Posts

ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಕುರಿತ ಹಾಲಿವುಡ್ ಸಿನಿಮಾ "A MAN WHO KNEW INFINITY"ಸಿದ್ಧ

Image

APPLY ONLINE FOR DEPARTMENTAL EXAMINATION 2016 I-SESSION NOW..

Image
ಸೂಚನೆ : ರಾಜ್ಯ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ಮಂಡಳಿ / ನಿಗಮ / ವಿಶ್ವವಿದ್ಯಾಲಯಗಳಲ್ಲಿ ಖಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು:* #use this link kpscapps1.com/kpsc_dept_1-2016/

ವಸತಿ ಶಾಲೆ ಮತ್ತು ಹಾಸ್ಟೇಲ್ಗಳಲ್ಲಿ 6915ಶಿಕ್ಷಕರ ನೇಮಕಾತಿಗೆ ಕ್ರಮ:*

Image

ಜೊಜಿಲಾ ಕಣಿವೆಯಲ್ಲಿ ಸುರಂಗಮಾರ್ಗ:

Image

2016-17 ನೇ ಸಾಲಿಗಾಗಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Image

Job info: ಧಾರವಾಡ ಜಿಲ್ಲೆಯಲ್ಲಿ RBSK ವೈದ್ಯಾಧಿಕಾರಿ :30 ಹುದ್ದೆಗಳು (click below)

Image

ಮಿಂಚಿದ ಚೆಟ್ರಿ: ಭಾರತದ ಮಡಿಲಿಗೆ ಸ್ಯಾಫ್ ಕಪ್

Image
4 Jan, 2016 ತಿರುವನಂತಪುರ (ಐಎಎನ್ಎಸ್): ಸುನಿಲ್ ಚೆಟ್ರಿಯ ಚಾಕಚಕ್ಕತೆ ಭಾನುವಾರದ ಸಂಜೆಗೆ ವಿಜಯೋತ್ಸವದ ರಂಗು ತುಂಬಿತು. ಭಾರತ ಫುಟ್ಬಾಲ್ ತಂಡವು 'ಸ್ಯಾಫ್ ಕಪ್'ಗೆ ಮುತ್ತಿಕ್ಕಿತು. ಕ್ರೀಡಾಂಗಣದಲ್ಲಿ ತುಂಬಿದ್ದ ಅಭಿ ಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಫೈನಲ್ನಲ್ಲಿ ಭಾರತ ತಂಡವು 2–1 ಗೋಲುಗಳಿಂದ ಬಲಿಷ್ಠ ಆಫ್ಘಾನಿಸ್ಥಾನ ತಂಡವನ್ನು ಮಣಿಸಿತು. ಜೆಜೆ ಲಾಲ್ ಪೆಕ್ಲುವಾ (72ನಿ) ಮತ್ತು ಪಂದ್ಯದ ಹೆಚ್ಚುವರಿ ಅವಧಿಯ 11ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಗಳಿಸಿದ ಗೋಲುಗಳು ಭಾರತ ತಂಡಕ್ಕೆ ಜಯದ ಕಾಣಿಕೆ ನೀಡಿದವು. 2013ರ ಟೂರ್ನಿಯ ಫೈನಲ್ನಲ್ಲಿ ಇದೇ ತಂಡದ ಎದುರು ಅನುಭವಿಸಿದ್ದ ಸೋಲಿಗೆ ಭಾರತ ಮುಯ್ಯಿ ತೀರಿಸಿ ಕೊಂಡಿತು. ಆತಿಥೆಯ ತಂಡವು ಸ್ಯಾಫ್ ಕಪ್ ಗೆದ್ದಿದ್ದು ಇದು ಏಳನೇ ಬಾರಿ. ಕಠಿಣ ಸವಾಲು: ಫಿಫಾ 150ನೇ ಸ್ಥಾನ ದಲ್ಲಿರುವ ಆಫ್ಘನ್ ತಂಡವು ಸುಲಭ ವಾಗಿ ಶರಣಾಗಲಿಲ್ಲ. ಆತಿಥೇಯ ಭಾರತವೂ ಜಗ್ಗಲಿಲ್ಲ. ಪಂದ್ಯದ ಮೊದಲ ಎಪ್ಪತ್ತು ನಿಮಿಷಗಳವರೆಗೂ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪ್ರಮುಖ ಆಟಗಾರ ರಾಬಿನ್ ಸಿಂಗ್ ಗಾಯಗೊಂಡು ಕಣಕ್ಕೆ ಇಳಿಯಲಿಲ್ಲ. ಅವರ ಕೊರತೆಯಿಂದ ತಂಡಕ್ಕೆ ಹಿನ್ನಡೆಯಾಗುವ ಆತಂಕ ಕೋಚ್ ಸ್ಟೀಫನ್ ಕಾನ್ಸ್ಟೆಂಟೈನ್ ಅವರಿಗೆ

ಹಿಂದು ಪಂಚಾಂಗ (ಕ್ಯಾಲೆಂಡರ್ ):**-:

ಪಂಚಾಂಗ (ಆಂಗ್ಲ: ಕ್ಯಾಲೆಂಡರ್) ಕಾಲದ ವಿಭಾಗಗಳನ್ನು ಕ್ರಮಬದ್ಧವಾಗಿ ಸಂಘಟಿಸುವ ಒಂದು ಪದ್ದತಿ. ಸಾಮಾನ್ಯವಾಗಿ ಖಗೋಳವಿದ್ಯೆಯ ವೀಕ್ಷಣೆಗಳ ಆಧಾರದ ಮೇಲೆ ಇವನ್ನು ರಚಿಸಲಾಗುತ್ತದೆ. #ಹಿಂದೂ #ಪಂಚಾಂಗ ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ , ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ. #ತಿಥಿಗಳು ತಿಥಿಗಳು ಮೂವತ್ತು(30). 30 ತಿಥಿಗಳನ್ನು ಎರಡುಪಕ್ಷಗಳಲ್ಲಿ 15ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ (ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ 15 ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ. ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ 15 ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನಂತೆ ಇರುತ್ತದೆ . #ಶುಕ್ಲಪಕ್ಷ : ಪಾಡ್ಯ (1) ಬಿದಿಗೆ (2) ತದಿಗೆ (3) ಚೌತಿ (4) ಪಂಚಮಿ (5) ಷಷ್ಠಿ (6 ) ಸಪ್ತಮಿ (7) ಅಷ್ಟಮಿ (8) ನವಮಿ (9) ದಶಮಿ (10) ಏಕಾದಶಿ (11) ದ್ವಾದಶಿ (12) ತ್ರಯೋದಶಿ (13) ಚತುರ್ದಶಿ (14) ಹುಣ್ಣಿಮೆ (15) #ಕೃಷ್ಣಪಕ್ಷ : ಪಾಡ್ಯ (1) ಬಿದಿಗೆ (2) ತ

K.S.R.TC.ಯ ಚಾಲಕ, ದರ್ಜೆ- 3 ,ಹುದ್ದೆಗಳ ಸಂಭವನೀಯ ಪಟ್ಟಿ ದಿ. 01/01/2016 ರಂದು ಪ್ರಕಟಿಸಲಾಗಿದೆ. (23/03/2015ರ ಅನುಸಾರ)

Image

ದಿವ್ಯಾಂಗ ಪರ್ವತಾರೋಹಿ ಅರುಣಿಮಾ ಅರ್ಜೆಂಟೀನಾದ ಅಕಾಂಗೊ ಪರ್ವತವೇರುವ ಮೂಲಕ ಮತ್ತೊಂದು ಸಾಹಸ!

Image
BY ವಿಜಯವಾಣಿ ನ್ಯೂಸ್ · JAN 2, 2016 ಲಖನೌ : ದೇಶದ ಖ್ಯಾತ ದಿವ್ಯಾಂಗ ಪರ್ವತಾರೋಹಿ ಅರುಣಿಮಾ ಸಿನ್ಹಾ ಮೌಂಟ್ ಎವರೆಸ್ಟ್ ಪರ್ವತ ಏರಿ ದಾಖಲೆ ನಿರ್ವಿುಸಿದ್ದು ಇತಿಹಾಸ. ಈಗ ಮತ್ತೊಂದು ಸಾಹಸದ ಮೂಲಕ ಅವರು ಸುದ್ದಿಯಾಗಿದ್ದಾರೆ. ಅರ್ಜೆಂಟೀನಾದ ಅಕಾಂಗೊ ಪರ್ವತವೇರುವ ಮೂಲಕ ವಿಶ್ವದ ಗಮನ ಸೆಳೆಯುವಲ್ಲಿ ಅರುಣಿಮಾ ಯಶಸ್ವಿಯಾಗಿದ್ದಾರೆ. ಎರಡನೇ ಮೌಂಟ್ ಎವರೆಸ್ಟ್ ಎಂದೇ ಪ್ರಸಿದ್ಧಗೊಂಡಿರುವ ಈ ಪರ್ವತವನ್ನು ಎಡಗಾಲಿನ ನ್ಯೂನತೆ ಇರುವ ಅರುಣಿಮಾ ಏರಿ ಹೊಸದೊಂದು ಸಾಧನೆ ಮಾಡಿದ್ದಾರೆ. ಡಿಸೆಂಬರ್ 12 ರಂದು ಪರ್ವತ ಹತ್ತಲು ಶುರು ಮಾಡಿ ಡಿಸೆಂಬರ್ 25 ರಂದು ತುತ್ತ ತುದಿ ತಲುಪಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಅಕಾಂಗೊ ಪರ್ವತ ಸಮುದ್ರ ಮಟ್ಟದಿಂದ 6960.8 ಮೀಟರ್ ಎತ್ತರವಿದ್ದು, ಏಷ್ಯೇತರ ಬೆಟ್ಟಗಳಲ್ಲಿಯೆ ಅತಿ ದೊಡ್ಡದೆನಿಸಿಕೊಂಡಿದೆ. ಸಾಧನೆಗೆ ಸಂತಸ ವ್ಯಕ್ತಪಡಿಸಿದ ಅರುಣಿಮಾ, ನಾನು ಜಗತ್ತಿನ 7 ದೊಡ್ಡ ಪರ್ವತವೇರುವ ಗುರಿ ಹೊಂದಿದ್ದೇನೆ. ಅದರಲ್ಲಿ 5 ನೇ ಪರ್ವತ ಇದಾಗಿದೆ. ಜತೆಗೆ 5 ಪರ್ವತಗಳನ್ನೇರಿದ ಪ್ರಥಮ ವಿಕಲಾಂಗ ಮಹಿಳೆ ಎಂದು ವಿಶ್ವ ದಾಖಲೆ ಬರೆದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅರುಣಿಮಾಗೆ ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ 24 ಹಾಗು ವಿಜಯಪುರ ಜಿಲ್ಲೆಯಲ್ಲಿ 16 ವೈದ್ಯಾಧಿಕಾರಿ ಹುದ್ದೆಗಳ (ಗುತ್ತಿಗೆ ಆಧಾರ) ನೇಮಕ ಕುರಿತ ಪತ್ರಿಕಾ ಪ್ರಕಟಣೆ:

Image

ತಿಂಗಳ ತಿರುಳು: ಜನೆವರಿ 2016 (TINGALA TIRULU :JANUARY 2016)

Image

ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಹೊಸ ವರ್ಷಕ್ಕೆ ಭಾರತೀಯ ಪೌರತ್ವ:-

Image
ನಾಳೆಯಿಂದ ಅದ್ನಾನ್ ಸಾಮಿ ಭಾರತೀಯ 31 Dec, 2015 ನವದೆಹಲಿ (ಏಜೆನ್ಸೀಸ್): ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಹೊಸ ವರ್ಷಕ್ಕೆ ಭಾರತೀಯ ಪೌರತ್ವ ಹೊಂದಲಿದ್ದಾರೆ. ಅದ್ನಾನ್ ಸಾಮಿ ಅವರಿಗೆ 2016ರ ಜನವರಿ 1ರಿಂದ ಭಾರತದ ಪೌರತ್ವ ದೊರೆಯಲಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಮಾನವೀಯತೆಯ ನೆಲೆಯಲ್ಲಿ ತಮಗೆ ಭಾರತದ ಪೌರತ್ವ ನೀಡಬೇಕೆಂದು ಕೋರಿ ಅದ್ನಾನ್ ಸಾಮಿ ಅವರು 2015ರ ಮೇ 26ರಂದು ಕೇಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಸಿಲಿಂಡರ್ ಗ್ಯಾಸ್ ಸೋರಿಕೆಯಾದರೆ ನಾಳೆಯಿಂದ 1906 ಸಂಖ್ಯೆಗೆ ಕರೆ ಮಾಡಿ

Image
ನವದೆಹಲಿ, ಡಿ.31-ಇನ್ನು ಮುಂದೆ ನಿಮ್ಮ ಮನೆಯ ಅಡಿಗೆ ಅನಿಲ (ಸಿಲಿಂಡರ್ ಗ್ಯಾಸ್) ಸೋರಿಕೆಯಾಗುತ್ತಿದ್ದರೆ ಗಾಬರಿಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ 1906 ಸಂಖ್ಯೆಗೆ ಕರೆ ಮಾಡಿದರೆ ಸಾಕು ತಕ್ಷಣವೇ ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ. ಆಂಬುಲೆನ್ಸ್ ಹಾಗೂ ಪೊಲೀಸರ ಸಹಾಯ ಪಡೆಯಲು 100 ಸಂಖ್ಯೆಗೆ ಕರೆ ಮಾಡಿದರೆ ಹೇಗೆ ಸಹಾಯಕ್ಕೆ ಬರುತ್ತಾರೋ ಅದೇ ರೀತಿ ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಸಾಕು. ಇದೀಗ ಕೇಂದ್ರ ಸರ್ಕಾರ ಆಂಬುಲೆನ್ಸ್ ಮತ್ತು ಪೊಲೀಸ್ ಸಹಾಯಕವಾಣಿ ಮಾದರಿಯಲ್ಲಿ ಎಲ್ಪಿಜಿ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಸಹಾಯವಾಣಿಯೊಂದನ್ನು ಆರಂಭಿಸಿದೆ. 1906 ಎಲ್ಪಿಜಿಯ ನೂತನ ಸಹಾಯವಾಣಿಯಾಗಿದೆ. ನಿಮ್ಮ ಮನೆಯಲ್ಲಿ ತಾಂತ್ರಿಕ ಇಲ್ಲವೇ ಬೇರ್ಯಾಜವುದೋ ಕಾರಣಗಳಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದರೆ ಈ ಸಹಾಯವಾಣಿಗೆ ಕರೆ ಮಾಡಬಹುದು. ಇತ್ತೀಚೆಗೆ ದೇಶದಲ್ಲಿ ಎಲ್ಪಿಜಿ ಸೋರಿಕೆಯಿಂದ ಅನೇಕರು ಪ್ರಾಣ ಕಳೆದುಕೊಂಡು ಶಾಶ್ವತ ದೃಷ್ಟಿಹೀನ ಹಾಗೂ ಅಂಗವೈಕಲ್ಯಕ್ಕೂ ತುತ್ತಾಗಿದ್ದಾರೆ. ಸೋರಿಕೆಯನ್ನು ತಡೆಗಟ್ಟುವುದನ್ನು ತಿಳಿಯದ ಕೆಲವರು ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಇದನ್ನು ಅರಿತ ಕೇಂದ್ರ ಸರ್ಕಾರ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಸಹಾಯವಾಣಿಯನ್ನು ಆರಂಭಿಸಲು ಮುಂದಾಗಿದ್ದಾರೆ. ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಇತ್ತೀ

ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗ ಸೇವೆಗೆ ಸಿದ್ಧ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ ಭಾರತೀಯ ಎಂಜಿನಿಯರ್ ಗಳ ಸಾಧನೆ,:*

Image
ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗ (ಸಂಗ್ರಹ ಚಿತ್ರ) ಶ್ರೀನಗರ: ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಕೊರೆಯಲಾಗಿರುವ ಸುಮಾರು 9 ಕಿ.ಮೀ ದೂರದ ರಸ್ತೆ ಸುರಂಗ ಮಾರ್ಗವೊಂದು ಭಾರತೀಯ ಎಂಜಿನಿಯರ್ ಗಳನ್ನು ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿದೆ. ಶ್ರೀನಗರದಿಂದ ಸುಮಾರು 170 ಕಿ.ಮೀ ದೂರದಲ್ಲಿ ಈ ಸುರಂಗ ಮಾರ್ಗವನ್ನು ಕೊರೆಯಲಾಗಿದ್ದು, ಸುಮಾರು 9 ಕಿ.ಮೀ ದೂರದ ರಸ್ತೆಗೆ ಈ ವರೆಗೂ ಸುಮಾರು 2, 500 ಕೋಟಿ ರು. ವ್ಯಯಿಸಲಾಗಿದೆ. ದೇಶದ ಅತಿದೊಡ್ಡ ರಸ್ತೆ ಸುರಂಗ ಮಾರ್ಗವೆಂದೇ ಖ್ಯಾತಿಗಳಿಸಿರುವ ಈ ರಸ್ತೆ ಮುಂಬರುವ ಜುಲೈ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಆ ಮೂಲಕ ಜಮ್ಮು ಮತ್ತು ಶ್ರೀನಗರ ನಡುವಿನ ರಸ್ತೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ಇದಕ್ಕೂ ಮೊದಲು ಜಮ್ಮು ಮತ್ತು ಶ್ರೀನಗರ ನಡುವೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಇದೆಯಾದರೂ ಇಲ್ಲಿ ಸುಮಾರು 30 ಕಿ.ಮೀ ಸುತ್ತಿಕೊಂಡು ಹೋಗುವ ದಾರಿಯಾಗಿತ್ತು. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿತ್ತು. ಇದೀಗ ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕ ಸುಮಾರು 30 ಕಿ.ಮೀ ದೂರದ ಪ್ರಯಾಣ ಕೇವಲ 9 ಕಿ.ಮೀ ಇಳಿಯಲಿದೆ. ಪ್ರವಾಸೋಧ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ

ಕೋರ್ಟ್ ಆವರಣದ ಬಳಿ ಟೀ ಮಾರುವವನ ಮಗಳು ನ್ಯಾಯಾಧೀಶೆಯಾದಳು!

Image
ಈಕೆಯ ಹೆಸರು ಶ್ರುತಿ. ಪಂಜಾಬ್ನ ನಾಕೋದರ್ ನಿವಾಸಿಯಾಗಿರುವ ಈಕೆ ಪಂಜಾಬ್ ಸಿವಿಲ್ ಸರ್ವೀಸ್ನ ನ್ಯಾಯಾಧೀಶ ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶೆಯಾಗಿದ್ದಾಳೆ. ಈಕೆಯ ಅಪ್ಪ ಸುರೇಂದರ್ ಕುಮಾರ್ ಜಲಂಧರ್ ಕೋರ್ಟ್ ಆವರಣ ಬಳಿ ಟೀ ಮಾರುತ್ತಿದ್ದಾರೆ. ಟೀ ಮಾರುವವನ ಮಗಳು ಶ್ರುತಿ ಉನ್ನತ ವಿದ್ಯಾಭ್ಯಾಸ ಪಡೆದು ನ್ಯಾಯಾಧೀಶೆಯಾಗುವ ಮೂಲಕ ನಾಡಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಿದ್ದಾಳೆ. ಸ್ಟೇಟ್ ಪಬ್ಲಿಕ್ ಸ್ಕೂಲ್ನಲ್ಲಿ ಕಲಿತ ಶ್ರುತಿ ಜಿಎನ್ಡಿಯು ಜಲಂಧರ್ ನಲ್ಲಿ ಕಾನೂನು ವ್ಯಾಸಂಗ ಮಾಡಿ ಪಂಜಾಬ್ ವಿವಿಯಿಂದ ಎಲ್ಎಲ್ಎಂ ಪದವಿ ಪಡೆದಿದ್ದಳು. ಮನೆಯಲ್ಲಿ ಬಡತನವಿದ್ದರೂ ಶ್ರುತಿಯ ಕಲಿಕೆಯನ್ನು ಇದ್ಯಾವುದೂ ಬಾಧಿಸಲೇ ಇಲ್ಲ. ಜ್ಯುಡಿಷ್ಯಲ್ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ ಮೊದಲ ಪ್ರಯತ್ನದಲ್ಲೇ ಪಂಜಾಬ್ ಸಿವಿಲ್ ಸರ್ವೀಸ್ (ಜ್ಯುಡಿಷ್ಯಲ್) ಪರೀಕ್ಷೆಯನ್ನು ಪಾಸು ಮಾಡಿದ್ದಾಳೆ. ನನಗೆ ಸಿಕ್ಕಿದ ಅತೀ ದೊಡ್ಡ ಉಡುಗೊರೆ ಇದು. ಆಕೆ ತನ್ನ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾಳೆ ಎಂದು ನನಗೆ ಗೊತ್ತಿತ್ತು. ಆದರೆ ಆಕೆ ನ್ಯಾಯಾಧೀಶೆಯಾಗುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ ಅಂತಾರೆ ಶ್ರುತಿಯ ಅಪ್ಪ ಸುರೇಂದರ್ ಕುಮಾರ್. ಶ್ರುತಿಯ ಸಾಧನೆಗೆ ಸಲಾಂ...

ಅಮಿತಾಭ್ ಕಾಂತ:* ನೀತಿ ಆಯೋಗದ ನೂತನ ಸಿಇಒ

Image
ನೀತಿ ಆಯೋಗಕ್ಕೆ ಹೊಸ ಸಿಇಒ:* amitabh-kant ಹೊಸದಿಲ್ಲಿ: ಉದ್ಯಮ ನೀತಿ ಮತ್ತು ಉತ್ತೇಜನ ವಿಭಾಗದ ಕಾರ್ಯದರ್ಶಿ ಅಮಿತಾಭ್ ಕಾಂತ್ ಅವರಿಗೆ ನೀತಿ ಆಯೋಗದ ಸಿಇಒ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಪ್ರಧಾನಿ ನೇತೃತ್ವದ ಸಂಪುಟದ ನೇಮಕ ಸಮಿತಿಯು ಅಮಿತಾಭ್ ಕಾಂತ್ರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ. ನೀತಿ ಆಯೋಗದ ಹಾಲಿ ಸಿಇಒ ಸಿಂಧುಶ್ರೀ ಖುಲ್ಲರ್ ಅವರ ಒಂದು ವರ್ಷದ ಅಧಿಕಾರಾವಧಿ ಮಂಗಳವಾರವಷ್ಟೇ ಅಂತ್ಯವಾಗಿದೆ. ಉದ್ಯಮ ನೀತಿ ನಿರ್ಧಾರ, ಅಭಿವೃದ್ಧಿ, ಉದ್ಯಮದ ಬೆಳವಣಿಗೆ ಮೇಲೆ ನಿಗಾ ಇಡುವುದು, ಎಫ್ಡಿಐ ನೀತಿಯ ಸಮರ್ಪಕ ಜಾರಿ ಸೇರಿದಂತೆ ನಾನಾ ಜವಾಬ್ದಾರಿಯನ್ನು ಕಾಂತ್ ನಿಭಾಯಿಸಿದ್ದು, ಹೊಸ ಹೊಣೆಗಾರಿಕೆ ಅವರ ಮೇಲಿದೆ.

Job info: Peon poats in Pubjab Bank, Stenographer and Clerk posts in Employees State Insurance Corporation

Image

👆🏼 ಮಾನ್ಯ ಸಾರ್ವಜನಿಕರು ಹಾಗೂ ಪೋಷಕರ ಗಮನಕ್ಕೆ :*ಶಾಲೆಗೆ ದಾಖಲಾಗದ/ದಾಖಲಾಗಿ ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆಸೇರಿಸಲು ಸಹಾಯ ಮಾಡಿ( ಬೆಂಗಳೂರು ಉತ್ತರ ಜಿಲ್ಲಾ)

Image

PROVISIONAL SELECTION LIST OF PSI/RSI (H-K REGION) -2015 : PUBLISHED

Image
 ಹೈದ್ರಾಬಾದ್ - ಕರ್ನಾಟಕ ಪ್ರದೇಶಗಳಲ್ಲಿ ಖಾಲಿ ಇರುವ 46 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಹಾಗೂ 13 ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ (RSI- CAR/DAR) ಹುದ್ದೆಗಳಿಗೆ ದಿನಾಂಕ 29-6-2015 ರಂದು ಅರ್ಜಿಯನ್ನು ಆಹ್ವಾನಿಸಿ, ದೈಹಿಕ ಪರೀಕ್ಷೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗಿತ್ತು. ದಿನಾಂಕ  14-11-2015 , 15-11-2015 ರಂದು ಲಿಖಿತ ಪರೀಕ್ಷೆ  ಮತ್ತು ಕೊನೆಯದಾಗಿ 21-12-2015 ರಿಂದ 23-12-2015 ರ ವರೆಗೆ ನಡೆಸಿದ್ದ 10  ಅಂಕಗಳ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರ ತಾತ್ಕಾಲಿಕ ಆಯ್ಕೆಪಟ್ಟಿಯನ್ನು 1:1 ರ ಅನುಪಾತದಲ್ಲಿ ಪೊಲೀಸ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರೆ ಪತ್ರವನ್ನು ಅವರವರ ವಿಳಾಸಕ್ಕೆ ಕಳುಹಿಸಿ, ಮೂಲ ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ& Ksp.gov.in