Posts

ಕನ್ನಡಕ್ಕೆ ಕಿರೀಟ ತೊಡಿಸಿರುವ “ಜ್ಞಾನಪೀಠ ಪ್ರಶಸ್ತಿ”ಯ ಪಕ್ಷಿನೋಟ

Image
ಕನ್ನಡಕ್ಕೆ ಕಿರೀಟ ತೊಡಿಸಿರುವ "ಜ್ಞಾನಪೀಠ ಪ್ರಶಸ್ತಿ"ಯ ಪ ಕ್ಷಿನೋಟ ವಿಶೇಷ ಲೇಖನ: ಬಿ. ಕೆ. ಗಣೇಶ್ ರೈ, ದುಬೈ. ಆತ್ಮೀಯರೇ, ನವೆಂಬರ್ ತಿಂಗಳು ಮುಗಿಯಿತು ನೂತನ ವರ್ಷದ ಬರುವಿಕೆಯ ನಿರೀಕ್ಷೆಯಲ್ಲಿರುವ ಕನ್ನಡಿಗರು  ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ತಿಂಗಳು ಪೂರ್ತಿ ಕನ್ನಡದ ಬಾವುಟ ಹಾರಿಸಿಯಾಯಿತು. ರಸಮಂಜರಿ, ಹಾಸ್ಯ, ನಾಟಕ, ಕನ್ನಡ ಜನಪದ ಗೀತೆಗಳು ಧ್ವನಿವರ್ಧಕಕದ ಮೂಲಕ ಆಲಿಸಿ ಮೈಮನ ಮುದಗೊಳಿಸಿ ಕೊಂಡಾಯಿತು. ವೇದಿಕೆಯ ಮೇಲೆ ಭಾಷಣಕಾರರ ಕನ್ನಡ ಅಭಿಮಾನವನ್ನು ಜಾಗೃತಿಗೊಳಿಸುವ ವೀರಾವೇಶದ ಮಾತುಗಳು. ಕನ್ನಡಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಎದೆಯುಬ್ಬಿಸಿ ಮಾತಾನಾಡದಿದ್ದರೆ ಕನ್ನಡ ಭಾಷಣ ಅಪೂರ್ಣವಾಗುತ್ತದೆ. ಇಂತಹ ಜ್ಞಾನ ಪೀಠ ಪ್ರಶಸ್ತಿ ಇನ್ನಿತರ ಪ್ರಶಸ್ತಿಗಳಿಗಿಂತ ಎತ್ತರದ ಸ್ಥಾನದಲ್ಲಿದ್ದು ಹೆಚ್ಚು ಗೌರವವನ್ನು ಪಡೆದಿದೆ. ಈ ಶುಭ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಬೆಳಕು ಚೆಲ್ಲುವ ಅಪೂರ್ವ ಲೇಖನ…..   "ಜ್ಞಾನ ಪೀಠ ಪ್ರಶಸ್ತಿ" ವಿಶ್ವದಲ್ಲಿ ಅತ್ಯುನ್ನತ ಪುರಸ್ಕಾರ ನೋಬೆಲ್ ಪ್ರಶಸ್ತಿಯಾದರೆ, ಭಾರತದಲ್ಲಿ ನೋಬೆಲ್ ಪುರಸ್ಕಾರದಷ್ಟೆ ಉನ್ನತ ಸ್ಥಾನದಲ್ಲಿರುವುದು 'ಜ್ಞಾನಪೀಠ ಪ್ರಶಸ್ತಿ'. ಭಾರತ ಸರ್ಕಾರವು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅತ್ಯುತ್ಕೃಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತ ರಾಷ್ಟ್ರ ಭಾಷೆ ಹಿಂದಿ ಮತ್ತು ಉಳಿದ ಭಾಷೆಗಳಾದ

ಮದರ್ ತೆರೆಸಾಗೆ ಸಂತ ಪದವಿ : ಪಶ್ಚಿಮಬಂಗಾಳ ಸಿಎಂ ಮಮತಾ ಸ್ವಾಗತ

ಕೋಲ್ಕತಾ, ಡಿ.೧೯-ಮಹಾನ್ ಮಾನವತಾವಾದಿ, ದೀನ ದಲಿತರ ಸೇವಕಿಯಾಗಿ ಜೀವ ಸವೆಸಿದ ಮದರ್ ತೆರೆಸಾ ಅವರನ್ನು ಸಂತ ಪದವಿಗೆ ಏರಿಸುವ ವ್ಯಾಟಿಕನ್ ಪೋಪ್ ಅವರ ನಿರ್ಧಾರವನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾರ್ಧಿಕವಾಗಿ ಸ್ವಾಗತಿಸಿದ್ದಾರೆ. ಮನುಕುಲದ ಒಳಿತಿಗಾಗಿ ಬದುಕಿದ ಮದರ್ ತೆರೆಸಾ ಅವರಿಗೆ ೨೦೧೬ರಲ್ಲಿ ಸಂತ ಪದವಿ ದೊರೆಯುತ್ತಿರುವುದು ನಮಗೆ ಅತ್ಯಂತ ಹರ್ಷ ತಂದಿದೆ ಎಂದು ಮಮತಾ ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ. ಸಧ್ಯದಲ್ಲೇ ಮದರ್ ತೆರೆಸಾ ಅವರಿಗೆ ಮರಣೋತ್ತರ ಸಂತ ಪದವಿ ನೀಡಿ ಗೌರವಿಸಲಾಗುವುದು.

ಜನವರಿಯಿಂದ ಜಾರಿಯಾಗಲಿದೆ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ:*

ಬೆಂಗಳೂರು, ಡಿ.18-ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ, ಅನುದಾನಿತ ಸಂಸ್ಥೆಗಳ ನೌಕರರಿಗೆ 2016ನೆ ವರ್ಷದ ಗಳಿಕೆ ರಜೆಯನ್ನು ಅದ್ಯರ್ಪಿಸಿ (ಹಿಂ ದಿರುಗಿಸಿ), ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಜನವರಿ 1 ರಿಂದ ಜಾರಿಗೆ ಬರಲಿದೆ. 2016ನೇ ವರ್ಷದಲ್ಲಿ ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅದ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಸರ್ಕಾರಿ ಅಧಿಕಾರಿ ಮತ್ತು ನೌಕರರು ಒಂದು ತಿಂಗಳು ಮುಂಚೆ ನೋಟಿಸ್ ನೀಡಿ ಈ ಸೌಲಭ್ಯ ಪಡೆಯಬೇಕಿದೆ. ಡಿ ಗ್ರೂಪ್ ನೌಕರರು 2016ನೆ ಕ್ಯಾಲೆಂಡರ್ ವರ್ಷದ ಯಾವುದೇ ತಿಂಗಳಿನಲ್ಲಿ ಸ್ವಇಚ್ಛೆಯಂತೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದು. ಎ, ಬಿ ಮತ್ತು ಸಿ ಗುಂಪಿನ ನೌಕರರು ಏಪ್ರಿಲ್ನಿಂದ ಡಿಸೆಂಬರ್ ನಡುವಿನ ಯಾವುದೇ ತಿಂಗಳಿನಲ್ಲಿ ರಜೆ ನಗದೀಕರಣ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಷರತ್ತುಗಳು ಏನೇ ಇದ್ದರೂ ಜನವರಿಯಿಂದ ಮಾರ್ಚ್ ನಡುವೆ ವಯೋನಿವೃತ್ತಿ ಹೊಂದುವ ಎಲ್ಲಾ ಅರ್ಹ ಅಧಿಕಾರಿ ಮತ್ತು ನೌಕರರು ನಿವೃತ್ತಿಯಾಗುವ ತಿಂಗಳಲ್ಲಿ ನಗದೀಕರಣ ಪ್ರಯೋಜನ ಪಡೆಯುವ ಅವಕಾಶವಿದೆ. ನಾಗರಿಕ ಸೇವಾ ನಿಯಮಗಳ ಅನ್ವಯ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗಲಿವೆ. ಈ ಆದೇಶವು ಈಗಾಗಲೇ ಇಂಥ ಸೌಲಭ್ಯ ವಿಸ್ತರಣೆಯಾಗಿರುವ ಸರ್ಕ

ಮಕ್ಕಳಿಗೆ ಶೂ ಬದಲು ಪಾದರಕ್ಷೆ

Image

ಕ.ರಾ.ರ.ಸಾ.ನಿ. ದಲ್ಲಿ ಚಾಲಕ ಕಂ ನಿರ್ವಾಹಕ ದರ್ಜೆ-೩ ಹುದ್ದೆಗಳನ್ನು ನೇಮಕಾತಿ :ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ದಿ. 28/12/2015 ರಿಂದ

Image

ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ ‘ದಲಿತರ ದಿನ’

ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ 'ದಲಿತರ ದಿನ' 18 Dec, 2015 ಪ್ರಜಾವಾಣಿ ವಾರ್ತೆ ಬೆಂಗಳೂರು: ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಇನ್ನು ಮುಂದೆ ಪ್ರತಿ ತಿಂಗಳ 2ನೇ ಭಾನುವಾರ 'ದಲಿತರ ದಿನ' ಆಚರಣೆ ಯಾಗಲಿದೆ! ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರ ವಿರುದ್ಧ ನಡೆಯುವ ದೌರ್ಜನ್ಯಗಳ ಕುರಿತು ದಾಖಲಾಗುವ ದೂರುಗಳಿಗೆ ಪೊಲೀಸರು ಸಮರ್ಪಕ ವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪಗಳು ಕೇಳಿಬಂದಿದ್ದವು. ಈ ಕಾರಣಕ್ಕೆ 'ದಲಿತರ ದಿನ' ಆಚರಣೆ ನಿಯಮ ಜಾರಿಗೆ ತರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯವಸ್ಥೆಯನ್ನು ಮೊದಲೇ ಜಾರಿಗೆ ತರಲಾಗಿತ್ತು. ಆದರೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಈ ನಿಯಮವನ್ನು ಕಡ್ಡಾಯಗೊಳಿಸಿ ರಾಜ್ಯ ಪೊಲೀಸ್ ಇಲಾಖೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಿದೆ. 'ತಿಂಗಳ ಪ್ರತಿ 2ನೇ ಭಾನುವಾರ ಠಾಣಾ ಮಟ್ಟದಲ್ಲಿ ಸಭೆ ನಡೆಸಬೇಕು. ಸ್ಥಳೀಯ ದಲಿತ ಮುಖಂಡರನ್ನು ಸಭೆಗೆ ಆಹ್ವಾನಿಸಿ, ಕುಂದು- ಕೊರತೆ ಆಲಿಸ ಬೇಕು. ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ತತ್ಕ್ಷಣವೇ ವಿಚಾರಣೆ ಪ್ರಾರಂಭಿ ಸಬೇಕು. ಇಲಾಖಾ ಮಟ್ಟದಲ್ಲೇ ಬಗೆಹ ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು' ಎಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕ ಓಂಪ್ರಕಾಶ್ ಹೊರಡಿಸಿರುವ ಸುತ್ತೋಲ

ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ:*

Image
Dec 17, 2015, 12:21 PM IST ಹೊಸದಿಲ್ಲಿ: ಭಾರತದ ಗಣರಾಜ್ಯೋತ್ಸವದ ದಿನದಂದು ಮುಖ್ಯ ಅತಿಥಿಯನ್ನು ಆಹ್ವಾನಿಸುವ ಸಂಪ್ರದಾಯವನ್ನು ಅನುಸರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯ 2016ರ ಜನವರಿ 26ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರನ್ನು ಆಹ್ವಾನಿಸಿದೆ. ಹೊಲಾಂಡೆ ಅವರು ಭಾರತದ ಸರಕಾರದ ಈ ಆಹ್ವಾನವನ್ನು ಸ್ವೀಕರಿಸಿದ್ದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾರತೀಯ ಸೇನೆಯಿಂದ ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ. "ಹೊಲಾಂಡೆ ಅವರ ಭೇಟಿಯಿಂದ ಭಾರತ ಮತ್ತು ಫ್ರಾನ್ಸ್ ನಡುವಿನ ಪ್ರಬಲ ವ್ಯೂಹಾತ್ಮಕ ಭಾಗೀದಾರಿಕೆ ಮತ್ತು ಉಭಯ ದೇಶಗಳ ನಡುವಿನ ವಿಶೇಷ ರೀತಿಯ ಸಂಬಂಧಗಳು ಇನ್ನಷ್ಟು ಸದೃಢವಾಗುವುದೆಂಬ ವಿಶ್ವಾಸ ನಮಗಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯವು ಟ್ವೀಟ್ ಮಾಡಿದೆ. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಒಬಾಮಾ ಜತೆಗೆ ಅವರ ಪತ್ನಿ ಮಿಶೆಲ್ ಒಬಾಮಾ ಕೂಡ ಬಂದಿದ್ದರು.

ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆ:-

Image
ಬೆಂಗಳೂರು: ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, 1 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಪುರಸ್ಕಾರ ಒಳಗೊಂಡಿದೆ. 'ಅಕ್ಷಯ ಕಾವ್ಯ' ತಿರುಮಲೇಶ್ ಅವರ ಮಹತ್ವಾಕಾಂಕ್ಷೆಯ ಕೃತಿಯಾಗಿದ್ದು, ಇದು 'ಆಧುನಿಕ ಮಹಾಕಾವ್ಯ'ದ ವಿಸ್ತಾರವನ್ನು ಒಳಗೊಂಡಿದೆ. ಲೋಕದ ಅನುಭವಗಳನ್ನು ಗಂಡು ಹೆಣ್ಣಿನ ರೂಪಕಗಳ ಮೂಲಕ ಗ್ರಹಿಸುವ ಪ್ರಯತ್ನ ಹಾಗೂ ಬೇರೆ ಬೇರೆ ಲಯಗಳು ಬಳಕೆಯಾಗಿರುವ ವಿಶಿಷ್ಟ ಕಾವ್ಯಪ್ರಯೋಗ ಇದಾಗಿದೆ.

Notification of Morarji desai /kittur Rani Channamma Residential School 6th Enterance Examination-2016 :*

Image
. 1.Change in Question Paper pattern:16x5(all subjects except Hindi)::80Marks+10 marks mental ability(according to their level)+10 marks general knowledge(according to their level) Total 100 Marks. 2.Examination hour reduced from 2.30 hour's to 2.00 hour's. 3.QP are in A,B,C&D series. 4.Applications issued from 15.12.2015. 5.Last date for receiving  applications 20.01.2016 6.Hall tickets issued after the entire applications received at specified date from 25.01.2016 to 31.01.2016. 7.Examination date: 06.03.2016 From 11.00am to 1.00pm. 8.Result announcement 14.03.2016

NEW PROVISIONAL KEY ANSWERS OF KSET - 2015 EXAMINATION HELD ON 06th DECEMBER 2015:- Key answers announced on 16th December 2015- NEW | KSET

http://kset.uni-mysore.ac.in/node/200045

IGNOU B. Ed. Entrance Test RESULT: August, 2015

INDIRA GANDHI NATIONAL OPEN UNIVERSITY Maidan Garhi, New Delhi-110068, INDIA (For Information Only) B. Ed. Entrance Test August, 2015 Results:* check with Enrolment Number: https://studentservices.ignou.ac.in/Openmat/BED2015/BEd_Entrance_Res2015.asp

ಆಸ್ಕರ್ಗೆ ರಂಗಿ ತರಂಗ ನಾಮನಿರ್ದೇಶನ:-

Image
ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ರಂಗಿತರಂಗಕ್ಕೆ ಇನ್ನೊಂದು ಹೆಗ್ಗಳಿಕೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾದ ಅಂತಿಮ ಪಟ್ಟಿಯಲ್ಲಿ ಕನ್ನಡದ ರಂಗಿತರಂಗ ನಾಮನಿರ್ದೇಶನಗೊಂಡಿದೆ. ಭಾರತದಿಂದ ಆಯ್ಕೆಯಾಗಿರುವ ನಾಲ್ಕು ಚಿತ್ರಗಳಲ್ಲಿ ಇದೂ ಒಂದು. * ಪದ್ಮಾ ಶಿವಮೊಗ್ಗ ರಂಗಿತರಂಗ ಚಿತ್ರ ಈಗಾಗಲೇ ವಿದೇಶಿಗರ ಮನಗೆದ್ದಿದೆ. ವಿಭಿನ್ನ ಕಥಾವಸ್ತುವಿರುವ ಸಸ್ಪೆನ್ಸ್ ಆ್ಯಂಡ್ ಥ್ರಿಲ್ಲರ್ ಚಿತ್ರ ಈಗ ಆಸ್ಕರ್ ಹೊಸ್ತಿಲಲ್ಲಿದೆ. ವಿಶ್ವಾದ್ಯಂತ ಸ್ಪರ್ಧೆಗೆ ಬಂದಿದ್ದ ಸಾವಿರಾರು ಚಿತ್ರಗಳಲ್ಲಿ 305 ಚಿತ್ರಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ನಾಲ್ಕು ಭಾಷೆಯ ಚಿತ್ರಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಈ ಕನ್ನಡ ಚಿತ್ರವೂ ಒಂದು. ಇಷ್ಟೇ ಅಲ್ಲದೇ, ನಟರಾದ ನಿರೂಪ್ ಭಂಡಾರಿ, ಸಾಯಿ ಕುಮಾರ್, ಅರವಿಂದ್ ರಾವ್, ನಟಿಯರಾದ ಅವಂತಿಕಾ ಶೆಟ್ಟಿ, ರಾಧಿಕಾ ಚೇತನ್ ಮತ್ತು ತಂತ್ರಜ್ಞರೂ ಕೂಡಾ ನಾಮಿನೇಟ್ ಆಗಿದ್ದಾರೆ. ಇದು ಅನಿರೀಕ್ಷಿತ ಎನ್ನುತ್ತಾರೆ ನಿರ್ದೇಶಕ ಅನೂಪ್. 'ನಮ್ಮ ಅರ್ಜಿಯನ್ನು ಸ್ವೀಕೃತಿ ಮಾಡಿರುವ ಬಗ್ಗೆ ಸೆಪ್ಟೆಂಬರ್ನಲ್ಲೇ ಆಸ್ಕರ್ ಸಂಸ್ಥೆಯಿಂದ ಲೆಟರ್ ಬಂದಿತ್ತು. ಆದರೆ, ನಾಮಿನೇಟ್ ಮಾಡಿದರೆ ಮಾತ್ರ ಪ್ರಕಟಿಸೋಣ ಎಂದು ಸುಮ್ಮನಿದ್ದೆವು. ಈಗ ಅಂತಿಮ ಪಟ್ಟಿಯಲ್ಲಿ ಚಿತ್ರ ಇರೋದು ಬಹಳ ಖುಷಿಯಾಗ್ತಿದೆ. ಮುಂದೆ ಏನಾಗುತ್ತ

ಪೋಷಕಾಂಶದ ಕಣಜ ಸಪೋಟಾ:*

Image
ಪ.ರಾಮಕೃಷ್ಣ ಶಾಸ್ತ್ರಿ ನಾವು ತಿನ್ನುವ ಹಣ್ಣುಗಳಲ್ಲಿ ಅತ್ಯಂತ ಕಡಿಮೆ ರಾಸಾಯನಿಕ ಮತ್ತು ವಿರಳವಾಗಿ ಕೀಟನಾಶಕಗಳ ಬಳಕೆಯಿಂದ ಬೆಳೆಯುವ ಹಣ್ಣು ಚಿಕ್ಕು ಅಥವಾ ಸಪೋಟಾ. ಚೆನ್ನಾಗಿ ಮಾಗಿದ ಹಣ್ಣು ಬಹು ಸಿಹಿ, ಅಷ್ಟೇ ರುಚಿಕರವೂ ಆಗಿದೆ. ಹಾಗೆಯೇ ತಿನ್ನಲು ಸ್ವಾದಿಷ್ಟ. ಜ್ಯೂಸ್, ಮಿಲ್ಕ್ ಷೇಕ್ ತಯಾರಿಸಿ ಕುಡಿದರೆ ದೇಹಕ್ಕೆ ಇನ್ನೂ ಶಕ್ತಿದಾಯಕ. ಆಹಾರ ತಜ್ಞರು ಇದನ್ನು ಪೌಷ್ಟಿಕಾಂಶಗಳ ಕಣಜವೆಂದೇ ಹೇಳುತ್ತಾರೆ. ಸಪೋಟಾ ಹಣ್ಣುಗಳನ್ನು ತಿನ್ನಲು ಬಿರುಕು, ಸುಕ್ಕು, ಗಾಯಗಳಿಲ್ಲದ ತಾಜಾ ಮಾಗಿದ ಗುಣಲಕ್ಷಣಗಳಿರುವುದನ್ನೇ ಆರಿಸಿಕೊಳ್ಳಬೇಕು. ನೂರು ಗ್ರಾಂ ಸಪೋಟಾ ಹಣ್ಣಿನಲ್ಲಿ 83 ಕ್ಯಾಲೊರಿಗಳಿವೆ. ಇದು ಬಾಳೆಹಣ್ಣು ಮತ್ತು ಸಿಹಿ ಗೆಣಸಿಗೆ ಸಮನಾದುದು. ದಾಳಿಂಬೆ, ದ್ರಾಕ್ಷಿ ಮತ್ತು ಪರ್ಸಿಮನ್ ಹಣ್ಣುಗಳಲ್ಲಿರುವಷ್ಟು ಟ್ಯಾನಿನ್ ಲಭ್ಯವಿದ್ದು ಕರುಳಿನ ಕಾಯಿಲೆ, ಜಠರದುರಿತ ಮತ್ತಿತರ ಸಮಸ್ಯೆಗಳ ನಿವಾರಣೆಯಲ್ಲಿ ಅದು ಸಕ್ರಿಯವಾಗಿದೆ. 'ಎ', 'ಬಿ' ಸಮೂಹ, 'ಇ' ಜೀವಸತ್ವಗಳು ಅದರಲ್ಲಿವೆ. ಹಾಗೆಯೇ ನೂರು ಗ್ರಾಂ ಹಣ್ಣು ತಿಂದರೆ ದೇಹಕ್ಕೆ 25 ಗ್ರಾಂ 'ಸಿ' ಜೀವಸತ್ವ ಲಭಿಸುತ್ತದೆ. ಸುಣ್ಣ, ಕಬ್ಬಿಣ, ತಾಮ್ರ, ಸತು, ರಂಜಕ, ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ನಿಯಾಸಿನ್, ಪ್ಯಾಂಥೋಟಿಕ್ ಮತ್ತು ನಿಯಾಸಿನ್ ಆಮ್ಲಗಳು, ರೈಬೋಫ್ಲೇವಿನ್, ಥಯಾಮಿನ್, ಸೋಡಿಯಂ, ಪೊಟಾಸಿಯಂ

ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ 07 ಸ್ಟೆನೋಗ್ರಾಫರ್ ಹುದ್ದೆಗಳು :*

ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ 07 ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕನ್ನಡ, ಇಂಗ್ಲಿಷ್ ಸ್ಟೆನೋಗ್ರಾಫಿ ಜ್ಞಾನವುಳ್ಳ 18 ರಿಂದ 35 ವರ್ಷದೊಳಗಿನವರು (ನಿಯಮಾನುಸರ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.) ನಿಗದಿತ ಅರ್ಜಿ ನಮೂನೆಯಲ್ಲಿ ದಿನಾಂಕ 30-12-2015ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಿಗಾಗಿ www.courts.gov.in/davangere ವೆಬ್ಸೈಟ್ಗೆ ಭೇಟಿನೀಡಿ. ಅಥವಾ ಅಧಿನೂಚನೆಯ ವಿವರಗಳನ್ನು ಪಡೆಯಲು www.eesanje.com ವೆಬ್ಸೈಟ್ಗೆ ಭೇಟಿನೀಡಿ. ಅಧಿಸೂಚನೆ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : https://goo.gl/eXuJp7

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11 ಟೈಪಿಸ್ಟ್ ಮತ್ತು ಟೈಪಿಸ್ಟ್ ಕಂ ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿ :*

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11 ಟೈಪಿಸ್ಟ್ ಮತ್ತು ಟೈಪಿಸ್ಟ್ ಕಂ ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕನ್ನಡ, ಇಂಗ್ಲಿಷ್ ಟೈಪಿಂಗ್ü ಜ್ಞಾನವುಳ್ಳ 18 ರಿಂದ 35 ವರ್ಷದೊಳಗಿನವರು (ನಿಯಮಾನುಸರ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.) ನಿಗದಿತ ಅರ್ಜಿ ನಮೂನೆಯಲ್ಲಿ ದಿನಾಂಕ 04-01-2016ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಿಗಾಗಿ www.ecourts.gov.in/yadagir ವೆಬ್ಸೈಟ್ಗೆ ಭೇಟಿನೀಡಿ. ಅಥವಾ ಅಧಿನೂಚನೆಯ ವಿವರಗಳನ್ನು ಪಡೆಯಲು www.eesanje.com ವೆಬ್ಸೈಟ್ಗೆ ಭೇಟಿನೀಡಿ. ಅಧಿಸೂಚನೆ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : https://goo.gl/4p5a34

ಬಾಹ್ಯಾಕಾಶದಲ್ಲಿರುವ ಅತಿ ದೊಡ್ಡ ಮಾನವ ನಿರ್ಮಿತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ಐಎಸ್ಎಸ್ ) ಇದೀಗ 15ರ ಸಂಭ್ರಮ:*

ಬಾಹ್ಯಾಕಾಶದಲ್ಲಿರುವ ಅತಿ ದೊಡ್ಡ ಮಾನವ ನಿರ್ಮಿತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ಐಎಸ್ಎಸ್ ) ಇದೀಗ 15ರ ಸಂಭ್ರಮದಲ್ಲಿದೆ . ಜೀವ ವಿಜ್ಞಾನ, ಭೌತ ವಿಜ್ಞಾನ, ಪವನಶಾಸ್ತ್ರ ಹಾಗೂ ಖಗೋಳ ವಿಜ್ಞಾನ ಒಳಗೊಂಡಂತೆ ಹಲವು ವಿಷಯಗಳಲ್ಲಿ ಸಂಶೋಧನೆಗೆ ನೆರವಾಗುತ್ತಿರುವ ಈ ನಿಲ್ದಾಣದಲ್ಲಿ ಮಾನವನ ಉಪಸ್ಥಿತಿ ಆರಂಭವಾಗಿ ಒಂದೂವರೆ ದಶಕ ಕಳೆದಿದೆ . 2000 ಇಸವಿಯ ನವೆಂಬರ್ 2 ರಂದು ಇಲ್ಲಿ ಗಗನಯಾತ್ರಿಗಳು ಮೊದಲು ವಾಸ ಆರಂಭಿಸಿದ್ದರು . ಆ ಬಳಿಕ ನಿರಂತರ 15 ವರ್ಷಗಳ ಕಾಲ ಇಲ್ಲಿ ಮಾನವನ ಉಪಸ್ಥಿತಿ ಇದೆ. ಐಎಸ್ಎಸ್ನ ನಿರ್ಮಾಣ ಕಾರ್ಯ 1998 ರಲ್ಲಿ ಆರಂಭಗೊಂಡಿತ್ತು. ಎರಡು ಎರಡು ವರ್ಷಗಳ ಬಳಿಕ ಇಲ್ಲಿ ಗಗನಯಾತ್ರಿಗಳ ವಾಸ ಆರಂಭವಾಗಿತ್ತು . ಮೂವರು ಗಗನಯಾತ್ರಿಗಳನ್ನು ಹೊತ್ತುಕೊಂಡ ಸೋಯುಜ್ ವ್ಯೋಮನೌಕೆ 2000 ಇಸವಿಯ ಅಕ್ಟೋಬರ್ 31ರಂದು ಗಗನಕ್ಕೆ ನೆಗೆದಿತ್ತು . ಎರಡು ದಿನಗಳ ಬಳಿಕ ( ನವೆಂಬರ್ 2 ರಂದು ) ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಅತಿಹೆಚ್ಚು ವರ್ಷ ಮಾನವನ ಉಪಸ್ಥಿತಿ ಹೊಂದಿದ ಬಾಹ್ಯಾಕಾಶ ನಿಲ್ದಾಣ ಇದು. ಮಿರ್ ಬಾಹ್ಯಾಕಾಶ ನಿಲ್ದಾಣ 9 ವರ್ಷ 357 ದಿನಗಳ ಕಾಲ ಮಾನವನ ಉಪಸ್ಥಿತಿ ಹೊಂದಿತ್ತು . ಆದನ್ನು ಐಎಸ್ಎಸ್ ಮುರಿದಿದೆ . ಈ ಬಾಹ್ಯಾಕಾಶ ನಿಲ್ದಾಣವು ವಿಮಾನ , ರೈಲು ಅಥವಾ ಬಸ್ ನಿಲ್ದಾಣಗಳಂತೆ ಒಂದೇ ಜಾಗದಲ್ಲಿ ನೆಲೆಗೊಂಡಿರುವುದಿಲ್ಲ. ಇದು ಭೂಮಿಯ ಸುತ್ತ ಸುತ್ತುತ್ತಲೇ ಇರುತ್ತದೆ . ಐಎಸ್ಎಸ

ಸಿಂಗಪುರದ 6 ಉಪಗ್ರಹ ಉಡಾವಣೆಗೆ ಇಸ್ರೊ ಸಿದ್ಧತೆ

Image

೨೪ ಮಂದಿ ಕ್ರೀಡಾ ಸಾಧಕರಿಗೆ ಕೆ.ಎ.ಒ ಪ್ರಶಸ್ತಿ ದಿ.೧೬/೧೨/೨೦೧೫

Image

ಗೀಚಿದ ನೋಟು ರದ್ದತಿ ಇಲ್ಲ: ಆರ್.ಬಿ.ಆಯ್:*

Image
15 Dec, 2015 ಮುಂಬೈ (ಪಿಟಿಐ): ಗೀಚಿದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ರಘುರಾಂ ರಾಜನ್ ಸ್ಪಷ್ಟಪಡಿಸಿದ್ದಾರೆ. 'ವರ್ಷಾಂತ್ಯದಲ್ಲಿ ಆರ್ಬಿಐ ಗೀಚಿದ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತದೆ' ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳನ್ನು ನಂಬದಂತೆ ಅವರು ಆಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಗೀಚಿದ ನೋಟುಗಳನ್ನು ಹಿಂದಕ್ಕೆ ಪಡೆದು ಅದರ ಬದಲಾಗಿ ಹೊಸ ನೋಟುಗಳನ್ನು ಚಲಾವಣೆಗೆ ತರುವ ಉದ್ದೇಶವಿದೆ. ಹಾಗೆಂದ ಮಾತ್ರಕ್ಕೆ ಗೀಚಿದ ನೋಟುಗಳು ಕಾನೂನು ಬದ್ಧವಲ್ಲ ಎಂದು ಅರ್ಥವಲ್ಲ. ಅವುಗಳನ್ನು ಎಲ್ಲಿ ಬೇಕಾದರೂ ಬಳಸಬಹುದು. ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ. 2016ರ ಜನವರಿ 1 ರಿಂದ ಗೀಚಿದ ನೋಟುಗಳನ್ನು ಬ್ಯಾಂಕ್ಗಳು ಪಡೆಯುವುದಿಲ್ಲ ಎಂದು ಆರ್ಬಿಐ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ ಎಂಬ ಸಾಮಾಜಿಕ ಮಾಧ್ಯಮಗಳ ವರದಿಯನ್ನು ಆರ್ಬಿಐ ತಳ್ಳಿಹಾಕಿದೆ.

BKS Iyengar’s 97th Birthday: Google Doodle celebrates life of yoga master Creator of 'Iyengar yoga', who suffered from ill-health as a child, taught violinist Yehudi Menuhin the art of yoga and became an international guru:*

Image
 Google has created one of its trademark doodles to celebrate the life of BKS Iyengar, who founded the style of yoga known as 'Iyengar yoga'. Iyengar, whose full name is Bellur Krishnamachar Sundararaja Iyengar, was born in 1918 into a poor family in southern India - one of 13 children, of whom only 10 survived. As a child he suffered from poor health and at the age of 15 one of his brother- in-laws, who ran a yoga school in the state of Mysore, invited Iyengar to visit, in order to improve his health through yoga practice. In 1937, he was 19, he was sent to the city of Pune in the state of Maharashtra to teach yoga but it was not until 1952 that Iyengar became an international guru, after he introduced renowned violinist introduced the violinist Yehudi Menuhin to the art. -- Menuhin was impressed by Iyengar's skills and invited his teacher to Switzerland in 1954. After this introduction Iyengar continued visiting t

ಹಿರಿಯ ನಟ ದಿಲೀಪಕುಮಾರಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ:*

Image
ಬೆಂಗಳೂರು, ಡಿ.೧೪-ಭಾರತೀಯ ಚಿತ್ರರಂಗದ ದಿಗ್ಗಜ ಹಾಗೂ ಹಿರಿಯ ನಟ ದಿಲೀಪ್ಕುಮಾರ್ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ೧೯೯೩ರಲ್ಲಿ ಅತ್ಯುನ್ನತವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ೯೨ರ ಹರೆಯದ ದಿಲೀಪ್ಕುಮಾರ್ ಅವರನ್ನು ಪಾಕಿಸ್ತಾನ ಕೂಡ ಪ್ರತಿಭಾವಂತ ನಟ ಎಂದು ಗೌರವಿಸಿದೆ. ಇಂದು ಮುಂಬೈಯಲ್ಲಿ ದೇಶದ ಎರಡನೇ ಅತ್ಯುತ್ತಮ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಪ್ರದಾನ ಮಾಡಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತಿತರ ಗಣ್ಯರು ಹಾಜರಿದ್ದರು. ದಿಲೀಪ್ ಕುಮಾರ್ ಅವರಿಗೆ ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಈಗಾಗಲೇ ಲಭ್ಯವಾಗಿವೆ. ೮ ಬಾರಿ ಫಿಲಂಫೇರ್ ಪ್ರಶಸ್ತಿ ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಭಾರತೀಯ ನಟ ಎಂಬ ಹೆಗ್ಗಳಿಕೆ ದಿಲೀಪ್ಕುಮಾರ್ ಅವರದು.

ಗೀತಾ ಭಾಸ್ಕರ್ ಶೆಟ್ಟಿ ಮಾನವಾಧಿಕಾರ ಆಯೋಗ ರಾಜ್ಯ ಕಾರ್ಯದರ್ಶಿ:*

Image
ಉದಯವಾಣಿ, Dec 13, 2015, 4:37 PM IST ಪುಣೆ: ಪುಣೆಯ ಸಮಾಜ ಸೇವಕಿ ಗೀತಾ ಭಾಸ್ಕರ ಶೆಟ್ಟಿ ಅವರು ರಾಷ್ಟ್ರೀಯ ಮಾನವಾಧಿಕಾರ ಆಯೋಗ ರಾಜ್ಯ ಕಾರ್ಯದರ್ಶಿ ಯಾಗಿ ನೇಮಕಗೊಂಡಿದ್ದಾರೆ. ಡಿ. 10ರಂದು ನಗರದ ಸದಾಶಿವ್ ಪೇಟ್ನಲ್ಲಿ ಅಂತರಾಷ್ಟ್ರೀಯ ಮಾನವಾಧಿಕಾರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನವಾಧಿಕಾರ ಸಂಘಟನೆ ಅಧ್ಯಕ್ಷ ಶಿವದಾಸ್ ಮಹಾ ಜನ್ ಪ್ರಮಾಣ ಪತ್ರವನ್ನಿತ್ತರು. ಗೀತಾ ಭಾಸ್ಕರ ಶೆಟ್ಟಿ ಕಳೆದ 15 ವರ್ಷಗಳಿಂದ ಪುಣೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ರಾಷ್ಟ್ರೀಯ ಮನವಾಧಿ ಕಾರ ಸಂಘಟನೆಯ ಪುಣೆ ಜಿಲ್ಲಾ ಉಪಾಧ್ಯಕ್ಷೆಯಾಗಿ, ಪುಣೆ ವಡ್ಗಾಂವ್ ಪರಿಸರದ ಎನ್ಸಿಪಿ ಘಟಕದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಮತ್ತು ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮೂಲತಃ ಕಾಸರಗೋಡು ಸಿರಿಬಾಗಿಲು ನಾರಾಯಣ ಶೆಟ್ಟಿ ಮತ್ತು ಕುತ್ತಾರುಗುತ್ತು ರಾಜೀವಿ ಶೆಟ್ಟಿ ದಂಪತಿ ಪುತ್ರಿ.

Symbols of States of India:-

≡≡≡≡≡≡≡≡≡≡≡≡ ► Andhra Pradesh . Animal – Blackbuck Bird – Indian Roller Flower -Water Lily State Dance – Kuchipudi Tree – Neem Sport – Kabaddi . ► Arunachal Pradesh . Animal – Mithun(Gayal) Bird – Great Hornbill Flower – Foxtail Orchid Tree – Hollong . ► Assam . Animal – One Horned Rhinoceros Bird – White Winged Wood Duck Flower – Foxtail Orchid(Kopou phul) Tree – Hollong . ► Bihar . Animal -Gaur Bird – House Sparrow Flower – Marigold Tree – Peepal . ► Chhattisgarh . Animal – Wild Buffalo Bird -Hill Myna Tree – Sal . ► Delhi . Animal – Nilgai Bird – House Sparrow . ► Goa . Animal – Gaur Bird – Black-crested bulbul Tree -Matti . ► Gujarat . Animal – Asiatic Lion Bird – Greater Flemingo Flower – Marigold Fruit – Mango Tree – Banyan . ► Haryana . Animal – Blackbuck Bird – Black Francolin Flower – Lotus Tree – Peepal . ► Himachal Pradesh . Animal – Snow leopard

ಡಿ.18 ರಿಂದ ಯುಪಿಎಸ್ಸಿ ಪರೀಕ್ಷೆ : ಅಂತರ್ಜಾಲ(www.upsc.gov.in)ದಲ್ಲಿ ಪ್ರವೇಶಪತ್ರ ಲಭ್ಯ..*

ನವದೆಹಲಿ, ಡಿ.13-ಬರುವ ಶುಕ್ರವಾರದಿಂದ ಆರಂಭವಾಗಲಿರುವ ಈ ವರ್ಷದ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಯಾವುದೇ ರೀತಿಯ ಪ್ರವೇಶ ಪತ್ರಗಳನ್ನು (ಅಡ್ಮಿಷನ್ ಕಾರ್ಡ್) ವಿತರಣೆ ಮಾಡಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ತಿಳಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ಇನ್ನು ಮುಂದೆ ಅಂತರ್ಜಾಲದಲ್ಲಿ ಇ- ಅಲ್ಮೆಟ್ ಕಾರ್ಡ್ಗಳನ್ನು ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ಔಟ್ ತೆಗೆದುಕೊಳ್ಳಬೇಕು. ಅದೇ ಪ್ರವೇಶಾತಿ ಪತ್ರವನ್ನು ಪರೀಕ್ಷೆಗೆ ತರಬೇಕು ಎಂದು ಯುಪಿಎಸ್ಸಿ ಹೇಳಿದೆ. ಯುಪಿಎಸ್ಸಿ ಡಿ.18 ರಿಂದ 23ರವರೆಗೆ ದೇಶದ 23 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಿದೆ. ಪ್ರತಿ ಹಂತಗಳಲ್ಲಿ ಈ ಪರೀಕ್ಷೆ ನಡೆಸುತ್ತಿದೆ. ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನಗಳನ್ನು ಈ ಪರೀಕ್ಷೆ ಒಳಗೊಂಡಿರುತ್ತದೆ. ಈ ಮೂಲಕ ಕೇಂದ್ರವು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆಗಳು (ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಯುಪಿಎಸ್ಸಿ ಪ್ರವೇಶ ಪತ್ರಗಳನ್ನು ಈಗಾಗಲೇ ಅಪ್ಲೋಡ್ ಮಾಡಿದ್ದು, www.upsc.gov.in .ವೆಬ್ ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕೇಂದ್ರ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ. ಅ.12ರಂದು ನಡೆದ ಮೊದಲ ಹಂತದ ಪರೀಕ್ಷೆಯಲ್ಲಿ ಈ ಬಾರಿ 15 ಸಾವಿರ ಮಂದಿ ಅಭ್ಯರ್ಥಿಗಳ