Posts

ಆಫ್ರಿಕಾದಲ್ಲಿ ಪತ್ತೆಯಾಯ್ತು ಜಗತ್ತಿನ ಎರಡನೇ ಅತಿ ದೊಡ್ಡ ವಜ್ರದ ತುಣುಕು...!:-

Image
ಗಬೋರೋನಿ, ನ.20- ಜಗತ್ತಿನಲ್ಲೇ ಎರಡನೆ ಅತಿ ದೊಡ್ಡ ವಜ್ರದ ತುಣುಕು ಆಫ್ರಿಕಾ ಖಂಡದ ಬೋಟ್ಸ್ವಾನಾ ದೇಶದಲ್ಲಿ ಪತ್ತೆಯಾಗಿದೆ. ಇಲ್ಲಿಂದ ಸುಮಾರು 500 ಕಿಲೋ ಮೀಟರ್ ಉತ್ತರದಲ್ಲಿರುವ ಕರೋವಿ ಗಣಿ ಪ್ರದೇಶದಲ್ಲಿ 1,111 ಕ್ಯಾರೆಟ್ನ ವಜ್ರ ಪತ್ತೆಯಾಗಿದ್ದು, ಇದರ ಶತಮಾನದಲ್ಲೇ ದೊರೆತ ದೊಡ್ಡ ಸಂಪತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಗಣಿ ಉಸ್ತುವಾರಿ ಹೊತ್ತಿರುವ ಕೆನಡಾ ಮೂಲದ ಲ್ಯೂಸಾರಾ ಡೈಮಂಡ್ ಕಂಪೆನಿ ಈ ಕುರಿತಂತೆ ಮಾಹಿತಿ ಮತ್ತು ಚಿತ್ರವನ್ನು ಬಹಿರಂಗಪಡಿಸಿದ್ದು, ಇದರ ಬೆಲೆ ಇನ್ನೂ ಎಷ್ಟಿರಬಹುದು ಎಂದು ನಿಗದಿಪಡಿಸುವ ಕಾರ್ಯ ನಡೆದಿದೆ ಎಂದು ಇದರ ಸಿಇಒ ವಿಲಿಯಮ್ ಲ್ಯಾಂಬ್ ತಿಳಿಸಿದ್ದಾರೆ. ಟೆನ್ನಿಸ್ ಬಾಲ್ ಆಕೃತಿಯ ಈ ವಜ್ರ ಬಹು ಅಮೂಲ್ಯವಾಗಿದ್ದು, ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಳೆದ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ 3106 ಕ್ಯಾರೆಟ್ ವಜ್ರವನ್ನು ಗಣಿಯಿಂದ ತೆಗೆದು ಬ್ರಿಟನ್ ರಾಣಿಯ ಕಿರೀಟದಲ್ಲಿ ಅಳವಡಿಸಲಾಗಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಪ್ರಸ್ತುತ ಬೋಟ್ಸ್ವಾನಾ ರಾಷ್ಟ್ರದಲ್ಲಿ ದೊರೆತಿರುವ ಈ ವಜ್ರ ಕೂಡ ಅಪೂರ್ವವಾಗಿದೆ. ನಾವು ಹೊಕ್ಕಿ ತೆಗೆಯುತ್ತಿರುವ ವಜ್ರದಲ್ಲಿ ಇದು ನಮಗೆ ಸಿಕ್ಕ ಜಗತ್ತಿನ ಎರಡನೆ ಅತಿ ದೊಡ್ಡ ವಜ್ರವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಏಪ್ರಿಲ್ನಲ್ಲಿ ನ್ಯೂಯಾರ್ಕ್ನಲ್ಲಿ ನೂರು ಕ

ಖಾಸಗಿ ಅನುದಾನ ರಹಿತ ಶಾಲಾ- ಕಾಲೇಜುಗಳು ಸದ್ಯದಲ್ಲೇ ಅನುದಾನಕ್ಕೊಳಪಡಲಿದೆ : ಕಿಮ್ಮನೆ ರತ್ನಾಕರ್:-

ಬೆಂಗಳೂರು, ನ.20-1994-95ನೆ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾದ ಖಾಸಗಿ ಅನುದಾನ ರಹಿತ ಶಾಲಾ- ಕಾಲೇಜುಗಳನ್ನು ಅನುದಾನಕ್ಕೊಳಪಡಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಡಿ.30ರೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಅನುದಾನಕ್ಕೊಳಪಡಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಗಣೇಶ್ ಕಾರ್ನಿಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಭಾವಿ ಕೆಲ ಸಂಸ್ಥೆಗಳು ಮಾತ್ರ ಅನುದಾನ ಪಡೆಯುತ್ತವೆ. ವರ್ಷಕ್ಕೆ 8-10 ಶಾಲಾ- ಕಾಲೇಜುಗಳನ್ನು ನುದಾನಕ್ಕೊಳಪಡಿಸಲಾಗುತ್ತಿದೆ. ಹಾಗಾಗಿ ಆರ್ಥಿಕ ಇಲಾಖೆಗೆ ಹೊರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅರ್ಹತೆಯಿರುವ ಎಲ್ಲಾ ಶಾಲಾ- ಕಾಲೇಜುಗಳನ್ನು ಪಟ್ಟಿಮಾಡಿ ಅನುದಾನಕ್ಕೊಳಪಡಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆ ಕೂಡ ಸಹಮತ ವ್ಯಕ್ತಪಡಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ಅವರೂ ಕೂಡ ಅರ್ಹವಿರುವ ಶಾಲಾ-ಕಾಲೇಜುಗಳನ್ನು ಪಟ್ಟಿ ಮಾಡಿ ಅನುದಾನಕ್ಕೊಳಪಡಿಸಲು ಮೌಖಿಕವಾಗಿ ಸೂಚಿಸಿದ್ದಾರೆ. ಎರಡು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಡಿ.31ರೊಳಗೆ ಅರ್ಹ ಅನುದಾನರಹಿತ ಎಲ್ಲಾ ಶಾಲಾ- ಕಾಲೇಜುಗಳನ್ನು ಅನುದಾನ ವ್ಯಾಪ್ತಿಗೊಳಿಸಲು ಪ್ರಕ್ರಿಯೆ ಪರಿಶೀಲನೆಯಲ್ಲಿದೆ ಎಂದರು. ಪ್ರಾಥಮಿಕ, ಪ್ರೌಢ,

ಐದನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ:-

ಪಟನಾ: ಐದನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ನಿತೀಶ್ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಸೇರಿದಂತೆ 28 ಮಂದಿ ಸಚಿವರಾಗಿ ನಿತೀಶ್ ಕುಮಾರ್ ಜೊತೆಗೇ ಪ್ರಮಾಣ ವಚನ ಸ್ವೀಕರಿಸಿದರು. ನಿತೀಶ್ ಹೊರತಾಗಿ ಆರ್​ಜೆಡಿ ಮತ್ತು ಜೆಡಿ(ಯು)ವಿನ ತಲಾ 12 ಮಂದಿ ಮತ್ತು ಕಾಂಗ್ರೆಸ್​ನ 4 ಮಂದಿ ಸಚಿವರಾಗಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ 8 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅಂದಾಜು 2 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಆರ್ ಜೆ ಡಿ ಹಾಗೂ ಜೆಡಿಯು ಮೈತ್ರಿಕೂಟದ ನಿತೀಶ್ ಹಾಗೂ ಸಂಪುಟ ಸಹದ್ಯೋಗಿಗಳ ಪ್ರಮಾಣ ವಚನ ಸಮಾರಂಭ ನಡೆಯಿತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಗಣ್ಯಾತೀಗಣ್ಯರು ಹಾಜರಾಗಿದ್ದರು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಅರವಿ

7th Pay Commission proposes 23.55% pay hike for government employees:-

New Delhi: The 7th Pay Commission headed by Justice A.K. Mathur has proposed a hefty 23.55% increase in emoluments including pay, allowances and pension for 4.8 million government employees and 5.5 million pensioners, potentially providing a boost to the ailing consumer economy although it seems to have missed an opportunity to reform the hiring process for government services. The impact on the finances of the centre and subsequently on the finances of state governments may force the governments to reduce their development expenses. The basic salary hike recommended is 16%, while that of housing rent allowance, other allowances and pensions are 138.71%, 49.79% and 23.63% respectively. Significantly, the Pay Commission passed on the opportunity to provide a mechanism for formal lateral induction to the government from the private sector. The vexed issue of parity of pay scales for officers from the Indian Administrative Services (IA

Interpol notices:

Red Notice:- To seek the location and arrest of a person wanted by a judicial jurisdiction or an international tribunal with a view to his/her extradition. Blue Notice:- To locate, identify or obtain information on a person of interest in a criminal investigation. Green Notice:- To warn about a person's criminal activities if that person is considered to be a possible threat to public safety. Yellow Notice:- To locate a missing person or to identify a person unable to identify himself/herself. Black Notice To seek information on unidentified bodies . Orange Notice'- To warn of an event, a person, an object or a process representing an imminent threat and danger to persons or property. Purple Notice:- To provide information on modi operandi , procedures, objects, devices or hiding places used by criminals.

ಮೋದಿ ಅಂಚೆ ಚೀಟಿ ಬಿಡುಗಡೆ:-

Image
ಅಂಟಾಲಿಯಾ: ಎರಡು ದಿನಗಳ ಹಿಂದಷ್ಟೇ ಪೂರ್ಣಗೊಂಡ ಜಿ-20 ಶೃಂಗಸಭೆಯ ಸ್ಮರಣಾರ್ಥ ಟರ್ಕಿಯು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಮೋದಿ ಅವರ ಭಾವಚಿತ್ರವಿದ್ದು, ಅದರ ಕೆಳಭಾಗದಲ್ಲಿ ರಾಷ್ಟ್ರಧ್ವಜ ಹಾಗೂ ಮೋದಿ ಅವರ ಹೆಸರಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್ ಸೇರಿದಂತೆ ಒಟ್ಟು 33 ವಿಶ್ವ ನಾಯಕರ ಅಂಚೆ ಚೀಟಿಗಳನ್ನು ಟರ್ಕಿ ಬಿಡುಗಡೆಗೊಳಿಸಿದೆ.

ಕನ್ನಡಿಗ ಶಿವಮೊಗ್ಗದ ಶ್ರೀಧರಮೂರ್ತಿಯ ಕೈಯಲ್ಲಿ ಅರಳಿದ ಲಂಡನ್ ಬಸವಣ್ಣ!::

Image
ಶಿವಮೊಗ್ಗ: ಲಂಡನ್​ನಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ವಿಶ್ವಗುರು ಬಸವೇಶ್ವರರ ಪುತ್ಥಳಿ ತಯಾರಿಸಿದ್ದು ಶಿವಮೊಗ್ಗದ ಕಲಾವಿದ! ಹೌದು. ಐತಿಹಾಸಿಕ ಹಾಗೂ ಅವಿಸ್ಮರಣೀಯ ಪುತ್ಥಳಿ ನಿರ್ವಿುಸಿದ್ದು ಶಿವಮೊಗ್ಗದ ಖ್ಯಾತ ಶಿಲ್ಪಿ ಕಾಶೀನಾಥ್ ಪುತ್ರ ಶ್ರೀಧರಮೂರ್ತಿ. ಹಲವು ಸಾಧನೆ ಮಾಡಿರುವ ಇವರು ಈಗ ವಿದೇಶದಲ್ಲೂ ಛಾಪು ಮೂಡಿಸಿದ್ದಾರೆ. ದೇಶದ ಪ್ರಸಿದ್ಧ ಶಿಲ್ಪಿಗಳು ಲಂಡನ್​ನಲ್ಲಿ ಸ್ಥಾಪಿತವಾಗಬೇಕಿದ್ದ ಬಸವಣ್ಣನ ಮೂರ್ತಿಯನ್ನು ಸಿದ್ಧಪಡಿಸಿದ್ದರು. ಅದರಲ್ಲಿ ಶ್ರೀಧರಮೂರ್ತಿ ಸಿದ್ಧಪಡಿಸಿದ ಪುತ್ಥಳಿ ಅಲ್ಲಿನ ನಿಯಮಾವಳಿ ಮತ್ತು ಸೌಂದರ್ಯದ ಕಾರಣಕ್ಕೆ ಆಯ್ಕೆಯಾಗಿ ಅನಾವರಣಗೊಂಡಿದೆ. ಶ್ರೀಧರಮೂರ್ತಿ ಸದ್ಯ ಬೆಂಗಳೂರಿನಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಲ್ಯಾಂಬೆತ್ ನಗರದ ಮೇಯರ್ ಆಗಿದ್ದ ನೀರಜ್ ಪಾಟೀಲ್ ಕಳೆದ ವರ್ಷ ಬಸವಣ್ಣನ ಮೂರ್ತಿ ಸಿದ್ಧಪಡಿಸಿಕೊಡಬೇಕು ಎಂದಿದ್ದರಂತೆ. ಇದರಿಂದ ಸಂತಸಗೊಂಡ ಶ್ರೀಧರಮೂರ್ತಿ ತಕ್ಷಣ ಒಪ್ಪಿಗೆ ಸೂಚಿಸಿದ್ದರು. ಅಲ್ಲಿನ ನಿಯಮಾವಳಿಗೆ ಅನುಗುಣವಾಗಿ 4 ತಿಂಗಳ ಅವಧಿಯಲ್ಲಿ ಶ್ರೀಧರಮೂರ್ತಿ ಮೂರೂವರೆ ಅಡಿ ಎತ್ತರದ ಬಸವಣ್ಣನ ಪುತ್ಥಳಿ ಸಿದ್ಧಪಡಿಸಿದರು. ಸಂಪೂರ್ಣ ಕಂಚಿನಲ್ಲಿ ಸಿದ್ಧಪಡಿಸಲಾಗಿರುವ ಈ ಪ್ರತಿಮೆ 500 ಕಿಲೋ ತೂಕವಿದೆ. ಕಂಚಿನಲ್ಲಿ ಸಿದ್ಧಗೊಂಡಿರುವ ಬಸವಣ್ಣ

ಸುಪ್ರೀಂನ ನೂತನ ಸಿಜೆಯಾಗಿ ಠಾಕೂರ್ ನೇಮಕ:::

Image
ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಸುಪ್ರೀಂಕೋರ್ಟ್ನ 43ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಈಗ ಮುಖ್ಯ ನ್ಯಾಯಮೂರ್ತಿಯಾಗಿರುವ ಎಚ್.ಎಲ್.ದತ್ತು ಅವರು ಡಿ. 2ರಂದು ನಿವೃತ್ತರಾಗಲಿದ್ದು, ಡಿ.3 ರಂದು ಠಾಕೂರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಶಾರದ ಚಿಟ್ ಫಂಡ್ ಹಗರಣ ಸೇರಿ ಅನೇಕ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಪೀಠದ ನೇತೃತ್ವವನ್ನು ಠಾಕೂರ್ ವಹಿಸಿದ್ದರು.

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ

ಬೆಂಗಳೂರು, ನ.18- ಮುಂಬರುವ ಜನವರಿ ಅಂತ್ಯದೊಳಗೆ 9511 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳ ಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪರವಾಗಿ ಉತ್ತರಿಸಿದ ಸಚಿವರು, 1 ರಿಂದ 5ನೇ ತರಗತಿವರೆಗೆ 2511 ಹಾಗೂ 6 ರಿಂದ 8ನೇ ತರಗತಿವರೆಗೆ 7000 ಶಿಕ್ಷಕರ ಹುದ್ದೆಗಳನ್ನು ಇದೇ ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, 1:2ರಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕ ಹೊಸ ಶಿಕ್ಷಕರನ್ನು ನೀಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಹೊಂದಿರುವವರನ್ನು ಮಾತ್ರ ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶೌಚಾಲಯ ಹಾಗೂ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಯು.ಬಿ.ಬಣಕಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ.

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ     ♦GKPOINTS♦ ಬೆಂಗಳೂರು, ನ.18- ಮುಂಬರುವ ಜನವರಿ ಅಂತ್ಯದೊಳಗೆ 9511 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳ ಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪರವಾಗಿ ಉತ್ತರಿಸಿದ ಸಚಿವರು, 1 ರಿಂದ 5ನೇ ತರಗತಿವರೆಗೆ 2511 ಹಾಗೂ 6 ರಿಂದ 8ನೇ ತರಗತಿವರೆಗೆ 7000 ಶಿಕ್ಷಕರ ಹುದ್ದೆಗಳನ್ನು ಇದೇ ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, 1:2ರಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕ ಹೊಸ ಶಿಕ್ಷಕರನ್ನು ನೀಡಲಾಗುವುದು ಎಂದು ತಿಳಿಸಿದರು. ♠ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಹೊಂದಿರುವವರನ್ನು ಮಾತ್ರ ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ♠ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶೌಚಾಲಯ ಹಾಗೂ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಯು.ಬಿ.ಬಣ

PROVISIONAL SELECTION LIST OF VILLAGE ACCOUNTANTS IN UK PUBLISHED 2015:: Cutoff Marks Here

Image
uttarakannada.nic.in/recruitment/VA2015.html

The Oxford Dictionaries Word of the Year 2015 is the ‘Face with Tears of Joy’ emoji (you know, the one in which the emoji face is crying and laughing at the same time, that one).-:

Image
Oxford Dictionaries Word of the Year 2015 is not even a word, it's an emoji Published at Tue Nov 17 2015 16:47 IST What do you think when you reminisce about your childhood? That cake of Maggi in your tiffin box (things weren't banned as much then), PT shoes, batting first (come on, do you know anyone who chose to bowl after winning the toss?), and Oxford Dictionaries. Everyone had one — tightly bound a million or so pages, with a wrinkled spine — resting on their study tables, waiting to be studied. A big word in the newspaper, or in that novel that you were reading, or simply when you couldn't make any sense out of Captain Haddock's profane outbursts — Oxford dictionary was always there. You could trust it. Now, you can't. Oxford Dictionaries Word of the Year- 'Face with Tears of Joy'. Image courtesy: Facebook In a time when dictionaries and encyclopedias are almost obsolete because people can just Google stuff, it seems Oxford is trying keep

The World Heritage Week (November 19-25) :

ಬಾದಾಮಿ: ತಾಲೂಕಿನ ಪಟ್ಟದಕಲ್ಲ ಗ್ರಾಮದಲ್ಲಿ ನ.19ರಿಂದ 25ರವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಡಿ ವಿಶ್ವ ಪರಂಪರೆ ಸಪ್ತಾಹ ಸಮಾರಂಭ ನಡೆಯಲಿದೆ. ವಿಶ್ರಾಂತ ಶಿಕ್ಷಕ ಬಿ.ಎಸ್.ಅಕ್ಕಿ ಸಮಾರಂಭ, ಛಾಯಾಚಿತ್ರ ಪ್ರದರ್ಶನವನ್ನು ಇತಿಹಾಸ ಸಂಶೋಧಕ ಡಾ.ಶೀಲಾಕಾಂತ ಪತ್ತಾರ ಉದ್ಘಾಟಿಸಲಿದ್ದಾರೆ. ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ. ನ.22ರಂದು ಬೆಳಗ್ಗೆ 9.30ಕ್ಕೆ ಪ್ರವಾಸಿ ಮಾಹಿತಿ ಕೇಂದ್ರ ಲೋಕಾರ್ಪಣೆಯನ್ನು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ನೆರವೇರಿಸಲಿದ್ದಾರೆ. ಇಂಧನ ರಹಿತ ವಾಹನಗಳ ಲೋಕಾರ್ಪಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ನೆರವೇರಿಸಲಿದ್ದಾರೆ. ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಸರಗಣಾಚಾರಿ, ಉಪಾಧ್ಯಕ್ಷ ರಘುವೀರ ದೇಸಾಯಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಎ.ಎಂ.ಸುಬ್ರಹ್ಮಣ್ಯಂ, ಅಧಿಕಾರಿ ಸೋಮಲಾ ನಾಯಕ ತಿಳಿಸಿದ್ದಾರೆ.

Dt:18.11.2015 randu 11 30 to 12 30pm keli kali chukki chinna live phone in prog nalli dsert director s jayakumar hagu dd lalitha siriyanna avaru bhagavahisuttare phone no 08022370477

Image

ಸಂಶೋಧನೆ::ನದಿ ರಭಸವಾದಷ್ಟು ಹೆಚ್ಚಿನ ಇಂಗಾಲ ಡೈಆಕ್ಸೈಡ್ ಬಿಡುಗಡೆ:-:

ಲಂಡನ್: ನದಿಗಳು ರಭಸವಾಗಿ ಹರಿದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಡೈ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ! ಇಂಗ್ಲೆಂಡ್​ನ ಗ್ಲಾಸ್​ಗೋ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಸಂಶೋಧನೆಯಿಂದ ಈ ಅಂಶ ಬಹಿರಂಗಗೊಂಡಿದೆ. ಸಂಶೋಧಕರ ತಂಡದ ಪ್ರಕಾರ ರಭಸವಾಗಿ ಹರಿಯುವ ನದಿಗಳು ಹಾಗೂ ಕಠಿಣ ಪರಿಶ್ರಮದ ಕೆಲಸ ಮಾಡುವ ಮಾನವನ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಕಠಿಣ ಪರಿಶ್ರಮದ ಕೆಲಸ ಮಾಡುವಾಗ ಮನುಷ್ಯರು ಹೇಗೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನ್ನು ಹೊರಹಾಕುತ್ತಾರೋ ಅದೇ ರೀತಿ ನದಿಗಳು ಕೂಡ ರಭಸವಾಗಿ ಹರಿದಂತೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಸ್ಕಾಟ್ಲೆಂಡ್​ನಲ್ಲಿ ಎರಡು ನದಿಗಳು ಮತ್ತು ಪೆರುವಿಯನ್ ಅಮೆಜಾನ್​ನಲ್ಲಿ ನಾಲ್ಕು ನದಿಗಳ ಬಳಿ ಹಲವಾರು ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಈ ವಿಷಯ ಖಚಿತಪಟ್ಟಿದ್ದಾಗಿ ಸಂಶೋಧಕರ ತಂಡ ತಿಳಿಸಿದೆ. ಜಾಗತಿಕ ವಾತಾವರಣದ ಮೇಲೆ ಮಾನವನ ಚಟುವಟಿಕೆಗಳಿಂದಾಗಿ ಆಗುವ ಪರಿಣಾಮವನ್ನು ಅರಿಯಲು ಅತ್ಯಂತ ಜಟಿಲವಾಗಿರುವ ಕಾರ್ಬನ್ ಸೈಕಲ್ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನದಿ, ಸಮುದ್ರ ಮತ್ತು ಮಹಾಸಾಗರಗಳಿಂದ ಪರಿಸರಕ್ಕೆ ಬಿಡುಗಡೆಯಾಗುವ ಇಂಗಾಲ ಅನಿಲದಿಂದಾಗುವ ಪರಿಣಾಮದ ಬಗ್ಗೆ ವಿಜ್ಞಾನಿಗಳ ಸಂಕುಲ ಇದುವರೆಗೆ ಭಾರಿ ಅವಜ್ಞೆ ತೋರಿರುವುದಾಗಿ ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ. ಸಂಶೋಧನೆ ನಡೆಸಿ

ಗ್ರಂಥಾಲಯ ಇಲಾಖೆಯ 477 ಹುದ್ದೆಗಳನ್ನು ಭರ್ತಿಗೆ ಕ್ರಮ:

ಹೈದರಾಬಾದ್ ಕರ್ನಾಟಕ ಭಾಗದ 87 ಹುದ್ದೆ ಸಹಿತ, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಖಾಲಿ ಇರುವ 477 ವಿವಿಧ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಯಲಿದೆ ಎಂದು ಇಲಾಖೆ ನಿರ್ದೇಶಕ ಡಾ.ಸತೀಶ್ ಎಸ್.ಹೊಸಮನಿ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈ-ಕ ಭಾಗದ 6 ಜಿಲ್ಲೆಗಳ ಅರ್ಜಿಗಳು ಈಗಾಗಲೇ ಸ್ವೀಕೃತವಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಖಾಲಿ ಇರುವ ಇಲಾಖೆ ಉಪ ನಿರ್ದೇಶಕರ ಹುದ್ದೆ ಸೇರಿ ವಿವಿಧ 390 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ ಎಂದರು. 5,766 ಗ್ರಾಪಂ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಸೇವೆ ಕಾಯಂಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೊಳಚೆ ಪ್ರದೇಶ, ಅಲೆಮಾರಿ ಗ್ರಂಥಾಲಯಗಳ ಮೇಲ್ವಿಚಾರಕರ ವೇತನವನ್ನು 5,500 ರೂ.ಗೆ ಹೆಚ್ಚಿಸಲಾಗುವುದು. ಹಣಕಾಸು ಇಲಾಖೆ ಅನುಮೋದನೆ ನಿರೀಕ್ಷಿಸಲಾಗಿದೆ. ಹೈ-ಕ ಭಾಗದ 250 ಗ್ರಂಥಾಲಯಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಲಾಗುತ್ತಿದ್ದು, 25 ಕೋಟಿ ರೂ. ವೆಚ್ಚದಲ್ಲಿ ಕಂಪ್ಯೂಟರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತು ಖರೀದಿಸಲಾಗುವುದು. ಪ್ರತಿ ಗ್ರಂಥಾಲಯಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದರು.

Ross Taylor ticks off records during epic 290:::-

New Zealand batsman Ross Taylor entered cricket's record books on Monday during the course of his excellent 290 against Australia in Perth, which lifted the visiting team to their highest total against the hosts in a 53-match history dating back to 1946. Foremost of those was a breaking a record that had stood for almost 112 years, that of the highest individual score by a visiting batsman in Australia. His career-best 290 from 374 balls surpassed England batsman Tip Foster's 287 scored in Sydney in December 1903. Overall, only England great Len Hutton's 364 at Lord's in 1938 stands as the highest score against Australia after Taylor's sublime effort. Thanks largely to Taylor's incredible innings, New Zealand overtook Australia's first-innings score of 559/9 declared and made 624. It was also the highest total scored against Australia since England made 644 in Sydney during the 2010-11 Ashes. Their previous best versus Australia in Tests was the 553/7

24/06/2003 ರ ನಂತರ ಪ್ರಾಥಮಿಕ ಶಾಲಾ ಶಿಕ್ಷಕರು ಸರ್ಕಾರಿ ಪ್ರೌಢಶಾಲಾ ಭಾಷಾ ಸಹ ಶಿಕ್ಷಕರಾಗಿ ಬಡ್ತಿ ಪಡೆದವರ ವಿವರಗಳನ್ನು 25/1/2015 ರೊಳಗೆ ಸಾ.ಶಿ ಇಲಾಖೆಗೆ ಒದಗಿಸುವ ಕುರಿತು..

Image

ಇಂದಿನಿಂದ ಸ್ವಚ್ಛ ಭಾರತ ಸೆಸ್ ಜಾರಿ : ಪಾನ್ಕಾರ್ಡ್ ಬೆಲೆ 107ಕ್ಕೆ ಏರಿಕೆ

Image
ನವದೆಹಲಿ, ನ.15-ಕೇಂದ್ರ ಸರ್ಕಾರ ಪ್ರಾಯೋಜಿತ ಸ್ವಚ್ಛ ಭಾರತ ಸೆಸ್ ಯೋಜನೆ ಇಂದಿನಿಂದ ಅನುಷ್ಠಾನಕ್ಕೆ ಬಂದಿದ್ದು, ಬಹುಪಯೋಗಿ ಪಾನ್ಕಾರ್ಡ್ ಬೆಲೆ 1ರೂ. ಹೆಚ್ಚಲಿದೆ. ಇದುವರೆಗೆ 106 ರೂ.ಗಳಿಗೆ ದೊರೆಯುತ್ತಿದ್ದ ಪಾನ್ (ಪಿಎಎನ್- ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್ ಇಂದಿನಿಂದ 107ರೂ. ಆಗಲಿದೆ. ಕಳೆದ ವಾರವೇ ಕೇಂದ್ರ ಸರ್ಕಾರ ಘೋಷಿಸಿದ್ದ ಶೇ.0.5ರಷ್ಟು ಸೆಸ್ ಅನ್ನು ತೆರಿಗೆ ವಿಧಿಸಲರ್ಹವಾದ ಎಲ್ಲಾ ಸೇವೆಗಳ ಮೇಲೆ ವಿಧಿಸುವ ನೂತನ ವ್ಯವಸ್ಥೆ ಇಂದಿನಿಂದ (ನ.15) ಕಾರ್ಯಾನುಷ್ಠಾನದಲ್ಲಿ ಬಂದಿದೆ. ದೇಶೀಯವಾಗಿ ಯಾವುದೇ ಕಂಪೆನಿ ಅಥವಾ ವ್ಯಕ್ತಿಗಳ ಎಲ್ಲಾ ಆರ್ಥಿಕ ಚಟುವಟಿಕೆಗಳ ಮೇಲೆ ಸೂಕ್ತ ನಿಗಾ ವಹಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ವತಿಯಿಂದ ನೀಡಲಾಗುವ ಖಾಯಂ ಖಾತಾ ಸಂಖ್ಯೆ (ಪಾನ್) ಕಾರ್ಡ್ ಪಡೆಯಲು ಇನ್ನು 106ರೂ.ಗಳಿಗೆ ಬದಲು 107 ರೂ.ಗಳನ್ನು ತೆರಬೇಕಾಗುತ್ತದೆ. ಇದೇ ರೀತಿ ದೇಶಬಿಟ್ಟು ವಿದೇಶಗಳಲ್ಲಿ ಪಾನ್ ಕಾರ್ಡ್ ಪಡೆಯಲು ಈವರಗೆ ಕೊಡುತ್ತಿದ್ದ 985 ರೂ.ಗಳ ಬದಲು ಹೆಚ್ಚುವರಿ 4 ರೂ. ಅಂದರೆ 989ರೂ. ನೀಡಬೇಕಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 436 ವಾಹನ ಚಾಲಕರ ಹುದ್ದೆಗಳಿಗೆ online ಮೂಲಕ ಅರ್ಜಿ ಆಹ್ವಾನ

Image