Posts

ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌

Image
ಟೈಮ್ಸ್ ಆಫ್ ಇಂಡಿಯಾ | Updated Dec 31, 2016, 03.26 PM IST Whatsapp Facebook Google Plus Twitter Email SMS ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ A A A ಹೊಸದಿಲ್ಲಿ: ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ರಾವತ್‌ ಶನಿವಾರ ಅಧಿಕಾರ ಸ್ವೀಕರಿಸಿದರು. ಜನರಲ್ ದಲ್ಬೀರ್ ಸಿಂಗ್‌ ಸುಹಾಗ್‌ ಅವರ ಉತ್ತರಾಧಿಕಾರಿಯಾಗಿ 1.3 ದಶಲಕ್ಷ ಯೋಧರ ಪಡೆಯನ್ನು ಅವರು ಮುನ್ನಡೆಸಲಿದ್ದಾರೆ. ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರೋಧ ಲೆಕ್ಕಿಸದೆ ಎನ್‌ಡಿಎ ಸರಕಾರ ರಾವತ್ ಅವರನ್ನು ನೂತನ ಸೇನಾ ಮುಖ್ಯಸ್ಥರಾಗಿ ನಿಯೋಜಿಸಿದ ಕ್ರಮ ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಉಮಾಶ್ರೀಗೆ

Image
ಜಿಲ್ಲೆಯ ಉಸ್ತುವಾರಿಉಮಾಶ್ರೀಗೆ ಮುಖ್ಯಮಂತ್ರಿ ಪತ್ರದ ಅನ್ವಯ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದು, ಜಿಲ್ಲೆಯ ತೇರ ದಾಳ ವಿಧಾನಸಭಾ ಕ್ಷೇತ್ರ ವನ್ನು ಉಮಾಶ್ರೀ ಅವರಿಗೆ ಜಿಲ್ಲೆ ಯ ಉಸ್ತುವಾರಿ ನೀಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಹೊಂದಿ ದ್ದ ಅಬಕಾರಿ ಸಚಿವ ಎಚ್.ವೈ.ಮೇಟಿ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಡಿಸೆಂಬರ್ 14ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ದ್ವಿತೀಯ PUC ಪರೀಕ್ಷೆ ವೇಳಾಪಟ್ಟಿ ಪ್ರಕಟ: ಮಾರ್ಚ್ 9ರಿಂದ 27;

Image
    ಬೆಂಗಳೂರು:  2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 9ರಿಂದ 27ರವರೆಗೆ ನಡೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಮಾರ್ಚ್ 9ರಿಂದ 27ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ.  ಪಿಯು ಇಲಾಖೆಯ ವೆಬ್ ಸೈಟ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿ ವಿವರ : ಮಾರ್ಚ್ 9: ಜೀವಶಾಸ್ತ್ರ, ಇತಿಹಾಸ ಮಾರ್ಚ್10; ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮಾರ್ಚ್ 11; ತರ್ಕಶಾಸ್ತ್ರ, ಎಜುಕೇಷನ್, ಬೇಸಿಕ್ ಮ್ಯಾಥ್ಸ್ ಮಾರ್ಚ್ 13: ಸಮಾಜಶಾಸ್ತ್ರ, ಲೆಕ್ಕಶಾಸ್ರ್ರ  ಮಾರ್ಚ್14: ಗಣಿತ ಮಾರ್ಚ್15: ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್ ಮಾರ್ಚ್16:ಅರ್ಥಶಾಸ್ತ್ರ, ಜಿಯಾಲಜಿ  ಮಾರ್ಚ್ 17: ಭೌತಶಾಸ್ತ್ರ ಮಾರ್ಚ್ 18:ಮನೋವಿಜ್ಞಾನ ಮಾರ್ಚ್ 20:ಕೆಮಿಸ್ಟ್ರಿ, ಐಚ್ಚಿಕ ಕನ್ನಡ, ಬ್ಯುಸಿನೆಸ್ ಸ್ಟಡೀಸ್ ಮಾರ್ಚ್ 21:ರಾಜ್ಯಶಾಸ್ತ್ರ ಮಾರ್ಚ್ 22: ಹಿಂದಿ ಮಾರ್ಚ್ 23: ಕನ್ನಡ, ತಮಿಳು, ಮಲಯಾಳಂ ಮಾರ್ಚ್ 24:ಸಂಸ್ಕೃತ, ಮರಾಠಿ, ಉರ್ದು ಮಾರ್ಚ್ 25:ಜಿಯೋಗ್ರಫಿ, ಸಂಖ್ಯಾಶಾಸ್ತ್ರ, ಹೋಂಸೈನ್ಸ್ ಮಾರ್ಚ್ 27: ಇಂಗ್ಲಿಷ್

*ನಿಮ್ಮ SBI ಖಾತೆಯನ್ನು ON ಅಥವಾ OFF ಮಾಡುವ ವಿಧಾನ*

*ನಿಮ್ಮ  SBI ಖಾತೆಯನ್ನು ON ಅಥವಾ OFF ಮಾಡುವ ವಿಧಾನ* www.freegksms.blogspot.in 1) ಮೊದಲು ನಿಮ್ಮ ಮೊಬೈಲ್ ನಂಬರ್ ನ್ನು SBI ಖಾತೆಯೊಂದಿಗೆ ನೋಂದಾಯಿಸಿಕೊಳ್ಳಿ .. ನೋಂದಾಯಿಸಲು ಈ ಕೆಳಗಿನಂತೆ SMS ಬರೆದು 9223488888 ಗೆ ಕಳಿಸಿ. REG(space)A/c.No 2) *ಬ್ಯಾಲೆನ್ಸ್ ನೋಡಲು*- BAL ಎಂದು ಬರೆದು 9223766666ಗೆ SMS ಕಳಿಸಿ.. 3) *ಮಿನಿ ಸ್ಟೇಟ್ಮೆಂಟ್ ಪಡೆಯಲು*  MSMST ಎಂದು ಬರೆದು 9223866666ಗೆ SMS ಕಳಿಸಿ..(ಅಥವಾ MISCALL ಕೊಡಿ). 4) *ATM ಕಾರ್ಡ್ ಬ್ಲಾಕ್ ಮಾಡಲು* BLOCK(space)XXXX (ಇಲ್ಲಿ  XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು) ಎಂದು ಬರೆದು 567676 ಗೆ SMS ಕಳಿಸಿ.. 5) *ATM ಕಾರ್ಡ್ ON ಮಾಡಲು* SWON(space)ATM(space)XXXX (ಇಲ್ಲಿ  XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು) ಎಂದು ಬರೆದು 9223966666ಗೆ SMS ಕಳಿಸಿ. 6) *ATM ಕಾರ್ಡ್ OFF ಮಾಡಲು* SWOFF(space)ATM(space)XXXX (ಇಲ್ಲಿ  XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು) ಎಂದು ಬರೆದು 9223966666ಗೆ SMS ಕಳಿಸಿ. 7)ನಿಮ್ಮ ATM ಕಾರ್ಡ್ ನ್ನು ಸ್ವೈಫ್ ಮಶಿನ್ ನಲ್ಲಿ ಬಳಕೆ ಮಾಡದಂತೆ ನಿರ್ಬಂಧಿಸಲು  SWOFF(space...

ಪೇಟಿಎಂಗೆ ಪೈಪೋಟಿ ನೀಡಲು ಬರುತ್ತಿದೆ ಆಧಾರ್‌ ಪೇಮೆಂಟ್‌ ಆ್ಯಪ್‌ ..!

Image
 December 24, 2016   ನವದೆಹಲಿ. ಡಿ-24:  ಕೇಂದ್ರ ಸರ್ಕಾರದ ಬಹು ಆಕಾಂಕ್ಷಿತ ಡಿಜಿಟಲ್ ಇಂಡಿಯಾದ ಭಾಗವಾದ ಆಧಾರ್ ಪೇಮೆಂಟ್ ಅಪ್ಲಿಕ್ಷೇನ್ಅನ್ನು ನಾಳೆ ಬಿಡುಗಡೆ ಮಾಡುತ್ತಿದೆ. ಈ ಮೂಲಕ ನೀವು ಇನ್ನುಮುಂದೆ ಯಾವುದೇ ಡೆಬಿಟ್ ಕಾರ್ಡ್ ಅಥವಾ ಕೆಡಿತ್ ಕಾರ್ಡ್ ಇಲ್ಲದೆ ವ್ಯವಹಾರ ಮಾಡಬಹುದು. ನಿಮಗೆ ನಿಮ್ಮ ಆಧಾರ್ ಸಂಖ್ಯೆಯೊಂದು ನೆನಪಿನಲ್ಲಿದ್ದರೆ ಸಾಕು ಎಲ್ಲಿಬೇಕಾದರೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.  ಐಡಿಎಫ್ ಸಿ ಬ್ಯಾಂಕ್‌ ಮತ್ತು ಯುಐಡಿಎಐ (ಆಧಾರ್‌) ಜತೆಗೂಡಿ ಸಿದ್ಧಪಡಿಸಿರುವ, ಸರಳವಾಗಿರುವ ಈ ಆ್ಯಪನ್ನು ವ್ಯಾಪಾರಿಗಳು ತಮ್ಮ ಆಂಡ್ರಾಯ್ಡ ಸ್ಮಾರ್ಟ್‌ ಫೋನ್‌ಗಳಿಗೆ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಇದಕ್ಕೆ ಕೇವಲ 2,000 ರೂ. ಬೆಲೆಗೆ ಲಭ್ಯವಿರುವ ಬೆರಳಚ್ಚು ಬಯೋಮೆಟ್ರಿಕ್‌ ಸಾಧನವನ್ನು ಜೋಡಿಸಿಕೊಳ್ಳಬೇಕು. ಖರೀದಿದಾರ ಗ್ರಾಹಕರು ತಮ್ಮ ಆಧಾರ್‌ ಕಾರ್ಡ್‌ ನಂಬರ್ ನ್ನು ವ್ಯಾಪಾರಿಗೆ ಕೊಟ್ಟಾಗ ಅವರು ಅದನ್ನು ಆ್ಯಪ್‌ಗೆ ಫೀಡ್‌ ಮಾಡುತ್ತಾರೆ. ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಹೊಂದಿರುವ ಗ್ರಾಹಕರ ಬ್ಯಾಂಕ್‌ ಖಾತೆಯು ಈ ಪಾವತಿ ವ್ಯವಹಾರಕ್ಕೆ ಆ್ಯಪ್‌ ಮೂಲಕ ಒಳಪಡುತ್ತದೆ. ಆಗ ಗ್ರಾಹಕರು ತಮ್ಮ ಬೆರಳಚ್ಚನ್ನು ಬಯೋಮೆಟ್ರಿಕ್‌ ಸಾಧನದಲ್ಲಿ ದಾಖಲಿಸಬೇಕು. ಇದುವೇ ಪಾಸ್‌ವರ್ಡ್‌ ಆಗಿ ಕೆಲಸ ಮಾಡುತ್ತದೆ. ಆಗ ವ್ಯಾಪರಿಗೆ ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಹಣ ಪಾವತಿಯಾಗುತ್ತದೆ. ಈ ವ್ಯವಸ್ಥೆಯಲ್ಲಿ ಡೆಬಿಟ್‌, ಕ್ರೆಡಿಟ್‌...

ಅಶ್ವಿನ್‌ ಐಸಿಸಿ ವರ್ಷದ ಕ್ರಿಕೆಟಿಗ

2015-16ನೇ ಸಾಲಿನ ಐಸಿಸಿ ಪ್ರಶಸ್ತಿ ಪ್ರಕಟ | ವರ್ಷದ ಏಕದಿನ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ ದುಬೈ: ಭಾರತದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ'ಕಾಕ್‌ ವರ್ಷದ ಏಕದಿನ ಆಟಗಾರ ಎಂಬ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. 2015ರ ಸೆಪ್ಟೆಂಬರ್‌ 14ರಿಂದ 2016ರ ಸೆಪ್ಟೆಂಬರ್‌ 20ರ ಅವಧಿಯಲ್ಲಿ ಆಟಗಾರರು ತೋರಿದ ಪ್ರದರ್ಶನದ ಆಧಾರದಲ್ಲಿ ಐಸಿಸಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಮಾಜಿ ಕ್ರಿಕೆಟ್‌ ದಿಗ್ಗಜರಾದ ಭಾರತದ ರಾಹುಲ್‌ ದ್ರಾವಿಡ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಐಸಿಸಿ ಆಯ್ಕೆ ಸಮಿತಿಯಲ್ಲಿದ್ದರು. ವರ್ಷದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ಪಾಕಿಸ್ತಾನ ಟೆಸ್ಟ್‌ ತಂಡದ ನಾಯಕ ಮಿಸ್ಬಾ ಉಲ್‌ ಹಕ್‌ ಪಾಲಾಗಿದೆ. ಈ ಪ್ರಶಸ್ತಿ ಪಡೆದ ಪಾಕ್‌ನ ಮೊದಲ ಕ್ರಿಕೆಟಿಗ ಎಂಬ ದಾಖಲೆ ಮಿಸ್ಬಾ ಅವರದ್ದಾಗಿದೆ. ವಿರಾಟ್‌ಗೆ ಏಕದಿನ ತಂಡದ ಸಾರಥ್ಯ ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿರುವ ವಿರಾಟ...

Karnataka SSLC exam time table 🏹2017

Image