Posts

ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯವಾದ ಮೊಬೈಲ್ APPಗಳು::

ಇದು ಡಿಜಿಟಲ್ ಯುಗ . ನಮ್ಮ ಎಲ್ಲ ಸಂವೇದನಾ ಶಕ್ತಿಯು ಟೆಕ್ನಾಲಜಿಯ ಮೇಲೆ ಅವಲಂಭಿತವಾಗಿದೆ. ಮೆಸೇಜಿಂಗ್, ಚಾಟಿಂಗ್ , ಗೇಮಿಂಗ್ ನಿಂದ ಹಿಡಿದು ದೊಡ್ಡ ದೊಡ್ಡ ಮಟ್ಟದ ತಾಂತ್ರಿಕ ಸಂಶೋಧನೆ , ಕಾರ್ಯಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಹಭಾಗಿತ್ವ ಟೆಕ್ನಾಲಜಿಯದ್ದಾಗಿದೆ. ಟೆಕ್ನಾಲಜಿ ಯಿಲ್ಲದ ಬದುಕನ್ನು ಇಂದು ಮಾನವ ಕ್ಷಣದ ಮಟ್ಟಿಗೂ ಊಹಿಸಲಾರ. ದಿನ ನಿತ್ಯವೂ ಹೊಸ ಅವಿಷ್ಕಾರದೊಂದಿಗೆ ನೂತನ ತಂತ್ರಾಂಶಗಳನ್ನು ಕಂಡು ಹಿಡಿದು ತನ್ನ ಕಾರ್ಯಕ್ಷಮತೆಯನ್ನು ಅಲ್ಪ ಸಮಯದಲ್ಲಿ ವಿಶಾಲವಾಗಿ ಪ್ರಕಟಿಸುತ್ತ ಅವಿನಾಭಾವ ಸಾಧನೆ ಮಾಡುತ್ತಿರುವ ಮಾನವ ಮಿದುಳಿಗೆ ಎಷ್ಟು ಸಲಾಂ ಹೇಳಿದರೂ ಸಾಲದು. ಇಂದು ಸ್ಮಾರ್ಟ್ ಪೋನ್ ಎಂಬ ಸಣ್ಣ ವಸ್ತುವಿನಲ್ಲಿ ಇಡೀ ಜಗತ್ತಿನ ಎಲ್ಲ ವಿಚಾರಗಳನ್ನು ಬಚ್ಚಿಟ್ಟುಕೊಳ್ಳ ಬಹುದು . ಹೆಬ್ಬೆರಳಿನ ತುತ್ತ ತುದಿಯಿಂದ ಟ್ಯಾಪ್ ಮಾಡುವ ಮೂಲಕ ಊಹೆಗೂ ನಿಲುಕದ ಹೊಸ ವಿಶ್ವವನ್ನೇ ನಾವು ಕಾಣಬಹುದು. ಟೆಕ್ನಿಕಲ್ ಆಗಿ ಹೇಳಿದರೆ "ಇದು ಸ್ಮಾರ್ಟ್ ಜನರ ಸ್ಮಾರ್ಟ್ ಯುಗ" . ವಿದ್ಯಾರ್ಥಿಯಿಂದ ಹಿಡಿದು ಮುಪ್ಪಿನ ದಿನಗಳನ್ನು ಕಳೆಯುವ ವೃದ್ಧರು ಸಹ ತಮ್ಮ ದೈನಂದಿನ ಜೀವನಕ್ಕೆ ಸ್ಮಾರ್ಟ್ ಮೆರಗು ನೀಡಲು ದಿನ ನಿತ್ಯವೂ ಕಸರತ್ತು ಮಾಡುತ್ತಾರೆ . ಸಾಮಾನ್ಯವಾಗಿ ಹಿರಿಯರು "ನಿಮ್ಮ ಮನೆಯಲ್ಲಿ ಫೋನ್ ಇದೆಯಾ ?" ಎಂಬ ಪ್ರಶ್ನೆ ಕೇಳುತಿದ್ದ ಕಾಲ ಒಂದಿತ್ತು . ಆದರೆ ಇಂದು ಕಿರಿಯರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಶೈಲಿ

Additional increment for high school teachers ana HeadMasters option now avilable in hrms.

Image

"ದ್ವಿತೀಯ ಪಿಯುಸಿ ಯಲ್ಲಿ 80% ಗಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ MHRD ವಿದ್ಯಾರ್ಥಿ ವೇತನ" (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24.09.2016)

www.pue.kar.nic.in/PUE/PDF_files/scholarship/mhrd_16/Inst_16_Guide.pdf

*ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ – 1921 ಹುದ್ದೆಗಳ ನೇಮಕಾತಿ*

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಮಿತದಿಂದ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಆಸಕ್ತರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿದ್ಯುತ್) : 52 ಸಹಾಯಕ ಇಂಜಿನಿಯರ್ (ವಿದ್ಯತ್) :416 ಸಹಾಯಕ ಇಂಜಿನಿಯರ್ (ಸಿವಿಲ್ ) : 24 ಸಹಾಯಕ ಲೆಕ್ಕಾಧಿಕಾರಿ : 296 ಕಿರಿಯ ಇಂಜಿನಿಯರ್ (ವಿದ್ಯುತ್) : 409 ಕಿರಿಯ ಇಂಜಿನಿಯರ್ (ಸಿವಿಲ್) : 12 ಸಹಾಯಕ  : 422 ಕಿರಿಯ ಸಹಾಯಕ : 290 ವಿದ್ಯಾರ್ಹತೆ , ವಯೋಮಿತಿ ಆಯ್ಕೆ ವಿಧಾನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿclick ಮಾಡಿರಿ http://nebula.wsimg.com/b9e35bb22ed5b8c341ab8a9da17a32e7?AccessKeyId=1262C70BB86294F06778&disposition=0&alloworigin=1 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ  28-09-2016 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿರಿ (ಹೆಸ್ಕಾಂ ವಿಭಾಗ) http://www.hescom.co.in/aee-recruitment.html nebula.wsimg.com/ced6babd837f8de7c7008ed1525f9817?AccessKeyId=1262C70BB86294F06778&disposition=0&alloworigin=1

Press Note: 815 posts of PDO in RPDR

Commencement of entry of online Application-16-09-2016 Last Date to enter online Application 15-10-2016 kea.kar.nic.in/cet2016/notification_kan.pdf

KPTCL 1921 ಸಹಾಯಕ, ಕಿರಿಯ ಎಂಜಿನಿಯರ್ ಮತ್ತು ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ:-

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಎಂಜಿನಿಯರ್ (ಸಿವಿಲ್) ಮತ್ತು ಕಿರಿಯ ಸಹಾಯಕ, ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಒಟ್ಟು 1921 ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹುದ್ದೆಗಳು ಮೀಸಲಾತಿಯನ್ವಯ ಹಂಚಿಕೆಯಾಗಿದ್ದು, ಹೈ.ಕ. ಭಾಗದ ಅಭ್ಯರ್ಥಿಗಳಿಗೂ ಮೀಸಲಾತಿ ನೀಡಲಾಗಿದೆ. ಇದೇ ಸೆಪ್ಟೆಂಬರ್ 8ರಂದು ಕಂಪನಿಗಳ ವೆಬ್ಸೈಟ್ನಲ್ಲಿ ಹುದ್ದೆಗಳ ಕುರಿತಾದ ಸಂಪೂರ್ಣ ವಿವರಗಳನ್ನು ಪ್ರಕಟಿಸಲಾಗುತ್ತದೆ. *ಯಾವ ಹುದ್ದೆ ಎಷ್ಟು?* ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್-52, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್)-440, ಕಿರಿಯ ಎಂಜಿನಿಯರ್ (ವಿದ್ಯುತ್/ಸಿವಿಲ್): 421, ಸಹಾಯಕ ಲೆಕ್ಕಾಧಿಕಾರಿ-296, ಸಹಾಯಕ-422 ಮತ್ತು ಕಿರಿಯ ಸಹಾಯಕ-290 *ಅರ್ಹತೆಗಳೇನು?* ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಅಂಗೀಕೃತ ವಿವಿಯಿಂದ ಬಿ.ಇ ಪದವಿ ಅಥವಾ ಎಎಂಐಇ (ಭಾರತ) ನಡೆಸುವ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಅಂತೆಯೇ ಸಿವಿಲ್ ವಿಭಾಗದಲ್ಲಿ ಸಹಾ

ಭಾಗ್ಯಗಳಿಲ್ಲದ ಹೊತ್ತಲ್ಲಿ ಮೇಷ್ಟ್ರೇ ಭಾಗ್ಯದೇವತೆ*

Image
_01 Sep 2016_ ಗುರು-ಶಿಷ್ಯರ ನಡುವೆ ತಾದಾತ್ಮ್ಯ ಏರ್ಪಡುವುದು ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು. ಗುರುವಿಗೆ ತನ್ನ ಶಿಷ್ಯ ತನ್ನನ್ನು ಮೀರಿದಾಗ ಆಗುವ ಖುಶಿಯೇ ಬೇರೆ.ಗುರುದೃಷ್ಟಿಗೆ ಇರುವ ಕಾರುಣ್ಯದಿಂದಾಗಿ 'ಹರ ಮುನಿಯಲ್, ಗುರು ಕಾಯ್ವನ್' ಎಂಬ ಮಾತು ಹುಟ್ಟಿದೆ.  ನಮ್ಮ ನಾಡಿನಲ್ಲಿ ಆಗಿಹೋದ ಮಹಾನ್ ಚೇತನಗಳಲ್ಲಿ ಅಂತರ್ಗತವಾಗಿದ್ದ ಅಗಾಧ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿ ಬೆಳೆಸಿದ ಮೂಲಗಳನ್ನು ಹುಡುಕುತ್ತಾ ಹೋದರೆ ಖಂಡಿತವಾಗಿ ಆ ಮೂಲದಲ್ಲಿ ಗೋಚರಿಸುವವರು -ಳ-ಳನೆ ಹೊಳೆಯುವ ಅವರ ಗುರುಗಳು! ಟೀಚರು, ಮೇಷ್ಟ್ರು, ಲೆಕ್ಚರರು, ಸರ್ರು, ಪ್ರೊ-ಸರು.... ಯಾವುದೇ ಹಂತದಲ್ಲಿಯೂ ಈ ಗುರು ತನ್ನ ಶಿಷ್ಯನನ್ನು ಪ್ರಭಾವಿಸಿ ತನ್ನ ಪ್ರಭಾವಲಯದಲ್ಲಿ ಬೆಳೆಸಿ ಆ ಶಿಷ್ಯ ಏರಿದ ಎತ್ತರವನ್ನು ಕಂಡು ಹೆಮ್ಮೆ ಪಡುವ ಅಪರೂಪದ ಸಹೃದಯಿ. ಎಲೆಮರೆಯ ಕಾಯಿಯ ಹಾಗೆ ಹಳ್ಳಿಯ ಮೂಲೆ ಮೂಲೆಗಳಲ್ಲಿದ್ದ 'ಕನ್ನಡ ಶಾಲೆಯ' ಮೇಷ್ಟ್ರುಗಳಿಗೆ ಕನ್ನಡ ನಾಡಿನ ಒಂದು ಸಭ್ಯ, ಶಿಷ್ಟ, ಸುಸಂಸ್ಕೃತ ತಲೆಮಾರನ್ನೇ ಕಟ್ಟಿ ನಿಲ್ಲಿಸಿದ ಕೀರ್ತಿ ಸಲ್ಲಬೇಕು. ನಾನೀ ವಾರದ ಅಂಕಣಕ್ಕೆ ಪೆನ್ನು ಕೈಗೆತ್ತಿಕೊಂಡಾಕ್ಷಣ ನೆನಪಿಗೆ ಬಂದವರು ನನ್ನ ಕನ್ನಡ ಶಾಲೆಯಲ್ಲಿ ನಮಗೆ ಅಕ್ಷರ ಕಲಿಸಿದ ಮೇಷ್ಟ್ರು. ನಮ್ಮ 'ಕಾಗೆ ಕಾಲು ಗುಬ್ಬಿ ಕಾಲು' ಲಿಪಿಯನ್ನು ಅದು ಹೇಗೆ ಓದಿ ಅರ್ಥೈಸಿಕೊಳ್ಳುತ್ತಿದ್ದರೋ, ಇವತ್ತು ನಿನ್ನೆಗಿಂತ ಚಂದವಾಗಿದೆ ಅಕ್ಷರ ಎನ್ನುತ್ತಲೇ