Posts

ಹೆಂಡ ಇಳಿಸುವವನ ಮಗ ಈಗ ಕೇರಳ ಸಿಎಂ

Image
ಉದಯವಾಣಿ, May 21, 2016, 3:30 AM IST ತಿರುವನಂತಪುರ: ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಪಿಣರಾಯಿ ವಿಜಯನ್ ಹೆಂಡ ಇಳಿಸುವ ವೃತ್ತಿಯಲ್ಲಿ ತೊಡಗಿದ್ದ ಬಡ ಕುಟುಂಬಕ್ಕೆ ಸೇರಿದವರು. ಕರ್ನಾಟಕಕ್ಕೆ ಸಮೀಪದ ಕಣ್ಣೂರು ಜಿಲ್ಲೆಯವರು. ಪ್ರಭಾವಿಯಾಗಿರುವ ಈಳವ ಸಮುದಾಯದವರು. ಅತ್ಯುತ್ತಮ ಸಂಘಟಕ ಎಂಬ ಕೀರ್ತಿಯನ್ನು ಕೇರಳದಲ್ಲಿ ಗಳಿಸಿದ್ದಾರೆ. ಸದ್ಯ ಸಿಪಿಎಂ ಪಾಲಿಟ್ಬ್ಯೂರೋ ಸದಸ್ಯರಾಗಿರುವ ಪಿಣರಾಯಿ, 16 ವರ್ಷ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿಯಾಗಿದ್ದರು. ಹೆಚ್ಚು ಮಾತನಾಡುವುದಿಲ್ಲ. ಪಿಣರಾಯಿ ನಗುವುದೂ ಇಲ್ಲ ಎಂದು ಅವರ ವಿರೋಧಿಗಳು ಗೇಲಿ ಮಾಡುತ್ತಾರೆ. 1996-98ರವರೆಗೆ ಇಂಧನ ಸಚಿವರಾಗಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರೂ, ಕೆನಡಾ ಕಂಪನಿ ಎಸ್ಎನ್ಸಿ- ಲಾವಲಿನ್ಗೆ ಜಲವಿದ್ಯುತ್ ಘಟಕಗಳ ಆಧುನೀಕರಣ ಗುತ್ತಿಗೆ ನೀಡುವಾಗ ಭ್ರಷ್ಟಾಚಾರ ನಡೆಸಿದ ಆರೋಪ ಅವರನ್ನು ಕಾಡುತ್ತಿದೆ. ಅಚ್ಚುತಾನಂದನ್ ಗರಡಿಯಲ್ಲೇ ಪಳಗಿದ್ದರೂ, ಅವರ ಬದ್ಧ ವೈರಿಯಾಗಿ ಪರಿವರ್ತನೆಗೊಂಡಿದ್ದಾರೆ. ಸಾರ್ವಜನಿಕ ನಿಂದನೆ ಹಿನ್ನೆಲೆಯಲ್ಲಿ 2007ರಲ್ಲಿ ಪಿಣರಾಯಿ ಹಾಗೂ ಅಚ್ಚುತಾನಂದನ್ ಅವರನ್ನು ಪಾಲಿಟ್ ಬ್ಯೂರೋದಿಂದಲೇ ಅಮಾನತುಗೊಳಿಸಲಾಗಿತ್ತು. ಬಳಿಕ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. 1970ರಲ್ಲಿ 26ನೇ ವಯಸ್ಸಿಗೇ ಶಾಸಕರಾಗಿ ಆಯ್ಕೆಯಾಗಿದ್ದ ಪಿಣರಾಯಿ 1977, 1991, 1996ರಲ್ಲೂ ಗೆ

೧೦ನೇ ತರಗತಿ ಯಲ್ಲಿ ೯೦% ಅಂಕ ಪಡೆದ ವಿದ್ಯಾರ್ಥಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Image

- ಮೇ 25ರಂದು ಪಿಯುಸಿ ಫಲಿತಾಂಶ.

Image
Public TV - ಮೇ 25ರಂದು ಪಿಯುಸಿ ಫಲಿತಾಂಶ. - ಈ ಬಾರಿ ಉತ್ತರ ಪತ್ರಿಕೆ ಸ್ಕ್ಯಾನ್ ಕಾಪಿ ಕೊಡುವ ಉದ್ದೇಶವಿದೆ - ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ - ಇದು ಅಂತಿಮವಾದ ತಕ್ಷಣ ಫಲಿತಾಂಶ ಪ್ರಕಟಿಸುತ್ತೇವೆ - 25ರಂದು ಫಲಿತಾಂಶ ಪ್ರಕಟಿಸಲು ಇಲಾಖೆ ಸಜ್ಜಾಗಿದೆ - ಭದ್ರಾವತಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ http://www.karresults.nic.in

KPSC_FDA_DOCUMENT_ VERIFICATION_date_announced . 25/05/2016 ರಿಂದ 04/06/2016 ರವರೆಗೆ ...

http://kpsc.kar.nic.in/document%20verification%20for%20fda.htm

ಕೊರಿಯಾದ ಹಾನ್ ಕಾಂಗ್ ಗ ೨೦೧೬ರೆ ‘ಬುಕರ್’ ಪ್ರಶಸ್ತಿ"

Image
18 May, 2016 ಲಂಡನ್ (ಪಿಟಿಐ): ದಕ್ಷಿಣ ಕೊರಿಯಾದ ಬರಹಗಾರ್ತಿ ಹಾನ್ ಕಾಂಗ್ (45) ಅವರು ಈ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾನವನ ಕ್ರೌರ್ಯದೆಡೆಗಿನ ಮಹಿಳೆಯ ತಿರಸ್ಕಾರ ಮತ್ತು ಮಾಂಸಾಹಾರವನ್ನು ತ್ಯಜಿಸುವುದರ ಕುರಿತಾದ ಅವರ 'ದಿ ವೆಜಿಟೇರಿಯನ್' ಕೃತಿಗೆ ಈ ಗೌರವ ಲಭಿಸಿದೆ. ನೊಬೆಲ್ ಪುರಸ್ಕೃತ ಒರ್ಹಾನ್ ಪಾಮುಕ್ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿರುವ ಎಲೆನಾ ಫೆರಂಟೆ ಅವರನ್ನು ಹಿಂದಿಕ್ಕಿ ಕಾಂಗ್ ಈ ಪ್ರಶಸ್ತಿ ಪಡೆದಿದ್ದಾರೆ. ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ 50 ಸಾವಿರ ಪೌಂಡ್ (₹48.38 ಲಕ್ಷ) ಮೊತ್ತದ ಬಹುಮಾನದ ಹಣವನ್ನು ಅವರು ಅನುವಾದಕಿ ಡೆಬೊರಾ ಸ್ಮಿತ್ ಅವರೊಂದಿಗೆ ಹಂಚಿಕೊಂಡರು. ವಿಮರ್ಶಕ, ಸಂಪಾದಕ ಬಾಯ್ಡ್ ಟಾಂಕಿನ್ ಅವರು ಅಧ್ಯಕ್ಷರಾಗಿರುವ, ಐವರು ತೀರ್ಪುಗಾರರ ಸಮಿತಿಯು ಅಂತಿಮ ಸುತ್ತಿನಲ್ಲಿದ್ದ 155 ಕೃತಿಗಳ ಪೈಕಿ 'ದಿ ವೆಜಿಟೇರಿಯನ್' ಕೃತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿತು. ಸೋಲ್ನ ಕಲಾ ಸಂಸ್ಥೆಯಲ್ಲಿ ಸೃಜನಶೀಲ ಬರವಣಿಗೆ ಪ್ರಕಾರವನ್ನು ಬೋಧಿಸುತ್ತಿರುವ ಕಾಂಗ್ ಅವರು, ದಕ್ಷಿಣ ಕೊರಿಯಾದ ಪ್ರತಿಷ್ಠಿತ ಯಿ ಸಾಂಗ್ ಸಾಹಿತ್ಯಿಕ ಪ್ರಶಸ್ತಿ, ಯಂಗ್ ಆರ್ಟಿಸ್ಟ್ ಪ್ರಶಸ್ತಿ ಮತ್ತು ಕೊರಿಯನ್ ಸಾಹಿತ್ಯ ಕಾದಂಬರಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಸಂಪ್ರದಾಯ ಧಿಕ್ಕರಿಸು

ಪೃಥ್ವಿ -2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಹೊಸದಿಲ್ಲಿ: ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಹಾಗೂ ನೆಲದಿಂದ-ನೆಲಕ್ಕೆ ಚಿಮ್ಮುವ ಕಡಿಮೆ ಅಂತರದ 'ಪೃಥ್ವಿ-2' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ಬುಧವಾರ ಒಡಿಶಾದ ಚಾಂಡಿಪುರದಲ್ಲಿ ನಡೆಯಿತು. 2003ರಲ್ಲೇ ಭಾರತದ ಸೇನೆ ಸೇರಿರುವ ಪೃಥ್ವಿ -2 ಅನ್ನು ಡಿಆರ್ಡಿಒ ಅಭಿವೃದ್ಧಿ ಪಡಿಸಿತ್ತು. 2 ಇಂಜಿನ್ಗಳನ್ನು ಹೊಂದಿರುವ 'ಪೃಥ್ವಿ-2' ಕ್ಷಿಪಣಿ 8.56 ಮೀಟರ್ ಉದ್ದ ಇದ್ದು, 1.1 ಮೀಟರ್ ಸುತ್ತಳತೆ ಹೊಂದಿದೆ. 4,600 ಕೆ.ಜಿ. ತೂಕವಿದ್ದು, 500 ರಿಂದ 1000 ಕೆ.ಜಿ. ಸ್ಫೋಟಕಗಳನ್ನು ಹೊತ್ತು 350 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಜತೆಗೆ ವೈರಿ ಪಡೆಯ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಯು ಗರಿಷ್ಠ 43.5 ಕಿ.ಮಿ. ಎತ್ತರದಲ್ಲಿ 483 ಸೆಕೆಂಡ್ಗಳ ವರೆಗೆ ಹಾರಾಟ ನಡೆಸಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಪೃಥ್ವಿ-2 ಕ್ಷಿಪಣಿ ಘನ ಮತ್ತು ದ್ರವ ಇಂಧನ ಗಳನ್ನು ಬಳಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತದೆ. ಈ ಕ್ಷಿಪಣಿಯು ಸ್ಫೋಟಕಗಳನ್ನು ಮತ್ತು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಬನಹಟ್ಟಿಯ ತರಕಾರಿ ಮಾರುವ ಹುಡುಗಿಗೆ ಶೇ . 96 . 64 ಅಂಕ

Image
ಬನಹಟ್ಟಿ : ಮನೆಯಲ್ಲಿ ಕಿತ್ತು ತಿನ್ನುವ ಬಡತನ . ತಂದೆ ನಿಧನರಾಗಿ 10 ವರ್ಷಗಳೇ ಕಳೆದಿವೆ . ತಾಯಿ ಸಂತೆಯಲ್ಲಿ ತರಕಾರಿ ಮಾರುತ್ತ ಅಷ್ಟೋ - ಇಷ್ಟೋ ಬಂದ ದುಡ್ಡಿನಲ್ಲಿ ತನ್ನ ಮಗಳ ವಿದ್ಯಾಭ್ಯಾಸದ ವೆಚ್ಚ ತೂಗಿಸುತ್ತಿದ್ದರೆ , ತಾಯಿಯೊಂದಿಗೆ ತರಕಾರಿ ಮಾರುತ್ತ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಳು . 604 ಅಂಕಗಳೊಂದಿಗೆ ಶೇ . 96 . 64 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮೆರೆದಳು ಇದು ಬನಹಟ್ಟಿಯ ಎಸ್ಆರ್ಎ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಮ್ಯ ಮುರಿಗೆಪ್ಪ ಸಗರಿಯ ಸಾಹಸಗಾಥೆ . ಬನಹಟ್ಟಿಯ ಎಸ್ಆರ್ಎ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸೌಮ್ಯ , ಶಾಲೆಗೆ ಬರಬೇಕಾದರೆ ಮೊದಲು ತಾಯಿಯೊಂದಿಗೆ ತರಕಾರಿ ವ್ಯಾಪಾರ ಮಾಡಲೇಬೇಕು . ನಂತರ ಶಿಕ್ಷಣ. ಹೀಗಿದ್ದರೂ ಶಿಕ್ಷಣವನ್ನು ಶ್ರದ್ಧೆಯಿಂದ ಕಲಿತು ಯಾರಿಗೂ ಕಡಿಮೆಯಿಲ್ಲವೆಂಬಂತೆ ಮಹತ್ವದ ಸಾಧನೆ ಮಾಡಿ ಎಸ್ಆರ್ಎ ಪ್ರೌಢಶಾಲೆಗೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ . ಕನ್ನಡದಲ್ಲಿ 124, ಗಣಿತ 98 , ಹಿಂದಿ 97 , ವಿಜ್ಞಾನ, ಸಾಮಾನ್ಯ ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ತಲಾ 95 ಅಂಕ ಪಡೆದಿರುವ ಸೌಮ್ಯಾ, ಮುಂದೆ ವೈದ್ಯೆ ಆಗುವ ಕನಸು ಹೊಂದಿದ್ದಾಳೆ . ಮುಂದಿನ ಶಿಕ್ಷಣಕ್ಕೆ ಇವರ ಕುಟುಂಬಕ್ಕೆ ಬಡತನವೆಂಬುದು ಕಂಟಕವಾಗಿದೆ . ಆದರೂ ಇವಳ ತಾಯಿ ಸಾಧ್ಯವಾದಷ್ಟು ದುಡಿದು ಶಿಕ್ಷಣ ಒದಗಿಸುವುದಾಗಿ ಹುಮ್ಮಸ್ಸಿನಿಂದ ಹೇಳುತ್ತಾರೆ