:- ಡಾ. ಲತಾ ದಾಮ್ಲೆ:- ಸಕ್ಕರೆ ಕಾಯಿಲೆಯಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವುದಕ್ಕಿಂತ ಮುಖ್ಯವಾದುದು ಅದು ಮುಂದೊಡ್ಡಬಹುದಾದಂತಹ ತೊಂದರೆಯನ್ನು ಗಮನಿಸುವುದು ಹಾಗೂ ತಕ್ಕ ಕ್ರಮ ಕೈಗೊಳ್ಳುವುದು. ಹೆಚ್ಚಿರುವ ಸಕ್ಕರೆಯಂಶದಿಂದ ಕಣ್ಣು, ನರಗಳು, ರಕ್ತನಾಳಗಳು, ಮೂತ್ರಕೋಶ, ಮೆದುಳು, ಜೀರ್ಣಾಂಗ, ಜನನಾಂಗಗಳು, ಮಾಂಸಪೇಶಿ ಇತ್ಯಾದಿಗಳು ತೊಂದರೆ ಅನುಭವಿಸುತ್ತವೆ. ಇದು ಅಕ್ಷರಶ: ದೇಹದ ಎಲ್ಲ ಅಂಗಾಂಗಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಮಧುಮೇಹವನ್ನು 'ಮೂಕ ಹಂತಕ' (ಸೈಲೆಂಟ್ ಕಿಲ್ಲರ್) ಎನ್ನುತ್ತಾರೆ. ಆದ್ದರಿಂದ ಇದನ್ನು ತಡೆಯುವುದು, ರಕ್ತದಲ್ಲಿನ ಸಕ್ಕರೆಯಂಶವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿಕೊಳ್ಳುವುದು, ಇದರಿಂದ ಬರಬಹುದಾದ ಉಪದ್ರವಗಳ ಬಗ್ಗೆ ಪೂರ್ಣ ಪ್ರಮಾಣದ ಅರಿವು ಅತ್ಯಗತ್ಯ. ಸಾಮಾನ್ಯವಾಗಿ ನಾವು ತಿಂದ ಆಹಾರವು ಕಟ್ಟ ಕಡೆಗೆ ಸಕ್ಕರೆಯ ರೂಪಕ್ಕೆ ಪರಿಣಾಮ ಹೊಂದಿ ಎಲ್ಲ ಜೀವಕಣಗಳಿಗೆ ರಕ್ತದ ಮೂಲಕ ಗ್ಲೂಕೋಸ್ ರೂಪದಲ್ಲಿ ದೊರಕುತ್ತದೆ. ಸುಲಭವಾಗಿ ಹೇಳುವುದಾದಲ್ಲಿ ಪ್ರತಿಯೊಂದು ಜೀವಕೋಶಗಳಿಗೆ ಒಂದು ದ್ವಾರವಿರುತ್ತದೆ. ಆ ದ್ವಾರ ತೆರೆದಾಗ ನಿರ್ದಿಷ್ಟ ಮತ್ತು ಅವಶ್ಯ ಪ್ರಮಾಣದ ಸಕ್ಕರೆಯಂಶ ಒಳ ಸೇರುತ್ತದೆ. ಇಲ್ಲಿ 'ಇನ್ಸುಲಿನ್' ಬಾಗಿಲು ತೆರೆಯುವ ಕೀಲಿ! ಪ್ಯಾಂಕ್ರಿಯಾ (ಮೇದೋಜೀರಕ ಗ್ರಂಥಿ)ಯಲ್ಲಿ ಇವುಗಳ ಉತ್ಪತ್ತಿ. ಇವನ್ನು ತಡೆಯುವ ಮೂರು ವಿಧವಾದ ಮಧುಮೇಹಗಳಿವೆ. 1. ಇನ್ಸುಲಿನ್ ಅವಲಂಬಿತ...