Posts

ನಿಮ್ಮ SBI ATM ಕಾರ್ಡ್ ನ್ನು SMS ಮೂಲಕ ON ಅಥವಾ OFF ಮಾಡುವ ವಿಧಾನ (operator charges apply for sms)

Image

ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ* January 8, 2 016 ರಂದು

*ಜವಾಹರ್ ನವೋದಯ ವಿದ್ಯಾಲಯಕ್ಕೆ 6 ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆ ಜನವರಿ 8. 2017 ರಂದು ಬೆಳಿಗ್ಗೆ 11-30 ರಿಂದ 1-30 ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ.* *ಆಯಾ ಜಿಲ್ಲೆಯ ನೋಂದಾಯಿತ ವಿದ್ಯಾರ್ಥಿಗಳು ಪ್ರವೇಶಪತ್ರಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.*

Expected new IT slabs .. ವಾರ್ಷಿಕ 4 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ?

ವಾರ್ಷಿಕ 4 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ? ಏಜೆನ್ಸೀಸ್ | Dec 20, 2016, 03.00 AM IST ಹೊಸದಿಲ್ಲಿ:ನೋಟು ರದ್ದಿನ ಲಾಭವನ್ನು ಜನರಿಗೆ ವರ್ಗಾಯಿಸುವುದಾಗಿ ಪ್ರಧಾನಿ ಹೇಳಿದ ಬೆನ್ನಿಗೆ ಆದಾಯ ತೆರಿಗೆ ಪದ್ದತಿಯಲ್ಲಿ ಭಾರೀ ಬದಲಾವಣೆಯ ಸುಳಿವು ಲಭಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ವಾರ್ಷಿಕ 2.5 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗಳಿಗೆ ಹೆಚ್ಚಿಸಲು ಮತ್ತು 4ರಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.10ರಷ್ಟು, 10ರಿಂದ 15 ಲಕ್ಷ ರೂ.ವರೆಗಿನ ವರಮಾನಕ್ಕೆ ಶೇ.15, 15ರಿಂದ 20 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.20, 20ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲು ಕೇಂದ್ರ ಚಿಂತನೆ ನಡೆಸಿದೆ. ಸದ್ಯವೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ನೀತಿಸಂಹಿತೆ ಜಾರಿಗೆ ಬರುವುದರಿಂದ ಅದಕ್ಕಿಂತ ಮೊದಲು ಹೊಸ ಆದಾಯ ತೆರಿಗೆ ನಿಯಮವನ್ನು ಘೋಷಿಸುವ ಸಾಧ್ಯತೆ ಇದೆ. ಹೊಸ ನಿಯಮ ಜಾರಿಗೆ ಬಂದರೆ ದೇಶದ ಬಹುಸಂಖ್ಯಾತ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ರಿಲೀಫ್‌ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ತೆರಿಗೆ ನೀತಿಯಲ್ಲಿ ಬದಲಾವಣೆ ವರದಿಯನ್ನು ಸರಕಾರ ತಳ್ಳಿಹಾಕಿದೆ. ಇದೊಂದು ಆಧಾರರಹಿತ ವರದಿ ಎಂದು ಸರಕಾರದ ವಕ್ತಾರ ಫ್ರಾಂಕ್‌ ನರ್ಹೋನಾ ಹೇಳಿದ್ದಾರೆ The proposed tax slabs, as reported by the channel belonging to Network18, are as follows: Income of Rs 4 lakh to 10 lakh m

ಭಾರತೀಯ ಭೂಸೇನೆ, ವಾಯುಪಡೆಗೆ ನೂತನ ದಳಪತಿಗಳು

Image
ಹೊಸದಿಲ್ಲಿ: ಭಾರತೀಯ ಭೂಸೇನೆ ಮತ್ತು ವಾಯುಪಡೆಗೆ ನೂತನ ದಳಪತಿಗಳ ನೇಮಕ ನಡೆದಿದೆ. ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ರಾವತ್‌ ಅವರು ಭೂಸೇನೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅದೇ ರೀತಿ ಏರ್‌ ಮಾರ್ಷಲ್‌ ಬಿ ಎಸ್‌ ಧನೋವಾ ಅವರು ವಾಯುಪಡೆಯ ಸಾರಥ್ಯವಹಿಸಿಕೊಳ್ಳಲಿದ್ದಾರೆ. ಹಾಲಿ ಮುಖ್ಯಸ್ಥರಾದ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಮತ್ತು ಏರ್‌ ಮಾರ್ಷಲ್‌ ಅರೂಪ್‌ ರಾಹಾ ಅವರ ಅಧಿಕಾರಾವಧಿ ಶೀಘ್ರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯಸ್ಥರ ನೇಮಕ ನಡೆದಿದೆ. ಜನವರಿ 10ರಂದು ಭೂಸೇನಾ ಮುಖ್ಯಸ್ಥ ಜನರಲ್‌ ಸುಹಾಗ್‌ ನಿವೃತ್ತಿಗೊಳ್ಳುತ್ತಿದ್ದು, ಅವರ ಉತ್ತರಾಧಿಕಾರಿಯಾಗಿ ರಾವತ್‌ ನೇಮಕ ನಡೆದಿದೆ. ವಿಳಂಬವಾಗಿ ಪ್ರಕಟ ನಿಯಮದ ಪ್ರಕಾರ ಹಾಲಿ ಭೂಸೇನಾ ಮುಖ್ಯಸ್ಥರು ಹುದ್ದೆಯಿಂದ ನಿವೃತ್ತರಾಗುವುದಕ್ಕೆ ಕನಿಷ್ಠ 60 ದಿನ ಮೊದಲು ಹೊಸ ಮುಖ್ಯಸ್ಥರ ಹೆಸರು ಪ್ರಕಟಿಸಬೇಕು. ಸಶಸ್ತ್ರಪಡೆಯ ಎಲ್ಲರಿಗೂ ಹೊಸ ಮುಖ್ಯಸ್ಥರು ಪರಿಚಿತರಾಗಲು ಮತ್ತು ಸೇನಾ ಮುಖ್ಯಸ್ಥರ ಕೆಲಸಗಳನ್ನು ಹೊಸ ಮುಖ್ಯಸ್ಥರು ಅರಿತುಕೊಳ್ಳಲು ಸಹಾಯವಾಗಬೇಕು ಎಂಬ ಕಾರಣದಿಂದ ಈ ನಿಯಮ ರೂಪಿಸಲಾಗಿದೆ. ಆದರೆ, ಜ. ದಲ್ಬೀರ್‌ ನಿವೃತ್ತರಾಗುವುದಕ್ಕೆ ಒಂದು ತಿಂಗಳೂ ಉಳಿದಿಲ್ಲ. ಹೊಸ ಮುಖ್ಯಸ್ಥರ ನೇಮಕ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ನುರಿತ ಸೇನಾನಿ ರಾವತ್‌ ಲೆ.ಜ.ರಾವತ್‌ ಒಬ್ಬ ನುರಿತ ಸೇನಾನಿ. ಡೆಹ್ರಾಡೂನ್‌ನ ಸೈನಿಕ ಶಾಲೆಯಲ್ಲಿ ಪದವಿ ಪಡೆದ ಲೆ.ಜ.ರಾವತ್‌ 19

ಪಂಕಜ್‌ಗೆ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ Monday, 12.12.2016

ಬೆಂಗಳೂರು:  ಭಾರತದ ಅಗ್ರ ಬಿಲಿಯರ್ಡ್ಸ್ ಆಟಗಾರ ಪಂಕಜ್ ಆಡ್ವಾಣಿ ತನ್ನ ವೃತ್ತಿ ಜೀವನದ 11 ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು ಪೀಟರ್ ಗಿಲ್‌ಕ್ರಿಸ್ಟ್ ಅವರನ್ನು ಸುಲಭದಲ್ಲಿ ಸೋಲಿಸಿದರು. ಫೈನಲ್‌ನಲ್ಲಿ ಆಡ್ವಾಣಿ ಎರಡು ಬಾರಿಯ ವಿಶ್ವಚಾಂಪಿಯನ್ ಗಿಲ್‌ಗ್ರಿಸ್ಟ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದರು. ಅವರು ಗಿಲ್‌ಕ್ರಿಸ್ಟ್ ಅವರನ್ನು 151-33, 150-95, 124-150, 101-150, 150-50, 152-37, 86-150, 151-104, 150-15 ಅಂತರದಿಂದ ಸೋಲಿಸಿದರು. ಆರಂಭದ ಎರಡು ಗೇಮ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಂಕಜ್ 150-33, 150-95 ಅಂತರದಿಂದ ಜಯಿಸಿದ್ದರು. ಬಳಿಕ ತಿರುಗಿ ಬಿದ್ದ ಗಿಲ್‌ಗ್ರಿಸ್ಟ್ ಸತತ ಮೂರು ಗೇಮ್‌ಗಳನ್ನು ಗೆಲ್ಲುವ ಮೂಲಕ ಪಂಕಜ್‌ರವರನ್ನು ಒತ್ತಡಕ್ಕೆ ತಳ್ಳಿದರು. ಆದರೆ ಅನುಭವಿ ಪಂಕಜ್ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿದ್ದು, ಸತತ ಗೇಮ್‌ಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿದರು. ಸೆಮಿಫೈನಲ್‌ನಲ್ಲಿ ಪಂಕಜ್ ಮ್ಯಾನ್ಮರ್‌ನ ಹಾಟೆ ವಿರುದ್ಧ 5-0 ಅಂಯತರದಿಂದ ಜಯಿಸಿದರು. ಗಿಲ್‌ಕ್ರಿಸ್ಟ್ ಧ್ವಜ್ ಹರಿಯಾ ವಿರುದ್ಧ 5-1 ಅಂತರದಿಂದ ಜಯಿಸಿ ಫೈನಲ್‌ಗೇರಿದ್ದರು.

2017ರ ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Image
ಬೆಂಗಳೂರು ಡಿ.12 :  2017ರ ಮೇ ತಿಂಗಳಿನಲ್ಲಿ ನಡೆಯುವ ಸಿಇಟಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟ ಮಾಡಿದೆ. ಮುಂದಿನ ವರ್ಷದಿಂದ ವೈದ್ಯಕೀಯ ಸೀಟುಗಳಿಗೆ ನೀಟ್ ಕಡ್ಡಾಯವಾಗಿರುವ ಕಾರಣ ವೈದ್ಯಕೀಯ ಸೀಟು ಹೊರತುಪಡಿಸಿ ಎಂಜಿನಿಯರಿಂಗ್, ಆಯುಷ್ ಹಾಗೂ ಕೃಷಿ ಎಂಜಿನಿಯರಿಂಗ್ ಸೀಟುಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಮೇ 2ರಂದು ಬೆಳಗ್ಗೆ ಜೀವಶಾಸ್ತ್ರ ನಡೆದರೆ ಮಧ್ಯಾಹ್ನದ ಬಳಿಕ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಈ ನಾಲ್ಕು ವಿಷಯಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ. ಬೆಳಗ್ಗೆ ನಡೆಯುವ ಪರೀಕ್ಷೆಗಳು ಬೆಳಗ್ಗೆ 10.30ರಿಂದ 11.50ರವರೆಗೆ ನಡೆದರೆ ಮಧ್ಯಾಹ್ನದ ಪರೀಕ್ಷೆಗಳು 2.30ರಿಂದ 3.50ರವರೆಗೆ ನಡೆಯಲಿದೆ.  ಹೊರ ನಾಡು, ಗಡಿನಾಡು ಕನ್ನಡಿಗರಿಗೆ 50 ಅಂಕಗಳಿಗೆ ಮಾತ್ರ ನಡೆಯುವ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ನಡೆಯಲಿದೆ.

105 ಗ್ರಾಮಲೆಕ್ಕಾಧಿಕಾರಿ ಹುದ್ದೆ ಗಳಿಗೆ ನೇಮಕಾತಿ ಅಧಿಸೂಚನೆ(ಮೈಸೂರು ಜಿಲ್ಲೆಯಲ್ಲಿ)

Image