Posts

ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ : ಎಚ್.ಆಂಜನೇಯ

ಬೆಂಗಳೂರು, ಡಿ.29-ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಮುಂದಿನ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹೋಬಳಿಗೆ ತಲಾ ಒಂದು ವಸತಿ ಶಾಲೆ ಪ್ರಾರಂಭಿಸಲಾಗುವುದು. ಪ್ರತಿ ಶಾಲೆಗೆ 10 ಎಕರೆ ಪ್ರದೇಶ, 15 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿ, ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ವಸತಿ ಶಾಲೆಗಳ ಶಿಕ್ಷಣವನ್ನು ದ್ವಿತೀಯ ಪಿಯುಸಿವರೆಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ 100 ವಸತಿ ಶಾಲೆಗಳ ಪ್ರಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಆಂಜನೇಯ ತಿಳಿಸಿದರು. ವಾಸ್ತವ್ಯ: ಈ ಬಾರಿಯ ಹೊಸ ವರ್ಷವನ್ನು ಅರಣ್ಯ ವಾಸಿಗಳ ಹಾಡಿಯಲ್ಲಿ ವಾಸ್ತವ್ಯ ಹೂಡುವ ಮೂಲಕ ಆಚರಿಸಲು ಆಶಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿನ ವಾಡಾದ ಸಿದ್ದಿ ಸಮುದಾಯದ ಹಾಡಿಯಲ್ಲಿ ಆಚರಿಸಲಾಗುವುದು. ಡಿ.31ರಂದು ವಾಡಾದ ಹಾಡಿಯಲ್ಲಿ ವಾಸ್ತವ್ಯ ಹೂಡಿ ಜಿಲ್ಲೆಯಲ್ಲಿರುವ ಎಲ್ಲ ಬುಡಕಟ್ಟು ಜನಾಂಗ ಮತ್ತು ಸಿದ್ದಿ ಜನಾಂಗದವರ ಸಭೆ ನಡೆಸಿ ಸಮಸ್ಯೆ ಆಲಿಸಿ ಹಲವು ಸೌಲಭ್ಯ ವಿತರಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಪ್ರಶಸ್ತಿ ಪ್ರಕಟ

Image

10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ:*

10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ ನವದೆಹಲಿ.ಡಿ.29 : ಒಂಬತ್ತು ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲು ಮುಂದಾಗಿದ್ದ ಕೇಂದ್ರ ಸರಕಾರ ಜನರು ವಿರೋಧಿಸಿದ್ದರಿಂದ ಆ ಸಂಖ್ಯೆಯನ್ನು 12ಕ್ಕೆ ಏರಿಸಿತ್ತು. ಆದರೆ, ಇದೀಗ ಸಬ್ಸಿಡಿ ಬಗ್ಗೆ ಸರಕಾರ ಮತ್ತಷ್ಟು ಬಿಗಿ ಧೋರಣೆ ತಾಳುತ್ತಿದ್ದು, 10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸೌಲಭ್ಯವನ್ನು ಹಿಂಪಡೆಯಲು ಮುಂದಾಗಿದೆ. ಹೊಸ ವರ್ಷದಿಂದ ಈ ನೀತಿ ಅನ್ವಯವಾಗುತ್ತಿದ್ದು, ಈ ಮೊದಲು ಖುದ್ದು ಸಬ್ಸಿಡಿ ತ್ಯಜಿಸಲು ಸರಕಾರ ಆಗ್ರಹಿಸಿತ್ತು. ಆದರೆ, ಉತ್ತಮ ಆದಾಯ ಹೊಂದಿರುವ ಎಲ್ಪಿಜಿ ಗ್ರಾಹಕರು ಮಾರುಕಟ್ಟೆ ಬೆಲೆಯಲ್ಲಿಯೇ ಎಲ್ಪಿಜಿ ಕೊಳ್ಳಲಿ ಎಂಬ ಉದ್ದೇಶದಿಂದ ಸರಕಾರ ಈ ನೀತಿಯನ್ನು ಬಿಗುಗೊಳಿಸುತ್ತಿದೆ, ಎಂದು ತೈಲ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಹೇಳಿದೆ. ದೇಶದಲ್ಲಿ 16.35 ಕೋಟಿ ಎಲ್ಪಿಜಿ ಗ್ರಾಹಕರಿದ್ದು, 57.5 ಲಕ್ಷ ಮಂದಿ ಸ್ವಯಂ ಪೇರಿತರಾಗಿ ಸಬ್ಸಿಡಿ ಸೌಲಭ್ಯವನ್ನು ತ್ಯಜಿಸಿದ್ದಾರೆ.

ಆಸ್ಕರ್ ವಿಜೇತ ಖ್ಯಾತ ಹಾಲಿವುಡ್ ಛಾಯಾಗ್ರಾಹಕ ಹಸ್ಕೆಲ್ ಇನ್ನಿಲ್ಲ

Image
BY ವಿಜಯವಾಣಿ ನ್ಯೂಸ್ · DEC 28, 2015 ಲಾಸ್ ಏಂಜೆಲಿಸ್ : ಎರಡು ಬಾರಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡ ಹಾಲಿವುಡ್​ನ ಖ್ಯಾತ ಛಾಯಾಗ್ರಾಹಕ ಹಸ್ಕೆಲ್ ವೆಕ್ಸ್ಲರ್ ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಯುದ್ದ, ರಾಜಕೀಯ ಹಾಗೂ ಸಮಾಜದ ಅವ್ಯವಸ್ಥೆ ಬಗ್ಗೆ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಹಕ್ಸೆಲ್, ಚಿತ್ರ ನಿರ್ವಣದ ಜತೆಗೆ ಸಾಮಾಜಿಕ ಕಳಕಳಿ, ನ್ಯಾಯ, ಮತ್ತು ಶಾಂತಿ ಸಂದೇಶ ನೀಡುವುದಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. 'ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್', 'ಬೌಂಡ್ ಆಫ್ ಗ್ಲೋರಿ', 'ಮೀಡಿಯಮ್ ಕೂಲ್' ಅವರ ಕೆಲವು ಮಹತ್ವದ ಚಿತ್ರಗಳು. ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್ ಚಿತ್ರವು 1966 ರಲ್ಲಿ ಹಕ್ಸಲ್ ಅವರಿಗೆ ಮೊದಲ ಆಸ್ಕರ್ ಪ್ರಶಸ್ತಿ ತಂದುಕೊಟ್ಟರೆ, ಬೌಂಡ್ ಆಫ್ ಗ್ಲೋರಿ ಚಿತ್ರ 1976ರಲ್ಲಿ ಎರಡನೇ ಆಸ್ಕರ್ ಪ್ರಶಸ್ತಿಯನ್ನು ಅವರ ಬಗಲಿಗೇರಿಸಿತ್ತು. 1985 ರಲ್ಲಿ ಯುದ್ಧದ ತಿರುಳು ಹೊಂದಿದ್ದ 'ಲ್ಯಾಟಿನೊ' ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದರು.

ಮೈಸೂರಿನ ಮೇಟಗಳ್ಳಿಯ RBI ಆವರಣದಲ್ಲಿ . ಬ್ಯಾಂಕನೋಟ್ ಕಾಗದ ತಯಾರಿಕಾ ಘಟಕ ಉದ್ಘಾಟನೆಗೆ ಸಜ್ಜು

Image

ಕುವೆಂಪು ಜಯಂತಿ ಇನ್ನು "ವಿಶ್ವಮಾನವ ದಿನ"

Image

ಸರ್ಕಾರಿ ಹುದ್ದೆಗಳಿಗೆ ಇನ್ನು ಸಂದರ್ಶನ ಇಲ್ಲ, ಅಫಿಡವಿಟ್ಟೂ ಬೇಕಿಲ್ಲ BY ವಿಜಯವಾಣಿ ನ್ಯೂಸ್

· DEC 26, 2015 ಹೊಸ ವರ್ಷಕ್ಕೆ ಕೇಂದ್ರದ ಕ್ರಾಂತಿಕಾರಿ ಕೊಡುಗೆ ನವದೆಹಲಿ: 2016ರ ಜನವರಿ 1ರಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ, ಹಾಗೆಯೇ ಅಭ್ಯರ್ಥಿಗಳು ಸರ್ಕಾರಿ ಸೇವೆಗಳನ್ನು ಸೇರಲು ಅಫಿಡವಿಟ್​ಗಳ (ಪ್ರಮಾಣಪತ್ರ) ಆವಶ್ಯಕತೆಯೂ ಇರುವುದಿಲ್ಲ. 2015ರಲ್ಲಿ ಹಲವಾರು ಮಹತ್ವದ ಉಪಕ್ರಮಗಳ ಮೂಲಕ ಸುದ್ದಿಯಲ್ಲಿದ್ದ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆ ವರ್ಷಾಂತ್ಯದಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರ ಇದು. 'ಸರ್ಟಿಫಿಕೇಟ್​ಗಳನ್ನು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿಕೊಳ್ಳುವ ಕ್ರಮವನ್ನು ರದ್ದು ಪಡಿಸುವ ಅತ್ಯಂತ ಮಹತ್ವದ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರ ಬದಲಿಗೆ ಸ್ವಯಂ ದೃಢೀಕರಣ ಮಾಡುವ ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶನಿವಾರ ಇಲ್ಲಿ ಹೇಳಿದರು. 'ಪ್ರಜೆಗಳನ್ನು ನಂಬುವ ನಿರ್ಧಾರವನ್ನು ಸರ್ಕಾರ ಕೈಗೊಂಂಡಿದೆ. ಅದರಲ್ಲೂ ಯುವಕರು ಸ್ವಯಂ ದೃಢೀಕೃತ ದಾಖಲೆಗಳನ್ನು ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವುದಿಲ್ಲ ಎಂಬುದು ಸರ್ಕಾರದ ನಂಬಿಕೆ' ಎಂದು ಅವರು ನುಡಿದರು. ಸರ್ಕಾರದ ಈ ನಿರ್ಧಾರವು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಮಂದಿಯನ್ನು ನಿರಾಳಗೊಳಿಸಿದೆ. ತಮ್ಮ ದಾಖಲೆಗಳನ್ನ

೩೦೦ ಕೆ ಎ ಎಸ್ ಹುದ್ದೆಗಳನ್ನು ನೇಮಕಕ್ಕೆ ಸಿದ್ಧತೆ..

Image

ಹನುಕ್ಕಾ ಹಬ್ಬದ ಕುರಿತು ಮಾಹಿತಿ

Image

ರಸಪ್ರಶ್ನೆ: ಪ್ರಪಂಚ ನಿಮಗೆಷ್ಟು ಪರಿಚಿತ??

Image

ಸರ್ಕಾರಿ ಹುದ್ದೆಗಳಿಗೆ ಇನ್ನು ಸಂದರ್ಶನ ಇಲ್ಲ, ಅಫಿಡವಿಟ್ಟೂ ಬೇಕಿಲ್ಲ BY ವಿಜಯವಾಣಿ ನ್ಯೂಸ್

· DEC 26, 2015 ಹೊಸ ವರ್ಷಕ್ಕೆ ಕೇಂದ್ರದ ಕ್ರಾಂತಿಕಾರಿ ಕೊಡುಗೆ ನವದೆಹಲಿ: 2016ರ ಜನವರಿ 1ರಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ, ಹಾಗೆಯೇ ಅಭ್ಯರ್ಥಿಗಳು ಸರ್ಕಾರಿ ಸೇವೆಗಳನ್ನು ಸೇರಲು ಅಫಿಡವಿಟ್​ಗಳ (ಪ್ರಮಾಣಪತ್ರ) ಆವಶ್ಯಕತೆಯೂ ಇರುವುದಿಲ್ಲ. 2015ರಲ್ಲಿ ಹಲವಾರು ಮಹತ್ವದ ಉಪಕ್ರಮಗಳ ಮೂಲಕ ಸುದ್ದಿಯಲ್ಲಿದ್ದ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆ ವರ್ಷಾಂತ್ಯದಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರ ಇದು. 'ಸರ್ಟಿಫಿಕೇಟ್​ಗಳನ್ನು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿಕೊಳ್ಳುವ ಕ್ರಮವನ್ನು ರದ್ದು ಪಡಿಸುವ ಅತ್ಯಂತ ಮಹತ್ವದ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರ ಬದಲಿಗೆ ಸ್ವಯಂ ದೃಢೀಕರಣ ಮಾಡುವ ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶನಿವಾರ ಇಲ್ಲಿ ಹೇಳಿದರು. 'ಪ್ರಜೆಗಳನ್ನು ನಂಬುವ ನಿರ್ಧಾರವನ್ನು ಸರ್ಕಾರ ಕೈಗೊಂಂಡಿದೆ. ಅದರಲ್ಲೂ ಯುವಕರು ಸ್ವಯಂ ದೃಢೀಕೃತ ದಾಖಲೆಗಳನ್ನು ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವುದಿಲ್ಲ ಎಂಬುದು ಸರ್ಕಾರದ ನಂಬಿಕೆ' ಎಂದು ಅವರು ನುಡಿದರು. ಸರ್ಕಾರದ ಈ ನಿರ್ಧಾರವು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಮಂದಿಯನ್ನು ನಿರಾಳಗೊಳಿಸಿದೆ. ತಮ್ಮ ದಾಖಲೆಗಳನ್ನ

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಲ್ಲಿ ಇ ಕಲಿಕೆ*-

Image

ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ನೀಡುವ ಪ್ರಸ್ತಾವನೆ ಪರಿಶೀಲನೆ.

Image

ಕಲಿಕೆ ದುರ್ಬಲಗೊಳಿಸುತ್ತಿರುವ ಶಾಲೆಗಳು:- ವಿಶ್ಲೇಷಣೆ

Image

ರು.50ಕ್ಕೆ ಸಿಗಲಿದೆ ಕೃತಕ ಧ್ವನಿಪೆಟ್ಟಿಗೆ ಬೆಂಗಳೂರಿನ ಕ್ಯಾನ್ಸರ್ ತಜ್ಞರ ಸಾಧನೆ | 25ಗ್ರಾಂ ತೂಕದ ಉಪಕರಣ

Image
ಬೆಂಗಳೂರು: ಗಂಟಲು ಕ್ಯಾನ್ಸರ್ನಿಂದ ಧ್ವನಿಯನ್ನೇ ಕಳೆದುಕೊಂಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ. ಕೃತಕ ಧ್ವನಿಪೆಟ್ಟಿಗೆಗಾಗಿ ಸಾವಿರಾರು ಖರ್ಚು ಮಾಡುವ ಅಗತ್ಯವೂ ಇನ್ನಿಲ್ಲ. ಬೆಂಗಳೂರು ಮೂಲದ ಕ್ಯಾನ್ಸರ್ ತಜ್ಞರೊಬ್ಬರು ಧ್ವನಿ ಉಪಕರಣವನ್ನು ತಯಾರಿಸಿದ್ದು, ಇದನ್ನು ಕೇವಲ ರು.50ಕ್ಕೆ ಲಭ್ಯವಾಗುವಂತೆ ಮಾಡಿದ್ದಾರೆ. ಬರೀ 25ಗ್ರಾಂ ತೂಕವಿರುವ ಈ ಉಪಕರಣ ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ``ಮಾತಾಡುವುದು ಮನುಷ್ಯನ ಹಕ್ಕು. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯ ಧ್ವನಿಪೆಟ್ಟಿಗೆ ತೆಗೆದುಹಾಕಿದಾಗ, ಅವರಲ್ಲಿ ಮಾತನಾಡುವ ಆಸೆ ಇನ್ನಷ್ಟು ಮೊಳೆಯುತ್ತದೆ. ಕ್ಯಾನ್ಸರ್ ಜೊತೆಗೆ ಧ್ವನಿ ಕಳೆ ದುಕೊಂಡಿರುವ ನೋವೂ ಅವರನ್ನು ಭಾವನಾತ್ಮಕವಾಗಿ ಕುಂದಿಸುತ್ತದೆ. ಹಾಗಾಗಬಾರದೆಂದು ಬಡವರನ್ನು ಗಮನದಲ್ಲಿಟ್ಟುಕೊಂಡೇ ಈ ಕಡಿಮೆಬೆಲೆಯ ಉಪಕರಣ ತಯಾರಿಸಲಾಗಿದೆ ಎಂದು ಇದರ ಸೃಷ್ಟಿಕರ್ತ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಧ್ವನಿ ಉಪಕರಣದ ಬೆಲೆ 20ಸಾವಿರ ಇದ್ದು, ಅದು ಬಡವರಿಗೆ ಸುಲಭಕ್ಕೆ ಎಟುಕುವಂಥದ್ದಲ್ಲ. ಅಲ್ಲದೆ ಅದನ್ನು ಆರು ತಿಂಗಳಿಗೊಮ್ಮೆ ಬದಲಿಸಬೇಕಾಗುತ್ತದೆ. ಆದ್ದರಿಂದ ಬಡವರಿಗಾಗಿ ಇದನ್ನು ತಯಾರು ಮಾಡಿದ್ದೇನೆ'' ಎಂದು ಅವರು ತಿಳಿಸಿದ್ದಾರೆ. ಸಾಮಾ

FaceBook ನ ಫ್ರೀ ಬೇಸಿಕ್ ಸ್ಥಗಿತಕ್ಕೆ ಟ್ರಾಯ್ ಸೂಚನೆ

Image

ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ ‘ವರ್ಷದ ಶ್ರೇಷ್ಠ ಆಟಗಾರ’ ಮತ್ತು ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.:*

ಸ್ಟೀವನ್ ಸ್ಮಿತ್ಗೆ ಐಸಿಸಿ ಗೌರವ 24 Dec, 2015 ದುಬೈ (ಪಿಟಿಐ): ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ 'ವರ್ಷದ ಶ್ರೇಷ್ಠ ಆಟಗಾರ' ಮತ್ತು ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2014 ಸೆಪ್ಟೆಂಬರ್ 18ರಿಂದ 2015 ಸೆಪ್ಟೆಂಬರ್ 13ರ ಅವಧಿಯಲ್ಲಿ ನಡೆದ ಟೂರ್ನಿಗಳಲ್ಲಿ ಸ್ಮಿತ್ ಅವರಿಂದ ಮೂಡಿ ಬಂದಿರುವ ಸಾಮರ್ಥ್ಯದ ಆಧಾರದಲ್ಲಿ ಅವರಿಗೆ ಈ ಗೌರವಗಳು ಒಲಿದಿವೆ. ಅವರು ಗ್ಯಾರಿ ಫೀಲ್ಡ್ ಸೋಬರ್ಸ್ ಟ್ರೋಫಿ (ವರ್ಷದ ಕ್ರಿಕೆಟಿಗ) ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಹಾಗೂ ವಿಶ್ವದ 11ನೇ ಆಟಗಾರ ಎನಿಸಿದ್ದಾರೆ. * ವಿಶ್ವದ ಶ್ರೇಷ್ಠ ಆಟಗಾರರ ಪೈಪೋಟಿಯ ನಡುವೆಯೂ ಪ್ರಶಸ್ತಿ ಒಲಿದಿದ್ದು ಖುಷಿ ನೀಡಿದೆ. ಈ ಪ್ರಶಸ್ತಿಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯಾದ ಆಟಗಾರ ಮುಖ್ಯಾಂಶಗಳು * ಡಿವಿಲಿಯರ್ಸ್ಗೆ ಸತತ ಎರಡನೇ ಬಾರಿ ವರ್ಷದ ಏಕದಿನ ಕ್ರಿಕೆಟಿಗ ಗೌರವ ಒಲಿದಿದೆ * ಪಂದ್ಯಗಳ ವೇಳೆ ಕ್ರೀಡಾ ಸ್ಫೂರ್ತಿಯಿಂದ ಆಡಿದ್ದಾಗಿ ಮೆಕ್ಲಮ್ಗೆ ಗೌರವ

ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರು ಪ್ರಸಕ್ತ ಸಾಲಿನ ‘ಸಿ.ಕೆ . ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.:-

Image
ಕಿರ್ಮಾನಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ 24 Dec, 2015 ನವದೆಹಲಿ(ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರು ಪ್ರಸಕ್ತ ಸಾಲಿನ 'ಸಿ.ಕೆ . ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ದ ಹಿಂದೂ ಪತ್ರಿಕೆಯ ಸಂಪಾದಕ ಎನ್. ರಾಮ್ ಅವರನ್ನು ಒಳಗೊಂಡಿದ್ದ ಪ್ರಶಸ್ತಿ ಆಯ್ಕೆ ಸಮಿತಿ, ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ಸೇರಿತ್ತು. ಸಭೆಯಲ್ಲಿ ನಾಯ್ಡು ವಾರ್ಷಿಕ ಪ್ರಶಸ್ತಿಗೆ ಕಿರ್ಮಾನಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ‌ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕ ಕರ್ನಲ್ ಕೊಠಾರಿ ಕನಕಯ್ಯ ನಾಯ್ಡು ಅವರ ಜನ್ಮದಿನದ ಸ್ಮರಣಾರ್ಥ, ಕ್ರಿಕೆಟ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಒಬ್ಬರಿಗೆ ವರ್ಷಂಪ್ರತಿ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯು ಒಂದು ಟ್ರೋಫಿ, ಪ್ರಮಾಣಪತ್ರ ಹಾಗೂ 25 ಲಕ್ಷ ರೂಪಾಯಿಯ ಚೆಕ್ ಒಳಗೊಂಡಿರುತ್ತದೆ.

ಕಾಲ ಜ್ಞಾನದ ಬಗ್ಗೆ ಕಿರುಮಾಹಿತಿ :-

 ಭೂಮಿ ಸೂರ್ಯನನ್ನು ಸುತ್ತುವರೆಯುವ ಸಮಯಕ್ಕೆ ನಾವು 1 ವರ್ಷ ಎನ್ನುತ್ತೇವೆ.   ನಮ್ಮ ವಿಜ್ಞಾನದ ಪ್ರಕಾರ.ಭೂಮಿ ಸೂರ್ಯನನ್ನು ಸುತ್ತಲೂ ತೆಗೆದುಕೊಳ್ಳುವ ಸಮಯ 365 ದಿನಗಳು 5 ಗಂಟೆ, 56 ನಿಮಿಷಗಳು, 45 ಸೆಕಂಡ ,51 ಮಿಲಿ ಸೆಕೆಂಡ .  ಆದರೆ ನಾವು ಬಳಸುವ English / ಗ್ರೆಗೋರಿಯನ್ / ಕ್ರೈಸ್ತ ಕ್ಯಾಲೆಂಡರ್ 365 ದಿನ 6 ಗಂಟೆ ಲೆಕ್ಕಕ್ಕೆ ತೆಗೆದು ಕೊಳ್ಳುತ್ತದೆ ( ನಾಲ್ಕು ವರ್ಷಕ್ಕೊಮ್ಮೆ 1 ದಿನ ಸೇರಿಸಿ) . ಅಂದರೆ ಪ್ರತಿ ವರ್ಷ 3 ನಿಮಿಷ 14 ಸೆಕೆಂಡ 49 ಮಿಲಿ ಸೆಕಂಡ ವ್ಯತ್ಯಾಸ ಉಂಟು ಮಾಡುತ್ತದೆ. (ಈ ವ್ಯತ್ಯಾಸ ಸರಿಪಡಿಸಲು ಪ್ರತಿ 400 ವರ್ಷಗಳಿಗೆ ಒಮ್ಮೆ ಇನ್ನೂ 1 ದಿನವನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ ಆದರೂ ಈ ಇಂಗ್ಲಿಷ್ ಕ್ಯಾಲೆಂಡರ್ ಪೂರ್ತಿ ಪ್ರಮಾಣದ ಸಮಯವನ್ನು ಸರಿದುಗಿಸಲು ಸಾಧ್ಯವಾಗುವುದಿಲ್ಲ ).  ಭಾರತೀಯರ ಕಾಲ ಜ್ಞಾನ/ ಸನಾತನ ಜೋತ್ಯಿಷ ಶಾಸ್ತ್ರ:- 15ನಿಮೇಷ = 1 ಕಾಷ್ಠಾ  30 ಕಾಷ್ಠಾ = 1ಕಲ 30 ಕಲ = 1 ಕ್ಷಣ  12 ಕ್ಷಣ. = 1 ಮುಹೂರ್ತ (48 ನಿಮಿಷಗಳು). 30 ಮುಹೂರ್ತ = 1ದಿನ ( ಅಹೋರಾತ್ರಿ) = 1 ತಿಥಿ. 15 ದಿನ = 1 ಪಕ್ಷ. 2 ಪಕ್ಷ, = 1 ಮಾಸ ( ತಿಂಗಳು) 2ಮಾಸ = 1ಋತು. 6 ಋತು = 12 ಮಾಸ = 1ವರ್ಷ ( ಮನುಷ್ಯ ವರ್ಷ) = 1 ಸಂವತ್ಸರ. 1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) . 360 ಮನುಷ್ಯ ವರ್ಷ = 1 ದೇವ ವರ್ಷ. 1,200 ದೇವ ವರ್ಷ =

ಡಾ.ರಾಕೇಶ್ಗೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪದಕ

Image
24 Dec, 2015 ವಾಷಿಂಗ್ಟನ್: ಹಾರ್ವರ್ಡ್ ವೈದ್ಯಶಾಲೆಯ ಪ್ರೊಫೆಸರ್ ಮತ್ತು ಮಸಾಚುಸೆಟ್ಸ್ನ ಜನರಲ್ ಹಾಸ್ಪಿಟಲ್ನ ಜೀವಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಭಾರತ ಮೂಲದ ಡಾ. ರಾಕೇಶ್ ಕೆ. ಜೈನ್ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ರಾಷ್ಟ್ರೀಯ ವಿಜ್ಞಾನ ಪದಕ ಪ್ರದಾನ ಮಾಡಲಿದ್ದಾರೆ. ರಾಕೇಶ್ ಜೈನ್ ಅವರು ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆಯಿಂದ ಕೆಮಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್ ಪೂರೈಸಿದ್ದರು. ಜನವರಿಯಲ್ಲಿ ಶ್ವೇತಭವನದಲ್ಲಿ ನಡೆಯುವ ರಾಷ್ಟ್ರೀಯ ವಿಜ್ಞಾನ ಪದಕ ಮತ್ತು ರಾಷ್ಟ್ರೀಯ ತಂತ್ರಜ್ಞಾನ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಅವರು, ಇತರೆ 16 ಸಾಧಕರೊಂದಿಗೆ ಒಬಾಮ ಅವರಿಂದ ಈ ಗೌರವ ಸ್ವೀಕರಿಸಲಿದ್ದಾರೆ. ಮಂಗಳವಾರ ಈ ಕುರಿತು ಪ್ರಕಟಣೆ ಹೊರಡಿಸಿದ ಶ್ವೇತಭವನ, 'ಈ ಪದಕಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ನಾಯಕರು ಮತ್ತು ಸಾಧಕರಿಗೆ ನೀಡುವ ನಮ್ಮ ದೇಶದ ಅತ್ಯಂತ ದೊಡ್ಡ ಗೌರವ' ಎಂದು ಹೇಳಿದೆ. ವಿವಿಧ ವಿಷಯಗಳ ಸುಮಾರು 200 ಸಂಶೋಧನಾ ವಿದ್ಯಾರ್ಥಿಗಳಿಗೆ ಜೈನ್ ಮಾರ್ಗದರ್ಶನ ಮಾಡಿದ್ದಾರೆ.