ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಪಟ್ಟ. ನೀಡಲು ಸರ್ಕಾರದ ಚಿಂತನೆ
ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಪಟ್ಟ ಬೆಂಗಳೂರು, ಮೇ 31- ಹೆಸರಾಂತ ಸಾಹಿತಿ ಹಾಗೂ ಜನಪ್ರಿಯ ಕವಿ ನಿಸಾರ್ ಅಹಮದ್ ಅವರಿಗೆ ರಾಷ್ಟ್ರಕವಿ ಪಟ್ಟ ಕಟ್ಟಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗಿರುವ ವಿವೇಚನೆಯ ಅಧಿಕಾರ ಬಳಸಿ ಶೀಘ್ರದಲ್ಲಿಯೇ ರಾಷ್ಟ್ರಕವಿ ಸ್ಥಾನಕ್ಕೆ ನಿಸಾರ್ ಅಹಮದ್ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಷ್ಟ್ರಕವಿ ಪಟ್ಟವನ್ನು ಅಲಂಕರಿಸಿದವರಲ್ಲಿ ಎಂ.ಗೋವಿಂದ ಪೈ ಮೊದಲಿಗರು. ಆನಂತರ ಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾಗಿದ್ದರು. ಮೂರನೆಯವರಾಗಿ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ರಾಷ್ಟ್ರಕವಿಯಾಗಿದ್ದರು. ಜಿ.ಎಸ್.ಶಿವರುದ್ರಪ್ಪ ಅವರು ಇತ್ತೀಚೆಗೆ ನಿಧನರಾಗಿರುವುದರಿಂದ ರಾಷ್ಟ್ರಕವಿ ಸ್ಥಾನ ತೆರವಾಗಿದೆ. ತೆರವಾಗಿರುವ ಸ್ಥಾನಕ್ಕೆ ಸಾಹಿತಿ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿ ರಾಷ್ಟ್ರಕವಿ ಪಟ್ಟಕ್ಕೆ ಸಾಹಿತಿಗಳ ಹೆಸರನ್ನು ಶಿಫಾರಸು ಮಾಡುವ ಬದಲು ರಾಷ್ಟ್ರಕವಿ ಪ್ರಶಸ್ತಿ ನೀಡುವುದು ಸರಿಯಲ್ಲ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ವರದಿಯನ್ನು ನೀಡಿದೆ. ಪ್ರಶಸ್ತಿಗೆ ಯಾರ ಹೆ...