Posts

ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ದನಿಯನ್ನೂ ಕೇಳಬಹುದು!:-

ನವದೆಹಲಿ: ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ಚಿತ್ರಗಳನ್ನು ಹುಡುಕಿದರೆ ಕ್ಷಣ ಮಾತ್ರಕ್ಕೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಇದೀಗ ಪ್ರಾಣಿಗಳ ದನಿಯನ್ನೂ ಕೇಳುವಂಥಾ ಸೌಲಭ್ಯವನ್ನು ಗೂಗಲ್ ಒದಗಿಸಿದೆ. ಪ್ರಾಣಿಗಳ ದನಿ ಹೇಗಿರುತ್ತದೆ ಎಂಬುದನ್ನು ಮಕ್ಕಳಿಗೆ ಹೇಳಿಕೊಡುವುದಕ್ಕಾಗಿ ಗೂಗಲ್ ಈ ಸೌಲಭ್ಯವನ್ನು ಒದಗಿಸಿದೆ. ಉದಾಹರಣೆಗೆ ಬಳಕೆದಾರರು ಗೂಗಲ್ ನಲ್ಲಿ ಈ ಪ್ರಾಣಿಯ ದನಿ ಯಾವುದು ಎಂಬ ಪ್ರಶ್ನೆ ಕೇಳಿದರೆ, ಸರ್ಚ್ ಇಂಜಿನ್ ಆ ಪ್ರಾಣಿಯ ಇಲ್ಯುಸ್ಟ್ರೇಷನ್, ಪ್ರಾಣಿಯ ಹೆಸರು ಜತೆ ಆ ಪ್ರಾಣಿಯ ದನಿಯ ಸ್ಯಾಂಪಲ್ ನ್ನೂ ತೋರಿಸುತ್ತದೆ. ವರದಿಗಳ ಪ್ರಕಾರ ಈಗಾಗಲೇ ಗೂಗಲ್ ಸರ್ಚ್ ಇಂಜಿನ್ನಲ್ಲಿ ಜೀಬ್ರಾ, ಕೋತಿ, ಬೆಕ್ಕು, ಸಿಂಹ, ಹಂದಿ, ಆನೆ, ಕುದುರೆ ಮೊದಲಾದ 19 ಪ್ರಾಣಿಗಳ ದನಿ ಲಭ್ಯವಾಗುತ್ತಿದೆ.

ಕಣಿವೆ ರಾಜ್ಯದ ಮೊದಲ ಮಹಿಳಾ ಸಿ .ಎಂ . ಮುಫ್ತಿ:-

ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು . ರಾಜ್ಯಪಾಲ ಎನ್ . ಎನ್ . ವೋಹ್ರಾ ಅವರು ಪ್ರಮಾಣ ವಚನ ಬೋಧಿಸಿದರು. ಮುಫ್ತಿ ಅವರು ರಾಜ್ಯದ 13 ನೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ . ಇದೇ ವೇಳೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರೂ ಪ್ರಮಾಣ ವಚನ ಸ್ವೀಕರಿಸಿದರು . ಕೇಂದ್ರ ಸಚಿವ ಎಂ . ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು

ಗುಜರಾತ್ನಲ್ಲಿ ದೇಶದ ಮೊದಲ ಸಾವಯವ ಕೃಷಿ ವಿವಿ.:

ವಡೋದರಾ: ಕೃಷಿಕರನ್ನು ಅಸಂಪ್ರದಾಯಿಕ ಕೃಷಿಯೆಡೆಗೆ ತೆರಳುವಂತೆ ಪ್ರೋತ್ಸಾಹಿಸಲು ಹಾಗೂ ರೈತರ ಸಮಸ್ಯೆ ನಿವಾರಣೆಗೆ ದೇಶದಲ್ಲಿಯೇ ಮೊದಲು ಎನ್ನಬಹುದಾದ ಸಾವಯವ ಕೃಷಿ ವಿಶ್ವವಿದ್ಯಾಲಯ ಗುಜರಾತಿನಲ್ಲಿ ಸ್ಥಾಪನೆಯಾಗುತ್ತಿದೆ. ಇಲ್ಲಿನ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ರೈತ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಆನಂದಿ ಬೇನ್ ಪಟೇಲ್, 'ರಾಸಾಯನಿಕಯುಕ್ತ ಗೊಬ್ಬರ, ಕ್ರಿಮಿನಾಶಕ ಬಳಸಿ ಕೃಷಿ ಮಾಡುತ್ತಿರುವ ಅನ್ನದಾತರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಡೆಯಲು ಸಾವಯವ ಕೃಷಿ ವಿವಿ ಸ್ಥಾಪಿಸಲಾಗುವುದು,' ಎಂದು ಹೇಳಿದ್ದಾರೆ. ಸಾವಯವ ಕೃಷಿ ವಿವಿ ಸ್ಥಾಪನೆಗಾಗಿ 2016-17ನೇ ಸಾಲಿನ ಬಜೆಟ್ನಲ್ಲಿ 10 ಕೋಟಿ ರೂ. ಅನುದಾನ ನೀಡಲಾಗಿದ್ದು, ವಿವಿ ಸ್ಥಾಪನೆಗೆ ಇನ್ನು ಜಾಗ ಗುರುತು ಮಾಡಿಲ್ಲ ಎಂದು ಗುಜರಾತ್ ಕೃಷಿ ಸಚಿವ ಬಾಬುಭಾಯಿ ಬೋಖಿರಾ ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ಗಾಂಧಿನಗರದಲ್ಲಿ ಕಾಮಧೇನು ಕೃಷಿ ವಿವಿ ಹತ್ತಿರವೇ ಈ ವಿವಿಗೂ ಸ್ಥಳ ಗುರುತಿಸಬಹುದು ಎನ್ನಲಾಗುತ್ತಿದೆ.

555 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Image

ಇ– ಮೇಲ್ ಸೃಷ್ಟಿಕರ್ತ ರೇ ಟಾಮ್ಲಿನ್ಸನ್ ಇನ್ನಿಲ್

Image
ವಾಷಿಂಗ್ಟನ್ ( ಎಎಫ್ಪಿ) : ಇ – ಮೇಲ್ ಆಧುನಿಕ ಸೃಷ್ಟಿಕರ್ತ ಎಂಬ ಕೀರ್ತಿಗೆ ಪಾತ್ರರಾಗಿದ್ದ ರೇ ಟಾಮ್ಲಿನ್ಸನ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು . ಯೂಸರ್ನೆಟ್ ಜತೆಗೆ @ ಸಂಕೇತವನ್ನು ಬಳಸಿದ ಮೊದಲಿಗ ಎಂಬ ಕೀರ್ತಿ ಕೂಡ ರೇ ಅವರದ್ದು. ಟಾಮ್ಲಿನ್ಸನ್ ಅವರು ಇ – ಮೇಲ್ಗೂ ಮೊದಲು 1971 ರಲ್ಲಿ ಸೀಮಿತ ನೆಟ್ವರ್ಕ್ ಅಡಿಯಲ್ಲಿ ಬೇರೆ – ಬೇರೆ ಯಂತ್ರಗಳ ಮೂಲಕ ಎಲೆಕ್ಟ್ರಾನಿಕ್ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಕಂಡು ಹಿಡಿದಿದ್ದರು . ಅದಕ್ಕೂ ಮೊದಲು ಒಂದೇ ಗಣಕಯಂತ್ರ ಬಳಸಿ ಸಂದೇಶ ಕಳುಹಿಸುವ ಸೌಲಭ್ಯ ಮಾತ್ರವೇ ಜಾರಿಯಲ್ಲಿತ್ತು . ' ನೆಟ್ವರ್ಕ್ ಕಂಪ್ಯೂಟರ್ಗಳ ಕಾಲದ ಆರಂಭಿಕ ದಿನಗಳಲ್ಲಿ ಮೇಲ್ ಪರಿಚಯಿಸಿದ ರೇ ಅವರು ತಂತ್ರಜ್ಞಾನದ ನಿಜವಾದ ಆದಿಶೋಧಕ. ಅವರ ಕೊಡುಗೆ ವಿಶ್ವದ ಸಂವಹನವನ್ನು ಬದಲಿಸಿದೆ ' ಎಂದು ರೇಥೆಯಾನ್ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ . ಟಾಮ್ಲಿನ್ಸನ್ ಅವರು ಶನಿವಾರ ವಿಧಿವಶರಾಗಿದ್ದಾರೆ ಎಂದು ರೇಥೆಯಾನ್ ಕಂಪೆನಿ ವಕ್ತಾರ ತಿಳಿಸಿದ್ದಾರೆ . ಆದರೆ, ಅವರ ಸಾವಿಗೆ ಕಾರಣ ಮಾತ್ರ ಇನ್ನಷ್ಟೇ ತಿಳಿಯಬೇಕಿದೆ . ರೇ ಅವರ ನಿಧನಕ್ಕೆ ಆನ್ಲೈನ್ ಜಗತ್ತು ಕಂಬನಿ ಮಿಡಿದಿದೆ . ' ಇಮೇಲ್ ಸಂಶೋಧನೆ ಮಾಡಿದ್ದಕ್ಕಾಗಿ ಹಾಗೂ @ ಸಂಕೇತವನ್ನು ಯೂಸರ್ನೇಮ್ ಬೆಸದಿದ್ದಕ್ಕೆ ಧನ್ಯವಾದಗಳು ರೇ ಟಾಮ್ಲಿನ್ಸನ್' ಎಂದು ಇಂ

India win two gold medals in World Table Tennis team championships:-

KUALA LUMPUR: Indian men's and women's team scripted history by clinching the gold medals at the World Table Tennis Team Championships with superb victories over Luxemburg and Brazil respectively on Saturday. . . Indian eves beat Luxemburg 3-1 in the event final of the Second Division, while their male counterparts overcame a stiff Brazil 3-2 here. . . India had sealed their entry in the Champions Division last night after reaching the finals.

SUCCESS STORY: From remote village (kalatippi) to KIMS HUBLI

Image
Learnt in a Govt LPS Kalatippi (1-5), and Govt HPS Kalatippi(6-7) and led to KIMS on HIS effort.. ಹಾಲು ಮಾರಿ ಮಗನ್ನ ಡಾಕ್ಟ್ರು ಮಾಡೇನ್ರಿ ' ಹುಬ್ಬಳ್ಳಿ: ' ಮುಂಜಾನಿ, ಸಂಜೆ ತಲಾ ನಾಲ್ಕು ಲೀಟರ್ ಹಾಲು ಮಾರಿ ಮಗನ್ನ ಡಾಕ್ಟರ್ ಓದಿಸೇನ್ರಿ . ಅವನ ಸಾಧನೆ ನೋಡಾಕ ಬಂದೇನ್ರಿ ' ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂ ಕಿನ ತೇರದಾಳ ಬಳಿಯ ಕಾಲತಿಪ್ಪಿಯ ಯಮನಪ್ಪ ಲಕ್ಷ್ಮಣ ಕಂಬಾಗಿ ' ಪ್ರಜಾವಾಣಿ' ಎದುರು ಸಂಭ್ರಮ ಹಂಚಿಕೊಂಡರು . ಯಮನಪ್ಪ ಅವರ ಪುತ್ರ ಡಾ . ಕಾಶಿನಾಥ ವೈದ್ಯಕೀಯ ಪದವಿ ಮುಗಿಸಿದ್ದು , ಮನೆಯವರಲ್ಲಿ ಹರ್ಷಕ್ಕೆ ಕಾರಣವಾಗಿತ್ತು . ಪತ್ನಿ ಅಕ್ಕವ್ವ ಅವರೊಂದಿಗೆ ಮುಂಜಾನೆಯೇ ಕಿಮ್ಸ್ ಆವರಣಕ್ಕೆ ಬಂದಿದ್ದರು . ಯಮನಪ್ಪ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇರುವ ಒಂದು ಎಕರೆ ಜಮೀನಿನಲ್ಲಿ ಹಿರಿಯ ಮಗನೊಂದಿಗೆ ಅವರು ಕೃಷಿಯಲ್ಲಿ ತೊಡಗಿಕೊಂಡಿ ದ್ದಾರೆ. ಕಿರಿಯ ಮಗ ಕಾಶೀನಾಥ ಅವರ ವೈದ್ಯಕೀಯ ಅಭ್ಯಾಸದ ಖರ್ಚು ನಿಭಾಯಿಸಲು ಹೈನುಗಾರಿಕೆಯಲ್ಲಿ ತೊಡಗಿದ್ದಾಗಿ ಯಮನಪ್ಪ ಹೇಳಿದರು. ಆರು ಚಿನ್ನದ ಪದಕಗಳೊಂದಿಗೆ ಇನ್ಫೊಸಿಸ್ನ ಡಾ. ಸುಧಾಮೂರ್ತಿ ಅವರು ತಮ್ಮ ತಾಯಿಯ ನೆನಪಿಗೆ ನೀಡುವ ₹ 10 ಸಾವಿರ ನಗದು ಪುರಸ್ಕಾರವನ್ನು ಪಡೆದ ಡಾ. ಚೇತನ್ ಘಂಟಪ್ಪನವರ್ ಅವರಿಗೆ ಪೋಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದರು . ಹುಬ್ಬಳ