Posts

ಡೈಮಂಡ್ ಲೀಗ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಸ್ವರ್ಣ ಪದಕ ಗೆದ್ದ ಬೋಲ್ಟ್

Image
ಲಂಡನ್: ಆರು ಬಾರಿ ಒಲಿಂಪಿಕ್ ಚಾಂಪಿಯನ್ ಎನಿಸಿಕೊಂಡಿರುವ ಉಸೇನ್ ಬೋಲ್ಟ್ ಮತ್ತೆ ಫಾಮರ್್​ಗೆ ಮರಳಿಸಿದ್ದಾರೆ. ಲಂಡನ್ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಸ್ವರ್ಣ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೋಲ್ಟ್ 2012ರಲ್ಲಿ ನಡೆದ ಒಲಿಂಪಿಕ್ಸ್​ ನಲ್ಲಿ ಇದೇ ಟ್ರ್ಯಾಕ್ ಮೇಲೆ ಮೂರು ಸ್ವರ್ಣ ಪದಕ ಗೆದ್ದುಕೊಂಡಿದ್ದರು. 100 ಮೀಟರ್ ದೂರವನ್ನು ಕೇವಲ 9.87 ಸೆಕೆಂಡ್​ಗಳಲ್ಲಿ ತಲುಪಿ ಅಚ್ಚರಿ ಮೂಡಿಸಿದ್ದರು. ಈಗಲೂ ಇದೇ ಸಮಯದಲ್ಲಿ 100 ಮೀಟರ್ ಗುರಿ ತಲುಪಿ ಸ್ವರ್ಣ ಸಂಪಾದಿಸಿದ್ದಾರೆ.ಸ ನಂತರ ಪ್ರತಿಕ್ರಿಯಿಸಿರುವ ಬೋಲ್ಟ್, ಹೀಟ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಆದರೆ ಫೈನಲ್​ನಲ್ಲಿ ನಿರೀಕ್ಷೆಂತೆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅದು ಬೇಸರವನ್ನುಂಟು ಮಾಡಿತು ಎಂದಿದ್ದಾರೆ. 9.9 ಸೆಕೆಂಡ್​ಗಳಲ್ಲಿ ಗುರಿ ತಲುಪಿದ ಅಮೆರಿಕದ ಮೈಕೆಲ್ ರೋಜರ್ಸ್ ಬೆಳ್ಳಿ, ಇನ್ನೊಬ್ಬ ಜಮೈಕಾ ಅಥ್ಲೀಟ್ ಕೆಮರ್ ಬೈಲಿ ಕಂಚು ಸಂಪಾದಿಸಿದ್ದಾರೆ. ಇನ್ನು ಬ್ರಿಟನ್​ನ ಜನಪ್ರಿಯ ಅಥ್ಲೀಟ್ ಮೊ ಫರ್ಹ ಡೋಪ್ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಸ್ಪರ್ಧಾ ಕಣಕ್ಕೆ ಧುಮುಕಿ 3000 ಮೀಟರ್ ಓಟದಲ್ಲಿ ಬಂಗಾರ ಪದಕ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

NEXT YEAR ONWARDS RTE SEATS ONLY FOR BPL CARDHOLDERS - KIMMANE RATNAKAR

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ ಸೀಟು ಬೆಂಗಳೂರು,ಜು.25-ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೇ ಯುಕೆಜಿ ಶಿಕ್ಷಣ ಆರಂಭಿಸುವ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಕೊಡಿಸುವ ಮಹತ್ವದ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲು ಆದಾಯ ಪ್ರಮಾಣಪತ್ರವನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಇದು ಬಹಳಷ್ಟು ದುರುಪಯೋಗವಾಗುತ್ತಿದೆ. 10 ಲಕ್ಷ ಆದಾಯ ಇರುವವರು ಸುಲಭವಾಗಿ 35 ಸಾವಿರ ರೂ.ಆದಾಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ ಆರ್ಹರಿಗೆ ಅವಕಾಶಗಳು ಸಿಗುತ್ತಿಲ್ಲ. ನಾವು ಎಲ್ಲಾ ಸೀಟುಗಳನ್ನು ಭರ್ತಿ ಮಾಡುವುದಕ್ಕಿಂತಲೂ ಎಷ್ಟು ಮಂದಿ ಅರ್ಹರಿಗೆ ಸೀಟು ಕೊಡಿಸಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಜತೆಗೆ ಸರ್ಕಾರವೇ ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಉಂಟಾಗಿದೆ. ಹೀಗಾಗಿ ನಿಯಮಾವಳಿಗಳನ್ನು ಬದ

Mandya ZP CEO Rohini Sindhuri launches M-Aasthi android app to issue land records and to put and end to delay in providing land records to rural areas. M aasthi is an Android-based mobile application in the district.

ಎಂ- ಆಸ್ತಿ ಅಪ್ ಮೂಲಕ ಇ ಖಾತಾ ಪಡೆಯಿರಿ: ರೋಹಿಣಿ Posted by: Mahesh | Fri, Jul 24, 2015, 17:24 [IST] ಮಂಡ್ಯ, ಜುಲೈ 24: ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ಗ್ರಾಮೀಣ ಭಾಗದಲ್ಲಿ ಆಸ್ತಿ ಪತ್ರ ಪಡೆಯಲು ಈಗ ಸುಲಭ ಹಾಗೂ ಸರಳ ವಿಧಾನವನ್ನು ಪರಿಚಯಿಸಿದ್ದಾರೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ. ಎಂ ಆಸ್ತಿ ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ ಸದ್ಯಕ್ಕೆ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಲಭ್ಯವಿದ್ದು, ಸುಲಭವಾಗಿ ಆಸ್ತಿ ಪಾಸ್ತಿ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದುಕೊಳ್ಳಬಹುದಾಗಿದೆ ಎಂದು ರೋಹಿಣಿ ಹೇಳಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಅಪ್ಲಿಕೇಷನ್ ಇದಾಗಿದೆ. ಈ ಎಂ -ಆಸ್ತಿ ಅಪ್ಲಿಕೇಷನ್ ಬಳಸಿಕೊಂಡು ಸುಲಭವಾಗಿ ಇ ಖಾತಾವನ್ನು ಪಡೆದುಕೊಳ್ಳಬಹುದು ಎಂದು ರೋಹಿಣಿ ವಿವರಿಸಿದರು. ಮಂಡ್ಯ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಹೊಸ ಯಶಸ್ಸು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಸಿಇಒ ರೋಹಿಣಿ ಅವರು ಮಾನ್ಯತೆ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಎಂ-ಆಸ್ತಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ.

1401 ಸರ್ಕಾರಿ ವೈದ್ಯರ ನೇಮಕಕ್ಕೆ ಅಧಿಸೂಚನೆ

1401 ಸರ್ಕಾರಿ ವೈದ್ಯರ ನೇಮಕಕ್ಕೆ ಅಧಿಸೂಚನೆ (PSGadyal Teacher Vijayapur). ವಿಧಾನಸಭೆ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1401 ವೈದ್ಯರು, ತಜ್ಞ ವೈದ್ಯರು ಮತ್ತು ದಂತವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ ಅಧಿಸೂಚನೆ ಪ್ರಕಟಿಸಿದೆ. ಗುರುವಾರ ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್‌ ಈ ವಿಷಯ ಪ್ರಕಟಿಸಿದರು. ವೈದ್ಯರ ನೇಮಕಾತಿ ಕುರಿತಂತೆ ಕೆಪಿಎಸ್‌ಸಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್‌ 10 ಕೊನೆಯ ದಿನ. ಅರ್ಜಿ ಶುಲ್ಕ ಪಾವತಿಸಲು ಆ. 10 ಕಡೆಯ ದಿನವಾಗಿದೆ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 983 ತಜ್ಞ ವೈದ್ಯರು, 331 ಎಂಬಿಬಿಎಸ್‌ ವೈದ್ಯರು ಮತ್ತು 87 ದಂತ ವೈದ್ಯ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಇದಕ್ಕಾಗಿ ವಿಶೇಷ ನೇಮಕಾತಿ ನಿಯಮ ರೂಪಿಸಿ ಕೆಪಿಎಸ್‌ಸಿಗೆ ನೀಡಲಾಗಿದ್ದು, ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, 2-3 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಪರೀಕ್ಷೆ, ಸಂದರ್ಶನ ಇಲ್ಲ: ಹೊಸ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಲಿಖೀತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ ತೇರ್ಗಡೆಯಾಗಲು ನೇಮಕಾತಿ ನಂತರ 2 ವರ್ಷ ಕಾಲಾವಕಾಶ ನೀಡ

ಬಿಪಿಎಲ್‌ ಕಾರ್ಡುದಾರರಿಗೆ ಇನ್ನು ಎಸ್ಸೆಮ್ಮೆಸ್‌ನಲ್ಲಿ ಮಾಹಿತಿ

ಬಿಪಿಎಲ್‌ ಕಾರ್ಡುದಾರರಿಗೆ ಇನ್ನು ಎಸ್ಸೆಮ್ಮೆಸ್‌ನಲ್ಲಿ ಮಾಹಿತಿ Educationgknews. ವಿಧಾನಸಭೆ: ಪಡಿತರ ವ್ಯವಸ್ಥೆಯಡಿ ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಆಯಾ ತಿಂಗಳು ಸಿಗುವ ಅಕ್ಕಿ, ಗೋಧಿ, ಸೀಮೆ ಎಣ್ಣೆ, ತಾಳೆಎಣ್ಣೆ, ಉಪ್ಪು ಎಷ್ಟು? ಅದಕ್ಕೆ ಪಾವತಿಸಬೇಕಾದ ದರ ಏನು ಎಂಬ ಬಗ್ಗೆ ಇನ್ನು ಮುಂದೆ ಬಿಪಿಎಲ್‌ ಕಾರ್ಡ್‌ದಾರರ ಮೊಬೈಲ್‌ಗೆ ಪ್ರತಿ ತಿಂಗಳು ಇಲಾಖೆಯಿಂದ ಎಸ್‌ಎಂಎಸ್‌ ಬರಲಿದೆ. ಹೌದು, ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚು ದರ ವಸೂಲಿ ಮಾಡುವುದು, ನಿಗದಿತ ಪ್ರಮಾಣದಲ್ಲಿ ಪಡಿತರ ವಿತರಿಸದೇ ಇರುವುದನ್ನು ತಡೆಗಟ್ಟಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ವ್ಯವಸ್ಥೆ ಜಾರಿಗೆ ತರಲಿದೆ. ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಜೆಡಿಎಸ್‌ ಸದಸ್ಯ ಅಖಂಡ ಶ್ರೀನಿವಾಸಮೂರ್ತಿ ಅವರ ಪರವಾಗಿ ಗೋಪಾಲಯ್ಯ ಕೇಳಿದ ಪ್ರಶ್ನೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಈ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ಜತೆಗೆ ಕಾರ್ಡ್‌ದಾರರ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸಲಾಗುತ್ತಿದ್ದು, ಪ್ರಸ್ತುತ 80 ಲಕ್ಷ ಮಂದಿ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ಲಭ್ಯವಿರುವ ಪಡಿತರ ಮತ್ತು ಅದಕ್ಕೆ ಎಷ್ಟು ದರ ಪಾವತಿಸಬೇಕು ಎಂಬ ಬಗ್ಗೆ ಈ ಮೊಬೈಲ್‌ ಸಂಖ್ಯೆಗಳಿಗೆ ಎಸ್‌ಎಂಎಸ್‌ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ ಎಂದರು. ಅಕ್ರಮ ಬಿಪಿಎಲ್‌ ಕಾರ್

ಫಾರ್ಚ್ಯೂನ್ ಪಟ್ಟಿಗೆ ಭಾರತದ 7 ಕಂಪೆನಗಳು

Image
ನ್ಯೂಯಾರ್ಕ್ (ಪಿಟಿಐ): ಫಾರ್ಚ್ಯೂನ್ ಸಿದ್ಧಪಡಿಸಿರುವ ವಿಶ್ವದ 500 ಬೃಹತ್ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಏಳು ಕಂಪೆನಿಗಳೂ ಸ್ಥಾನ ಪಡೆದುಕೊಂಡಿವೆ. ಭಾರತೀಯ ತೈಲ ನಿಗಮ (ಐಒಸಿ), ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಎಚ್ಪಿಸಿಎಲ್), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) 'ಫಾರ್ಚ್ಯೂನ್-500 ಲಾರ್ಜೆಸ್ಟ್ ಕಂಪೆನೀಸ್' ಪಟ್ಟಿಗೆ ಸೇರಿವೆ. ವಿಶ್ವದ ಈ 500 ಬೃಹತ್ ಕಂಪೆನಿಗಳು 2014ರಲ್ಲಿ ಒಟ್ಟಾರೆಯಾಗಿ 31.2 ಲಕ್ಷ ಕೋಟಿ ಅಮೆರಿಕನ್ ಡಾಲರ್ ವರಮಾನ ಗಳಿಸಿದ್ದು, ಒಟ್ಟು 1.70 ಲಕ್ಷ ಕೋಟಿ ಡಾಲರ್ಗಳಷ್ಟು ನಿವ್ವಳ ಲಾಭವನ್ನೂ ಗಳಿಸಿವೆ. 500 ಕಂಪೆನಿಗಳು ವಿಶ್ವದ 36 ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದು, ಒಟ್ಟಾರೆಯಾಗಿ 65 ಲಕ್ಷ ಮಂದಿಗೆ ಉದ್ಯೋಗಾವಕಾಶ ನೀಡಿವೆ. ವಾಲ್ಮಾರ್ಟ್ ಪ್ರಥಮ: 'ಫಾರ್ಚ್ಯೂನ್-500 ಲಾರ್ಜೆಸ್ಟ್ ಕಂಪೆನೀಸ್' ಪಟ್ಟಿಯಲ್ಲಿ ವಾಲ್ಮಾರ್ಟ್ ಮೊದಲ ಸ್ಥಾನದಲ್ಲಿದೆ. ಚೀನಾದ ತೈಲ ಸಂಸ್ಕರಣೆ ಕಂಪೆನಿ ಸಿನ್ ಒಪೆಕ್ ಗ್ರೂಪ್ ಎರಡನೇ ಸ್ಥಾನದಲ್ಲಿದೆ. ನೆದರ್ಲೆಂಡ್ನ ರಾಯಲ್ ಡಚ್ ಷೆಲ್, ಚೀನಾ ನ್ಯಾಷನಲ್ ಪೆಟ್ರೋಲಿಯಂ, ಎಕ್ಸಾನ್ ಮೊಬಿಲ್ ನಂತರದ ಸ್ಥಾನಗಳಲ

E-SIMCARD:Samsung and others look to create a single e - SIM card for all carriers

ಶೀಘ್ರವೇ ಸಿಮ್ ಕಾರ್ಡ್ ಜಾಗಕ್ಕೆ ಇ-ಸಿಮ್? ಲಂಡನ್: ಪೇಜರ್, ಕಾರ್ ಫೋನ್ ನಂತೆಯೇ ಸಿಮ್ ಕಾರ್ಡ್ ಕೂಡ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ. ಸಿಮ್ ಕಾರ್ಡ್ಗಳ ಜಾಗದಲ್ಲಿ ಇ-ಸಿಮ್ ಗಳನ್ನು ತರಲು ಆ್ಯಪಲ್ ಮತ್ತು ಸ್ಯಾಮ್ ಸಂಗ್ ಚಿಂತನೆ ನಡೆಸುತ್ತಿದೆ. ಮೊಬೈಲ್ ಟೆಲಿಕಾಂ ಇಂಡಸ್ಟ್ರಿಯನ್ನು ಪ್ರತಿನಿಧಿಸುತ್ತಿರುವ ಜಿಎಸ್ಎಂಎ ಜತೆ ಈ ಎರಡೂ ಮೊಬೈಲ್ ಸಂಸ್ಥೆಗಳು ಈ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಎಲೆಕ್ಟ್ರಾನಿಕ್ ಸಿಮ್ ಕಾರ್ಡ್ಗಳ ಬಳಕೆಯು ಬಹಳ ಸರಳವಾಗಿದ್ದು, ಗ್ರಾಹಕರು ಸುಲಭವಾಗಿ ಮೊಬೈಲ್ ನೆಟ್ ವರ್ಕ್ಗಳನ್ನು ಅದಲು ಬದಲು ಮಾಡಬಹುದು. ಐಪ್ಯಾಡ್ ಏರ್ 2 ಜೊತೆಗೆ ಬಿಡುಗಡೆಯಾದ ಆ್ಯಪಲ್ ಸಿಮ್ ನಲ್ಲಿ ಬಳಸಲಾದ ತಂತ್ರಜ್ಞಾನದ ಮಾದರಿಯನ್ನೇ ಇ-ಸಿಮ್ ನಲ್ಲೂ ಬಳಸಲಾಗುತ್ತದೆ. ಹೀಗಾಗಿ ಗ್ರಾಹಕರು ಡಾಟಾ ನೆಟ್ವರ್ಕ್ ಅನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳ ಬಹುದು. ಇ-ಸಿಮ್ ಅನ್ನು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ನಲ್ಲೂ ಬಳಸಬಹುದಾಗಿದೆ. ಮುಂದಿನ ತಲೆಮಾರಿನ ಎಲ್ಲ ಫೋನುಗಳೂ ಇ-ಸಿಮ್ಅನ್ನು ಒಳಗೊಂಡಿರಲಿದೆ. 2016ರ ವೇಳೆಗೆ ಹೊಸ ಸಿಮ್ ಚಾಲ್ತಿಗೆ ಬರಬಹುದು ಎಂದು ಜಿಎಸ್ಎಂಎ ತಿಳಿಸಿದೆ.