Posts

ಮ್ಯಾನ್ಮಾರ್ನಲ್ಲಿ ಮೊದಲ ಪ್ರಜಾಸತ್ತೆ ಸರಕಾರ:*

-ಅರ್ಧ ಶತಮಾನದ ಸೇನಾಡಳಿತ ವಿರೋಧಿಸಿ ಸೂಚಿ ನಡೆಸಿದ ದಶಕಗಳ ಕಾಲದ ಹೋರಾಟಕ್ಕೆ ಸಂದ ಫಲ- ನೇಪಿತಾ(ಮ್ಯಾನ್ಮಾರ್): ಮ್ಯಾನ್ಮಾರ್ನಲ್ಲಿ ಅರ್ಧ ಶತಮಾನದ ಸೇನಾಡಳಿತದ ನಂತರ ಇದೇ ಮೊದಲ ಬಾರಿಗೆ ಔಂಗ್ ಸಾನ್ ಸೂಚಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಂಘಟನೆ 'ಎನ್ಎಲ್ಡಿ' ಪಕ್ಷದ ಹೊಸ ಸರಕಾರ ತನ್ನ ಕಾರ್ಯ ಕಲಾಪಗಳನ್ನು ಆರಂಭಿಸಿದೆ. ನವೆಂಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ ಎನ್ಎಲ್ಡಿ ಮ್ಯಾನ್ಮಾರ್ನಲ್ಲಿ ಇದೇ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವಾಗಿ ಹೊರಹೊಮ್ಮಿದ್ದು, ನೂತನ ಚುನಾಯಿತ ಸದಸ್ಯರು ಸೋಮವಾರ ಸಂಸತ್ತಿನ ಕಲಾಪಗಳಲ್ಲಿ ಪಾಲ್ಗೊಂಡರು. ಅರ್ಧ ಶತಮಾನದ ಕಾಲ ನಿರಂತರ ಸೇನಾಡಳಿತದ ದಬ್ಬಾಳಿಕೆಗೆ ಒಳಗಾಗಿದ್ದ ಮ್ಯಾನ್ಮಾರ್ ಸಂಸತ್ತಿನ ಪಾಲಿಗೆ ಸೋಮವಾರ ಐತಿಹಾಸಿಕ ದಿನ. ಔಂಗ್ ಸಾನ್ ಸೂಚಿ ಅವರು ಮ್ಯಾನ್ಮಾರ್ನಲ್ಲಿ ಪ್ರಜಾಸತ್ತೆ ಮರಳಿ ತರಲು ಮಾಡಿದ ತ್ಯಾಗ ಮತ್ತು ಕಠಿಣ ಹೋರಾಟಗಳ ಫಲವಾಗಿ ಜನರಿಂದ ಆಯ್ಕೆಯಾದ ಪ್ರಜಾಸತ್ತಾತ್ಮಕ ಸರಕಾರವೊಂದು ಇದೀಗ ಕಾರ್ಯಭಾರ ಆರಂಭಿಸಿದೆ. ಸೂಚಿ ಅವರು ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ್ದರೂ, ಅವರ ಎನ್ಎಲ್ಡಿ ಪಕ್ಷ ಸೇನೆ ಜತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ಮ್ಯಾನ್ಮಾರ್ ಸಂವಿಧಾನವು ಸೇನೆಗೆ ಶೇ 25ರಷ್ಟು ಸ್ಥಾನಗಳನ್ನು ಸ

ಜೊಕೊವಿಕ್ ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ:-

Image
ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ ಏಜೆನ್ಸೀಸ್ | Feb 1, 2016, 04.30 AM IST 3101-2-2-NOVAK A A A -ರಾಯ್ ಎಮರ್ಸನ್ ದಾಖಲೆ ಸರಿಗಟ್ಟಿದ ಜೊಕೊವಿಕ್ ಐದನೇ ಬಾರಿ ಫೈನಲ್ನಲ್ಲಿ ಮುಗ್ಗರಿಸಿದ ಬ್ರಿಟನ್ನ ಆಂಡಿ ಮರ್ರೆ- ಮೆಲ್ಬೋರ್ನ್: ಅಕ್ಷರಶಃ ಅಬ್ಬರದ ಆಟವಾಡಿದ ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್, ಇಲ್ಲಿ ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಬ್ರಿಟನ್ನ ಆ್ಯಂಡಿ ಮರ್ರೆ ಅವರನ್ನು ಬಗ್ಗು ಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದರು. ಇಲ್ಲಿನ ರಾಡ್ ಲೆವರ್ ಅರೆನಾದಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ ಮಿಂಚಿದ ಹಾಲಿ ಚಾಂಪಿಯನ್ ನೊವಾಕ್, 6-1, 7-5, 7-6(7/3)ರ ನೇರ ಸೆಟ್ಗಳಿಂದ ಐದನೇ ಬಾರಿ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯವನ್ನಾಡುತ್ತಿದ್ದ ಆ್ಯಂಡಿ ಮರ್ರೆಗೆ ಸೋಲುಣಿಸಿದರು. ಎರಡು ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್ ಕದನದಲ್ಲಿ ಸಿಕ್ಕಂತಹ ಅಮೋಘ ಗೆಲುವಿನೊಂದಿಗೆ ವೃತ್ತಿ ಬದುಕಿನ ಆರನೇ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್ ಗೆದ್ದ ನೊವಾಕ್ ಜೊಕೊವಿಕ್, ಅತಿ ಹೆಚ್ಚು ಬಾರಿ ಆಸೀಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯ್ ಎಮರ್ಸನ್ (6 ಪ್ರಶಸ್ತಿ) ಅವರ ದಾಖಲೆಯನ್ನು ಸರಿಗಟ್ಟಿದರು. 11ನೇ ಗ್ರ್ಯಾನ್ ಸ್ಲ್ಯಾಮ್ ಗೆಲುವು ಬ್ರಿಟನ್ನ ತಾರೆ ಆ್ಯಂಡಿ ಮರ್ರೆ

ಅಕ್ಕಿ ರಫ್ತು: ಭಾರತ ನಂ.1

Image
ಅಕ್ಕಿ ರಫ್ತು: ಭಾರತ ನಂ.1 1 Feb, 2016 ಬ್ಯಾಂಕಾಕ್ (ಐಎಎನ್ಎಸ್): ಕಳೆದ ವರ್ಷ ಅತಿ ಹೆಚ್ಚು ಅಕ್ಕಿ ರಫ್ತು ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. 2015ರಲ್ಲಿ ಭಾರತವು ಜಾಗತಿಕ ಮಾರುಕಟ್ಟೆಗೆ 1.2 ಕೋಟಿ ಟನ್ ಅಕ್ಕಿ ರಫ್ತು ಮಾಡಿದ್ದು, ಇಲ್ಲಿಯವರೆಗೆ ಮೊದಲ ಸ್ಥಾನದಲ್ಲಿದ್ದ ಥಾಯ್ಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದೆ. 2014ರಲ್ಲಿ 1.09 ಕೋಟಿ ಟನ್ ಅಕ್ಕಿ ರಫ್ತು ಮಾಡಿದ್ದ ಥಾಯ್ಲೆಂಡ್ನ ಸಾಮರ್ಥ್ಯ 2015ರಲ್ಲಿ 98 ಲಕ್ಷ ಟನ್ಗೆ ಕುಸಿದಿದೆ ಎಂದು ಥಾಯ್ ಅಕ್ಕಿ ರಫ್ತು ಸಂಘದ ಮುಖ್ಯಸ್ಥ ಚಾರೋನ್ ಲೌಥಮ್ಥಾಟ್ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಹುದ್ದೆ ಖಾಲಿ:*

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಒಟ್ಟು 25 ಸಾವಿರದ 749 ಪೊಲೀಸ್ ಹುದ್ದೆಗಳು ಖಾಲಿಯಿವೆ ಎಂದು ಹೈಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಅಂಕಿಅಂಶ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ನೇಮಕಾತಿ ಮತ್ತು ತರಬೇತಿ ವಿಭಾಗ) ರಾಘವೇಂದ್ರ ಔರಾದ್ಕರ್ ಹೈಕೋರ್ಟ್ ಶುಕ್ರವಾರ ಪ್ರಮಾಣ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಎಯಿಂದ ಡಿ ವೃಂದದವರೆಗೆ ಒಟ್ಟು 99 ಸಾವಿರದ 189 ಪೊಲೀಸ್ ಕಾರ್ಯ ನಿರ್ವಾಹಕ ಹುದ್ದೆಗಳು ಭರ್ತಿಯಾಗಿದ್ದು, 25 ಸಾವಿರದ 749 ಹುದ್ದೆಗಳು ಖಾಲಿಯಿವೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿಯಿವೆ ಎಂದು ಮಾಹಿತಿ ನೀಡಿದ್ದಾರೆ. ಸಚಿವಾಲಯ ಸೇರಿದಂತೆ ತಾಂತ್ರಿಕ ವಿಭಾಗದಲ್ಲಿ 1, 03, 457 ಹುದ್ದೆಗಳು ಮಂಜೂರಾಗಿದ್ದು, 74 ಸಾವಿರದ 389 ಭರ್ತಿಯಾಗಿವೆ. 27 ಸಾವಿರದ 068 ಹುದ್ದೆಗಳು ಖಾಲಿಯಿವೆ. ಒಟ್ಟಾರೆ ಎಯಿಂದ ಡಿ ವೃಂದದವರೆಗೆ ಶೇಕಡಾ 25ರಷ್ಟು ಕಾರ್ಯನಿರ್ವಾಹಕ ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವುದಾಗಿ ತಿಳಿಸಲಾಗಿದೆ.

ಸಾನಿಯಾಮಿರ್ಜಾ- ಮಾರ್ಟೀನಾ ಜೋಡಿಗೆ ಆಸ್ಟ್ರೇಲಿಯನ್ ಡಬಲ್ಸ್ ಪ್ರಶಸ್ತಿ:-

ಮೆಲ್ಬೋರ್ನ್, ಜ.29- ಇಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಡ್ಜರ್ಲ್ಯಾಂಡ್ನ ಮಾರ್ಟೀನಾ ಹಿಂಗೀಸ್ ಜೋಡಿ ಮುಡಿಗೇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಚೆಕ್ ರಿಪಬ್ಲಿಕ್ನ ಆಂಡ್ರಿಯಾ ಮತ್ತು ಲ್ಯೂಸಿ ಜೋಡಿಯನ್ನು 7-6, 6-3 ಸೆಟ್ಗಳಿಂದ ಮಣಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದೆ. ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಸಾನಿಯಾ-ಹಿಂಗೀಸ್ ಜೋಡಿಯನ್ನು ಪ್ರಬಲವಾಗಿ ಎದುರೇಟು ನೀಡುವಲ್ಲಿ ಚೆಕ್ನ ಜೋಡಿ ಯಶಸ್ವಿಯಾಗಿತ್ತು. ಆದರೆ, ಟೈಬ್ರೇಕರ್ನಲ್ಲಿ ಚುರುಕಾದ ಆಟದಿಂದ ಪ್ರಥಮ ಸೆಟ್ಅನ್ನು ಕೈ ವಶಪಡಿಸಿಕೊಂಡಿತು. ಆದರೆ, ಎರಡನೆ ಸೆಟ್ನಲ್ಲಿ ಪ್ರಾಬಲ್ಯ ಮೆರೆದು ಸುಲಭವಾಗಿಯೇ ಪಂದ್ಯವನ್ನು ತನ್ನತ್ತ ತೆಗೆದುಕೊಂಡು ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡರು. ಸತತ ಮೂರು ಗ್ರ್ಯಾಂಡ್ಸ್ಲ್ಯಾಮ್ಗಳನ್ನು ಗೆದ್ದ ಕೀರ್ತಿ (ವಿಂಬಲ್ಡನ್, ಯು.ಎಸ್.ಓಪನ್ ಈಗ ಆಸ್ಟ್ರೇಲಿಯನ್ ಓಪನ್) ಮಹಿಳಾ ಡಬಲ್ಸ್ ಪ್ರಶಸ್ತಿ ಸಾನಿಯಾ- ಮಾರ್ಟಿನಾ ಹಿಂಗೀಸ್ಗೆ ಸಲ್ಲುತ್ತದೆ. ಸತತ ಗೆಲುವಿನ ನಾಗಾಲೋಟದಲ್ಲಿರುವ ಈ ಜೋಡಿ ಈಗ ಹೊಸ ದಾಖಲೆಗೂ ಪಾತ್ರವಾಗಿದೆ..

ಮಾಹಿತಿ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಯ ವಿವರ ಬಹಿರಂಗಕ್ಕೆ ಅವಕಾಶವಿಲ್ಲ... ಎಂದು ಕೇಂದ್ರ ಮಾಹಿತಿ ಆಯೋಗವು ಶಾಲೆಗಳಿಗೆ ಮತ್ತು ಶಿಕ್ಷಣ ಇಲಾಖೆಗೆ ಆದೇಶಿಸಿದೆ

Image
Scanned by CamScanner

ರೇಖಾಗೆ ಯಶ್ ಛೋಪ್ರಾ ಪ್ರಶಸ್ತಿ

Image