Posts

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ; ತಿಥಿ ಅತ್ಯುತ್ತಮ ಚಿತ್ರ

ಉದಯವಾಣಿ, May 17, 2016, 4:54 PM IST ಬೆಂಗಳೂರು : 2015 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು , ಕನ್ನಡದ ತಿಥಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ , ದ್ವಿತೀಯ ಅತ್ಯುತ್ತಮ ಚಿತ್ರ " ಮಾರಿಕೊಂಡವರು" . ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಮೈತ್ರಿ , ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಕೃಷ್ಣಲೀಲಾಕ್ಕೆ ಲಭಿಸಿದೆ. ಮನೆ ಮೊದಲ ಪಾಠ ಶಾಲೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ . ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಸಚಿವ ರೋಶನ್ ಬೇಗ್ ಪ್ರಶಸ್ತಿಯ ವಿವರ ಪ್ರಕಟಿಸಿದರು . ಅನುಪ್ ಭಂಡಾರಿ ಅವರ ರಂಗಿತರಂಗ ಚೊಚ್ಚಲ ನಿರ್ದೆಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ . ಅತ್ಯುತ್ತಮ ನಿರ್ದೇಶಕ ಅನೂಪ್ ಭಂಡಾರಿ ( ರಂಗಿತರಂಗ ) , ಅತ್ಯುತ್ತಮ ನಾಯಕ ನಟ ವಿಜಯ್ ರಾಘವೇಂದ್ರ ( ಶಿವಯೋಗಿ ಪುಟ್ಟಯ್ಯಜ್ಜ ), ಅತ್ಯುತ್ತಮ ನಟಿ ಮಾಲಾಶ್ರೀ ( ಗಂಗಾ ) , ಅತ್ಯುತ್ತಮ ಸಂಭಾಷಣೆ ಈರೇಗೌಡ (ತಿಥಿ ), ಅತ್ಯುತ್ತಮ ಪೋಷಕ ನಟ ರಮೇಶ್ , ಭಟ್ ( ಮನಮಂಥನ ). ಅತ್ಯುತ್ತಮ ಛಾಯಾಗ್ರಹಣ ಅನಂತ್ ಅರಸು( ಲಾಸ್ಟ್ ಬಸ್ ) , ಅತ್ಯುತ್ತಮ ಹಿನ್ನೆಲೆ ಗಾಯಕ ಸಂತೋಷ್ ವೆಂಕಿ , ಅತ್ಯುತ್ತಮ ಸಂಕಲನ ಸೃಜತ್ ನಾಯಕ್ , ಅತ್ಯುತ್ತಮ ಬಾಲನಟಿ ಮೇವಿಷ್, ಅತ್ಯುತ್ತಮ ಗೀ

ಎಸ್ ಎಸ್ ಎಲ್ ಸಿ ಫಲಿತಾಂಶ; ಬೆಂಗಳೂರು ಗ್ರಾಮಾಂತರ ಪ್ರಥಮ

ಬೆಂಗಳೂರು: ಬಹು ನಿರೀಕ್ಷಿತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ಹಾಗೂ ಮಂಗಳೂರು ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದೆ. ರಾಜ್ಯದ 3,082 ಪರೀಕ್ಷಾ ಕೇಂದ್ರಗಳಲ್ಲಿ ಕಳೆದ ಮಾರ್ಚ್- ಏಪ್ರಿಲ್'ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ ಒಟ್ಟು 13,993 ಶಾಲೆಗಳಲ್ಲಿ 8,49,233 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 617235 ಪಾಸಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಪೂರ್ಣ ಪ್ರಜ್ಞಾ ಶಾಲೆಯ ರಂಜನ್ ಕುಮಾರ್ 625/625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ, ಹೋಲಿ ಚೈಲ್ಡ್ ಸ್ಕೂಲ್ ವಿದ್ಯಾರ್ಥಿನಿ ಸುಪ್ರೀತಾ 624/625, ಹಾಗೂ ಮೈಸೂರಿನ ಮರಿಮಲ್ಲಪ್ಪ ಶಾಲೆಯ ಈಶು 624/625 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಸ್ವಾತಿ ಎಂ ಬೆಂಗಳೂರು ಗ್ರಾಮಂತರ ರಾಜಾಜಿನಗರ ಶ್ರೀವಾಣಿ ಬಾಲಕೀಯರ ಪ್ರೌಡಶಾಲಾ ವಿದ್ಯಾರ್ಥಿನಿ 98.56% (616/625) ಪಡೆದಿದ್ದಾರೆ. ಈ ಬಾರಿ ಬೆಂಗಳೂರು ಗ್ರಾಮಾಂತರ 89.63 % ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉಡುಪಿ ಜಿಲ್ಲೆಗೆ 89.52% ಮಂಗಳೂರು 88.01% ಹಾಗೂ ಬಳ್ಳಾರಿ ಕೊನೇ ಸ್ಥಾನ 56.68% ಪಡೆದುಕೊಂಡಿದೆ. ರಾಜ್ಯದಲ್ಲಿ ಒಟ್ಟಾರೆ 79.16% ಫಲಿತಾಂಶ ಬಂದಿದ್ದು ಕಳೆದ ವರುಷಕ್ಕಿಂತ 2% ಕಡಿಮೆ ಬಂದಿದೆ. ಸರಕಾರಿ ಶಾಲೆಗಳ

ಬೆಂಗಳೂರು ನಗರ ರೈಲ್ವೆ ನಿಲ್ದಾಣ ಇನ್ನು ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ

ಬೆಂಗಳೂರು: ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ಅಧಿಕೃತವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಎಂದು ಮರುನಾಮ ಮಾಡಲಾಗಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಇಂದು ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವರಾದ ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಚಿವರು ಯಲಹಂಕ-ಪೆನುಕೊಂಡ, ಅರಸೀಕೆರೆ-ತುಮಕೂರು ಮತ್ತು ಹುಬ್ಬಳ್ಳಿ-ಚಿಕ್ಜಾಜೂರು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಕಿರಾಣಿ ವ್ಯಾಪಾರಿ ಮಗ ಯುಪಿಎಸ್ಸಿ ಸಾಧಕ ಕಿಶೋರ್

Image
ಬಾಗಲಕೋಟೆ, ಮೇ 12: ಜಮಖಂಡಿ ತಾಲೂಕಿನ ಬನಹಟ್ಟಿ- ರಬಕವಿ ನಗರದ ಕಿರಾಣಿ ವ್ಯಾಪಾರಸ್ಥ ಬದ್ರಿನಾರಾಯಣ ಭಟ್ಟಡ ಹಾಗು ಉಮಾ ದಂಪತಿ ಮಗ ಕಿಶೋರ ಈಗ ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಪುತ್ರನಾಗಿ ಹೆಸರು ಗಳಿಸಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ವು ಮಂಗಳವಾರ ಪ್ರಕಟಿಸಿದ ಫಲಿತಾಂಶದಲ್ಲಿ ರಾಷ್ಟ್ರಕ್ಕೆ 808ನೇ rank ಪಡೆಯುವದರ ಮೂಲಕ ಸಾಧನೆ ಮಾಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಜತೆ ಮಾತನಾಡಿದ ಕಿಶೋರ, ಕಳೆದ ವರ್ಷವು ಈ ಪರೀಕ್ಷೆಯನ್ನು ಎದುರಿಸಿದ್ದೆ, ಇದು ನನ್ನ ಎರಡನೇಯ ಪ್ರಯತ್ನ ಈ ಭಾರಿ 808 ನೇ ಸ್ಥಾನ ಪಡೆದುಕೊಂಡಿದ್ದೇನೆ. ಫಲಿತಾಂಶವನ್ನು ಕೇಳಿ ತುಂಬಾ ಸಂತೋಷವಾಗಿದೆ. ಇದು ನನಗೆ ತೃಪ್ತಿ ನೀಡಿದೆ ಮುಂದಿನ ಸಲ ಹೆಚ್ಚಿನ ಶ್ರೇಯಾಂಕ ಸ್ಥಾನ ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಪ್ರತಿ ದಿನ 10 ಗಂಟೆಗಳ ಕಾಲ ಓದುತ್ತಿದ್ದೆ, ಭೂಗೋಳ ಶಾಸ್ತ್ರ ನನ್ನ ವಿಷಯವಾಗಿತ್ತು ಎಂದು ತಿಳಿಸಿದರು. ಕಿಶೋರ ಪ್ರತಿಭಾವಂತ: ಇವರು ಆರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿ, ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಶೇ.95.2 ಅಂಕಗಳೊಂದಿಗೆ ರಾಮಪೂರದ ಪೂರ್ಣಪ್ರಜ್ಞ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದರು. ಕಿಶೋರ ಭಟ್ಟಡ ಬನಹಟ್ಟಿಯ ಎಸ್‍ಆರ್‍ಎ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದು ದ್ವಿತೀಯ ಪರೀಕ್ಷೆಯಲ್ಲಿ ಶೇ.91.83 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ನಂತರ ಸಿಇಟಿ ಪರೀಕ್ಷೆಯಲ್ಲಿ

ಯುಪಿಎಸ್ಸಿ ಫಲಿತಾಂಶ : ಕರ್ನಾಟಕದ ಗೌಡಗೆ 105ನೇ ಸ್ಥಾನ!;-

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷೆ 2015ಯ ಅಂತಿಮ ಫಲಿತಾಂಶ ಮಂಗಳವಾರ (ಮೇ 10) ಅಂದರೆ      ನಿನ್ನೆ ಸಂಜೆ ಪ್ರಕಟವಾಗಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಲು ಬಯಸಿರುವ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಿದೆ. ಟೀನಾ ಡಬಿ(0256747) ಪ್ರಥಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಅತಾರ್ ಉಲ್ ಶಫಿ ಖಾನ್(ರೋಲ್ ನಂಬರ್ 0058239), ಜಸ್ಮೀರ್ ಸಿಂಗ್ ಸಂಧು (0010512), ಆರ್ತಿಕಾ ಶುಕ್ಲಾ(0000123), ಶಶಾಂಕ್ ತ್ರಿಪಾಠಿ(0015876) ಮೊದಲ 5 ಸ್ಥಾನ ಗಳಿಸಿದ್ದಾರೆ. ಕರ್ನಾಟಕದ ಶ್ರೀನಿವಾಸ್ ಗೌಡ ಎ. ಆರ್ (0535527) ಅವರು 105ನೇ ಸ್ಥಾನ ಗಳಿಸಿದ್ದಾರೆ. ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಗಾಗಿ ನಡೆಯುವ ಈ ಪರೀಕ್ಷೆಗಳು ಪ್ರಿಮಿಲಿನರಿ, ಅಂತಿಮ ಹಾಗೂ ಸಂದರ್ಶನ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಸುಮಾರು 15.008 ಅಭ್ಯರ್ಥಿಗಳು ಅಂತಿಮ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಅಂತಿಮ ಪರೀಕ್ಷಾ ಫಲಿತಾಂಶ www.upsc.gov.in ನಲ್ಲಿ ಪಡೆದುಕೊಳ್ಳಬಹುದು. ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ; * ಶ್ರೀನಿವಾಸಗೌಡ 105 * ನಿವ್ಯಾ ಶೆಟ್ಟಿ 274 * ಪವನ್ ಕುಮಾರ್ ಗಿರಿಯಪ್ಪ 420 * ಪ್ರಮೋದ್ ನಾಯಕ್ 779 * ಡಿಎಲ್ ನಾಗೇಶ್ 782 * ಆಕಾಶ್ ಎಸ್ 959 * ಭೈರಪ್ಪ 1035

Linking Procedure: Adhar No. to Ration Card via SMS

Image

101 ಸರ್ವಜ್ಞನ ವಚನಗಳು:-

🌺 ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ ಚಿಂತೆಯಲಿ ದೇಹ ಬಡವಕ್ಕು ಶಿವ ತೋರಿದಂತಿಹುದೇ ಲೇಸು ಸರ್ವಜ್ಞ. 🌺 ಆದಿ ದೈವವನು ತಾ ಭೇದಿಸಲಿಕರಿಯದಲೆ ಹಾದಿಯಾ ಕಲ್ಲಿಗೆಡೆ ಮಾಡಿ ನಮಿಸುವಾ ಮಾದಿಗರ ನೋಡು ಸರ್ವಜ್ಞ. 🌺 ತನ್ನಲಿಹ ಲಿಂಗವನು ಮನ್ನಿಸಲಿಕರಿಯದಲೆ ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವಾ ಅನ್ಯಾಯ ನೋಡು ಸರ್ವಜ್ಞ. 🌺 ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ ಉಣದಿಪ್ಪ ಲಿಂಗಕುಣಬಡಿಸಿ ಕೈ ಮುಗಿವ ಬಣಗುಗಳ ನೋಡು ಸರ್ವಜ್ಞ. 🌺 ಕಲ್ಲು ಕಲ್ಲನೆ ಒಟ್ಟಿ ಕಲ್ಲಿನಲೆ ಮನೆಕಟ್ಟಿ ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ ಕಲ್ಲಿನಂತಿಹರು ಸರ್ವಜ್ಞ. 🌺 ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ. 🌺 ಲಿಂಗಕ್ಕೆ ಕಡೆ ಎಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ? ಲಿಂಗದೊಳು ಜಗವು ಅಡಗಿಹುದು ಲಿಂಗವನು ಹಿಂಗಿದವರುಂಟೇ ? ಸರ್ವಜ್ಞ. 🌺 ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ ತಾಗಿಲ್ಲ ತಪ್ಪು ತಡೆಯಿಲ್ಲ, ಲಿಂಗಕ್ಕೆ ದೇಗುಲವೇ ಇಲ್ಲ ಸರ್ವಜ್ಞ. 🌺 ಕಾಯ ಕಮಲವೇ ಸಜ್ಜೆ ಜೀವರತುನವೇ ಲಿಂಗ ಭಾವ ಪುಷ್ಪದಿಂ ಶಿವಪೂಜೆ ಮಾಡುವವನ ದೇವನೆಂದೆಂಬೆ ಸರ್ವಜ್ಞ. 🌺 ಓದು ವಾದಗಳೇಕೆ ? ಗಾದೆಯಾ ಮಾತೇಕೆ ? ವೇದ ಪುರಾಣ ತನಗೇಕೆ ? ಲಿಂಗದಾ ಹಾದಿಯರಿಯದವಗೆ ಸರ್ವಜ್ಞ. 🌺 ಊರಿಂಗೆ ದಾರಿಯನು ಆರು ತೋರಿದರೇನು ? ಸಾರಾಯದಾ

ಬರಗಾಲ ಪ್ರದೇಶದ ಬೇಸಿಗೆಯ ಮಧ್ಯಾಹ್ನದ ಬಿಸಿಊಟದ SMS ತಂತ್ರಾಶದ ಪ್ರಗತಿಯನ್ನು ತಾಂತ್ರಿಕ ದೃಷ್ಟಿಯಿಂದ ತೀವೃಗತಿಯಲ್ಲಿ ಪರಿಶೀಲಿಸುವ ಕುರಿತು.

Image

ಸಿಇಟಿ ಕೀ ಉತ್ತರ ಪ್ರಕಟ

ಸಿಇಟಿ ಕೀ ಉತ್ತರ ಪ್ರಕಟ 7 May, 2016     ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ತಾತ್ಕಾಲಿಕ ಸರಿ ಉತ್ತರಗಳನ್ನು (ಕೀ ಉತ್ತರ) ಪ್ರಕಟಿಸಿದೆ. ಮೇ 27ಕ್ಕೆ ಫಲಿತಾಂಶ ನೀಡುವ ಸಾಧ್ಯತೆ ಇದೆ. (PSGadyal teacher Vijaypur) ಭೌತವಿಜ್ಞಾನ, ಗಣಿತ, ಜೀವವಿಜ್ಞಾನ ಮತ್ತು ರಸಾಯನವಿಜ್ಞಾನ ವಿಷಯಗಳ ಕೀ ಉತ್ತರಗಳನ್ನು ವೆಬ್‌ಸೈಟ್‌: http://kea.kar.nic.in ನಲ್ಲಿ ನೋಡಬಹುದು. ಆಕ್ಷೇಪಣೆಗಳಿದ್ದಲ್ಲಿ ಮೇ 10ರ ಸಂಜೆ 5.30ರೊಳಗೆ ಇಮೇಲ್ ವಿಳಾಸಕ್ಕೆ: keauthority-kar@nic.in ಕಳುಹಿಸಬಹುದು. 2016ನೇ ಸಾಲಿಗೆ ಆನ್‌ಲೈನ್‌ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ತಿದ್ದುಪಡಿ ಮಾಡಬೇಕಿದ್ದಲ್ಲಿ ಮೇ 12ರವರೆಗೆ ಅವಕಾಶ ಕಲ್ಪಿಸಲಾಗಿದೆ. 'ಸಿಇಟಿ ಸಂಪೂರ್ಣ ವೇಳಾಪಟ್ಟಿ ಪ್ರಕಾರವೇ ನಡೆಯುತ್ತಿದೆ. ಮೇ 9ರ ಬದಲು ಶುಕ್ರವಾರವೇ ಕೀ ಉತ್ತರ ಪ್ರಕಟಿಸಲಾಗಿದೆ. ಮೇ 27ರಂದು ಫಲಿತಾಂಶ ಪ್ರಕಟಿಸಲಾಗುವುದು' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಡಳಿತಾಧಿಕಾರಿ ಎಸ್‌.ಎನ್‌. ಗಂಗಾಧರಯ್ಯ ಹೇಳಿದರು

ನೀಟ್-1 ಬರೆದವರಿಗೆ ನೀಟ್-2ಗೆ ಪ್ರವೇಶವಿಲ್ಲ

ನೀಟ್-1 ಬರೆದವರಿಗೆ ನೀಟ್-2ಗೆ ಪ್ರವೇಶವಿಲ್ಲ ವಿಜಯವಾಣಿ ನ್ಯೂಸ್ · MAY 7, 2016 ನವದೆಹಲಿ: ಮೇ 1ರಂದು ನಡೆದ ನೀಟ್-1 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಜುಲೈ 24ರಂದು ನಡೆಯಲಿರುವ ನೀಟ್-2ನಲ್ಲಿ ಪುನಃ ಪರೀಕ್ಷೆ ಬರೆಯುವಂತಿಲ್ಲ. ಆದರೆ ನೀಟ್-1ಗೆ ಹಾಜರಾಗದ ವಿದ್ಯಾರ್ಥಿಗಳು ನೀಟ್-2 ಪರೀಕ್ಷೆ ಬರೆಯಬಹುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. (PSGadyal teacher Vijaypur) ಇದೇ ವೇಳೆ ದೇಶದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ನೀಟ್ ಪ್ರವೇಶ ಪರೀಕ್ಷಾ ಪದ್ಧತಿಯಿಂದ ಈ ವರ್ಷ ವಿನಾಯಿತಿ ನೀಡಬೇಕೆ ಬೇಡವೇ ಎಂಬ ಕುರಿತ ತೀರ್ಪು ಸೋಮವಾರ ನಿರ್ಧಾರವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಈ ವಿಚಾರದ ಬಗ್ಗೆ ವಾರಾಂತ್ಯದಲ್ಲಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಉನ್ನತಮಟ್ಟದ ಸಭೆ ನಡೆಸಲಿದ್ದು, ಸೋಮವಾರ ತನ್ನ ಅಭಿಪ್ರಾಯವನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಲಿದೆ. ಇದನ್ನು ಪರಿಶೀಲಿಸಿ ನಾವು ಅಂತಿಮ ಆದೇಶ ಪ್ರಕಟಿಸಲಿದ್ದೇವೆ ಎಂದು ನ್ಯಾ. ಅನಿಲ್ ದವೆ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ವಿಚಾರಣೆಯ ಒಂದು ಹಂತದಲ್ಲಿ ಸರ್ಕಾರಿ ಕಾಲೇಜುಗಳಿಗೆ ಈ ವರ್ಷ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವ ಬಗ್ಗೆ ಕೋರ್ಟ್ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿತ್ತಾದರೂ, ಯಾವುದೇ ಆದೇಶ ನೀಡಲು ಮುಂದಾಗಲಿಲ್ಲ. ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಲು ನಮಗೆ 2 ದಿನಗಳ ಕಾಲಾವಕಾಶ ಬೇಕು. ಅಲ್ಲಿಯವರೆಗೆ ನ್ಯಾಯಾಲಯ

LIST OF CANDIDATES CALLED FOR VERIFICATION (1:10) FOR GAZETTED PROBATIONERS EXAMINATION 2014

kpsc.kar.nic.in/ELG%20LIST%20FOR%20GP%202014%20DOCUMENT%20VERIFICATION%20.HTM

ವಿಕಲ ಚೇತನರಿಗೆ "ಟಾಕಿಂಗ್ ಲ್ಯಾಪ್ಟಾಪ್" ಒದಗಿಸುವ ಕುರಿತ ಸುತ್ತೋಲೆ

Image

SBI Announced PO Recruitment Notification for 2016. Total Vacancies: 2428 App Reg.Date: 04th May, 2016 to 24th May, 2016. Age Limit: 21-30 Years (as on 01.04.2016) Exam Date: 2nd, 3rd June 2016 & 9th, 10th June, 2016. For more Information visit SBI Website...

www.sbi.co.in/webfiles/uploads/files/PO_2016_ENGLISH_CRPD_PO_2016_17_02.pdf

Recruitment of Village Accountants in Davangere Dist:LIST OF CANDIDATES CALLED FOR VERIFICATION (1:10) 25/4/2016

davanagere.nic.in/DCOFFICE/VA-2015/Verification_List.PDF

LIST OF CANDIDATES ELIGIBLE FOR PERSONALITY TEST FOR GAZETTED PROBATIONERS EXAMINATION 2014

http://kpsc.kar.nic.in/ELGLIST%20OF%20GP2014.HTM

ಐಎಎಸ್ ಪರೀಕ್ಷೆ ಅಧಿಸೂಚನೆ ಪ್ರಕಟ ಆಗಸ್ಟ್ 7ಕ್ಕೆ ಪೂರ್ವಭಾವಿ ಪರೀಕ್ಷೆ.!!

ನವದೆಹಲಿ (ಏ.23): ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್'ಸಿ) 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳಿಗೆ (ಐಎಎಸ್, ಐಪಿಎಸ್, ಐಎಫ್ಎಸ್ ಇತ್ಯಾದಿ) ಅಧಿಸೂಚನೆ ಪ್ರಕಟಿಸಿದೆ. ಅಧಿಸೂಚನೆಯು ವೆಬ್'ಸೈಟ್ http://upsconline.nic.in ನಲ್ಲಿ ಲಭ್ಯವಿದ್ದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ.20 ಹಾಗೂ ಪೂರ್ವಭಾವಿ ಪರೀಕ್ಷೆ ಆಗಸ್ಟ್ 7 ರಂದು ನಡೆಯಲಿದೆ. ಪರೀಕ್ಷೆಯನ್ನು ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದೊಂದಿಗೆ ಮೂರು ಪ್ರಕಾರಗಳಲ್ಲಿ ನಡೆಸಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು 32 ವರ್ಷ ವಯೋಮಿತಿಯೊಂದಿಗೆ 6 ಬಾರಿ, ಹಿಂದುಳಿದ ವರ್ಗದವರಿಗೆ 35 ವಯೋಮಿತಿ 9 ಬಾರಿ ಹಾಗೂ ಎಸ್'ಸಿ, ಎಸ್'ಟಿ ಅಭ್ಯರ್ಥಿಗಳು 37 ವಯೋಮಿತಿಯಿದ್ದು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದು. *ಶೈಕ್ಷಣಿಕ ಅರ್ಹತೆ: ಐಎಎಸ್ ಪರೀಕ್ಷೆ ತೆಗೆದುಕೊಳ್ಳಲು ಯುಜಿಸಿ'ಯಲ್ಲಿ ಅಂಗೀಕೃತಗೊಂಡ ಯಾವುದೇ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಪದವಿ ಪಡೆದುಕೊಂಡಿರಬೇಕು. ಪದವಿಯ ಅಂತಿಮ ವರ್ಷದ ಪರೀಕ್ಷೆ ಬರೆದವರು ಸಹ ಪರೀಕ್ಷೆ ತೆಗೆದುಕೊಳ್ಳಬಹುದು ಆದರೆ ಮುಖ್ಯ ಪರೀಕ್ಷೆ ವೇಳೆಗೆ ಫಲಿತಾಂಶ ಪ್ರಕಟಗೊಂಡಿರಬೇಕು. ಐಎಫ್ಎಸ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಲ್ಲಿ  ಪಶುಪಾಲನಾ ಮತ್ತು ಪಶುವೈದ್ಯ ವಿಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭ

ಸರ್ಕಾರಿ ಆದೇಶ ಸಂಖ್ಯೆ:ಆಇ 12 ಎಸ್ ಆರ್ ಪಿ 2016 -ದಿ:13-04-2016- ತುಟ್ಟಿಭತ್ಯೆಯ ದರಗಳ ಪರಿಷ್ಕರಣೆ - 32.5% to 36%

ಸರ್ಕಾರಿ ಆದೇಶ ಸಂಖ್ಯೆ:ಆಇ 12 ಎಸ್ ಆರ್ ಪಿ 2016 Government Order No. FD 12 SRP 2016 -dated 13-04-2016- ತುಟ್ಟಿಭತ್ಯಯ ದರಗಳ ಪರಿಷ್ಕರಣೆ  -  32.5% to 36%-Grant of Dearness Allowance 32.5% to 36%-Reg http://finance.kar.nic.in/gos/fd12srp2016.PDF

2006 ಕ್ಕಿಂತ ಮೊದಲೇ ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ಧಿ

Image
 Suvarnanews:    3 hours ago ನವದೆಹಲಿ(ಏ.13):  ಕೇಂದ್ರ ಸರಕಾರದ ಪಿಂಚಣಿದಾರರಿಗೊಂದು ಸಿಹಿ ಸುದ್ಧಿ! 2006 ಕ್ಕಿಂತ ಪೂರ್ವ ನಿವೃತ್ತಿ ವೇತನದಾರರಿಗೆ ಈಗ ಪಿಂಚಣಿ ಹೆಚ್ಚಳ ಮಾಡುವ ನಿರ್ಧಾರವನ್ನು  ಕೇಂದ್ರ ಸರಕಾರ ತೆಗೆದುಕೊಂಡಿದೆ. ಜೊತೆಗೆ  33 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ನಿವೃತ್ತರಾದವರು ಈ ಪ್ರಯೋಜನ ಪಡೆಯಬಹುದು ಎಂದು ಹೇಳಿದೆ.   ಪಿಂಚಣಿ ಮತ್ತು ನಿವೃತ್ತಿ ವೇತನದಾರರ ಕಲ್ಯಾಣ ಇಲಾಖೆ 33 ವರ್ಷಕ್ಕಿಂತ ಕಡಿಮೆ ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದವರಿಗೆ ಶೇ.50 ಕ್ಕಿಂತ ಕಡಿಮೆ  ವೇತನ ನೀಡಬಾರದು ಎಂದು ಪಿಂಚಣಿ ಹೆಚ್ಚಳ ಮಾಡಲು ನಿರ್ಧರಿಸಿದೆ. ನಿಯಮಗಳ  ಪ್ರಕಾರ ಕೇಂದ್ರ ಸರಕಾರಿ ನೌಕರರು ಕನಿಷ್ಠ ಹತ್ತು ವರ್ಷಗಳ ಸೇವೆ ಪೂರ್ಣಗೊಂಡ ಮೇಲೆ ನಿವೃತ್ತಿ ಪಿಂಚಣಿ ಪಡೆಯುವ ಅರ್ಹತೆ ಪಡೆಯುತ್ತಾರೆ. 2006 ಜನವರಿ 1 ರ ನಂತರ ಪಿಂಚಣಿಯನ್ನು ಕಳೆದ ಹತ್ತು ತಿಂಗಳಲ್ಲಿ ಪಡೆದ ಸರಾಸರಿ ವೇತನ ಅಥವಾ ಮೂಲ ವೇತನವನ್ನು ಆಧರಿಸಿ ಕಂಡು ಹಿಡಿಯಲಾಗುತ್ತದೆ. 2006 ಕ್ಕಿಂತ ಪೂರ್ವದಲ್ಲಿ 33 ವರ್ಷಕ್ಕಿಂತ ಪೂರ್ಣಗೊಳ್ಳುವ ಮೊದಲೇ ಸೇವೆಯಿಂದ ನಿವೃತ್ತಿಯಾದವರಿಗೆ ಒಟ್ಟು ಸೇವಾ ಅವಧಿಯಲ್ಲಿ ಅರ್ಧದಷ್ಟು ವರ್ಷವನ್ನು ಕಳೆದು ಪಿಂಚಣಿ ನೀಡಲಾಗುತ್ತಿತ್ತು. ಈ ತಾರತಮ್ಯವನ್ನು ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಮಂಡಳಿಗೆ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದಿದ್ದವು. ಸುಪ್ರೀಂ ಕೋರ್ಟ್ ಸಹ ಈ ತಾರತಮ್ಯದ ಬಗ್ಗೆ ಆಕ್ಷೇಪ ವ್ಯಕ್ಯಪಡಿಸಿತ್ತ

ದೇವರ/ಜೇಡರ ದಾಸಿಮಯ್ಯ:-

ಜನನ ೧೧೬೫ ಸುರಪುರ ತಾಲ್ಲೋಕು ಮುದನೂರು ಅಂಕಿತನಾಮ ರಾಮನಾಥ ಸಂಗಾತಿ(ಗಳು) ದುಗ್ಗಳೆ ಈತನನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೇ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆ/ಸುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವನಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಡ ಸಾಧಕ. ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಈತನ ಸುಮಾರು ೧೫೦ ವಚನಗಳು ದೊರೆತಿವೆಯೆನ್ನಲಾಗಿದೆ. ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿಯುವಾತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ ಒಡಲುಗೊಂಡವ ಹಸಿವ:ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ ಎಂದು ಸಾರುವಲ್ಲಿ ತೋರಿದ ಜನಪರ ಕಾಳಜಿ ಇಂದಿಗೂ ಆನ್ವಯಿಕ. ಶಿವ ಜಗತ್ತನ್ನೇ ವ್ಯ

"ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (NET) ಏಪ್ರಿಲ್ 12 ರಿಂದ ಅರ್ಜಿ ಆಹ್ವಾನ"::-

ಪ್ರತಿ ವರ್ಷ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು (ನೆಟ್‌) ವರ್ಷಕ್ಕೆ ಎರಡು ಬಾರಿ ನಡೆಸಿಕೊಂಡು ಬರುತ್ತಿದೆ. ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಹಾಗೂ ಜೂನಿಯರ್‌ ರಿಸರ್ಚ್ ಫೆಲೋಶಿಪ್‌ ನೇಮಕಾತಿಗಾಗಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಮಾದರಿಯಲ್ಲಿಯೇ ಈ ಪರೀಕ್ಷೆ ನಡೆಯಲಿದ್ದು, ಯುಜಿಸಿ ಪರವಾಗಿ ಸಿಬಿಎಸ್‌ಇ ಈ ಪರೀಕ್ಷೆಯನ್ನು ನಡೆಸಲಿದೆ. 2016ರ ಜುಲೈ 10ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. * ಹುದ್ದೆಗಳ ವಿವರ: ಆಸಕ್ತ ಅಭ್ಯರ್ಥಿಗಳು ಅಸಿಸ್ಟೆಂಟ್‌ ಪ್ರೊಫೆಸರ್‌ ಮತ್ತು ಜೂನಿಯರ್‌ ರಿಸರ್ಚ್ ಫೆಲೋಶಿಪ್‌ಗಾಗಿ ಅರ್ಜಿ ಸಲ್ಲಿಸಬಹುದು. ಫೆಲೋಶಿಪ್‌ಗೆ ಆಯ್ಕೆಯಾದವರು ಉನ್ನತ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಐಐಟಿಗಳು ಮತ್ತು ಇತರೆ ರಾಷ್ಟ್ರೀಯ ಸಂಸ್ಥೆಗಳು ಫೆಲೋಶಿಪ್‌ ನೀಡಲಿದ್ದು, ಇದನ್ನು ಪಡೆಯಲು ಎರಡು ವರ್ಷಗಳ ಕಾಲಾವಕಾಶವಿರುತ್ತದೆ. ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಾಗಿ ಮಾತ್ರ ನೆಟ್‌ ಪರೀಕ್ಷೆ ಬರೆದವರಿಗೆ ಫೆಲೋಶಿಪ್‌ ನೀಡಲಾಗುವುದಿಲ್ಲ. ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಯಾವುದಕ್ಕೆ ಅರ್ಜಿ ಸಲ್ಲಿಸ