, ದಾಸರಹಳ್ಳಿ, ಪೋಸ್ಟ್‌ ಆಫೀಸ್‌ ಹತ್ತಿರ, ದೂ: 94806 84467, 080 - 2297 5901 * ವೀರಭದ್ರಪ್ಪ, ಜಂಟಿ ಆಯುಕ್ತ, ರಾಜರಾಜೇಶ್ವರಿ ನಗರ ವಲಯ, ದೂ: 98807 68148, 080 - 2860 4652 * ಎನ್‌. ಮುನಿರಾಜು, ಜಂಟಿ ಆಯುಕ್ತ, ಬೊಮ್ಮನಹಳ

ಕರಿಯರ್‌ ಬೇಡ, ಅನುಭವ ಕೊಡಿ ಸಾಕು:- RBI GOVERNOR

ಉದಯವಾಣಿ, May 15, 2015, 3:40 AM IST ನಾನು ಡಿಗ್ರಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಓದುವಾಗ ಒಂಥರಾ "ಕೆಟ್ಟ' ಹುಡುಗನಾಗಿದ್ದೆ. ಯಾಕೆಂದರೆ ಯಾವ ಸಿದ್ಧಾಂತವನ್ನೂ ಮೇಲ್ನೋಟಕ್ಕೆ ಒಪ್ಪಿಕೊಳ್ಳುತ್ತಿರಲಿಲ್ಲ. ನಿಜಕ್ಕೂ ಈ ಸಿದ್ಧಾಂತದಲ್ಲಿ ಏನಾದರೂ ಹುರುಳಿದೆಯೇ, ಇದರಿಂದ ಜನರಿಗೆ ಲಾಭವಿದೆಯೇ ಎಂದು ಪರೀಕ್ಷೆ ಮಾಡುತ್ತಿದ್ದೆ. ಹಾಗೆ ಮಾಡುವಾಗ ಶಿಕ್ಷಕರಿಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ. ಅರ್ಥಶಾಸ್ತ್ರವೆಂದರೆ ಮಾದರಿಗಳ ಮೇಲೆ ನಿಂತಿರುವ ಶಾಸ್ತ್ರ. ಬೇರೆ ದೇಶಗಳಿಗೆ ಹೊಂದಿಕೆಯಾದ ಮಾದರಿ ನಮ್ಮ ದೇಶಕ್ಕೂ ಹೊಂದಿಕೆಯಾಗಬೇಕು ಎಂದೇನಿಲ್ಲ. ಅವುಗಳನ್ನು ಪ್ರಶ್ನೆ ಮಾಡುತ್ತ ಹೋಗಿದ್ದರಿಂದಲೇ ಈ ಕ್ಷೇತ್ರದಲ್ಲಿ ಅಷ್ಟಿಷ್ಟು ಸಾಧನೆ ಮಾಡಲು ನನ್ನಿಂದ ಸಾಧ್ಯವಾಯಿತು. ನನಗೊಬ್ಬ ಜಗತøಸಿದ್ಧ ಅರ್ಥಶಾಸ್ತ್ರಜ್ಞ ಸ್ನೇಹಿತನಿದ್ದಾನೆ. ಜಾನ್‌ ಕಾಕ್ರೇನ್‌ ಅಂತ ಅವನ ಹೆಸರು. ಅವನು ಯಾವಾಗಲೂ "ನಾನೊಬ್ಬ ಸ್ಟುಪಿಡ್‌' ಎಂದು ಹೇಳಿಕೊಳ್ಳುತ್ತಿರುತ್ತಾನೆ. ತನಗೆ ಏನೂ ತಿಳಿಯುವುದಿಲ್ಲ, ಎಲ್ಲವನ್ನೂ ಆರಂಭದಿಂದ ಅರ್ಥಮಾಡಿಕೊಳ್ಳಬೇಕಾದಷ್ಟು ದಡ್ಡ ತಾನು ಎಂಬುದು ಅವನ ಭಾವನೆ. ಆದ್ದರಿಂದಲೇ ಅವನು ಅಷ್ಟು ದೊಡ್ಡ ಅರ್ಥಶಾಸ್ತ್ರಜ್ಞನಾಗಿದ್ದಾನೆ ಎಂಬುದು ನನ್ನ ಭಾವನೆ. ಏಕೆಂದರೆ ನನಗೇನೂ ಗೊತ್ತಿಲ್ಲ ಎಂದು ಎಲ್ಲವನ್ನೂ ಆಮೂಲಾಗ್ರವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವಿದೆಯಲ್ಲ, ಅದೇ ನಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಮೇಲಕ್ಕ

ಹಸುವಿನ ಬಗ್ಗೆ ಸರಳ ಪ್ರಬಂಧ ಬರೆಯಲಾಗದ ಶಿಕ್ಷಕ: ಜಮ್ಮು -ಕಾಶ್ಮೀರ ಹೈಕೋರ್ಟಗೆ ನಿರಾಶೆ

ಹಸುವಿನ ಬಗ್ಗೆ ಸರಳ ಪ್ರಬಂಧ ಬರೆಯಲಾಗದ ಶಿಕ್ಷಕ: ಜಮ್ಮು ಕಾಶ್ಮೀರ ಹೈಕೋರ್ಟ್ಗೆ ನಿರಾಸೆ ಏಜೆನ್ಸೀಸ್ | May 16, 2015, 01.01PM IST ಲೇಖನ ಅನಿಸಿಕೆಗಳು (1) 1 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ನಲ್ಲಿ ಅಪರೂಪದ ಪ್ರಕರಣವೊಂದು ನಡೆದಿದ್ದು, ಶಿಕ್ಷಕನೊಬ್ಬ ಹಸುವಿನ ಬಗ್ಗೆ ಸಂಕ್ಷಿಪ್ತ ಪ್ರಬಂಧ ಬರೆಯಲೂ ವಿಫಲನಾಗಿ ಪೀಠಕ್ಕೆ ನಿರಾಸೆ, ಜುಗುಪ್ಸೆ ಮೂಡಿಸಿದ್ದಾನೆ. ಶಿಕ್ಷಕನ ಸಾಮರ್ಥ್ಯದ ಬಗ್ಗೆ ಸವಾಲು ಹಾಕಿ ದೂರು ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಆತನಿಗೆ ಸರಳ ಪರೀಕ್ಷೆಗಳನ್ನು ಶುಕ್ರವಾರ ನೀಡಿತ್ತು. ಅವೆಲ್ಲದರಲ್ಲೂ ಪರೀಕ್ಷಾರ್ಥಿ ಶಿಕ್ಷಕ ವಿಫಲನಾಗಿದ್ದು ಕಂಡು ರಾಜ್ಯದ ಶಿಕ್ಷಣ ವಲಯದಲ್ಲಿ ಬದಲಾವಣೆಗಳು ಆಗಬೇಕಿರುವುದನ್ನು ಸಾಬೀತು ಪಡಿಸಿತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮುಝಫರ್ ಹುಸೇನ್ ಅತ್ತರ್ ಈ ಸಂಬಂಧ ರಾಜ್ಯ ಸರಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಆಗಿದ್ದಿಷ್ಟು: ದಕ್ಷಿಣ ಕಾಶ್ಮೀರದ ಶಾಲೆಯೊಂದರಲ್ಲಿ ರೆಹಬಾರ್ ತಾಲೀಮ್ ಎಂಬ ಹೆಸರಿನ ಶಿಕ್ಷಣ ಮಾರ್ಗದರ್ಶಕ ಹುದ್ದೆಗೆ ಮೊಹಮ್ಮದ್ ಇಮ್ರಾನ್ ಖಾನ್ ಆಯ್ಕೆಯಾಗಿದ್ದ. ಆದರೆ ಆತನಿಗೆ ಆ ಹುದ್ದೆ ನಿಭಾಯಿಸುವ ಯಾವುದೇ ಸಾಮರ್ಥ್ಯ ಇಲ್ಲ ಎಂದು ಅರ್ಜಿದಾರನಿಗೆ ಅರಿವಾಗಿದೆ. ಆತ ನೌಕರಿ ಗಿಟ್ಟಿಸಿಕೊಂಡಾಗ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದ ದಿಲ್ಲಿಯ ಪ್ರೌಢಶಿ

AIR NEWS FREE SMS SERVICE:

Image
By sending SMS to 7738299899 in the following format AIR<space>language code *LANGUAGE CODES: ENGLISH – EN HINDI – HI MARATHI – MH DOGRI – DO SANSKRIT – SK NEPALI – NP ASSAMESE – AS GUJARATI -GJ MALAYALAM – ML TAMIL – TM Newly Added Languages URDU - UR ODIYA - OD BENGALI – BN KASHMIRI - KS ARUNACHALI - AL PUNJABI - PN

Gandhi study center inaugurated by Modi in Shanghai :-

Image
ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟಿಸಿದ ಮೋದಿ ಶಾಂಘೈ: ಚೀನಾದ ಫುಡಾನ್ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಸ್ಥಾಪಿಸಲಾದ ಗಾಂಧಿ ಅಧ್ಯಯನ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪವಿತ್ರ ಸಂದರ್ಭದಲ್ಲಿ ನಿಮ್ಮೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ನಿಜಕ್ಕೂ ಇದು ನನ್ನಲ್ಲಿ ಖುಷಿಯನ್ನುಂಟುಮಾಡಿದೆ. ಮಹಾತ್ಮಾಗಾಂಧಿ ಜನಿಸಿದ್ದು ಭಾರತದಲ್ಲಿ. ಅವರು ವಿಶ್ವಕ್ಕೇ ಆದರ್ಶವಾಗಿ ಬೆಳೆದರು. ಗಾಂಧೀಜಿ ಅವರ ಸಿದ್ಧಾಂತಗಳು ಇಂದಿಗೂ ನಮಗೆ ದಾರಿ ದೀಪವಾಗಿದೆ. ಅವರೊಬ್ಬ ಯುಗಪುರುಷ ಎಂದು ಸ್ಮರಿಸಿದರು.

CET-2015 Provisional Answer Keys(all series and all subjects)

http://kea.kar.nic.in/cet2015/provisional_key.pdf

ಮೊರಾರ್ಜಿ ಶಾಲೆ ನೇಮಕಾತಿ: ದಾಖಲೆಗಳ ಪರಿಶೀಲನೆ ಕಾಟ ಶಿಕ್ಷಕರಿಗೆ ಕೃಪಾಂಕ ಭಾಗ್ಯ ಇಲ್ಲ!

ಮೊರಾರ್ಜಿ ಶಾಲೆ ನೇಮಕಾತಿ: ದಾಖಲೆಗಳ ಪರಿಶೀಲನೆ ಕಾಟ ಶಿಕ್ಷಕರಿಗೆ ಕೃಪಾಂಕ ಭಾಗ್ಯ ಇಲ್ಲ! (PSGadyal Teacher) ಬೆಂಗಳೂರು: ಗುತ್ತಿಗೆ ಆಧಾರದ ಶಿಕ್ಷಕರಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನೇಮಕಾತಿಯಲ್ಲಿ ಕೃಪಾಂಕ ಕೊಡುವಂತೆ  ರಾಜ್ಯ ಹೈಕೋರ್ಟ್‌ 2013ರಲ್ಲೇ ಆದೇಶ ನೀಡಿದ್ದರೂ, ಶಿಕ್ಷಕರಿಗೆ ಇನ್ನೂ 'ನೇಮಕ ಭಾಗ್ಯ' ದೊರೆತಿಲ್ಲ. ಈಗ ನಡೆಯುತ್ತಿರುವ ದಾಖಲೆಗಳ ಪರಿಶೀಲನೆ ವೇಳೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಧಿಕಾರಿಗಳು, 'ನಮ್ಮಿಂದ ಒದಗಿ ಸಲು ಸಾಧ್ಯವಾಗದ ದಾಖಲೆಗಳನ್ನು ಕೇಳುತ್ತಿದ್ದಾರೆ' ಎಂದು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೆಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಮೊರಾರ್ಜಿ ದೇಸಾಯಿ ಶಾಲೆಗಳು ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿವೆ. ಈ ಸಂಸ್ಥೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದೆ. 'ಹೈಕೋರ್ಟ್‌ ಆದೇಶವನ್ನು ಸಂಸ್ಥೆ ಈಗ ಅನುಷ್ಠಾನಕ್ಕೆ ತರುತ್ತಿದೆ. ದಾಖಲೆಗಳ ಪರಿಶೀಲನೆ ಆರಂಭಿಸಿದೆ. ಆದರೆ ಹೈಕೋರ್ಟ್‌ ಆದೇಶ ಪಾಲಿಸಿದಂತೆಯೂ ಆಗಬೇಕು, ನಮಗೆ ಕಾಯಂ ಕೆಲಸ ಸಿಗದಂತೆಯೂ ಆಗಬೇಕು ಎಂಬಂತಿದೆ ಅಧಿಕಾರಿಗಳ ಧೋರಣೆ' ಎಂದು ಶಿಕ್ಷಕರೊಬ್ಬರು ದೂರಿದರು. 'ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಇಡಿ ಮತ್ತಿತರ ಅಂಕಪಟ್ಟಿಗಳನ್ನು ಗುತ್ತಿಗೆ ಆಧಾರದಲ್ಲಿರುವ ಶಿಕ್ಷಕರು ಹಾಜರುಪಡಿಸಬಹುದು. ಆದರೆ ನಮ್ಮನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ಹೊರಡಿಸಿದ

CET-2015 Provisional Answer Keys(biology)

Image

👆 May-18 PUC Result

Image
👆 May-18 PUC Result

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ.

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ. (PSGadyal) ನವದೆಹಲಿ: ವಾಹನ ಸವಾರರಿಗೆ ಕಹಿ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 3.13 ರೂ ಏರಿಕೆಯಾದರೆ ಡೀಸೆಲ್ ದರ 2.71 ರೂ. ಏರಿಕೆಯಾಗಿದೆ. ಪರಿಷ್ಕøತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್,ಡೀಸಿಲ್ ದರ ಏರಿಕೆಯಾಗಿದೆ.

ಭಾರತ - ಚೀನಾ ನಡುವೆ 10 ಶತಕೋಟಿ ಡಾಲರ್ ಮೌಲ್ಯದ 24 ಒಪ್ಪಂದ.....................:

Image
ಭಾರತ - ಚೀನಾ ನಡುವೆ 10 ಶತಕೋಟಿ ಡಾಲರ್ ಮೌಲ್ಯದ 24 ಒಪ್ಪಂದ  (PSGadyal Teacher) India - China ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಜತೆಗೆ ಬರೋಬ್ಬರಿ 1000 ಕೋಟಿ  ಡಾಲರ್​ಗಳಿಗೂ ಹೆಚ್ಚು ಮೌಲ್ಯದ 24 ಒಪ್ಪಂದಗಳಿಗೆ ಸಹಿ ಹಾಕಿದ್ದು ಉಭಯ ದೇಶಗಳ ಸಂಬಂಧಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಭಾರತ ಮತ್ತು ಚೀನಾ ನಡುವೆ ನಡೆದ ಒಪ್ಪಂದಗಳು # ಚೆಂಗ್ಡು ಮತ್ತು ಚೆನ್ನೈಯಲ್ಲಿ ರಾಜತಾಂತ್ರಿಕ ಕಚೇರಿಗಳ ಸ್ಥಾಪನೆಗೆ ಪ್ರೊಟೊಕಾಲ್. # ವೃತ್ತಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸಹಕಾರ ಮತ್ತು ಭಾರತದಲ್ಲಿ ಮಹಾತ್ಮಾ ಗಾಂಧಿ ಕೌಶಲ್ಯಅಭಿವೃದ್ಧಿ ಸಂಸ್ಥೆ ಸ್ಥಾಪನೆ. # ವಿದೇಶಾಂಗ ಸಚಿವಾಲಯ ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಚೈನಾ (ಸಿಸಿಸಿಪಿಸಿ) ಮಧ್ಯೆ ಸಹಕಾರ. # ಚೀನಾ ಮತ್ತು ಭಾರತ ರೈಲ್ವೇಯ ರಾಷ್ಟ್ರೀಯ ರೈಲ್ವೇ ಆಡಳಿತ ಮಧ್ಯೆ ಕಾರ್ಯಯೋಜನೆ. # ವ್ಯಾಪಾರ ಮಾತುಕತೆಗಳಲ್ಲಿ ಸಹಕಾರಕ್ಕೆ ಸಂಬಂಧಿಸಿದಂತೆ ಸಲಹಾ ವ್ಯವಸ್ಥೆ. # ಶಿಕ್ಷಣ ವಿನಿಮಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಪತ್ರ. # ಗಣಿಗಾರಿಕೆ ಮತ್ತು ಖನಿಜಗಳ ಕ್ಷೇತ್ರದಲ್ಲಿ ಸಹಕಾರ. # ಬಾಹ್ಯಾಕಾಶ ಸಹಕಾರ ರೂಪುರೇಷೆ. # ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ. # ಸಮುದ್ರ ವಿಜ್ಞಾನ, ಪರಿಸರ ಬದಲಾವಣೆ ಮತ್ತು ಕ್ರಯೋಸ್ಪಿಯರ್ ಕ್ಷೇತ್ರಗಳಲ್ಲಿ ಸಹಕಾ

2, 3 ವರ್ಷಗಳ ಬಳಿಕ ಡಿಡಿಪಿಐ, ಬಿಇಒಗಳು ಮರಳಿ ಶಾಲೆಗೆ!

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕರು (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಓ) ಇನ್ನು ಅದೇ ಹುದ್ದೆಯಲ್ಲಿ ಠಿಕಾಣಿ ಹೂಡು ವಂತಿಲ್ಲ. ಹೌದು, ಇನ್ನು ಮುಂದೆ ಡಿಡಿಪಿಐಗಳು ಗರಿಷ್ಠ 2 ವರ್ಷ ಮತ್ತು ಬಿಇಓಗಳು ಗರಿಷ್ಠ 3 ವರ್ಷ ಮಾತ್ರ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ಬಳಿಕ ಬೋಧನಾ ವೃತ್ತಿಗೆ ಮರಳಬೇಕು.ಅಷ್ಟೇ ಅಲ್ಲ, ಡಿಡಿಪಿಐ ಹುದ್ದೆಯಲ್ಲಿ 2 ವರ್ಷ ಮತ್ತು ಬಿಇಓ ಹುದ್ದೆಯಲ್ಲಿ 3 ವರ್ಷಕ್ಕಿಂತ ಹೆಚ್ಚು ಅವಧಿಗೆ ಮುಂದು ವರಿಯಲು ಅವಕಾಶವೇ ಇಲ್ಲ. ಏಕೆಂದರೆ, ಹೊಸ ನಿಯಮಾ ವಳಿಯಲ್ಲಿ ನಿಗದಿಪಡಿಸಿದ ಗರಿಷ್ಠ ಅವಧಿ (ಡಿಡಿಪಿಐಗಳಿಗೆ 2 ವರ್ಷ ಮತ್ತು ಬಿಇಓಗಳಿಗೆ 3 ವರ್ಷ) ಮುಗಿಯುತ್ತಿದ್ದಂತೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಅವರು ವರ್ಗಾವಣೆಗೊ ಳ್ಳುತ್ತಾರೆ. ಡಿಡಿಪಿಐ ಅಥವಾ ಬಿಇಓಗಳಾದ ಬಳಿಕ ಬೋಧ ನಾ ವೃತ್ತಿಯ ಸಹವಾಸವೇ ಬೇಡ ಎಂದು ಹೇಳಿ ಸಾಕಷ್ಟು ಕಸರತ್ತು ಮಾಡಿ ಅದೇ ಹುದ್ದೆಯಲ್ಲಿ ಮುಂದುವರಿಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತು ಅರ್ಹ ಎಲ್ಲಾ ಬೋಧ ಕರಿಗೂ ಈ ಹುದ್ದೆಯಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಡು ಅಧಿಸೂ ಚನೆ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಮೇ 15 ಆಕ್ಷೇಪಣೆ ಸಲ್ಲಿಸಲು ಕಡೆಯ ದಿನವಾಗಿದ್ದು, ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ನಿಗದಿತ ಅವಧಿ ಪೂರೈಸಿದ ಡಿಡಿಪಿಐ ಮತ್ತು ಬಿಇಓಗಳ ವರ

"Namaami Ganges":-

ಗಂಗಾ ಶುದ್ಧೀಕರಣ ಬಗ್ಗೆ ಅರಿವು ಮೂಡಿಸಲು 'ನಮಾಮಿ ಗಂಗೆ' ವಿಡಿಯೋ ಕುರಿತು : ಗಂಗಾ ಶುದ್ಧೀಕರಣ ಯೋಜನೆಗೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಈ ಯೋಜನೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಸಲುವಾಗಿ 'ನಮಾಮಿ ಗಂಗೆ' ಎಂಬ ವಿಡಿಯೋವೊಂದನ್ನು ಸಿದ್ಧಪಡಿಸಿದ್ದು, ಇದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ತ್ರಿಚೂರು ಸೋದರರ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆಶಯ ಗೀತೆಗೆ ಆದಿಶಂಕರಾಚಾರ್ಯರ ಗಂಗಾಷ್ಟಕದ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ. ಗಂಗಾ ನದಿಯ ತಟದ ಚಟುವಟಿಕೆಗಳು, ಭಕ್ತರು, ಗಂಗೆಯ ಮಹತ್ವವನ್ನು ಈ ಟ್ರೈಲರ್ ನಲ್ಲಿವೆ.

Indian economical development rate willbe 8.1% -UNO reports

ಭಾರತದ ಆರ್ಥಿಕ ಬೆಳವಣಿಗೆ ದರ ಶೇ.8.1: ವಿಶ್ವಸಂಸ್ಥೆ Published: 15 May 2015 11:16 AM IST ನವದೆಹಲಿ: ಭಾರತದ ಪಾಲಿಗೊಂದು ಸಿಹಿ ಭವಿಷ್ಯ ನುಡಿ ತೇಲಿಬಂದಿದೆ. ಈ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.8.1ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆ ವರದಿ ತಿಳಿಸಿದೆ. ಮೂಲಸೌಕರ್ಯ ಯೋಜನೆ ಗಳು, ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಇಳಿದಿರುವ ಹಣದುಬ್ಬರದ ನಡುವೆ ಗ್ರಾಹಕರ ಕೊಳ್ಳುವಿಕೆಯ ಚಟುವಟಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಏರಿಕೆಯಾಗಲಿದೆಯೆಂದು ವಿಶ್ವಸಂಸ್ಥೆ ಅಂದಾಜಿಸಿದೆ. ಐಎಂಎಫ್ ಹಾಗೂ ವರ್ಲ್ಡ್ ಬ್ಯಾಂಕ್ ಕೂಡ ಶೇ.7.5 ಪ್ರಗತಿ ನಿರೀಕ್ಷಿಸಿದ್ದರೆ ಆರ್‍ಬಿಐ ಶೇ.7.8 ಬೆಳವಣಿಗೆಯ ಮುನ್ಸೂಚನೆ ನೀಡಿದೆ. ವರದಿ ಏನನ್ನುತ್ತೆ? ಬಂಡವಾಳ ಹೂಡಿಕೆಯಲ್ಲೂ ತೀವ್ರ ಹೆಚ್ಚಳ ನಿರೀಕ್ಷೆ 2015ರಲ್ಲಿ ಶೇ.8.1 ಹೆಚ್ಚಳ 2016ರಲ್ಲಿ ಶೇ8.2 ಏರಿಕೆ ವಿಶ್ವಾಸ ಭಾರತೀಯ ವಿತ್ತ ಸಚಿವಾಲಯ ನೀಡಿರುವ ವಿವರ ಆಧರಿಸಿ ವಿಶ್ವಸಂಸ್ಥೆ ವರದಿ ಪ್ರಕಟ ಹಣದುಬ್ಬರದಲ್ಲಿ ಇಳಿಕೆ ಕಂಡರೂ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಚನಾತ್ಮಕ ಸುಧಾರಣೆಯಲ್ಲಿ ಭಾರಿ ಮುನ್ನಡೆ 120 ಹೊಸ ಬ್ಯಾಂಕ್ ಖಾತೆ ತೆರೆದದ್ದು ಆರ್ಥಿಕ ಪ್ರಗತಿಗೆ ಪೂರಕ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಕೈಗಾರಿಕಾ ವಲಯದಲ್ಲಿ ಪ್ರಗತಿ Posted by: Rashmi Kasarag

24 Agreements Signed India and China | 24 ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ ಭಾರತ-ಚೀನಾ | Kannadaprabha.com

bit.ly/1HgZ7bt 24 ಮಹತ್ವದ ಒಪ್ಪಂದಗಳಿಗೆ ಭಾರತ-ಚೀನಾ ಸಹಿ Published: 15 May 2015 10:05 AM IST | Updated: 15 May 2015 10:22 AM IST ಉಭಯ ರಾಷ್ಟ್ರಗಳ ನಾಯಕರ ಮಾತುಕತೆ ಬೀಜಿಂಗ್: ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಪ್ರಧಾನಿ ಕೆಖಿಯಾಂಗ್ ಅವರೊಂದಿಗೆ 10 ಬಿಲಿಯನ್ ಡಾಲರ್ ಮೌಲ್ಯದ ಮಹತ್ವದ 24 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಅವರೊಂದಿಗೆ ಪ್ರಧಾನಿ ಮೋದಿ 50 ನಿಮಿಷಗಳ ಕಾಲ ಮಹತ್ವದ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರು 24 ಒಡಂಬಡಿಕೆಗಳಿಗೆ ಸಹಿ ಹಾಕಿದ್ದಾರೆ. ಪ್ರಮುಖ ಒಡಂಬಡಿಕೆಗಳ ಪಟ್ಟಿ ಕೌಶಲ್ಯಾಭಿವೃದ್ಧಿ, ವ್ಯಾಪಾರದಲ್ಲಿ ಪರಸ್ಪರ ಸಹಕಾರ, ಶಿಕ್ಷಣ ವಲಯದಲ್ಲಿ ಹೊಂದಾಣಿಕೆ, ವಿಜ್ಞಾನ-ತಂತ್ರಜ್ಞಾನದಲ್ಲಿ ಮಾಹಿತಿ ಹಂಚಿಕೆ, ರೇಲ್ವೆ ವಲಯದಲ್ಲಿ ತಂತ್ರಜ್ಞಾನ ಹಂಚಿಕೆ, ರೇಲ್ವೆ ವಲಯದಲ್ಲಿ ಪರಸ್ಪರ ಸಹಕಾರ ಒಡಂಬಡಿಕೆಗಳಿಗೆ ಭಾರತ-ಚೀನಾ ಸಹಿ ಹಾಕಿವೆ. ಚೆಂಗ್ಡು, ಚೆನ್ನೈ ನಗರಗಳ ಅಭಿವೃದ್ಧಿಗೆ ವಿಶೇಷ ಒಡಂಬಡಿಕೆ, ಸಿಸಿಟಿವಿ, ದೂರದರ್ಶನ ಚಾನೆಲ್ ನಲ್ಲಿ ಸುದ್ದಿ ಬಿತ್ತರ, ಉಭಯ ದೇಶಗಳ ಸುದ್ದಿ ಬಿತ್ತರಿಸುವ ಸಂಬಂಧ ಒಡಂಬಡಿಕೆ, ಪ್ರವಾಸೋದ್ಯಮ ವಲಯದಲ್ಲಿ ಪರಸ್ಪರ ಸಹಕಾರ, ಭೂವಿಜ್ಞಾನ ತಂತ್ರಜ್ಞಾನ, ಚೀನಾ ದೇಶದ ಅಭಿವೃದ್ಧಿ ಸಂಶೋಧನಾ ಕೇಂದ್ರ ಸೇರಿದಂತೆ ಭಾರತದ ನೀತಿ ಆಯೋಗದ ನಡ

ಗ್ರಾ. ಪಂ. ಸದಸ್ಯತ್ವ ₹ 17 ಲಕ್ಷಕ್ಕೆ ಹರಾಜು!

Image
ಗ್ರಾ. ಪಂ. ಸದಸ್ಯತ್ವ ₹ 17 ಲಕ್ಷಕ್ಕೆ ಹರಾಜು! Fri, 05/15/2015 (PSGadyal) ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪ್ಪಾರಗಟ್ಟಿ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದ ಮುಂದೆ ಗುರುವಾರ ಗ್ರಾಮಸ್ಥರು ಸಭೆ ಸೇರಿದ್ದರು ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ):  ತಾಲ್ಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾದೂರು ಗ್ರಾಮ ಪಂಚಾಯ್ತಿಗೆ ಸೇರಿದ ನಾಲ್ಕು ಸದಸ್ಯ ಸ್ಥಾನಗಳನ್ನು ಉಪ್ಪಾರಗಟ್ಟಿ ಗ್ರಾಮದ ಜನರು  ₹ 16.93 ಲಕ್ಷಕ್ಕೆ ಹರಾಜು ಹಾಕಿದ್ದಾರೆ! ಗುರುವಾರ ಸದಸ್ಯ ಸ್ಥಾನದ ಆಕಾಂಕ್ಷಿಗಳ ಸಭೆ ನಡೆಸಿದ ಗ್ರಾಮಸ್ಥರು, ಆ ಮೊತ್ತವನ್ನು ನಾಲ್ವರು ಆಕಾಂಕ್ಷಿಗಳಿಂದ ಒಂದು ವರ್ಷದೊಳಗೆ ವಸೂಲಿ ಮಾಡುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ಗ್ರಾಮದ ಪ್ರಸಿದ್ಧ ಶಂಕರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯ ಏಕೈಕ ಉದ್ದೇಶದಿಂದ ಸಭೆ ಸೇರಿದ ಗ್ರಾಮಸ್ಥರು, ಚುನಾವಣೆಗೆ ಅವಕಾಶ ನೀಡದೇ ಆಕಾಂಕ್ಷಿಗಳಿಂದ ದೇಣಿಗೆ ಪಡೆದು ಅವಿರೋಧ ಆಯ್ಕೆ ಮಾಡುವ ತೀರ್ಮಾನ ಕೈಗೊಂಡರು. ಹರಾಜು: ಗ್ರಾಮದ 34 ಆಕಾಂಕ್ಷಿಗಳು ತಲಾ ₹500 ಪಾವತಿಸಿ ಸದಸ್ಯತ್ವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು, ಅಂತಿಮವಾಗಿ ನಾಲ್ವರು ಆಯ್ಕೆಯಾದರು. ಸಾಮಾನ್ಯ ಕ್ಷೇತ್ರದಲ್ಲಿ ಹಿಟ್ನಾಳ್ ಉಮೇಶಪ್ಪ ₹ 5.25ಲಕ್ಷ, ರತ್ನಮ್ಮ ಸೋಮನಗೌಡ ₹ 5.25 ಲಕ್ಷ, ದಾಕ್ಷಾಯಿಣಿ ಹಳ್ಳಿ ಹನುಮಂತಪ್ಪ ₹5.42 ಲಕ್ಷ, ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಎ.ಕೆ. ಬುಳ್ಳಪ್ಪ  ₹1.01

ಭಾರತದ ಶಾಂತಿ ಪಾಲನಾ ಪಡೆಗೆ ವಿಶ್ವಸಂಸ್ಥೆ ಪ್ರಶಸ್ತಿ

ಭಾರತದ ಶಾಂತಿ ಪಾಲನಾ ಪಡೆಗೆ ವಿಶ್ವಸಂಸ್ಥೆ ಪ್ರಶಸ್ತಿ ವಾಷಿಂಗ್ಟನ್‌(ಪಿಟಿಐ):  ವಿಶ್ವಸಂಸ್ಥೆಯ  ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ  ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಇಲ್ಲಿನ ಕ್ಯಾಪಿಟಲ್‌ ಹಿಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಪಡೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸುಮಾರು 1.80 ಲಕ್ಷ ಪಡೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಾರತ ಗಮನಾರ್ಹ ಕೊಡುಗೆ ನೀಡಿದೆ. ಇತರೆ ರಾಷ್ಟ್ರಗಳಿಗಿಂತ ಹೆಚ್ಚಿನ ಪಡೆಗಳನ್ನು ನೀಡಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅಮೆರಿಕ–ಭಾರತ ವಾಣಿಜ್ಯ ಮಂಡಳಿ  ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ವಿಶ್ವಸಂಸ್ಥೆ ರಾಯಭಾರಿ ಅರುಣ್‌ ಕೆ. ಸಿಂಗ್‌ ಪ್ರಶಸ್ತಿ ಸ್ವೀಕರಿಸಿದರು. ವಿಶ್ವಸಂಸ್ಥೆಯ 69 ಕಾರ್ಯಾಚರಣೆಗಳ ಪೈಕಿ 44ಕ್ಕೂ ಅಧಿಕ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆ ಭಾಗವಹಿಸಿದೆ.

ಸಾಮಾಜಿಕ ಭದ್ರತಾ ಯೋಜನೆಗೆ ಒಂದೇ ದಿನ 7ಕೋಟಿ ಜನ ನೋಂದಣಿ.

ಸಾಮಾಜಿಕ ಭದ್ರತಾ ಯೋಜನೆಗೆ ಒಂದೇ ದಿನ 7ಕೋಟಿ ಜನ ನೋಂದಣಿ. (PSGadyal Teacher Vijayapur) ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ -ಪಿಟಿಐ ಚಿತ್ರ ನವದೆಹಲಿ(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಚಾಲನೆ ನೀಡಿದ ಮೂರು ಸಾಮಾಜಿಕ ಭದ್ರತಾ ಯೋಜನೆಗಳಿಗೆ ರಾಷ್ಟ್ರಾದ್ಯಂತ ಒಂದೇ ದಿನ ಏಳು ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ದಿನಕ್ಕೆ ಒಂದು ರೂಪಾಯಿ ಪಾವತಿಸಿ ವಿಮಾ ರಕ್ಷಣೆ ಪಡೆಯುವುದೂ ಸೇರಿದಂತೆ ಮೂರು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆಗೆ ನರೇಂದ್ರ ಮೋದಿ ಅವರು ಈಚೆಗೆ ಚಾಲನೆ ನೀಡಿದ್ದರು. 'ಯೋಜನೆಗೆ ಮೇ 9ರಂದು ಚಾಲನೆ ನೀಡಲಾಗಿದ್ದು, ಮೇ 13ರ ಸಂಜೆವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ 5.19 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ರಾಷ್ಟ್ರದೆಲ್ಲೆಡೆ ಜಿಲ್ಲೆಗಳಲ್ಲಿ ಇದು ಯಶಸ್ಸಿನತ್ತ ಸಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆಗಳಿಗೆ 6.7 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ನಿರ್ವಹಿಸುತ್ತಿದ್ದು, ಐದು ದಿನಗಳಲ್ಲಿ 1.59 ಕೋಟಿ ಜನರ ನೋಂದಣಿ

Achal Kumar Jyoti takes over as new Election Commissioner (tenure 3 yrs)

Image
ನೂತನ ಚುನಾವಣಾ ಆಯುಕ್ತರಾಗಿ ಜ್ಯೋತಿ ನವದೆಹಲಿ: ಗುಜರಾತಿನ ಮಾಜಿ ಮುಖ್ಯ ಕಾರ್ಯದರ್ಶಿ ಅಚಲ್ ಕುಮಾರ್ ಜ್ಯೋತಿ ಅವರು ನೂತನ ಚುನಾವಣಾ ಆಯುಕ್ತರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ತ್ರಿಸದಸ್ಯ ಚುನಾವಣಾ ಆಯೋಗದಲ್ಲಿ ಖಾಲಿಬಿದ್ದಿದ್ದ ಆಯುಕ್ತರ ಎರಡು ಹುದ್ದೆಗಳ ಪೈಕಿ ಒಂದು ಭರ್ತಿಯಾದಂತಾಗಿದೆ. ಜ್ಯೋತಿ ಅವರು ಚುನಾವಣಾ ಆಯೋಗದಲ್ಲಿ ಈದಿನ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 1975ರ ತಂಡದ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಅಧಿಕಾರಿಯಾಗಿರುವ ಜ್ಯೋತಿ 2013ರ ಜನವರಿಯಲ್ಲಿ ಗುಜರಾತಿನ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಅತ್ಯುನ್ನತ ಅಧಿಕಾರಿಯ ಹುದ್ದೆಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ರಾಜ್ಯ ಜಾಗೃತಾ ಕಮೀಷನರ್ ಆಗಿ ಸೇವೆ ಸೇವೆ ಸಲ್ಲಿಸಿದ್ದ ಜ್ಯೋತಿ 1999ರಿಂದ 2004ರವರೆಗೆ ಕಾಂಡ್ಲಾ ಬಂದರು ಟ್ರಸ್ಟ್ ನ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸರ್ದಾರ್ ಸರೋವರ ನರ್ಮದಾ ನಿಗಮ ಲಿಮಿಟೆಡ್ ನ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.