Posts

ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಪಟ್ಟ. ನೀಡಲು ಸರ್ಕಾರದ ಚಿಂತನೆ

ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಪಟ್ಟ ಬೆಂಗಳೂರು, ಮೇ 31- ಹೆಸರಾಂತ ಸಾಹಿತಿ ಹಾಗೂ ಜನಪ್ರಿಯ ಕವಿ ನಿಸಾರ್ ಅಹಮದ್ ಅವರಿಗೆ ರಾಷ್ಟ್ರಕವಿ ಪಟ್ಟ ಕಟ್ಟಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗಿರುವ ವಿವೇಚನೆಯ ಅಧಿಕಾರ ಬಳಸಿ ಶೀಘ್ರದಲ್ಲಿಯೇ ರಾಷ್ಟ್ರಕವಿ ಸ್ಥಾನಕ್ಕೆ ನಿಸಾರ್ ಅಹಮದ್ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಷ್ಟ್ರಕವಿ ಪಟ್ಟವನ್ನು ಅಲಂಕರಿಸಿದವರಲ್ಲಿ ಎಂ.ಗೋವಿಂದ ಪೈ ಮೊದಲಿಗರು. ಆನಂತರ ಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾಗಿದ್ದರು. ಮೂರನೆಯವರಾಗಿ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ರಾಷ್ಟ್ರಕವಿಯಾಗಿದ್ದರು. ಜಿ.ಎಸ್.ಶಿವರುದ್ರಪ್ಪ ಅವರು ಇತ್ತೀಚೆಗೆ ನಿಧನರಾಗಿರುವುದರಿಂದ ರಾಷ್ಟ್ರಕವಿ ಸ್ಥಾನ ತೆರವಾಗಿದೆ. ತೆರವಾಗಿರುವ ಸ್ಥಾನಕ್ಕೆ ಸಾಹಿತಿ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿ ರಾಷ್ಟ್ರಕವಿ ಪಟ್ಟಕ್ಕೆ ಸಾಹಿತಿಗಳ ಹೆಸರನ್ನು ಶಿಫಾರಸು ಮಾಡುವ ಬದಲು ರಾಷ್ಟ್ರಕವಿ ಪ್ರಶಸ್ತಿ ನೀಡುವುದು ಸರಿಯಲ್ಲ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ವರದಿಯನ್ನು ನೀಡಿದೆ. ಪ್ರಶಸ್ತಿಗೆ ಯಾರ ಹೆ...

ತಿಂಗಳ ತಿರುಳು : ಜೂನ್ ೨೦೧೫

Image

World No Tobacco Day (WNTD) is observed around the world every year on May 31

'ಆಹಾರವಿಲ್ಲದೇ ಬದುಕಲು ಸಾಧ್ಯವಿಲ್ಲ ಆದರೆ ತಂಬಾಕು ಇಲ್ಲದೇ ಬದುಕಬಹುದು' ಆಹಾರ ಬೆಳೆವ ರೈತ ಇನ್ನು ಜೋಪಡಿಯಲ್ಲೇ ಇದ್ದಾನೆ. ಸಿಗರೇಟ್ ತಯಾರಿಕಾ ಕಂಪನಿ ಮಾಲಿಕ ಬಹುಮಹಡಿ ಕಟ್ಟಡದಲ್ಲಿದ್ದಾನೆ'. ಇದು ವಾಸ್ತವದ ಸತ್ಯ. ತಂಬಾಕು ಕ್ಯಾನ್ಸರ್ ಕಾರಕ, ಇಂದೇ ತಂಬಾಕು ತ್ಯಜಿಸಿ, ನಾನು ಮುಖೇಶ್ ಗುಟ್ಕಾ ತಿನ್ನುತ್ತಿದೆ... ಶ್ವಾಸಕೋಶದಲ್ಲಿ ಇಷ್ಟೊಂದು ಟಾರ್, ಈ ಬಗೆಯ ಜಾಗೃತಿ ಜಾಹೀರಾತುಗಳನ್ನು ಎಲ್ಲಿಯಾದರೂ ನೋಡಿಯೇ ಇರುತ್ತೀರಿ. ಮೇ 31 ವಿಶ್ವ ತಂಬಾಕು ದಿನ. ಪ್ರತಿವರ್ಷ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುವ ತಂಬಾಕಿಗೆ ಕರುಣೆ ಎಂಬುದೇ ಇಲ್ಲ. ತಂಬಾಕು ನಿಷೇಧ ದಿನ ಮತ್ತೆ ಬಂದಿದೆ. ಈ ಬಾರಿಯಾದರೂ ವ್ಯಸನಿಗಳು ಧೂಮಪಾನ, ಗುಟ್ಕಾ, ಚೈನಿ, ತಂಬಾಕು ಜಗಿಯುವುದಕ್ಕೆ ಫುಲ್ ಸ್ಟಾಪ್ ಹಾಕಬೇಕಿದೆ. ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆಯಲ್ಲಿ ಕೆಲ ಸಂಗತಿಗಳನ್ನು ಅವಲೋಕಿಸಬೇಕಾಗುತ್ತದೆ. ಇದನ್ನು ಓದುದ ಮೇಲೆ ನೀವು ತಂಬಾಕು ಬಿಡಲು ಮನಸ್ಸು ಮಾಡಿದರೂ ಮಾಡಬಹುದು. ತಂಬಾಕಿಗೆ ಬಲಿಯಾಗುವವರ ಸಂಖ್ಯೆ ಎಷ್ಟು? ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳುವಂತೆ ತಂಬಾಕಿನ ಚಟಕ್ಕೆ ಪ್ರತಿವರ್ಷ 6 ಮಿಲಿಯನ್ ಜನ ಬಲಿಯಾಗುತ್ತಿದ್ದಾರೆ. ಇದರಲ್ಲಿನ ಧೂಮಪಾನಿಗಳ ಪಾಲೇ(ಶೇ. 90) ಬಹಳ ದೊಡ್ಡದು. ತಂಬಾಕು ಸೇವನೆ ಅಥವಾ ಧೂಮಪಾನ ಕಡಿಮೆಯಾಗಿದೆಯೇ? ಹೌದು .. ಇದೊಂದು ಸಕಾರಾತ್ಮಕ ಬೆಳವಣಿಗೆ. ಜಗತ್ತಿನ 125 ದೇಶಗಳಲ್ಲಿ ಸಿಗರೇಟ್ ಕೊಳ...

ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಮೈಸೂರು ಮೂಲದ ವನ್ಯಾ ವಿಜೇತೆ

: ವಾಷಿಂಗ್ಟನ್ನಲ್ಲಿ ಶುಕ್ರವಾರ ನಡೆದ ಪ್ರತಿಷ್ಠಿತ 'ಸ್ಪೆಲ್ಲಿಂಗ್ ಬೀ' ಅಂತಿಮ ಸ್ಪರ್ಧೆಯಲ್ಲಿ ವನ್ಯಾ ಶಿವಶಂಕರ್ ಹಾಗೂ ಗೋಕುಲ್ ವೆಂಕಟಾಚಲಂ ಅವರು 2015ರ ಸ್ಕ್ರಿಪ್ಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಟ್ರೋಫಿ ಪಡೆದುಕೊಂಡರು ಎಎಫ್ಪಿ ಚಿತ್ರ ವಾಷಿಂಗ್ಟನ್ (ಪಿಟಿಐ): ವಾಷಿಂಗ್ಟನ್ನಲ್ಲಿ ನಡೆದ ವಿಶ್ವದ ಪ್ರತಿಷ್ಠಿತ 'ಸ್ಪೆಲ್ಲಿಂಗ್ ಬೀ' ಅಂತಿಮ ಸ್ಪರ್ಧೆಯಲ್ಲಿ ಮೈಸೂರು ಮೂಲದ ವಿದ್ಯಾರ್ಥಿನಿ ಸೇರಿದಂತೆ ಭಾರತ ಮೂಲದ ಇಬ್ಬರು ಅಮೆರಿಕ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಸಮಾನ ಅಂಕ ಗಳಿಸಿದ 13 ವರ್ಷದ ವನ್ಯಾ ಶಿವಶಂಕರ್, ಹಾಗೂ 14 ವರ್ಷದ ಗೋಕುಲ್ ವೆಂಕಟಾಚಲಂ ಅವರನ್ನು ಸ್ಕ್ರಿಪ್ಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಜಯಶಾಲಿಗಳೆಂದು ಘೋಷಿಸಲಾಯಿತು.ಚಿನ್ನದ ಟ್ರೋಫಿಯ ಜತೆ ಇಬ್ಬರಿಗೂ ತಲಾ 37 ಸಾವಿರ ಡಾಲರ್ (₨ 23.34 ಲಕ್ಷ) ನಗದು ಬಹುಮಾನ, ಪದಕ ನೀಡಿ ಸನ್ಮಾನಿಸಲಾಯಿತು. ಒಕ್ಲಾಮಾದಲ್ಲಿ ನೆಲೆಸಿರುವ ಭಾರತ ಮೂಲದ ಕೊಲ್ ಶಫೆರ್ ರೇ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 18 ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳ ಪೈಕಿ 14ರಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವ ಮೂಲಕ ತಮ್ಮ ಪಾರಮ್ಯ ಮರೆದಿದ್ದಾರೆ.ವನ್ಯಾ ಶಿವಶಂಕರ್ ಮೂಲತಃ ಮೈಸೂರಿನವರಾಗಿದ್ದು, ಅವರ ಅಕ್ಕ ಕಾವ್ಯಾ ಅವರು 2009ರಲ್ಲಿ ನಡೆದ ಸ್ಪೆಲ್ಲ...

ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್

Posted by: Gururaj | Sat, May 30, 2015, 15:45 [IST] ತುಮಕೂರು, ಮೇ 30 : ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ತುಮಕೂರು ಜಿಲ್ಲೆ ಪಾವಗಡದಲ್ಲಿ ನಿರ್ಮಾಣ ವಾಗಲಿದೆ. ಸುಮಾರು 10 ಸಾವಿರ ಎಕರೆ ಜಾಗದಲ್ಲಿ ಈ ಪಾರ್ಕ್ ತಲೆ ಎತ್ತಲಿದ್ದು, 2 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿದೆ. ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ದೇಶದಾದ್ಯಂತ 25 ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಗಾಗಿ ಕರ್ನಾಟಕದಲ್ಲಿ ಅತಿಹೆಚ್ಚು ಉಷ್ಣಾಂಶವಿರುವ ಪಾವಗಡ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಈಗಾಗಲೇ 10 ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಒಟ್ಟು 2 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಏಷ್ಯಾದಲ್ಲೇ ಇದು ದೊಡ್ಡ ಸೌರ ವಿದ್ಯುತ್ ಪಾರ್ಕ್ ಆಗಲಿದೆ ಎಂದು ರವಿ ಕುಮಾರ್ ವಿವರಣೆ ನೀಡದರು. ಮಧ್ಯಪ್ರದೇಶದಲ್ಲಿ 750 ಮೆ.ವ್ಯಾ, ಆಂಧ್ರಪ್ರದೇಶದಲ್ಲಿ 1 ಸಾವಿರ ಮೆ.ವ್ಯಾ. ಸೋಲಾರ್ ಪಾರ್ಕ್ಗಳಿವೆ. ಇವುಗಳನ್ನು ಹೊರತುಪಡಿಸಿದರೆ ಪಾವಗಡದ 2 ಸಾವಿರ ಮೆ.ವ್ಯಾ. ಸಾಮರ್ಥ್ಯದ ಪಾರ್ಕ್ ಏಷ್ಯಾಕ್ಕೇ ಪ್ರಥಮವಾಗಲಿದೆ ಎಂದು ತಿಳಿಸಿದರು. ಸೌರ ವಿದ...

ನೈಜೀರಿಯಾ ಅಧ್ಯಕ್ಷರಾಗಿ ಬುಹಾರ

ಅಬುಜಾ (ಎಎಪ್ಪಿ): ಸೇನಾ ಗೌರವದೊಂದಿಗೆ ನೈಜೀರಿಯಾದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಬುಹಾರಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆ ಆಡಳಿತ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಿದ್ದು, ವಿರೋಧ ಪಕ್ಷದ ಅಭ್ಯರ್ಥಿ ಬುಹರಿ ಜಯಗಳಿಸುವ ಮೂಲಕ ಅಧ್ಯಕ್ಷರಾಗಿದ್ದಾರೆ. 72 ವರ್ಷದ ಬುಹಾರಿ ಅವರಿಗೆ ನೈಜಿರಿಯಾ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಮಾಣ ವಚನ ಬೋಧಿಸಿದರು. ಆರ್ಥಿಕ ಸಂಕಷ್ಟ ಮತ್ತು ಬೊಕೊ ಹರಮ್ ಉಗ್ರಗಾಮಿಗಳ ಉಪಟಳದಿಂದ ದೇಶ ತತ್ತರಿಸಿದ್ದು, ನೂತನ ಅಧ್ಯಕ್ಷರಿಗೆ ಈ ಎರಡೂ ಸಮಸ್ಯೆಗಳು ಸವಾಲಾಗಿವೆ.

ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಫರ್ಧೆ ಟೈ ನಲ್ಲಿ ಅಂತ್ಯ (ಯು ಎಸ್ ಎ)

Posted by: Madhusoodhan Hegde | Fri, May 29, 2015, 15:49 [IST] ವಾಷಿಂಗ್ ಟನ್, ಮೇ 29: ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಫರ್ಧೆ ಟೈ ನಲ್ಲಿ ಅಂತ್ಯವಾಗಿದೆ. ಇಂಡೋ-ಅಮೇರಿಕನ್ ವನ್ಯಾ ಶಿವಶಂಕರ್ ಮತ್ತು ಗೋಕುಲ್ ವೆಂಕಟಾಚಲಂ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು 54 ವರ್ಷದ ನಂತರ ಕಳೆದ ವರ್ಷ(2014) ರಲ್ಲಿ ಸ್ಪೆಲ್ಲಿಂಗ್ ಬೀ ಟೈ ನಲ್ಲಿ ಅಂತ್ಯವಾಗಿತ್ತು. ಈ ಸಾರಿಯೂ ಇಬ್ಬರು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಸಹೋದರಿಯರ ಸಾಧನೆ ಈ ಬಾರಿ ಪ್ರಶಸ್ತಿ ಪಡೆದುಕೊಂಡ ವನ್ಯಾ ಶಿವಶಂಕರ್(13) ಅಕ್ಕ ಕಾವ್ಯಾ 2009ರಲ್ಲಿ ಸ್ಪೆಲ್ಲಿಂಗ್ ಬೀ ವಿಜೇತರಾಗಿದ್ದರು. ಕಾನ್ ಸಾಸ್ ನಿವಾಸಿಯಾಗಿರುವ ವನ್ಯಾ ಅಕ್ಕನ ಸಾಧನೆಯನ್ನು ಸರಿಗಟ್ಟಿದ್ದಾಳೆ. 14 ವರ್ಷದ ವೆಂಕಾಟಾಚಲಂ ಸಾಧನೆ ಅಮೆರಿಕದ ಚೆಸ್ಟರ್ ಫೀಲ್ಡ್ ನಿವಾಸಿ ಗೋಕುಲ್ ವೆಂಕಟಾಚಲಂ ಅವರಿಗೂ ಇದು ಕೊನೆಯ ಅವಕಾಶವಾಗಿತ್ತು. ಇಬ್ಬರು ಸ್ಫರ್ಧಾಳುಗಳು ಐದನೇ ಬಾರಿ ಸ್ಪೆಲ್ಲಿಂಗ್ ಬೀ ನಲ್ಲಿ ಭಾಗಿಯಾಗಿದ್ದರು. ವನ್ಯಾ ಶಿವಕುಮಾರ್ ತನ್ನ ಗೆಲುವನ್ನು ಆಕೆಯ ಅಜ್ಜಿಗೆ ಅರ್ಪಿಸಿದ್ದಾಳೆ. ಕಠಿಣ ಪರಿಶ್ರಮ ಈ ಸಾಧನೆಗೆ ಕಾರಣವಾಯಿತು ಎಂದು ವನ್ಯಾ ಹೇಳುತ್ತಾರೆ. ಕೊನೆಯ ಸುತ್ತು ಎಂದು ನಾನು ಮೊದಲು ಸ್ವಲ್ಪ ಆತ್ಮವಿಶ್ವಾಸ ಕಳೆದಯಕೊಂಡಿದ್ದೆ. ಆದರೆ ನಂತರ ತುರುಸಿನಿಂದ ಭಾಗವಹಿಸಿದೆ ಎಂದು ಗೋಕುಲ್ ಹೇಳಿದ್ದಾರೆ. ಅಂತಿಮ ಸುತ್ತ...

ಪೇಸ್ಗೆ 700ನೇ ಜಯದ ಮಾಲೆ, ಫೆಡರರ್ 100ನೇ ಜತೆಗಾರ?

Published: 29 May 2015 11:13 AM IST ಲಿಯಾಂಡರ್ ಪೇಸ್ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈಗ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಲ್ಲದೆ ಮತ್ತೊಂದು ಸಾಧನೆಯತ್ತ ಗಮನ ಹರಿಸಿದ್ದಾರೆ. ಸುದೀರ್ಘ 25 ವರ್ಷಗಳ ವೃತ್ತಿ ಜೀವನದಲ್ಲಿ ಪೇಸ್ 700ನೇ ಜಯ ಸಂಪಾದಿಸಿದ್ದಾರೆ. ಈವರೆಗೆ 99 ಜತೆಗಾರರೊಂದಿಗೆ ಆಡಿರುವ ಪೇಸ್ಗೆ 100ನೇ ಜತೆಗಾರ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ. ಬುಧವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾದ ಮೊದಲ ಸುತ್ತಿನ ಪಂದ್ಯದಲ್ಲಿ ಪೇಸ್ ತಮ್ಮ 99ನೇ ಜತೆಗಾರ ಡೇನಿಯಲ್ ನೆಸ್ಟರ್ ಜತೆಗೆ, ಗೆಲವು ದಾಖಲಿಸಿದ್ದು ಅವರ ಡಬಲ್ಸ್ ವೃತ್ತಿಜೀವನದ 700ನೇ ಗೆಲುವಾಗಿತ್ತು. ಇದೀಗ 100ನೇ ಜತೆಗಾರ ಯಾರಾಗುವರು ಎಂಬ ಚರ್ಚೆ ಆರಂಭವಾಗಿದೆ. ಇದೇ ವೇಳೆ, ಪೇಸ್ ಅವರು ರೋಜರ್ ಫೆಡರರ್ 100ನೇ ಜತೆಗಾರನಾಗಲಿದ್ದಾರೆ ಎಂಬ ಗಾಳಿಸುದ್ದಿಯಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೇಸ್, ಸದ್ಯಕ್ಕೆ ಡೇನಿಯಲ್ ಜತೆಗಾರ. ಇನ್ನಷ್ಟು ದಿನಗಳ ಕಾಲ ಅವರ ಜತೆಯಲ್ಲಿರುವ ಎಂದಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. 100 ಹಾಗೂ 101ನೇ ಸಂಖ್ಯೆ ವಿಶೇಷವಾಗಿರುವುದರಿಂದ ಸೂಕ್ತ ಜೊತೆಗಾರ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಪೇಸ್ ತಿಳಿಸಿದ್ದಾರೆ. Posted by: Vishwanath S | Source: Online Desk

9999- ನಂ.1 ಫ್ಯಾನ್ಸಿ ನಂಬರ್ ಆಗಿ ಘೋಷಣೆ:-RTO

Image
Posted by: Mahesh | Thu, May 28, 2015, 13:40 [IST] ಬೆಂಗಳೂರು, ಮೇ.28: ವಾಹನಗಳಿಗೆ ಫ್ಯಾನ್ಸಿ ನಂಬರ್ ಪಡೆದುಕೊಳ್ಳುವ ಹುಚ್ಚು ಹಲವು ವಾಹನ ಮಾಲೀಕರಿಗಿರುತ್ತದೆ. ಅದರೆ, ಫ್ಯಾನ್ಸಿ ನಂಬರ್ ಬೇಕೆಂದರೆ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಬೇಕು. ಈ ರೀತಿ ಬಿಡ್ಡಿಂಗ್ ನಡೆದು '9999' ಸಂಖ್ಯೆಗೆ ಅತಿ ಹೆಚ್ಚಿನ ಬಿಡ್ಡಿಂಗ್, ಬೇಡಿಕೆ ಬಂದಿದೆ ಎಂದು ಆರ್ ಟಿಒ ಪ್ರಕಟಿಸಿದೆ. ಸುಮಾರು 22 ಜನ ಬಿಡ್ಡರ್ ಗಳು ಸುಮಾರು 50ಕ್ಕೂ ಅಧಿಕ ಫ್ಯಾನ್ಸಿ ನಂಬರ್ ಗಳ ಮೇಲೆ ಬಿಡ್ ಮಾಡಿದ್ದರು. ಡಲ್ ಹೊಡೆಯುತ್ತಿದ್ದ ಬಿಡ್ ಪ್ರಕ್ರಿಯೆಗೆ ಸಕತ್ ಕಿಕ್ ಸಿಕ್ಕಿದ್ದು ಮಾತ್ರ 9999 ಎಂಬ ಸಂಖ್ಯೆ ಬಿಡ್ಡಿಂಗ್ ಗೆ ಬಂದಾಗ ಮಾತ್ರ. ಬಿಡ್ಡಿಂಗ್ ಕೊನೆಗೆ 1.30 ಲಕ್ಷರು ಪ್ಲಸ್ 75,000 ರು (ಕನಿಷ್ಠ ಬಿಡ್ ಮೊತ್ತ) ನೀಡಿ ತಮ್ಮ ವಾಹನಕ್ಕೆ ನೋಂದಣಿ ಸಂಖ್ಯೆ ( '9999' ಸಂಖ್ಯೆ ಪಡೆದುಕೊಂಡಿದ್ದಾರೆ. ಐಷಾರಾಮಿ ಎಸ್ ಯುವಿ ವಾಹನಕ್ಕೆ ಈ ಸಂಖ್ಯೆಯನ್ನು ಇಡುವುದಾಗಿ ಸಂಖ್ಯೆ ಗೆದ್ದ ನಟರಾಜ್ ನಗರಹಳ್ಳಿ ಹೇಳಿದ್ದಾರೆ. ಇಂದಿರಾನಗರ ಪ್ರಾದೇಶಿಕ ವಾಹನ ನೋಂದಣಿ ಕಚೇರಿಯಲ್ಲಿ ಅತಿ ಹೆಚ್ಚು ಬೆಲೆ ಮಾರಾಟವಾದ ಸಂಖ್ಯೆ (KA 03 9999) ಒಟ್ಟಾರೆ 11 ಫ್ಯಾನ್ಸಿ ಸಂಖ್ಯೆಗಳು 1.80 ಲಕ್ಷ ರು ಮೌಲ್ಯಕ್ಕೆ ಮಾರಾಟವಾಗಿದೆ. ಕನಿಷ್ಠ ಬಿಡ್ಡಿಂಗ್ ಬೆಲೆ 75,000 ರು ಪಾವತಿಸಿ ಬಿಡ್ಡಿಂಗ್ ಕೂಗುವ ಅವಕಾಶ ನ...

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ): ಕಿರು ಮಾಹಿತಿ

Published: 27 May 2015 03:52 PM IST | Updated: 27 May 2015 03:52 PM ISTಮುಂದಿನ ವರ್ಷ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ ಹೊಸ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಏಪ್ರಿಲ್ 1, 2016ಕ್ಕೆ ಜಾರಿಗೆ ಬರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದನ್ನು ಸಂಸತ್ತಿನಿಂದ ಒಪ್ಪಿಗೆ ಪಡೆದು ಜಾರಿಗೆ ತರಲು  ಬೇಕಾದ ಎಲ್ಲಾ ವಿಧಾನಗಳನ್ನು ಅಳವಡಿಸಲಾಗಿದೆ ಮತ್ತು ಅರ್ಧದಷ್ಟು ರಾಜ್ಯಗಳು ಈಗಾಗಲೇ ಒಪ್ಪಿಕೊಂಡಿವೆ ಎಂದು ಅವರು  ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಹತ್ವದ ಸರಕು ಮತ್ತು ಸೇವಾ ತೆರಿಗೆ ವಿಧಾನವನ್ನು ನೀವು ಬಹಳಷ್ಟು ಸಾರಿ ಕೇಳಿರಬಹುದು. ಹಾಗಂದರೆ ಏನು? ಅದು ನಮ್ಮ ನಿತ್ಯ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನೋಡೋಣ. ಜಿಎಸ್ ಟಿ ಎಂದರೇನು?: ಉತ್ಪಾದನೆ,ಮಾರಾಟ,ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿರುತ್ತದೆ. ಈ ತೆರಿಗೆ ವಿಧಾನ ಈಗಾಗಲೇ ವಿಶ್ವದ 150 ದೇಶಗಳಲ್ಲಿ...