Posts

ವಾಟ್ಸಾಪ್ನಲ್ಲಿ 16MB ಗಿಂತ ಹೆಚ್ಚಿನ ಸೈಜ್ನ ವೀಡಿಯೊ ಸೆಂಡ್ ಹೇಗೆ?

| Thu, Sep 22, 2016, 9:09 [IST] ವಾಟ್ಸಾಪ್ ಪ್ರಪಂಚದಲ್ಲೇ ಪ್ರಖ್ಯಾತವಾಗಿರುವ ಮೆಸೇಜಿಂಗ್ ಆಪ್ ಆಗಿದೆ. ಅಲ್ಲದೇ ಬಹುತೇಕ ಸ್ಮಾರ್ಟ್ಫೋನ್ ವೇದಿಕೆಗಳಲ್ಲಿ ಲಭ್ಯವಿದ್ದು, ಆದರೆ ಕೆಲವು ನಿರ್ಬಂಧಗಳು ಸಹ ಇವೆ. ಇತ್ತೀಚೆಗೆ ವಾಟ್ಸಾಪ್ ಹಲವು ಬದಲಾವಣೆಗಳನ್ನು ತಂದಿದ್ದು, ಅವುಗಳೆಂದರೆ ರಿಫ್ರೆಶ್ಡ್ UI, ಕರೆ ಆಪ್ಶನ್, ಹೆಚ್ಚಿನ ಎಮೋಜಿಗಳು ಮತ್ತು ಅಕ್ಷರಗಳ ವಿನ್ಯಾಸಗಳು. ಅಲ್ಲದೇ ವೀಡಿಯೊ, ಆಡಿಯೋ ಮತ್ತು ಸ್ಥಳದ ಮಾಹಿತಿಯನ್ನು ಇತರರಿಗೆ ಕಳುಹಿಸುವ ಫೀಚರ್ ಅನ್ನು ಸಹ ಹೊಂದಿದೆ. ವಾಟ್ಸಾಪ್ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್ ಮಾಡಿದರೆ ಏನಾಗಬಹುದು ಗೊತ್ತೇ? ವಾಟ್ಸಾಪ್(WhatsApp) ಹಲವು ಫೀಚರ್ಗಳನ್ನು ಹೊಂದಿದ್ದರೂ ಸಹ ವೀಡಿಯೊ, ಆಡಿಯೋ ಫೈಲ್ಗಳು 16MB ಗಿಂತ ಹೆಚ್ಚಿನ ಸೈಜ್ ಇದ್ದಲ್ಲಿ ಇತರರಿಗೆ ಕಳುಹಿಸಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ , ವಿಂಡೋಸ್ ಮತ್ತು ಐಓಎಸ್ ಬಳಕೆದಾರರು ತಮ್ಮ ವಾಟ್ಸಾಪ್ ಆಪ್ ಮೂಲಕ 16MB ಗಿಂತ ಹೆಚ್ಚಿನ ಸೈಜ್ನ ವೀಡಿಯೊವನ್ನು ಇತರರಿಗೆ ಕಳುಹಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ಕೆಳಗಿನ ಹಂತಗಳನ್ನು ಓದಿ ತಿಳಿಯಿರಿ. www.freegksms.blogspot.in ಹಂತ 1: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ನಿಂದ 'ಆಂಡ್ರಾಯ್ಡ್ ವೀಡಿಯೊ ಕನ್ವರ್ಟರ್' ಆಪ್ ಅನ್ನು ನಿಮ್ಮ ಡಿವೈಸ್ಗೆ ಇನ್ಸ್ಟಾಲ್ ಮಾಡಿಕ

*ಮಕ್ಕಳ ಆಧಾರ್‌ ನೋಂದಣಿಗೆ ಬಂತು ಟ್ಯಾಬ್ಲೆಟ್‌*! Sep 22, 2016,

*ಮಕ್ಕಳ ಆಧಾರ್‌ ನೋಂದಣಿಗೆ 2 ಸಾವಿರ ಟ್ಯಾಬ್ಲೆಟ್‌* * *ಅಂಗನವಾಡಿ ಮೇಲ್ವಿಚಾರಕರಿಗೆ ವಿತರಣೆ** *ಟ್ಯಾಬ್ಲೆಟ್‌ ಖರೀದಿಗೆ 4.08 ಲಕ್ಷ ರೂ. ವೆಚ್ಚಅಂಗನವಾಡಿ ಕೇಂದ್ರಗಳಲ್ಲಿ ಆರಂಭವಾಗಿರುವ ನೋಂದಣಿ*ಡಿ. 31ರ ವೇಳೆಗೆ 41 ಲಕ್ಷ ಮಕ್ಕಳ ನೋಂದಣಿ ಗುರಿ* ಬೆಂಗಳೂರು ನವಜಾತ ಶಿಶು ಸೇರಿದಂತೆ ಆರು ವರ್ಷದೊಳಗಿನ ಎಲ್ಲ ಮಕ್ಕಳ ಆಧಾರ್‌ ನೋಂದಣಿ ಕಾರ್ಯಕ್ಕೆ 2 ಸಾವಿರ ಟ್ಯಾಬ್ಲೆಟ್‌ಗಳನ್ನು (ಕಿರು ಕಂಪ್ಯೂಟರ್‌) ಇ-ಆಡಳಿತ ಇಲಾಖೆ ಖರೀದಿಸಿದೆ. ಈಗಾಗಲೇ ಅಂಗನವಾಡಿಗಳಿಗೆ ಟ್ಯಾಬ್ಲೆಟ್‌ಗಳನ್ನು ವಿತರಿಸಿದ್ದು, ನೋಂದಣಿ ಕಾರ್ಯ ಆರಂಭವಾಗಿದೆ. (Mallikarjun Hulasur) ಸರಕಾರಿ ಸವಲತ್ತು ಪಡೆಯಲು ಬಹುಮುಖ್ಯ ಆಧಾರವಾಗಿರುವ 'ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಆಧಾರ್‌) ಡಿ. 31ರೊಳಗೆ ಎಲ್ಲ ಮಕ್ಕಳಿಗೆ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜತೆಗೂಡಿ 'ಇಂಟೆಲಿಕ್‌ ಸಿಸ್ಟಂ' ಎಂಬ ಕಂಪೆನಿಯಿಂದ 2 ಸಾವಿರ ಟ್ಯಾಬ್ಲೆಟ್‌ಗಳನ್ನು ಖರೀದಿಸಲಾಗಿದೆ. ಟ್ಯಾಬ್ಲೆಟ್‌ ಮತ್ತು ಬೆರಳಚ್ಚು ಮುದ್ರಣದ ಪರಿಕರಗಳ ಖರೀದಿಗೆ 4.08 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಮೊತ್ತವನ್ನು ಇ-ಆಡಳಿತ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಭರಿಸಿವೆ. ರಾಜ್ಯದಲ್ಲಿ 61,187 ಅಂಗನವಾಡಿಗಳು ಮತ್ತು 3331 ಮಿನಿ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸುಮಾರು 41 ಲಕ್ಷ ಮಕ

ಮೆಟ್ರೊ ನೇಮಕ 'ಕೀ-ಉತ್ತರ ಪ್ರಕಟ' Sep 22, 2016, 04.00 AM IST

Image
metro A A A ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ ಖಾಲಿ ಇರುವ ಮೇಂಟೇನರ್ಸ್‌, ಟ್ರೈನ್ ಆಪರೇಟರ್ಸ್‌ ಮತ್ತು ಸೆಕ್ಷನ್ ಎಂಜಿನಿಯರ್‌ಗಳ ಹುದ್ದೆ ಭರ್ತಿಗೆ ಸೆ. 18ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ - ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕೀ- ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆಸಕ್ತರು ಇ-ಮೇಲ್ ವಿಳಾಸ:.  keauthority-ka@nic.in  (mail should be titled as BMRCL-2016 - Objection - Subject) on or before 26-09-2016 before 5.30 pm.   ಮೂಲಕ ಸೆ. 26ರಂದು ಸಂಜೆ 5.30ರೊಳಗೆ ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸುವಾಗ ಪರೀಕ್ಷಾ ವಿಷಯ, ಮಾಸ್ಟರ್ ಪತ್ರಿಕೆಯ ಪ್ರಶ್ನೆ ಸಂಖ್ಯೆಯ ಜತೆಗೆ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆಧಾರರಹಿತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ಪ್ರಾಧಿಕಾರದ ವೆಬ್‌ಸೈಟ್ ವಿಳಾಸ. kea.kar.nic.in

ಸ್ವಾತಂತ್ರ್ಯ ಯೋಧರ ಪಿಂಚಣಿ ಏರಿಕೆ ಏಜೆನ್ಸೀಸ್ | Sep 22, 2016, 04.00 AM IST

Image
hike-contribution-to-ensure-rs-1000-minimum-pension-epfo-to-government A A A ಹೊಸದಿಲ್ಲಿ: ಸ್ವಾತಂತ್ರ್ಯ ಯೋಧರ ಮಾಸಿಕ ಪಿಂಚಣಿಯನ್ನು ಶೇಕಡ 20ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅಸ್ತು ಎಂದಿದೆ. ಈ ಬಾರಿ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ 'ಫ್ರೀಡಂ ಫೈಟರ್‌'ಗಳ ಪಿಂಚಣಿ ಹೆಚ್ಚಿಸುವ ಭರವಸೆ ನೀಡಿದ್ದರು. ಅದೀಗ ಈಡೇರಿದ್ದು, ಪರಿಷ್ಕೃತ ಪಿಂಚಣಿಯು ಆಗಸ್ಟ್‌ಗೆ ಪೂರ್ವಾನ್ವಯವಾಗುವಂತೆ ಸ್ವಾತಂತ್ರ್ಯ ಯೋಧರಿಗೆ, ವಿಧವಾ ಪತ್ನಿಯರಿಗೆ, ಇಲ್ಲವೇ ಕುಟುಂಬದ ಅವಲಂಬಿತರ ಕೈಸೇರಲಿದೆ. ಅಂಡಮಾನ್‌ ಜೈಲು ಸೇರಿದ್ದ ಹೋರಾಟಗಾರರ ಪಿಂಚಣಿಯನ್ನು 24,775 ರೂ.ನಿಂದ 30,000ರೂ.ಗೆ ಏರಿಸಲಾಗಿದ್ದರೆ, ಬ್ರಿಟಿಷ್‌ ವ್ಯಾಪ್ತಿಯ ಹೊರತಾದ ಪ್ರದೇಶಗಳಲ್ಲಿ ಶಿಕ್ಷೆ ಅನುಭವಿಸಿದ ದೇಶಭಕ್ತರ ಪಿಂಚಣಿಯನ್ನು 23,085 ರೂ.ನಿಂದ 28,000 ರೂ.ಗೆ ಏರಿಕೆ ಮಾಡಲಾಗಿದೆ. ಉಳಿದಂತೆ ಇಂಡಿಯನ್‌ ನ್ಯಾಷನಲ್‌ ಆರ್ಮಿ ಸದಸ್ಯರೂ ಸೇರಿ ಇತರ ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನು 21,395 ರೂ.ನಿಂದ 26,000 ರೂ.ಗೆ ಹೆಚ್ಚಿಸಲಾಗಿದೆ

ಕೆ–ಸೆಟ್‌: ಡಿಸೆಂಬರ್‌ 11ಕ್ಕೆ ಪರೀಕ್ಷೆ 21 Sep, 2016:-ಪ್ರಜಾವಾಣಿ ವಾರ್ತೆ

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಗೆ (ಕೆ–ಸೆಟ್‌) ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಪರೀಕ್ಷೆ ಡಿ. 11ರಂದು ನಡೆಯಲಿದೆ. ಪ್ರಕ್ರಿಯೆ ಸೆ. 26ರಂದು ಆರಂಭವಾಗಲಿದ್ದು, ದಂಡಶುಲ್ಕ ರಹಿತವಾಗಿ ಅ. 25 ಮತ್ತು ದಂಡ ಸಹಿತವಾಗಿ ನ. 4ರ ವರೆಗೆ (ಸಂಜೆ 5 ಗಂಟೆ) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ವರ್ಗ ₹ 1,050, ಪ್ರವರ್ಗ 2ಎ, 2ಬಿ, 3ಎ, 3ಬಿ ₹ 850 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1, ಅಂಗವಿಕಲ ಅಭ್ಯರ್ಥಿಗಳಿಗೆ ₹ 550 ಪರೀಕ್ಷಾ ಶುಲ್ಕ ನಿಗಪಡಿಸಲಾಗಿದೆ. ₹ 150 ದಂಡಶುಲ್ಕ ಪಾವತಿಸಿ ನ. 4ರ ವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸ್ವವಿವರ ಮತ್ತು ಶೈಕ್ಷಣಿಕ ಮಾಹಿತಿ ನೋಂದಣಿ ಮಾಡಿದ ನಂತರ, ಕೆನರಾ ಬ್ಯಾಂಕ್‌ ಶಾಖೆಗಳಲ್ಲಿ ಅಥವಾ ಡೆಬಿಟ್‌, ಕ್ರೆಡಿಟ್‌, ನೆಟ್‌ಬ್ಯಾಂಕಿಂಗ್‌, ನೆಫ್ಟ್‌ ಮೂಲಕ ಶುಲ್ಕ ಪಾವತಿಸಬಹುದು. ಶುಲ್ಕ ಪಾವತಿಸಿದ ನಂತರ ಅರ್ಜಿ ಮತ್ತು ರಸೀತಿ, ಚಲನ್‌, ಹಾಜರಾತಿ ಪ್ರತಿಗಳನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅರ್ಜಿ ಪ್ರತಿ, ಹಾಜರಾತಿ ಪತ್ರ, ಅಂಕಪಟ್ಟಿ, ಇತರ ದಾಖಲೆಗಳನ್ನು ಎ–4 ಲಕೋಟೆಯಲ್ಲಿ ನ. 10ರ ಒಳಗೆ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ನೋಡೆಲ್‌ ಅಧಿಕಾರಿಗೆ ಸಲ್ಲಿಸಬೇಕು. ವಿವಿಧ 39 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ,

*ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯಕ್ಕೆ "ಅಕ್ಕಮಹಾದೇವಿ ವಿಶ್ವವಿದ್ಯಾಲಯ" ಎಂದು ಸರ್ಕಾರ ನಾಮಕರಣ ಮಾಡಿದೆ*☝

Image

5,311 ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕ

Image
Sep 21, 2016, 04.00 AM IST police-costables A A A ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ / ಈ ಬಾರಿ ಲಿಖಿತ ಪರೀಕ್ಷೆ ಮೊದಲು * ನಾಗರಿಕ ಪೊಲೀಸ್‌ ಕನ್ಸ್‌ಟೇಬಲ್‌ -3477 * ಸಶಸ್ತ್ರ ಪೊಲೀಸ್‌ ಕನ್ಸ್‌ಟೇಬಲ್‌- 1834 ರಾಜ್ಯ ಪೊಲೀಸ್‌ ಇಲಾಖೆಯಲ್ಲೀಗ ಉದ್ಯೋಗ ಸುಗ್ಗಿ. ಎರಡು ದಿನಗಳ ಹಿಂದೆ 544 ಸಬ್‌ಇನ್ಸ್‌ ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದ ಇಲಾಖೆಯು ಇದೀಗ ಬರೋಬ್ಬರಿ 5,311 ಪೊಲೀಸ್‌ ಕಾನ್ಸ್‌ಟೇಬಲ್‌ಗಳ ನೇಮಕಕ್ಕೆ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್‌ 21ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್‌ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಹತೆಗಳೇನು? ನಾಗರಿಕ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಹೊಂದಿರುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 19ರಿಂದ 27 ವರ್ಷ. ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ರಿಂದ 27 ವರ್ಷ. ಎಸ್‌ಎ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 2 ವರ್ಷ ಹಾಗೂ ಬುಡಕಟ್ಟು ಜ